Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರಮಹಾಲಕ್ಷ್ಮಿ ಹಬ್ಬದಂದೇ ಸರ್ವಾರ್ಥ ಸಿದ್ಧಿ ಯೋಗ: ಈ ರಾಶಿಗಳ ಅದೃಷ್ಟ ಬದಲು..!
ಈ ಆಗಸ್ಟ್ 8ರಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತಿದೆ. ಈ ದಿನ ಗ್ರಹಗಳ ಚಲನೆಯಿಂದಾಗಿ ಇಂದ್ರ ಯೋಗ ಹಾಗೆ ಸರ್ವಾಥ ಸಿದ್ಧಿ ಯೋಗ ಕೂಡ ರೂಪುಗೊಳ್ಳುತ್ತಿದೆ. ಹಿಂದೂ ಪುರಾಣಗಳ ಪ್ರಕಾರವಾಗಿ ಈ ದಿನ ಲಕ್ಷ್ಮಿ ದೇವಿಗೆ ಬಹಳ ಶ್ರೇಷ್ಠ ದಿನ. ಆಕೆಯ ಪೂಜೆಯಿಂದ ನಿಮ್ಮ ಹಣಕಾಸು ವಿಚಾರಗಳು ಹಾಗೆ ಆರ್ಥಿಕ ಸಮಸ್ಯೆಗಳು ದೂರಾಗಲಿದೆ. ನಿಮ್ಮಲ್ಲಿ ಹಣದ ಹರಿವು ಹೆಚ್ಚಾಗಿ ಮನೆಯಲ್ಲಿ ಲಕ್ಷ್ಮಿ ನೆಲೆಸಲಿದ್ದಾಳೆ ಎಂದು ನಂಬಲಾಗಿದೆ.
ಲಕ್ಷ್ಮಿ ದೇವಿಯ ವ್ರತಾಚರಣೆ ಮಾಡುವುದು ಬಹಳಷ್ಟು ಲಾಭದಾಯಕವಾಗಲಿದೆ ಎಂದು ಹೇಳಲಾಗಿದೆ. ಹಾಗೆ ಈ ದಿನದಂದು ಅಪರೂಪದ ಯೋಗಗಳು ಉಂಟಾಗುವುದು ಕೂಡ ಈ ಸಮಯದಲ್ಲಿ ಹಲವು ರಾಶಿಗಳಿಗೆ ವಿಶೇಷ ಲಾಬದಾಯಕ ದಿನಗಳಿವೆ. ಹಾಗೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಪಡೆಯಲು ಈ ಯೋಗವು ಕಾರಣವಾಗಲಿದೆ.

ಹಾಗೆ ಆಗಸ್ಟ್‌ನಲ್ಲಿ ಗುರು, ಶುಕ್ರ, ರಾಹು-ಕೇತು, ಶನಿ ಹಾಗೂ ಸೂರ್ಯ ಕೂಡ ತನ್ನ ಸ್ಥಾನ ಬದಲಾಯಿಸುವುದು, ಈ ಸಮಯದಲ್ಲಿ ದೊಡ್ಡ ಬದಲಾಣೆಗಳಿಗೆ ಕಾರಣವಾಗಬಹುದು. ಹಾಗೆ ಕೆಲವು ರಾಶಿಗಳಲ್ಲಿ ಲಕ್ಷ್ಮಿಯ ಆಶೀರ್ವಾದದ ಕಾರಣ ಅದ್ಭುತ ದಿನಗಳು ಬರಲಿವೆ. ಹಾಗಾದ್ರೆ ಈ ಸಮಯವು ಯಾರಿಗೆಲ್ಲಾ ಶುಭಕರವಾಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ವರ ಮಹಾಲಕ್ಷ್ಮಿ ವ್ರತದ ನಂತರ ಮಿಥುನ ರಾಶಿಯವರಿಗೆ ಕಷ್ಟಗಳಿಂದ ಮುಕ್ತಿ ಸಿಗಲಿದೆ. ಅನೇಕ ಶುಭ ಫಲಿತಾಂಶಗಳ ನೀವು ನೋಡುವಿರಿ. ನಿಮಗೆ ಸಮಾಜದಲ್ಲಿ ಉತ್ತಮ ಮನ್ನಣೆ ಸಿಗುವುದರ ಜೊತೆಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ದೊಡ್ಡ ಮಟ್ಟದ ಲಾಭ ನೋಡಬಹುದು. ಅದ್ರಲ್ಲೂ ವ್ಯಾಪಾರಿ ವಲಯದಲ್ಲಿ ಈ ಸಮಯವು ಅತ್ಯಧಿಕ ಲಾಭದಾಯಕ ದಿನಗಳ ನೋಡುತ್ತಾರೆ. ಹೊಸ ಉದ್ಯಮ, ಸ್ವಂತ ಉದ್ಯೋಗ ಆರಂಭಿಸಲು ಇದು ಬಹಳ ಉತ್ತಮ ಸಮಯವೂ ಹೌದು. ದೀರ್ಘಕಾಲದಿಂದ ಪ್ರಯಾಣ ಮಾಡುವ ಬಗ್ಗೆ ಯೋಚಿಸುತ್ತಿರುವವರ ಕನಸು ನನಸಾಗುತ್ತದೆ. ಉದ್ಯಮಿಗಳಿಗೆ ಇದು ಅದ್ಭುತವಾಗಿದೆ. ನೀವು ಬಹಳ ಸಮಯದಿಂದ ಬಯಸಿದ್ದ ಅಥವಾ ನಿಮ್ಮ ಕೈಸೇರಬೇಕಿದ್ದ ಹಣಕಾಸು ವಿಚಾರವೊಂದು ನಿಮಗೆ ಒಲಿಯಲಿದೆ.
ಸಿಂಹ ರಾಶಿ
ವರಲಕ್ಷ್ಮಿ ವ್ರತದ ನಂತರ ನಿಮಗೆ ಅದ್ಭುತ ಲಾಭಗಳು ಬರಬಹುದು. ನೀವು ಬಯಸಿದಂತಹ ಸಮಯಕ್ಕೆ ಸರಿಯಾಗಿ ನಿಮಗೆ ಹಣಕಾಸು ಒಲಿಯಲಿದೆ. ದೀರ್ಘಕಾಲದ ಖರ್ಚು ವೆಚ್ಚಗಳು ಸರಿದೂಗಲಿವೆ. ನಿಮ್ಮ ಸಾಲಗಳು ಮರುಪಾವತಿಯಾಗುವ ಜೊತೆಗೆ ಹಣ ಉಳಿತಾಯಕ್ಕೂ ನೀವು ಮುಂದಾಗುತ್ತೀರಿ. ಮನೆಗಾಗಿ ನೀವು ಹೊಸ ವಸ್ತುಗಳ ಖರೀದಿಗೂ ಮುಂದಾಗುತ್ತೀರಿ. ವಿದೇಶ ಪ್ರಯಾಣದಂಯತ ಐಷಾರಾಮಿ ಲಾಭವಿದೆ. ಕುಟುಂಬದಲ್ಲಿದ್ದ ಹಣಕಾಸು ಒತ್ತಡದೊಂದು ನಿವಾರಣೆ ಆಗಲಿದೆ. ಯಾರಿಂದಾದ ಹಣ ಬರಬೇಕಿದ್ದರೆ ಸುಲಭವಾಗಿ ನಿಮ್ಮ ಕೈ ಸೇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ಸಮಯವು ಹೊಸ ಆಸ್ತಿ ಲಾಭದ ನಿರೀಕ್ಷೆ ತರಲಿದೆ. ಹಾಗೆ ನಿಮ್ಮ ಆರೋಗ್ಯದಲ್ಲಿ ಇನ್ನಿಲ್ಲದ ಚೇತರಿಕೆ ನೋಡುವಿರಿ. ಮನೆಯಲ್ಲಿ ನಿಮ್ಮಿಂದಾಗಿ ಸಂತಸದ ವಾತಾವರಣ ಇರಲಿದೆ. ಅನೇಕ ವ್ಯಾಪಾರ ಸಂಬಂಧಿ ಸಮಸ್ಯೆ ಬಗೆಹರಿಯಲಿದೆ. ಕೆಲ ವರ್ಷದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಹಣದ ಸಮಸ್ಯೆ ಬಗೆಹರಿಯಲಿದೆ. ಉದ್ಯೋಗಿಗಳಿಗೆ ಬಡ್ತಿ ವೇತನ ಹೆಚ್ಚಳ ಖಚಿತವಾಗಲಿದೆ. ಹೂಡಿಕೆಗಳಿ ಬಹಳ ಅವಕಾಶವಿದೆ. ನಿಮ್ಮ ಉಳಿತಾಯ ಕೂಡ ಹೆಚ್ಚು ಮಾಡಿಕೊಳ್ಳುವಿರಿ.
ಧನು ರಾಶಿ
ಧನು ರಾಶಿ ಜನರು ತಮ್ಮ ಬಹುದಿನದ ಆಸೆ ಈಡೇರಿಸಿಕೊಳ್ಳುತ್ತಾರೆ. ವಾಹನ ಸಂಬಂಧಿ ಲಾಭ, ವಾಹನ ಖರೀದಿ ಹಾಗೂ ಮಾರಾಟದಲ್ಲಿ ಶುಭಕರ. ಹೊಸ ಉದ್ಯಮ, ವ್ಯಾಪಾರ ವಿಸ್ತರಣೆಗೆ ನೀವು ಆಲೋಚಿಸಿದ್ದರೆ ಬಹಳ ಉತ್ತಮ ಸಮಯ. ಅವಿವಾಹಿತರಲ್ಲಿದ್ದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ನಿಮ್ಮ ದೊಡ್ಡ ಉಳಿತಾಯವು ನಿಮ್ಮ ಕೈ ಸೇರಬಹುದು.
(ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಜ್ಯೋತಿಷ್ಯ, ಪಂಚಾಂಗ, ಧಾರ್ಮಿಕ ಗ್ರಂಥಗಳು ಇತ್ಯಾದಿಗಳ ಆಧರಿಸಿದೆ. ಇಲ್ಲಿ ನೀಡಲಾದ ಮಾಹಿತಿ ಮತ್ತು ಸಂಗತಿಗಳ ನಿಖರತೆ, ಸಂಪೂರ್ಣತೆಗೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಲ್ಲ. ಈ ಮೇಲಿನ ಯಾವುದೇ ವಿಷಯವನ್ನು ಅನುಸರಿಸುವ ಮೊದಲು ನಿರ್ದಿಷ್ಟ ಅಥವಾ ಸೂಕ್ತ ತಜ್ಞರ ಭೇಟಿಗೆ ಸಲಹೆ ನೀಡಲಾಗುತ್ತದೆ)



Click it and Unblock the Notifications
