Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಯಾವ ವಯಸ್ಸಿನಲ್ಲಿ ಮದುವೆಯಾಗಬೇಕು? ನಿಮ್ಮ ಜನ್ಮ ತಿಂಗಳಲ್ಲಿ ಅಡಗಿದೆ ಮಾಹಿತಿ!!
ಜ್ಯೋತಿಷ್ಯದಲ್ಲಿ ಒಬ್ಬರ ಜನ್ಮ ದಿನಾಂಕ ನಿಮ್ಮ ಜೀವನ ರೂಪಿಸುವಲ್ಲಿ ಹಾಗೆ ನಿಮ್ಮ ಹಲವು ರೀತಿಯ ಕಷ್ಟ ನಷ್ಟಗಳ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಯಾವ ರಾಶಿಯಲ್ಲಿ ಜನಿಸಿದ್ದೀರಿ. ಯಾವ ನಕ್ಷತ್ರ, ಯಾವ ಸಮಯ ಎಂಬುದು ನಿಮ್ಮ ದಿನಗಳ ರೂಪಿಸುವ ಪ್ರಮುಖ ವಿಷಯಗಳಾಗಿವೆ. ಹಾಗೆ ನಿಮ್ಮ ಜನ್ಮ ತಿಂಗಳು, ಹಾಗೂ ದಿನವು ನಿಮ್ಮ ಭವಿಷ್ಯದ ದೃಷ್ಟಿಯಿಂದ ಹಲವು ರೀತಿಯ ವಿದ್ಯಮಾನ ನಾವು ಮೊದಲೇ ಊಹಿಸಬಹುದು.
ಜ್ಯೋತಿಷ್ಯದಲ್ಲಿ ಇದಕ್ಕಾಗಿ ಜನ್ಮ ಕುಂಡಲಿ, ಜಾತಕದಂತಹ ಸೂತ್ರವನ್ನು ಹಣಿಯಲಾಗಿದೆ. ಇದರ ಅನುಸಾರವಾಗಿ ನಿಮ್ಮ ಮುಂದಿನ ಆಗುಹೋಗುಗಳ ಕುರಿತಾಗಿ ಮೊದಲೇ ಊಹಿಸಬಹುದು. ಹುಟ್ಟಿದಾಗಲೇ ನಿಮ್ಮ ಯಾವ ವಯಸ್ಸಿನಲ್ಲಿ ಯಾವ ರೀತಿಯ ಘಟನೆಗಳು ಜರುಗಲಿದೆ ಎಂಬುದನ್ನು ತಿಳಿಯಬಹುದು. ಅದರಲ್ಲೂ ಹಲವರು ತಮ್ಮ ವಿವಾಹ ಕುರಿತಾಗಿ ಇತ್ತೀಚಿಗೆ ಬಹಳ ಚಿಂತೆಯಲ್ಲಿ ಮುಳುಗುವುದು ನೋಡಬಹುದು.

ಹುಡುಗ ಹಾಗೂ ಹುಡುಗಿ ತಮ್ಮ ಎಷ್ಟನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ ಎಂಬುದನ್ನು ನಿಮ್ಮ ಜನ್ಮ ತಿಂಗಳ ಆಧಾರದ ಮೇಲೆ ಅಳೆಯಬಹುದು. ಹಾಗಾದ್ರೆ ಯಾವ ತಿಂಗಳಲ್ಲಿ ಜನಿಸಿದ ಮಂದಿ ಯಾವಾಗ ವಿವಾಹ ಯೋಗ ಪಡೆಯುತ್ತಾರೆ ಎಂದಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜನವರಿ
ನೀವು ವರ್ಷದ ಮೊದಲ ತಿಂಗಳಲ್ಲಿ ಜನಿಸಿದ್ದರೆ ನೀವು ಬಲವಾದ ಇಚ್ಛಾಶಕ್ತಿಯುಳ್ಳ ಮತ್ತು ಮಹತ್ವಾಕಾಂಕ್ಷೆಯ ವ್ಯಕ್ತಿಯಾಗಿರುತ್ತೀರಿ. ನಿಮ್ಮ ವಿವಾಹದ ವಯಸ್ಸು 28 ರಿಂದ 32 ರ ನಡುವೆ ಇರುತ್ತದೆ. ನೀವು ಹೆಚ್ಚು ಭಾವನಾತ್ಮಕ ವ್ಯಕ್ತಿ ಆಗಿರುವುದರಿಂದ ನಿಮ್ಮ ಜೋಡಿಯನ್ನು ಬಹಳ ಸೂಕ್ತ ರೀತಿಯಲ್ಲಿ ಆರಿಸಲು ಮುಂದಾಗುತ್ತೀರಿ.
ಫೆಬ್ರವರಿ
ನೀವು ಫೆಬ್ರವರಿಯಲ್ಲಿ ಜನಿಸಿದವರಾಗಿದ್ದರೆ ಸ್ವಾಭಾವಿಕವಾಗಿ ನೀವು ಪ್ರೀತಿ ಹಾಗೂ ದಾಂಪತ್ಯ ಯೋಗ ಹೊಂದಿದವರು. ಹೀಗಾಗಿ ನೀವು 24ರಿಂದ 28 ವರ್ಷದೊಳಗೆ ವಿವಾಹವಾಗುವುದು ಹೆಚ್ಚು. ಅದರಲ್ಲೂ ಯುವತಿಯರು 20ನೇ ವರ್ಷದಲ್ಲೂ ಕೂಡ ವಿವಾಹ ಯೋಗ ಪಡೆದಿರುತ್ತಾರೆ.
ಮಾರ್ಚ್
ಮಾರ್ಚ್‌ನಲ್ಲಿ ಜನಿಸಿದ ಜನರು ಹೆಚ್ಚಾಗಿ ಸೃಜನಶೀಲರು ಮತ್ತು ಕಲ್ಪನಾಶೀಲರು. ಅವರು ಜೀವನವನ್ನು ಒಂದು ವಿಶಿಷ್ಟ ದೃಷ್ಟಿಕೋನದಿಂದ ನೋಡಲು ಮುಂದಾಗುತ್ತಾರೆ. ಅವರಿಗೆ ಮದುವೆಯಾಗಲು ಸೂಕ್ತ ವಯಸ್ಸು 25 ರಿಂದ 30. ಈ ಸಮಯ ಅವರಿಗೆ ಮದುವೆಯ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಸ್ವೀಕರಿಸುವ ಆತ್ಮವಿಶ್ವಾಸವನ್ನು ನೀಡುತ್ತದೆ.
ಏಪ್ರಿಲ್
ನೀವು ಏಪ್ರಿಲ್‌ನಲ್ಲಿ ಜನಿಸಿದವರಾಗಿದ್ದರೆ ನಿಮ್ಮ ದೃಢ ಸಂಕಲ್ಪಗಳು, ಗುರಿ ಕಡೆಗಿನ ಪ್ರಾಮಾಣಿಕ ದಾರಿಯ ಕಾರಣ ನೀವು 26ರಿಂದ 35 ವರ್ಷಗಳ ನಿರಂತರ ಕಾಯುವಿಕೆಗೆ ಒಳಗಾಗಬಹುದು. ಆದರೆ ನಿಮಗೆ 33 ವರ್ಷದೊಳಗೆ ವಿವಾಹವಾಗುವುದು ಸೂಕ್ತ ಸಮಯ. ನೀವು ಬಹಳ ಕಾಳಜಿ ಇಡುವ ಜನರು, ಹಾಗೆ ಪ್ರೀತಿಯಲ್ಲಿ ಎಂದಿಗೂ ಸೋಲದ ಮಂದಿ.
ಮೇ
ಮೇ ತಿಂಗಳಲ್ಲಿ ನೀವು ಜನಿಸಿದ್ದರೆ ಮದುವೆಯಾಗಲು ಸೂಕ್ತ ವಯಸ್ಸು 28 ರಿಂದ 32 ವರ್ಷಗಳು. ಈ ಅವಧಿಯು ಅವರಿಗೆ ತಮ್ಮ ಸಕಾರಾತ್ಮಕ ಶಕ್ತಿಯನ್ನು ಬಳಸಿಕೊಳ್ಳಲು ಮತ್ತು ಸಾಮರಸ್ಯ ಮತ್ತು ಶಾಶ್ವತವಾದ ವೈವಾಹಿಕ ಸಂಬಂಧವನ್ನು ನಿರ್ಮಿಸಲು ತಮ್ಮ ಶಕ್ತಿಯನ್ನು ಬಳಸಲು ಅನುವು ಮಾಡಿಕೊಡುತ್ತದೆ.
ಜೂನ್
ಜೂನ್ ತಿಂಗಳಲ್ಲಿ ಜನಿಸಿದವರು ತೀವ್ರ ಕುತೂಹಲ ಮತ್ತು ಸಂವಹನಶೀಲರು. ಜೂನ್‌ನಲ್ಲಿ ಜನಿಸಿದವರಿಗೆ ಮದುವೆಗೆ ಉತ್ತಮ ವಯಸ್ಸು 20 ರಿಂದ 25 ವರ್ಷಗಳು. ಈ ಅವಧಿಯು ಅವರು ಮುಕ್ತ ಮತ್ತು ಪರಿಣಾಮಕಾರಿ ಸಂವಹನದ ಮೂಲಕ ತಮ್ಮ ಸಂಗಾತಿಯೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕವನ್ನು ಬೆಳೆಸಿಕೊಳ್ಳಬಹುದು. ಆದರೆ ಕೆಲವು ಕಾರಣದಿಂದ ನಿಮ್ಮ ಮದುವೆ ಕೂಡ ತಡವಾಗುವುದು ಸಾಮಾನ್ಯ.
ಜುಲೈ
ಜುಲೈನಲ್ಲಿ ಜನಿಸಿದವರಿಗೆ ಮದುವೆಗೆ ಸೂಕ್ತ ವಯಸ್ಸು 27 ರಿಂದ 31 ರ ನಡುವೆ ಇರುತ್ತದೆ. ನಿಮ್ಮಲ್ಲಿ ವಿವಾಹ ಕುರಿತಾದ ಕೆಲವು ತಪ್ಪು ಕಲ್ಪನೆಗಳು ಅಥವಾ ಅದರ ತಯಾರಿಯಲ್ಲಿ ಆಗುವ ಅಡತಡೆಯಿಂದ ಮದುವೆ ತಡವಾಗಬಹುದು. ಆದರೆ 31 ವರ್ಷದೊಳಗೆ ನೀವು ವಿವಾಹವಾಗಲು ಸೂಕ್ತ ವಯಸ್ಸಾಗಿದೆ.
ಆಗಸ್ಟ್
ಆಗಸ್ಟ್‌ನಲ್ಲಿ ಜನಿಸಿದ ಜನರು ನಾಯಕತ್ವದ ಗುಣಗಳ ಹೊಂದಿರುವವರು ಹೀಗಾಗಿ ನೀವು ಸೂಕ್ತ ಜೋಡಿ ಹುಡುಕಾಟದಲ್ಲಿರುವವರು. ನೀವು 25ರಿಂದ 32 ವರ್ಷದೊಳಗೆ ವಿವಾಹವಾಗುವುದು ಸೂಕ್ತ.
ಸೆಪ್ಟೆಂಬರ್
ಸೆಪ್ಟೆಂಬರ್‌ನಲ್ಲಿ ಜನಿಸಿದವರು ದೂರದೃಷ್ಟಿಯುಳ್ಳವರು. ಅವರು ಜೀವನವನ್ನು ವ್ಯವಸ್ಥಿತ ದೃಷ್ಟಿಕೋನ ಮತ್ತು ಸಮಸ್ಯೆ ಮುಕ್ತವಾಗಿಸಲು ಇಚ್ಛಿಸುವವರು. ಹೀಗಾಗಿ ನೀವು 30ನೇ ವಯಸ್ಸಿನಲ್ಲಿ ವಿವಾಹವಾಗುವುದು ಬಹಳ ಉತ್ತಮ. ಇದು ನಿಮ್ಮ ದಾಂಪತ್ಯದಲ್ಲಿ ಸುಖ ತರಬಹುದು.
ಅಕ್ಟೋಬರ್
ನೀವು ಅಕ್ಟೋಬರ್ ತಿಂಗಳಲ್ಲಿ ಜನಿಸಿದವರಾಗಿದ್ದರೆ ನಿಮ್ಮ ವಿವಾಹ ವಯಸ್ಸು 30 ರಿಂದ 35 ವರ್ಷಗಳ ನಡುವೆ ಇರುತ್ತದೆ ಎಂದು ನಕ್ಷತ್ರಗಳು ಹೇಳುತ್ತವೆ. ಈ ಹಾಗೆ ನೀವು ಪ್ರೀತಿಯ ಜೀವನದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ವಿವಾಹ ತಡವಾದರು ತಮ್ಮ ಜೋಡಿ ಹುಡುಕುವುದು ನಿಮ್ಮ ಬಯಕೆಯಲ್ಲಿ ಒಂದಾಗಿರುತ್ತದೆ.
ನವೆಂಬರ್
ನವೆಂಬರ್‌ನಲ್ಲಿ ಜನಿಸಿದವರು ಪ್ರೇಮ ವಿವಾಹಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚು ನೀವು 24ರಿಂದ 32 ವರ್ಷದೊಳಗೆ ವಿವಾಹವಾಗಲು ಸೂಕ್ತ ಸಮಯವಾಗಿದೆ. ಹಾಗೆ ನೀವು ತಡವಾಗಿ ವಿವಾಹವಾದಷ್ಟು ನಿಮ್ಮ ಜೀವನ ಸಂತೋಷವಾಗಿ ಕಳೆಯಬಹುದು.
ಡಿಸೆಂಬರ್
ಡಿಸೆಂಬರ್‌ನಲ್ಲಿ ಜನಿಸಿದ ಜನರು ಜೀವನದಲ್ಲಿ ಸಾಹಸ ಮತ್ತು ಉತ್ಸಾಹವನ್ನು ಹೊಂದಿರುವವರು. ಹೀಗಾಗಿ ಮದುವೆಗೆ ಸೂಕ್ತ ವಯಸ್ಸು 22 ರಿಂದ 26 ವರ್ಷಗಳು. ಆದರೆ ಹಲವರಲ್ಲಿ ತಡವಾದ ವಿವಾಹ ನೋಡಬಹುದು ಇದರಿಂದ ದೊಡ್ಡ ಸಮಸ್ಯೆ ಎದುರಾಗದೆ ಇದ್ದರೂ ಅವರಲ್ಲಿ ಸಣ್ಣ ಕೊರತೆಗಳ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications