Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರ ಮತ್ತು ಶನಿ ಸಂಯೋಗದಿಂದ ಲಾಭ ದೃಷ್ಟಿಯೋಗ: ಯಾರಿಗೆಲ್ಲಾ ಈ ಸಮಯದಲ್ಲಿ ಶುಭಕರ!
2026ನೇ ವರ್ಷ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದವೆ. ಹಾಗೆ 2026ರಲ್ಲಿ ಹಲವು ಗ್ರಹಗಳ ಸಂಚಾರವನ್ನು ನಾವು ನೋಡಬಹುದು. ವರ್ಷದ ಆರಂಭದಲ್ಲೇ ಹಲವು ಗ್ರಹಗಳ ಸಂಚಾರವನ್ನು ನೋಡಬಹುದು. ಅದ್ರಲ್ಲೂ ಜನವರಿಯಲ್ಲಿ ಗ್ರಹಗತಿಗಳ ಸಂಚಾರದಿಂದ ಇಡೀ ವರ್ಷ ನಿಮಗೆ ಶುಭ ತರುವ ಸಾಧ್ಯತೆಗಳಿವೆ.
ಜನವರಿ 15ರಂದು ಶುಕ್ರ ಮತ್ತು ಶನಿಯ ಸಂಯೋಗದ ಕಾರಣದಿಂದಾಗಿ ಅಪರೂಪದ ಲಾಭ ದೃಷ್ಟಿಯೋಗಕ್ಕೆ ಕಾರಣವಾಗುತ್ತಿದೆ. ಶುಕ್ರ ಹಾಗೂ ಶನಿ ಪರಸ್ಪರ 90 ಡಿಗ್ರಿ ಕೋನದಲ್ಲಿ ಚಲಿಸುವಾಗ ಈ ಅಪರೂಪದ ಯೋಗ ರೂಪುಗೊಳ್ಳಲಿದೆ. ಈ ರೀತಿಯ ಸಂಯೋಜನೆಯು ಹಲವು ರಾಶಿಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಈ ಅಪರೂಪದ ಯೋಗವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಆರ್ಥಿಕ ಸ್ಥಿತಿ, ವೃತ್ತಿ ಜೀವನ, ಕೌಟುಂಬಿಕ ಜೀವನ ಹಾಗೆ ಹಲವು ವಿಚಾರಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಹಾಗಾದ್ರೆ ಈ ಯೋಗದಿಂದ ಯಾವ ರಾಶಿಯವರಿಗೆ ಲಾಭದಾಯಕ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಲಾಭ ದೃಷ್ಟಿಯೋಗವು ಹೆಚ್ಚಿನ ಪ್ರಯೋಜನ ತರಲಿದೆ. ನಿಮ್ಮ ಕಠಿಣ ಪರಿಶ್ರಮಗಳು ನಿಮಗೆ ಉತ್ತಮ ಫಲಿತಾಂಶಗಳ ತರಲಿದೆ. ಮುಂಬರುವ ವರ್ಷದಲ್ಲಿ ಜನರು ಪೂರ್ವಜರ ಆಸ್ತಿಗಳಿಂದ ದೊಡ್ಡ ಲಾಭ ಗಳಿಸಬಹುದು. ಈ ಅವಧಿಯಲ್ಲಿ ನಿಮ್ಮ, ಅವರಿಗೆ ತಮ್ಮ ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಮತ್ತು ತಮ್ಮ ಜೀವನ ಸಂಗಾತಿಯೊಂದಿಗೆ ಸಂತೋಷದ ಸಮಯ ಕಳೆಯಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿನ ನಷ್ಟಗಳು ಸರಿದಾರಿಗೆ ಬರಲಿದೆ. ಬ್ಯಾಂಕಿಂಗ್ ವ್ಯವಹಾರಗಳು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಿದೆ. ಹಣಕಾಸು ಸಂಬಂಧವಾಗಿದ್ದ ಬಿಕ್ಕಟ್ಟು ನಿವಾರಣೆಯಾಗಲಿದೆ. ವಾಹನ ಲಾಭವಿದೆ, ಹೊಸ ವಾಹನ ಅಥವಾ ಹಳೆಯ ವಾಹನ ಖರೀದಿಯ ಸಂಭವ ಅಧಿಕವಿದೆ. ಆರೋಗ್ಯದಲ್ಲಿನ ಸುಧಾರಣೆಯು ನೀವು ಕೆಲಸದಲ್ಲಿ ಹೆಚ್ಚು ತೊಡಗಲು ನಿಮಗೆ ನೆರವಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಲಾಭ ದೃಷ್ಟಿಯೋಗವು ಅನಿರೀಕ್ಷಿತ ಆರ್ಥಿಕ ಪ್ರಯೋಜನಗಳಿಗೆ ಮಾರ್ಗಗಳನ್ನು ತೆರೆಯುತ್ತದೆ. ನೀವು ವಿದೇಶ ಪ್ರವಾಸವನ್ನು ಯೋಜಿಸಬಹುದು ಮತ್ತು ಹೂಡಿಕೆಗಳಿಂದ ಉತ್ತಮ ಲಾಭ ಪಡೆಯಬಹುದು. ಈ ಅವಧಿಯಲ್ಲಿ ಮಿಥುನ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು. ಸಾಲ ನೀಡಿದ ಹಣವನ್ನು ಮರಳಿ ಪಡೆಯಬಹುದು. ಹೊಸ ವ್ಯವಹಾರ ಆರಂಭಕ್ಕೆ ಇದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಸರ್ಕಾರಿ ಉದ್ಯೋಗಗಳಿಂದ ನಿಮಗೆ ಶುಭವಿದೆ. ಆದಾಯದಲ್ಲಿ ಹೆಚ್ಚಳ ನೋಡಬಹುದು. ನಿರುದ್ಯೋಗಿಗಳು ವರ್ಷದ ಆರಂಭದಲ್ಲಿಯೇ ದೊಡ್ಡ ಲಾಭದ ಹುದ್ದೆ ಪಡೆಯಬಹುದು.
ತುಲಾ ರಾಶಿ
ಈ ಯೋಗವು ತುಲಾ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಕೆಲಸದಲ್ಲಿರುವವರು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಲಿದ್ದಾರೆ. ವ್ಯವಹಾರದಲ್ಲಿರುವವರಿಗೆ ಧನಲಾಭ ತರುವ ಸಮಯವಿದು. ಈ ಅವಧಿಯಲ್ಲಿ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹೂಡಿಕೆ ಹಾಗೂ ಉಳಿತಾಯದಲ್ಲಿನ ಪ್ರಮಾಣ ಏರಿಕೆಯಾಗಲಿದೆ. ಇದು ನಿಮ್ಮಲ್ಲಿ ನೆಮ್ಮದಿ ತರಲು ಕಾರಣವಾಗುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಅವಧಿಯಾಗಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳು ಎದುರಾಗಲಿದೆ, ನಿಮ್ಮ ಉನ್ನತ ವ್ಯಾಸಂಗದ ಆಸೆ ಈಡೇರಲಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ಯೋಗವು ಬಹಳ ಅದೃಷ್ಟ ತರಲಿದೆ. ನಿಮ್ಮ ಹಲವು ಆಲೋಚನೆಗಳನ್ನು ಜಾರಿ ಮಾಡಲು ಸಹಕಾರಿಯಾಗಲಿದೆ. ಈ ಅವಧಿಯು ಪ್ರೇಮ ಸಂಬಂಧಗಳು ಮತ್ತು ವೃತ್ತಿ ಪ್ರಗತಿಗೆ ಅನುಕೂಲಕರವಾಗಿದೆ, ಇದು ದೀರ್ಘಾವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿಸಿಕೊಂಡಿದ್ದರೆ ನಿಮಗೆ ಶುಭವಿದೆ. ಯಾರಿಗೂ ಈ ಸಮಯದಲ್ಲಿ ಸಾಲ ನೀಡದೆ ಇರುವುದು ಉತ್ತಮ. ನಿಮ್ಮ ದಾಂಪತ್ಯ ವಿಚಾರವಾಗಿ ಇದ್ದಂತಹ ಸಮಸ್ಯೆಗಳು ಕೂಡ ದೂರಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











