Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
500 ವರ್ಷದ ಬಳಿಕ ಚಂದ್ರ-ಶುಕ್ರನಿಂದ ವೈಭವ ಲಕ್ಷ್ಮಿ ಯೋಗ: ದೀಪಾವಳಿಯಲ್ಲಿ ಖುಲಾಯಿಸಲಿದೆ ಅದೃಷ್ಟ!
ಅಕ್ಟೋಬರ್‌ನಲ್ಲಿ ದೀಪಾವಳಿ ಹಬ್ಬದ ಸಮಯ ಹಲವು ಗ್ರಹಗಳ ಚಲನೆಯಲ್ಲಿನ ಬದಲಾವಣೆಯ ನೋಡಬಹುದು. ಹಾಗೆ ದೀಪಾವಳಿಯ ಸಮಯದಲ್ಲಿ ಉಂಟಾಗುತ್ತಿರುವ ಶುಭಯೋಗದಲ್ಲಿ ನಾವಿಂದು ಚಂದ್ರನಿಂದ ಉಂಟಾಗುತ್ತಿರುವ ಯೋಗದ ಕುರಿತಾಗಿ ತಿಳಿಯೋಣ. ದೀಪಾವಳಿಯ ಸಮಯದಲ್ಲಿ ಚಂದ್ರನು ಕನ್ಯಾ ರಾಶಿಗೆ ಚಲಿಸಲಿದ್ದಾನೆ. ಆದ್ರೆ ಈಗಾಗಲೇ ಶುಕ್ರನು ಕನ್ಯಾ ರಾಶಿಯಲ್ಲಿದ್ದು, ಅಲ್ಲಿ ಚಂದ್ರನೊಂದಿಗೆ ಸಂಯೋಗವಾಗುತ್ತಾನೆ.
ಈ ಗ್ರಹಗಳ ಸಂಯೋಗದಿಂದಾಗಿ ವೈಭವ ಲಕ್ಷ್ಮಿ ರಾಜಯೋಗವು ರೂಪುಗೊಳ್ಳಲಿದೆ. ಸುಮಾರು 500 ವರ್ಷಗಳ ಬಳಿಕ ದೀಪಾವಳಿಯ ಸಮಯದಲ್ಲಿ ಈ ಯೋಗ ರೂಪುಗೊಳ್ಳುತ್ತಿದೆ. ಈ ಗ್ರಹಗಳ ಸಂಯೋಗದಿಂದ ಎಲ್ಲಾ ರಾಶಿಗಳ ಮೇಲೆಯೂ ಪ್ರಭಾವ ಬೀರಲಿದೆ. ಇದು ದೀಪಾವಳಿಯ ಬಳಿಕ ಹಲವು ರೀತಿಯ ಶುಭಗಳಿಗೆಗೆ ಕಾರಣವಾಗಲಿದೆ.

ಹಾಗಾದ್ರೆ ದೀಪಾವಳಿಯ ಸಮಯದಲ್ಲಿ ರೂಪುಗೊಳ್ಳುವ ಈ ವೈಭವ ಲಕ್ಷ್ಮಿ ರಾಜಯೋಗದಿಂದಾಗಿ ಯಾವೆಲ್ಲಾ ರಾಶಿಯವರಿಗೆ ಶುಭಗಳಿಗೆ ಆರಂಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಚಂದ್ರ ಮತ್ತು ಶುಕ್ರರ ಸಂಯೋಗದಿಂದಾಗಿ ಕನ್ಯಾ ರಾಶಿಯ ಮೊದಲ ಮನೆಯಲ್ಲಿ ವೈಭವ ಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗವು ಈ ಕನ್ಯಾ ರಾಶಿಯವರಿಗೆ ಹಿಂದೆಂದು ನೋಡದಂತಹ ಲಾಭ ತರಲಿದೆ. ನಿಮ್ಮ ವ್ಯಕ್ತಿತ್ವ ವಿಕನಸ ಉಂಟಾಗಲು ಸಹಕಾರಿಯಾದ ಕೆಲಸಗಳು ನಿಮ್ಮ ಹುಡುಕಿ ಬರಲಿವೆ. ವಿದೇಶ ಪ್ರವಾಸಗಳು, ಕುಟುಂಬದೊಂದಿಗೆ ಪ್ರವಾಸಗಳ ಮಾಡಬಹುದು. ನಿಮ್ಮ ವ್ಯವಹಾರಗಳು ನೀವು ಅಂದುಕೊಂಡಂತೆ ನೆರವೇರಲಿವೆ. ಸರ್ಕಾರಿ ಕೆಲಸದಲ್ಲಿರುವ ಮಂದಿಗೆ ಬಡ್ತಿ, ವರ್ಗಾವಣೆಯ ಶುಭವಿದೆ. ಹೊಸ ವ್ಯವಹಾರ ಆರಂಭಿಸಲು ಉತ್ತಮ ಸಮಯ. ವೈವಾಹಿಕ ಜೀವನದಲ್ಲಿದ್ದ ದೊಡ್ಡ ವಿಚಾರಗಳು ನಡೆಯಲಿವೆ. ಹೊಸ ಮನೆ, ಆಸ್ತಿ ಖರೀದಿಯ ವಿಚಾರದಲ್ಲಿ ಶುಭವಾಗುತ್ತದೆ.
ಮಕರ ರಾಶಿ
ಚಂದ್ರ ಮತ್ತು ಶುಕ್ರ ಸಂಯೋಗದಿಂದಾಗಿ ಮಕರ ರಾಶಿಯ 9 ನೇ ಮನೆಯಲ್ಲಿ ವೈಭವ ಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ಪರಿಣಾಮವಾಗಿ ನಿಮ್ಮ ಹಲವು ಕೆಲಸಗಳಲ್ಲಿ ಶುಭವಿದೆ. ಬಹಳ ಸಮಯದಿಂದ ಯಾವುದಾದರು ಕೆಲಸವು ಹಣಕಾಸಿನ ಸಮಸ್ಯೆಯಿಂದ ಅರ್ಧಕ್ಕೆ ನಿಂತಿದ್ದರೆ ಆ ಕೆಲಸ ಪೂರ್ಣ ಮಾಡಬಹುದು. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಉತ್ತಮ ಅವಕಾಶಗಳು ಹುಡುಕಿ ಬರಬಹುದು. ನೀವು ಬೇರೊಂದು ಊರಿನಲ್ಲಿ ಆಸ್ತಿ ಖರೀದಿಯ ಆಲೋಚನೆಯಲ್ಲಿದ್ದರೆ ಅದರಲ್ಲಿ ಶುಭವಿದೆ. ವಾಹನ ಖರೀದಿಗೆ ಬಹಳ ಸಮಯದಿಂದ ಹಣ ಒಟ್ಟುಮಾಡುತ್ತಿದ್ದರೆ ಈ ಸಮಯದಲ್ಲಿ ನಿಮ್ಮ ಆಸೆ ಕೈಗೂಡಬಹುದು.
ಕುಂಭ ರಾಶಿ
ಚಂದ್ರ ಮತ್ತು ಶುಕ್ರರ ಸಂಯೋಗದಿಂದಾಗಿ ಕುಂಭ ರಾಶಿಯ 8 ನೇ ಮನೆಯಲ್ಲಿ ವೈಭವ ಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತದೆ. ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸುವಿರಿ. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳ ನೋಡಬಹುದು. ಉದ್ಯಮಿಗಳಿಗೆ ಲಾಭ ತರುವ ಸಮಯವಿದು. ನವವಿವಾಹಿತರಲ್ಲಿ ಸಂತಸದ ಸುದ್ದಿ ಹಾಗೆ ವೈವಾಹಿಕ ಜೀವನದಲ್ಲಿ ಸುಖ ಇರಲಿದೆ. ನಿಮ್ಮ ಹಲವು ವೃತ್ತಿಯ ಆಯ್ಕೆಯಲ್ಲಿ ಶುಭವಿದೆ. ಆದಾಯ ಗಳಿಕೆಗೆ ನೀವು ಹುಡುಕುವ ಹೊಸ ಮಾರ್ಗ ನಿಮಗೆ ಕೈಗೂಡಲಿದೆ. ವಾಹನ ಸಂಬಂಧವಾಗಿ ಇದ್ದಂತಹ ಅಡೆತಡೆ, ಸಮಸ್ಯೆಗಳು ನಿವಾರಣೆಯಾಗಲಿದೆ. ಆಪ್ತರಿಗೆ ನೀಡಿದ್ದ ಹಣ ಮರಳಿ ನಿಮ್ಮ ಕೈ ಸೇರುವ ಸಂಭ ಹೆಚ್ಚಾಗಲಿದೆ. ಮನೆ ಕಟ್ಟಿಸುತ್ತಿರುವ ಮಂದಿಗೆ ಬಹಳ ಅನುಕೂಲಕರ ವಾತಾವರಣ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications