Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಪ್ರೇಮಿಗಳ ದಿನ 2024: ಈ ವರ್ಷ 12 ರಾಶಿಗಳ ಪ್ರಣಯ ಬದುಕು ಹೇಗಿರಲಿದೆ?
ಫೆಬ್ರವರಿ 14 ಪ್ರೇಮಿಗಳ ದಿನ, ಈ ದಿನ ನೀವು ನಿಮ್ಮ ಪ್ರೀತಿಯ ಸೆಲೆಬ್ರೇಷನ್ ಮೂಡ್‌ನಲ್ಲಿರುತ್ತೀರಿ, ಜ್ಯೋತಿಷ್ಯ ಶಾಸ್ತ್ರ ಪ್ರಕಾರ ನಿಮ್ಮ ರಾಶಿಗೆ ಪ್ರಣಯ ಬದುಕು ಹೇಗಿರಲಿದೆ ಎಂದು ಹೇಳಲಾಗಿದೆ ನೋಡಿ:

ಮೇಷ ರಾಶಿ
ನಿಮ್ಮ ಪ್ರೀತಿಯಲ್ಲಿದ್ದರೆ ನಿಮ್ಮ ಪ್ರೀತಿ ತುಂಬಾ ಅದ್ಭುತವಾಗಿರಲಿದೆ. ಕೆಲವು ಏರಳಿತಗಳಿರಬಹುದು, ಆದರೆ ನಿಮ್ಮ ನಿಜವಾದ ಪ್ರೀತಿ ಗೆಲ್ಲುತ್ತದೆ, ನೀವು ಇಷ್ಟಪಟ್ಟವರನ್ನು ಮದುವೆಯಾಗುವಿರಿ.
ವೃಷಭ ರಾಶಿ
ವೃಷಭ ರಾಶಿಯವರೇ ನಿಮ್ಮ ಜೀವನದಲ್ಲಿ ಹೊಸ ಆರಂಭವಾಗಲಿದೆ, ಪ್ರತಿಯೊಂದು ಸವಾಲುಗಳನ್ನು ಎದುರಿಸಿ ನೀವಿಬ್ಬರು ಒಂದಾಗುತ್ತೀರಿ, ನಿಮ್ಮ ಪ್ರೀತಿ ಜೀವನ ತುಂಬಾ ಅದ್ಭುತವಾಗಿರಲಿದೆ.
ಮಿಥುನ ರಾಶಿ
ನೀವು ಪ್ರೀತಿಸುತ್ತಿರುವವರ ಬೆಂಬಲದಿಂದ ನಿಮ್ಮ ಬದುಕಿನಲ್ಲಿ ಬಯಸಿದ್ದನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ, ನಿಮ್ಮ ಪ್ರೇಮ ಸಂಬಂಧ ತುಂಬಾ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಪ್ರೀತಿ, ಮಾಧುರ್ಯ ಹೆಚ್ಚಾಗುವುದು.
ಕರ್ಕ ರಾಶಿ
ಕರ್ಕ ರಾಶಿಯವರು ಪ್ರೇಮ ಸಂಬಂಧದಲ್ಲಿ ಕೆಲವು ಸವಾಲುಗಳು ಎದುರಾಗಬಹುದು, ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಬಹುದು, ನೀವು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು.
ಸಿಂಹ ರಾಶಿ
ಪ್ರೇಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು, ಆದರೆ ಎಲ್ಲವೂ ಒಳಿತಾಗಲಿದೆ, ನಿಮ್ಮ ಪ್ರೇಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ನಿಮ್ಮ ಪ್ರೇಮ ಸಂಬಂಧದಲ್ಲಿನ ಸಮಸ್ಯೆಗಳು ದೂರಾಗಲಿದೆ, ಆದರೆ ವಿವಾಹಿತರು ಕೆಲ ಸಮಸ್ಯೆ ಎದುರಿಸಬಹುದು.
ತುಲಾ ರಾಶಿ
ನೀವು ಪ್ರೀತಿಯಲ್ಲಿದ್ದರೆ ನಿಮ್ಮ ಪ್ರೀತಿಗೆ ಮನೆಯವರ ಬೆಂಬಲ ಸಿಗಲಿದೆ, ಆದರೆ ಮಧ್ಯದಲ್ಲಿ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರಬಹುದು, ಆದರೆ ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುತ್ತದೆ . ಈ ವರ್ಷ ವಿವಾಹವಾಗಲು ಬಯಸಿದರೆ ನಿಮ್ಮ ಮದುವೆ ನಡೆಯಲಿದೆ.
ವೃಶ್ಚಿಕ ರಾಶಿ
ನೀವು ಪ್ರೀತಿಸುತ್ತಿರುವವರ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಅವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಒಳ್ಳೆಯದು. ಇದರಿಂದ ನಿಮ್ಮ ಬಾಂಧವ್ಯ ಗಟ್ಟಿಯಾಗುವುದು.
ಧನು ರಾಶಿ
ಪ್ರೇಮಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ, ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗಲಿದೆ. ವರ್ಷದ ಕೊನೆಯ ದಿನಗಳಲ್ಲಿ, ನೀವು ವಿವಾಹವಾಗಲು ನಿರ್ಧರಿಸಬಹುದು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಮಕರ ರಾಶಿ
ಮಕರ ರಾಶಿಯವರ ಪ್ರೇಮ ಜೀವನ ಚೆನ್ನಾಗಿರಲಿದೆ. ಈ ವರ್ಷ ನೀವು ಮದುವೆಯಾಗುವ ಸಾಧ್ಯತೆಗಳಿವೆ. ಇನ್ನೂ ಪ್ರೀತಿಯಲ್ಲಿ ಬಿದ್ದಿಲ್ಲ ಎನ್ನುವವರು ಈ ವರ್ಷ ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ.
ಕುಂಭ ರಾಶಿ
ಪ್ರೇಮಿಗಳಿಗೆ ಪ್ರಾರಂಭದಲ್ಲಿ ಕೆಲ ಸಮಸ್ಯೆಗಳಿರಬಹುದು, ನಿಮ್ಮಿಬ್ಬರ ನಡುವೆ ಹೊಂದಾಣಿಕೆಯಲ್ಲಿ ಸಮಸ್ಯೆ ಇರಲಿದೆ, ಆದರೆ ನಂತರ ಎಲ್ಲಾ ಬಗೆಹರಿದು ನಿಮ್ಮ ನಡುವೆ ಪ್ರೀತಿ ಹೆಚ್ಚಾಗಲಿದೆ, ಮದುವೆಯಾಗುವುದರ ಬಗ್ಗೆ ಕೂಡ ನೀವು ನಿರ್ಧಾರ ತೆಗೆದುಕೊಳ್ಳಬಹುದು.
ಮೀನ ರಾಶಿ
ನಿಮ್ಮ ಪ್ರೇಮ ಸಂಬಂಧಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು, ಮದುವೆಗೆ ಮನೆಯವರ ಒಪ್ಪಿಗೆ ಪಡೆಯಲು ಕಷ್ಟವಾಗಬಹುದು, ಇನ್ನು ಪ್ರೀತಿಯಲ್ಲಿ ಇಲ್ಲದವರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ವರ್ಷ ಸಂಬಂಧ ಕೂಡಿ ಬರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications