Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಶುಕ್ರನಿಂದಾಗಿ 2025 ಮಾರ್ಚ್‌ನಿಂದ ಈ 3 ರಾಶಿಗಳಿಗೆ ಮಾಲವ್ಯ ಯೋಗ: ಇಟ್ಟ ಹೆಜ್ಜೆಯಲ್ಲಿ ಯಶಸ್ಸು ಗ್ಯಾರಂಟಿ
ಶುಕ್ರನು ಅದೃಷ್ಟವನ್ನು ತರುವ ಗ್ರಹವಾಗಿದೆ. ಶುಕ್ರನು ನಮ್ಮ ರಾಶಿಯಲ್ಲಿ ಮಾಲ್ವಯ ಯೋಗ ಉಂಟು ಮಾಡಿದರಂತೂ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯವದು. ಮಾಲವ್ಯ ಯೋಗ ಎಂಬುವುದು ಅಪರೂಪದ ಯೋಗವಾಗಿದ್ದು ಸೂರ್ಯನು ಕೇಂದ್ರ ಮನೆಯಲ್ಲಿ 1, 4, 7, 10ನೇ ಮನೆಯಲ್ಲಿದ್ದಾಗ ಈ ಯೋಗ ಉಂಟಾಗುವುದು. ಈ ಯೋಗ ಹೊಸ ವರ್ಷದ ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಯಲ್ಲಿ ಉಂಟಾಗಲಿದೆ.
ಈ ಮಾಲವ್ಯ ಯೋಗದ ಸಮಯದಲ್ಲಿ ಈ ರಾಶಿಯವರು ತುಂಬಾನೇ ಪ್ರಯೋಜನ ಪಡೆಯಲಿದ್ದಾರೆ:

ವೃಷಭ ರಾಶಿ
ವೃಷಭ ರಾಶಿಯವರು ಹೊಸ ವರ್ಷದಲ್ಲಿ ಏನಾದರು ವಸ್ತು ಖರೀದಿ ಬಗ್ಗೆ ಆಲೋಚಿಸುತ್ತಿದ್ದರೆ ಈ ಸಮಯದಲ್ಲಿ ಪ್ರಯತ್ನ ಮಾಡಿದರೆ ಖಂಡಿತ ಆ ಯೋಗದ ಫಲ ದೊರೆಯಲಿದೆ. ಈ ಅವಧಿಯಲ್ಲಿ ಹಣದ ಕೊರತೆ ಇರಲ್ಲ. ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗಲಿದೆ. ಈ ಅವಧಿಯಲ್ಲಿ ಸಂಬಂಧ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ತುಂಬಾನೇ ಫಲ ನೀಡಲಿದೆ. ವೃತ್ತಿ ಬದುಕಿನಲ್ಲಿ ಬೆಳವಣಿಗೆ ಕಾಣುತ್ತೀರಿ, ಆರ್ಥಿಕವಾಗಿ ಬೆಳವಣಿಗೆ ಪಡೆಯುತ್ತೀರಿ, ನಿಮ್ಮ ಖ್ಯಾತಿ ಹೆಚ್ಚಾಗಲಿದೆ.
ಶುಕ್ರ ರಾಶಿ
ತುಲಾ ರಾಶಿಯವರಿಗೆ ಮಾಲವ್ಯ ರಾಜಯೋಗ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ, ವೃತ್ತಿ ಬದುಕಿನಲ್ಲಿ ಬಡ್ತಿ ದೊರೆಯಬಹುದು, ವ್ಯವಹಾರದಲ್ಲಿ ಆರ್ಥಿಕವಾಗಿ ಬೆಳೆಯುತ್ತೀರಿ. ಈ ಅವಧಿಯಲ್ಲಿ ಮಾಡುವ ವ್ಯವಹಾರದಿಂದ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ಸಂಬಂಧ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಯೋಗ ಇರಲಿದೆ.ನೀವು ಮಾಡುವ ಕೆಲಸದಲ್ಲಿ ಈ ಅವಧಿಯಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತೀರಿ. ನೀವು ಪ್ರತಿ ಹೆಜ್ಜೆಯಲ್ಲಿಯೂ ಯಶಸ್ಸು ದೊರೆಯಲಿದೆ.
ಮೀನ ರಾಶಿ
ಮೀನ ರಾಶಿಯಲ್ಲಿಯೇ ಮಾಲವ್ಯ ರಾಜ ಯೋಗ ಉಂಟಾಗಲಿದೆ. ಇದರಿಂದ ಈ ಅವಧಿಯಲ್ಲಿ ಮೀನ ರಾಶಿಯವರು ತುಂಬಾನೇ ಅದ್ಭುತ ಪ್ರಯೋಜನ ಪಡೆಯಲಿದ್ದೀರಿ. ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಈ ಅವಧಿಯಲ್ಲಿ ಉತ್ತಮ ಫಲ ನೀಡಲಿದೆ. ಸಾಡೇಸಾತಿಯಿಂದಾಗಿ ಹಲವು ಕಾರ್ಯಗಳಲ್ಲಿ ನೀವು ಬಯಸಿದ ಪ್ರಯೋಜನ ಪಡೆಯಲಾಗುತ್ತಿಲ್ಲ ಎಂದು ಬೇಸರ ಉಂಟಾಗಿರಬಹುದು, ಆದರೆ ಈ ಅವಧಿಯಲ್ಲಿ ಅದೆಲ್ಲವೂ ದೂರಾಗಿ ನಿಮ್ಮ ಶ್ರಮಕ್ಕೆ ತಕ್ಕ ಪ್ರಯೋಜನ ಪಡೆಯುತ್ತೀರಿ. ವೃತ್ತಿ ಬದುಕಿನಲ್ಲಿ ಯಶಸ್ಸು ಪಡೆಯುತ್ತೀರಿ, ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಸಿಗಲಿದೆ. ಈ ಯೋಗದಿಂದಾಗಿ ಧನಾತ್ಮಕಪ್ರಯೋಜನ ಸಿಗಲಿದೆ. ಈ ಅವಧಿಯಲ್ಲಿ ಉತ್ತಮ ಧನಾತ್ಮಕ ಪ್ರಯೋಜನ ಸಿಗಲಿದೆ.
ಮಾಲವ್ಯ ಯೋಗ ಹೇಗೆ ಪ್ರಯೋಜನಕಾರಿಯಾಗಿದೆ?
ಆರ್ಥಿಕವಾಗಿ ಬೆಳವಣಿಗೆ ಕಾಣುವಿರಿ: ಮಾಲವ್ಯ ಯೋಗದಿಂದಾಗಿ ಆರ್ಥಿಕವಾಗಿ ತುಂಬಾನೇ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯಲ್ಲಿ ಹಣದ ಕೊರತೆ ಕಾಣಿಸಲ್ಲ., ಹಣಕ್ಕೆ ಸಂಬಂಧಿಸಿದ ಪ್ರಯತ್ನದಲ್ಲಿ ಉತ್ತಮ ಫಲ ಸಿಗಲಿದೆ.
ಖ್ಯಾತಿ: ಈ ಮಾಲವ್ಯ ಯೋಗ ವ್ಯಕ್ತಿಗೆ ಖ್ಯಾತಿಯನ್ನು ತಂದು ಕೊಡಲಿದೆ.
ನಿಮ್ಮ ವ್ಯಕ್ತಿತ್ವ ಆಕರ್ಷಿಸುತ್ತದೆ: ಮಾಲವ್ಯ ಯೋಗದಲ್ಲಿ ವ್ಯಕ್ತಿತ್ವ ಆಕರ್ಷಿಸುತ್ತದೆ.
ಮನರಂಜನಾ ಕ್ಷೇತ್ರದಲ್ಲಿರುವವರೆಗೆ ಒಳ್ಳೆಯ ಯಶಸ್ಸು, ಖ್ಯಾತಿ ದೊರೆಯಲಿದೆ.
ವ್ಯಕ್ತಿತ್ವ ವಿಕಸನವಾಗುವುದು: ಈ ಅವಧಿಯಲ್ಲಿ ವ್ಯಕ್ತಿತ್ವ ವಿಕಸನವಾಗಲಿದೆ ಅಲ್ಲದೆ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ದೊರೆಯಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications