Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದೇ ರಾಶಿಯಲ್ಲಿ ರಾಹು-ಶುಕ್ರ: ಏಪ್ರಿಲ್ 23ರವರೆಗೆ ಈ 4 ರಾಶಿಯವರಿಗೆ ಅದ್ಭುತದ ಸಮಯ
ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿರುತ್ತದೆ, ಕೆಲವೊಂದು ಗ್ರಹಗಳು ತಿಂಗಳಿಗೊಮ್ಮೆ ಮಾಡಿದರೆ ಇನ್ನು ಕೆಲ ಗ್ರಹಗಳು ಒಂದೂವರೆ ವರ್ಷಕ್ಕೊಮ್ಮೆ (ರಾಹು, ಕೇತು), ಶನಿ ಎರಡೂವರೆ ವರ್ಷಕ್ಕೊಮ್ಮೆ ರಾಶಿ ಬದಲಾವಣೆ ಮಾಡುವುದು. ಹೀಗೆ ಗ್ರಹಗಳು ರಾಶಿ ಬದಲಾವಣೆ ಮಾಡುವಾಗ ಎರಡು ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ಇದ್ದರೆ ಅದನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುವುದು.
ಹೀಗೆ ಗ್ರಹಗಳು ಸಂಯೋಗವಾದಾಗ ಅವುಗಳು ಬೀರುವ ಪ್ರಭಾವ ಕೂಡ ಭಿನ್ನವಾಗಿರುತ್ತದೆ. ಈ ಬಾರಿ ರಾಹು ಹಾಗೂ ಶುಕ್ರ ಗ್ರಹದ ಸಂಯೋಗವಾಗಿದೆ.ಶುಕ್ರವು ಮಾರ್ಚ್ 31, 2024 ರಂದು ಸಂಜೆ 04:31 ಕ್ಕೆ ಕುಂಭ ರಾಶಿಯಿಂದ ಮೀನ ರಾಶಿಗೆ ಸಂಚರಿಸಿದೆ, ರಾಹು ಈಗಾಗಲೇ ಮೀನ ರಾಶಿಯಲ್ಲಿದೆ.
ರಾಹು ನೆರಳು ಗ್ರಹವಾದರು ಶುಕ್ರನ ಸ್ನೇಹಿತ. ಹೀಗಾಗಿ ಈ ರಾಶಿಗಳ ಸಂಯೋಗ ಕೆಲವು ರಾಶಿಯವರಿಗೆ ಅದ್ಭುತವಾಗಿದೆ. ಇದರ ಪ್ರಭಾವ ಏಪ್ರಿಲ್ 23ರವರೆಗೆ ಇರಲಿದೆ. ಈ ಸಂಯೋಗ ಯಾವ ರಾಶಿಗಳಿಗೆ ಅದ್ಭುತವಾಗಿದೆ ಎಂದು ನೋಡೋಣ ಬನ್ನಿ:

ವೃಷಭ ರಾಶಿ
ವೃಷಭ ರಾಶಿಯವರ 11ನೇ ಮನೆಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗಿದೆ. ಇದರ ಪರಿಣಾಮವಾಗಿ, ನಿಮ್ಮ ಆದಾಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಹಾಗೂ ನಿಮ್ಮ ಗುರಿಯನ್ನು ತಲುಪಲು ಸಾಧ್ಯವಾಗುವದುಉ. ನೀವು ಬಹಳ ದಿನಗಳಿಂದ ಯೋಚಿಸುತ್ತಿದ್ದ ನಿಮ್ಮ ಯಾವುದೇ ಆಸೆ ಈಡೇರುತ್ತದೆ. ಈ ಸಮಯದಲ್ಲಿ, ನಿಮ್ಮ ಬಾಕಿಯಿರುವ ಕೆಲಸಗಳು ಸಹ ಪೂರ್ಣಗೊಳ್ಳಲು ಪ್ರಾರಂಭಿಸುತ್ತವೆ. ಹಣಕಾಸಿನ ಕೊರತೆ ಅಥವಾ ಇನ್ನಾವುದೇ ಕಾರಣದಿಂದ ಅಪೂರ್ಣವಾಗಿದ್ದ ಕೆಲಸಗಳು ಈ ಅವಧಿಯಲ್ಲಿ ಪೂರ್ಣವಾಗಲಿದೆ.ಈ ಸಮಯದಲ್ಲಿ, ನೀವು ಹೊಸ ವಾಹನವನ್ನು ಖರೀದಿಸಬಹುದು, ಈ ಅವಧಿಯು ಹೂಡಿಕೆಗೆ ಅತ್ಯುತ್ತಮವಾಗಿರುತ್ತದೆ. ನಿಮ್ಮ ಸಂಬಂಧವು ಮೊದಲಿಗಿಂತ ಹೆಚ್ಚು ಪ್ರಬುದ್ಧವಾಗಿರುತ್ತದೆ. ಈ ಅವಧಿಯು ಉದ್ಯೋಗಿಗಳಿಗೂ ಅನುಕೂಲಕರವಾಗಿರುತ್ತದೆ. ನೀವು ಯಾವುದೇ ವ್ಯಾಪಾರವನ್ನು ಮಾಡಿದರೆ ಈ ಸಾಗಣೆಯು ನಿಮಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ 10ನೇ ಮನೆಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗಿದೆ, ಇದರಿಂದಾಗಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಲಿದೆ. ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ಪರಸ್ಪರ ಪ್ರೀತಿ ಇರುತ್ತದೆ. ಮನೆಯ ನವೀಕರಣಕ್ಕೆ ಗಮನ ಜೀಡುತ್ತೀರಿ. ನಿಮ್ಮ ಮನೆಯ ಸುಧಾರಣೆಗಾಗಿ ನೀವು ಹೊಸ ಖರ್ಚುಗಳನ್ನು ಮಾಡಬಹುದು. ಆರ್ಥಿಕ ಜೀವನದ ದೃಷ್ಟಿಕೋನದಿಂದ ಈ ಅವಧಿಯು ಅತ್ಯುತ್ತಮವಾಗಿರುತ್ತದೆ. ನೀವು ಮಾಡಿದ ಹೂಡಿಕೆಗಳಿಂದ ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ಈ ಅವಧಿಯು ಹೂಡಿಕೆಗೆ ಉತ್ತಮವಾಗಿದೆ. ನೀವು ಯೋಜಿಸಿದ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ, ನೀವು ಮಾಡುವ ಯಾವುದೇ ಕಠಿಣ ಕೆಲಸವು ಖಂಡಿತವಾಗಿಯೂ ಫಲಿತಾಂಶವನ್ನು ನೀಡುತ್ತದೆ . ಅಲ್ಲದೆ, ನೀವು ಹೊಸ ಕೆಲಸವನ್ನು ಹುಡುಕುತ್ತಿದ್ದರೆ ಅದು ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಏಪ್ರಿಲ್ ತಿಂಗಳಲ್ಲಿ ಹೊಸ ಕಾರು ಅಥವಾ ಆಸ್ತಿಯನ್ನು ಖರೀದಿಸಲು ನಿಮಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ.
ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ನಿಮ್ಮ 9ನೇ ಮನೆಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗಿದೆ. ಇದರ ಪರಿಣಾಮವಾಗಿ, ನೀವು ದೂರದ ಪ್ರವಾಸಗಳನ್ನು ಮಾಡಲು ಬಯಸುತ್ತೀರಿ. ನೀವು ಹೊಸ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತೀರಿ. ನೀವು ಸುಂದರವಾದ ಸ್ಥಳಗಳಿಗೆ ಭೇಟಿ ನೀಡುವುದನ್ನು ಆನಂದಿಸುವಿರಿ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ದೂರದ ಪ್ರವಾಸಗಳಿಗೆ ಹೋಗಬಹುದು. ಈ ಪ್ರವಾಸಗಳು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಮತ್ತು ಕೆಲವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಲಿದೆ. ನೀವು ವ್ಯವಹಾರದಲ್ಲಿ ಪ್ರಗತಿ ಹೊಂದುವ ಅವಕಾಶಗಳೂ ಇವೆ. ಈ ಅವಧಿಯಲ್ಲಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದಲ್ಲದೇ ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರಾರಂಭಿಸಲಾಗುವುದು. ಈ ಸಂಯೋಜನೆಯಿಂದಾಗಿ, ಉದ್ಯೋಗದಲ್ಲಿ ಬದಲಾವಣೆಯ ಸೂಚನೆಗಳಿವೆ, ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ಈ ಅವಧಿಯಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯವರಿಗೆ, ನಿಮ್ಮ ಆರನೇ ಮನೆಯಲ್ಲಿ ಶುಕ್ರ ಮತ್ತು ರಾಹುವಿನ ಸಂಯೋಗವಾಗಿದೆ. ಈ ಅವಧಿಯಲ್ಲಿ ನಿಮ್ಮ ಎದುರಾಳಿಗಳ ಮೇಲೆ ಜಯ ಸಾಧಿಸುವಿರಿ. ಇದಲ್ಲದೇ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಬಾಕಿಯಿದ್ದರೆ ಅದರ ತೀರ್ಪು ನಿಮ್ಮ ಪರವಾಗಿ ಬರಬಹುದು. ಉದ್ಯೋಗದಲ್ಲಿರುವ ತುಲಾ ರಾಶಿಯ ಜನರು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ, ಈ ಕಾರಣದಿಂದಾಗಿ ನೀವು ಕೆಲಸ ಮಾಡಲು ಬಯಸುತ್ತೀರಿ. ಈ ಅವಧಿಯಲ್ಲಿ ವಿದೇಶಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ, ಆದ್ದರಿಂದ ನೀವು ವಿದೇಶಕ್ಕೆ ಹೋಗಲು ಬಯಸಿದರೆ ಈ ನಿಟ್ಟಿನಲ್ಲಿ ನೀವು ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಶುಕ್ರ ಸಂಕ್ರಮಣದ ಸಮಯದಲ್ಲಿ ವ್ಯಾಪಾರದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳಿವೆ. ಈ ಸಮಯವು ಮಕ್ಕಳಿಗೆ ಅನುಕೂಲಕರವಾಗಿರುತ್ತದೆ ಮತ್ತು ಅವರು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ವ್ಯಾಪಾರದಲ್ಲಿ ಬೆಳವಣಿಗೆ ಕಾಣುತ್ತೀರಿ, ಈ ಅವಧಿ ನಿಮಗೆ ತುಂಬಾ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಕಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications