Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೃತಿಕ ನಕ್ಷತ್ರಕ್ಕೆ ಶುಕ್ರನ ಸಂಚಾರ: 3 ರಾಶಿಯವರಲ್ಲಿ ಹಣಕಾಸು ಸಮಸ್ಯೆ ಪರಿಹಾರ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಬಹಳ ಗಂಭೀರವಾಗಿ ಹಾಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಇನ್ನು ಗ್ರಹಗಳು, ರಾಶಿಗಳು ನಮಗೆ ಎಷ್ಟು ಮುಖ್ಯವೋ ನಮ್ಮ ಜನ್ಮ ನಕ್ಷತ್ರಗಳು ಕೂಡ ಅಷ್ಟೇ ಮುಖ್ಯ. ನಕ್ಷತ್ರಗಳ ಮೂಲಕವೂ ನಮ್ಮ ಭವಿಷ್ಯ ನಿರ್ಧರಿಸುವುದು ನೋಡಬಹುದು.
ಗ್ರಹಗಳು ರಾಶಿಗಳ ಬದಲಾಯಿಸಿದಂತೆಯೇ ನಕ್ಷತ್ರಗಳ ಬದಲಾಯಿಸುವುದು ನೋಡಬಹುದು. ಒಂದೊಂದು ನಕ್ಷತ್ರ ಬದಲಾವಣೆ ಆದಾಗಲೂ ಒಂದೊಂದು ರೀತಿಯ ಪರಿಣಾಮಗಳ ನೋಡಬಹುದು. ಹಾಗೆ ಈಗ ಶುಕ್ರನು ತನ್ನ ನಕ್ಷತ್ರ ಬದಲಾಯಿಸುತ್ತಿರುವುದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಅದ್ರಲ್ಲೂ ಶುಕ್ರನು ಈಗ ಕೃತಿಕ ರಾಶಿಗೆ ಚಲಿಸಿದ್ದಾನೆ.

ಶುಕ ಜೂನ್ 26ರಿಂದ ಕೃತಿಕ ರಾಶಿಯಲ್ಲಿ ಚಲಿಸಲಿದ್ದಾನೆ. ಜುಲೈ 7ರ ವರೆಗೂ ಶುಕ್ರನು ಕೃತಿಕ ರಾಶಿಯಲ್ಲಿರುತ್ತಾನೆ. ಹೀಗಾಗಿ ಈ ಸಮಯದಲ್ಲಿ ಹಲವು ರಾಶಿಗಳಿಗೆ ಶುಕ್ರನಿಂದ ಬಹಳಷ್ಟು ಲಾಭವಾಗಲಿದೆ. ಶುಕ್ರನನ್ನು ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿದೆ. ಶುಕ್ರ ಪ್ರೀತಿ, ಸಂಪತ್ತು, ಹಾಗೂ ಐಷಾರಾಮಿ ಗ್ರಹವೆಂದು ಪರಿಗಣಿಸಲಾಗಿದೆ. ಹೀಗಾಗಿ ಶುಕ್ರನ ನಕ್ಷತ್ರ ಬದಲಾವಣೆ ಯಾರಿಗೆಲ್ಲಾ ಲಾಭದಾಯಕ ನೋಡಿ.
ಮಿಥುನ ರಾಶಿ
ಕೃತಿಕ ರಾಶಿಗೆ ಶುಕ್ರನ ಚಲನೆಯು ಮಿಥುನ ರಾಶಿಯವರಿಗೆ ಧನಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಅನಿರೀಕ್ಷಿತ ಪ್ರಯೋಜನಗಳಿಗೆ ಒಳಗಾಗಬಹುದು, ಔದ್ಯೋಗಿಕ ಸಂತಸ, ಕೌಟುಂಬಿಕ ಸಂತಸಕ್ಕೆ ಇದು ಕಾರಣವಾಗಲಿದೆ. ಈ ಸಮಯದಲ್ಲಿ ಪ್ರೇಮ ಜೀವನದಲ್ಲಿ ದೊಡ್ಡ ಲಾಭ ನೋಡಬಹುದು. ನಿಮ್ಮ ಕಠಿಣ ಪರಿಶ್ರಮಗಳನ್ನು ಗಮನಿಸುವ ಸಮಯವಿದು. ನಿಮ್ಮ ದೀರ್ಘಕಾಲದ ಹಣಕಾಸು ಸಮಸ್ಯೆಯಾಗಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ಉದ್ಯೋಗ ಹುಡುಕುತ್ತಿದ್ದವರಿಗೆ ಹಲವು ಅವಕಾಶಗಳು ಒಲಿಯಲಿದೆ. ಹೊಸ ವ್ಯಾಪಾರದಲ್ಲಿ ನಿಮಗೆ ಲಾಭ ಹೆಚ್ಚಾಗಬಹುದು. ಶುಕ್ರನ ಆಶೀರ್ವಾದದಿಂದ ಆಸ್ತಿ ಸಂಬಂಧಿತ ಸಮಸ್ಯೆಗಳು ನಿವಾರಣೆಗಾಲಿದೆ. ಈ ಒಂದು ವಾರದಲ್ಲಿ ನಿಮ್ಮ ದೊಡ್ಡ ವ್ಯಾಪಾರ ಸಂಬಂಧಿ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ.
ಸಿಂಹ ರಾಶಿ
ಕೃತ್ತಿಕಾ ನಕ್ಷತ್ರದಲ್ಲಿ ಶುಕ್ರ ಸಂಚಾರವು ಸಿಂಹ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ತರಲಿದೆ. ಅವರ ಹೂಡಿಕೆಗಳು ಅವರಿಗೆ ನಿರೀಕ್ಷಿತ ಲಾಭವನ್ನು ನೀಡುತ್ತದೆ ಮತ್ತು ವಿವಿಧ ಒಪ್ಪಂದಗಳ ಮೂಲಕ ಆದಾಯವನ್ನು ಗಳಿಸಲು ಸಾಕಷ್ಟು ಅವಕಾಶಗಳು ಸಿಗಲಿದೆ. ನಿಮ್ಮ ಹಣಕಾಸು ವಿಚಾರವಾಗಿ ಕಾಡುತ್ತಿದ್ದ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗಬಹುದು. ಬಹಳ ಸಮಯದ ನಿಮ್ಮ ಅನಾರೋಗ್ಯ ಸಂಬಂಧಿ ಕಠಿಣ ಸ್ಥಿತಿ ಸುಧಾರಣೆಯಾಗಲಿದೆ. ವಾಹನ ವಿಚಾರವಾಗಿ ನಿಮಗೆ ಕಾಡಿದ್ದ ಸಮಸ್ಯೆಯೊಂದು ದೂರಾಗಲಿದೆ. ಮನೆಯ ಹಿರಿಯ ಸದಸ್ಯರೊಬ್ಬರ ಅನಾರೋಗ್ಯ ಸಮಸ್ಯೆ ಸುಧಾರಣೆಯಾಗಲಿದೆ.
ಮೀನ ರಾಶಿ
ಕೃತಿಕ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಮೀನ ರಾಶಿಯವರಿಗೆ ಅನುಕೂಲಕರ ದಿನಗಳ ತರಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ವ್ಯವಹಾರಗಳು ಲಾಭದಾಯಕವಾಗಲಿದೆ. ಹಾಗೆ ಕೌಟುಂಬಿಕ ಸಮಸ್ಯೆಯು ನಿವಾರಣೆಯಾಗಬಹುದು. ನೀವು ಬಹಳ ದಿನಗಳಿಂದ ಬಯಸಿದ್ದ ವಸ್ತುವನ್ನು ಖರೀದಿಸಿಲು ಇದು ಸೂಕ್ತ ಸಮಯ. ಮನೆಗಾಗಿ ನೀವು ಐಷಾರಾಮಿ ವಸ್ತುವೊಂದನ್ನು ಖರೀದಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇದು ಸೂಕ್ತ ಸಮಯ ಆಗಿರಲಿದೆ. ವಿವಿಧ ಹೂಡಿಕೆಗಳಿಂದ ಆದಾಯ ಗಳಿಸುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ಹಿಂದಿನ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications