18 ವರ್ಷದ ಬಳಿಕ ಶುಕ್ರ ರಾಹು ಒಂದೇ ರಾಶಿಯಲ್ಲಿ ಸಂಯೋಗ: ಮಹಾಯುತಿ ಯೋಗದ ಲಾಭ ಯಾರಿಗೆ?

ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗಿದೆ. ಅದ್ರಲ್ಲೂ ಗ್ರಹಗಳ ಚಲನೆಯಿಂದ ಉಂಟಾಗುವ ಶುಭ ಹಾಗೂ ಅಶುಭ ಯೋಗಗಳು ವ್ಯಕ್ತಿಯ ಜೀವನವನ್ನು ಬದಲಾಯಿಸಲಿದೆ. ಅದ್ರಲ್ಲೂ ನೆರಳಿನ ಗ್ರಹಗಳೆಂದು ಹೇಳಲಾಗುವ ರಾಹು ಹಾಗೂ ಕೇತುವಿನ ಚಲನೆಯಿಂದ ಎಲ್ಲಾ 12 ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟು ಮಾಡುವುದು ಸಾಮಾನ್ಯ ಕ್ರಿಯೆಯಾಗಿರಲಿದೆ.

2026ರಲ್ಲಿಯೂ ರಾಹು ಹಾಗೂ ಕೇತುವಿನ ಸಂಚಾರವನ್ನು ನಾವು ನೋಡಬಹುದು. ಈ ಫೆಬ್ರವರಿಯಲ್ಲಿ ಕುಂಭ ರಾಶಿಯಲ್ಲಿ ರಾಹು ಮತ್ತು ಶುಕ್ರನ ಮಹಾ ಸಂಯೋಗವು ರೂಪುಗೊಳ್ಳುತ್ತದೆ. 18 ವರ್ಷಗಳ ನಂತರ ಶುಕ್ರ ಹಾಗೂ ರಾಹು ಕುಂಭ ರಾಶಿಯಲ್ಲಿ ಸಂಯೋಗವಾಗುತ್ತಾರೆ. ಇದು ಹಲವು ರಾಶಿಗಳಿಗೆ ಅನುಕೂಲ ಹಾಗೆ ಅನಾನುಕೂಲ ಕೂಡ ತರಬಹುದು.

Venus And Rahu Conjunction In The Same Zodiac Sign After 18 Years These Signs Get Benefits

ಕುಂಭ ರಾಶಿಯಲ್ಲಿ ಈಗಾಗಲೇ ಇರುವ ರಾಹು ಮತ್ತು ಸಂಪತ್ತು ಮತ್ತು ಸಂತೋಷಕ್ಕೆ ಕಾರಣವಾದ ಗ್ರಹವಾದ ಶುಕ್ರವು ಫೆಬ್ರವರಿಯಲ್ಲಿ ಈ ರಾಶಿಗೆ ಚಲಿಸಲಿದ್ದಾನೆ. ಇದು 18 ವರ್ಷಗಳ ನಂತರ ಈ ಮಹಾ ಸಂಯೋಗದ ಪುನರಾರಂಭವನ್ನು ಸೂಚಿಸುತ್ತದೆ. ಜ್ಯೋತಿಷ್ಯದ ಪ್ರಕಾರ ರಾಹು ಮತ್ತು ಶುಕ್ರರ ಈ ಸಂಯೋಗವನ್ನು ಸಂಪತ್ತು, ಅದೃಷ್ಟ ಮತ್ತು ಪ್ರಗತಿಗೆ ವಿಶೇಷವಾಗಿ ಶುಭವೆಂದು ಪರಿಗಣಿಸಲಾಗುತ್ತದೆ.

ಈ ಸಂಯೋಗವು ಕೆಲವು ರಾಶಿ ಜನರಿಗೆ ಹಠಾತ್ ಲಾಭಗಳು ಮತ್ತು ಯಶಸ್ಸಿಗೆ ಅವಕಾಶಗಳನ್ನು ತರಲಿದೆ. ಹಾಗಾದ್ರೆ ಶುಕ್ರ ಹಾಗೂ ರಾಹುವಿನ ಈ ಸಂಯೋಗವು ಯಾವ ರಾಶಿಯವರಿಗೆ ಶುಭಕರ ಯಾರಿಗೆ ಲಾಭಕರ ಅನ್ನೋದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ರಾಹು ಮತ್ತು ಶುಕ್ರನ ಈ ಮಹಾಯುತಿ ಆರ್ಥಿಕ ಮತ್ತು ವೈಯಕ್ತಿಕ ಕ್ಷೇತ್ರಗಳಲ್ಲಿ ಅತ್ಯಂತ ಪ್ರಯೋಜನಕಾರಿ ಲಾಭಗಳ ತರಲಿದೆ. ಈ ಸಂಯೋಗವು ನಿಮ್ಮ ರಾಶಿಯಲ್ಲಿ ಆದಾಯ ಮತ್ತು ಲಾಭದ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಇದು ನಿಮ್ಮ ಗಳಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಸೂಚಿಸಲಿದೆ. ಹಾಗೆ ಹೊಸ ಆದಾಯ ಮೂಲವನ್ನು ಹೊಂದಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ಸಮಯವು ಜವಾಬ್ದಾರಿಗಳು ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ. ಹೂಡಿಕೆಗಳಲ್ಲಿಯೂ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಸಹ ನೀವು ಪಡೆಯಬಹುದು. ಹೊಸ ಮೂಲಗಳಿಂದ ಹಣ ಗಳಿಸಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ತುಂಬಾ ಅನುಕೂಲಕರವಾಗಿದೆ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ರಾಹು ಮತ್ತು ಶುಕ್ರನ ಸಂಯೋಗವು ವೃತ್ತಿ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ವಿಶೇಷ ಪ್ರಯೋಜನಗಳನ್ನು ತರಲಿದೆ. ಈ ಸಂಯೋಗವು ನಿಮ್ಮ ಕೆಲಸ, ವ್ಯವಹಾರ ಮತ್ತು ವೃತ್ತಿ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಇದು ವೃತ್ತಿಪರ ಪ್ರಗತಿ ಮತ್ತು ಆರ್ಥಿಕ ಬಲಕ್ಕೆ ಅವಕಾಶಗಳನ್ನು ತರಲಿದೆ. ಬಡ್ತಿಗಳು, ವೇತನ ಹೆಚ್ಚಳ ಮತ್ತು ಪ್ರಶಂಸೆ ಪಡೆಯುವ ಸಮಯವಾಗಿರಲಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಹಣಕಾಸಿನ ವಿಷಯಗಳು ಸಹ ವೇಗ ಪಡೆಯಲಿದೆ. ಹೊಸ ಆದಾಯದ ಅವಕಾಶಗಳು ಹೊರಹೊಮ್ಮುತ್ತವೆ. ಈ ಸಮಯ ಉದ್ಯಮಿಗಳಿಗೆ ಪ್ರಯೋಜನಕಾರಿಯಾಗಲಿದೆ. ಹೊಸ ವ್ಯವಹಾರ ಒಪ್ಪಂದಗಳು ಯಶಸ್ವಿಯಾಗಿ ಪೂರ್ಣಗೊಳ್ಳಬಹುದು. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಸಂಬಂಧಿತ ವಿಚಾರಗಳಲ್ಲಿ ಅನೇಕ ರೀತಿಯ ಲಾಭಗಳ ನೋಡುವ ಸಮಯ ಆಗಿರಲಿದೆ.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಈ ಸಮಯದಲ್ಲಿ ಹಲವು ಅದೃಷ್ಟಕರ ಕೆಲಸಗಳು ನಡೆಯುವುದು ನೋಡಬಹುದು. ಲಗ್ನ ಮನೆಯಲ್ಲಿ ರಾಹು ಮತ್ತು ಶುಕ್ರನ ಸಂಯೋಗವು ರೂಪುಗೊಳ್ಳುತ್ತಿದೆ, ಇದು ನಿಮ್ಮ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ಉತ್ತಮ ಅವಕಾಶಗಳು ಹುಡುಕಿ ಬರಬಹುದು. ಪ್ರೇಮಿಗಳು ಮನೆಯ ವಿಚಾರದಲ್ಲಿ ಅನುಭವಿಸಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ನಿಮ್ಮ ವ್ಯಾಪಾರ ಪ್ರಗತಿಗೆ ಇದು ಸುಗಮ ಸಮಯ. ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮಂದಿಗೆ ಸೂಕ್ತ ಅವಕಾಶಗಳು ಹಾಗೆ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

Venus And Rahu Conjunction In The Same Zodiac Sign After 18 Years; These Signs Get Benefits

Rahu, which is already in Aquarius, and Venus, the planet responsible for wealth and happiness, will move into this sign in February. This marks the resumption of this great conjunction after 18 years.
Story first published: Wednesday, January 7, 2026, 11:50 [IST]
X
Desktop Bottom Promotion