Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನವಪಂಚಮ ಯೋಗ 2025: ಅಪರೂಪದ ಯೋಗವು ನಿಮ್ಮ ಬದುಕು ಬದಲಿಸಲಿದೆ..!!
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳ ಚಲನೆ, ಯೋಗ, ರಾಶಿ, ನಕ್ಷತ್ರ, ತಿಥಿ, ದಿಕ್ಕು ಎಲ್ಲದಕ್ಕೂ ಬಹಳ ಮುಖ್ಯ ಸ್ಥಾನವಿದೆ. ಯಾವ ಗ್ರಹಗಳ ಚಲನೆ ಯಾವ ರಾಶಿಗಳಲ್ಲಿ ನಡೆಯುತ್ತೆ ಅನ್ನೋದು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ 2025ರ ಆರಂಭದಿಂದಲೂ ಹಲವು ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುತ್ತಿದೆ, ಇದು ಹೊಸ ರೀತಿಯ ಯೋಗ ರೂಪುಗೊಳ್ಳುವಿಕೆಗೆ ಕಾರಣವಾಗುತ್ತಿದೆ.
ಈಗ ಇದೇ ಫೆಬ್ರವರಿಯಲ್ಲಿ ಅಪರೂಪದ ನವಪಂಚಮಿ ಯೋಗ ರೂಪುಗೊಳ್ಳುತ್ತಿದೆ. ಗುರು-ಕೇತು, ಮಂಗಳ-ಶನಿ, ಮಂಗಳ-ಶುಕ್ರ, ಬುಧ-ಗುರು, ಚಂದ್ರ ಮತ್ತು ರಾಹು ಗ್ರಹಗಳಿಂದ ಉಂಟಾಗಲಿರುವ ಈ ವಿಶೇಷ ಯೋಗವು ಹಲವರಿಗೆ ನಿರೀಕ್ಷೆ ಮೀರಿ ಲಾಭ ತರಲಿದೆ. ಹಾಗೆ ಇದು ಅಪರೂಪಕ್ಕೆ ಸಂಭವಿಸುವ ಯೋಗವಾಗಿದೆ. 300 ವರ್ಷಗಳ ಬಳಿಕ 2023ರಲ್ಲಿ ಇದು ಸಂಭವಿಸಿತ್ತು.

ನವ ಪಂಚಮಿ ಯೋಗವು ಎಲ್ಲಾ ರಾಶಿಗಳ ಮೇಲೆಯೂ ತನ್ನ ಪ್ರಭಾವ ಬೀರುತ್ತದೆ. ಆರ್ಥಿಕ ಲಾಭ, ಅದೃಷ್ಟ, ಅವರಲ್ಲಿ ಬದಲಾಗುತ್ತದೆ. ಅವರು ನಿರೀಕ್ಷಿಸಿದಷ್ಟು ಪ್ರಗತಿ ಅವರಲ್ಲಿ ಉಂಟಾಗುತ್ತಿದೆ. ಹಾಗಾದ್ರೆ ಈ ನವಪಂಚಮಿ ಯೋಗವು ಯಾವೆಲ್ಲಾ ರಾಶಿಯವರಿಗೆ ಲಾಭದಾಯಕವಾಗುತ್ತಿದೆ. ಯಾರಲ್ಲಿ ಲಾಭ ತರುತ್ತಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ನವಪಂಚಮಿ ರಾಜಯೋಗವು ಮೇಷ ರಾಶಿಯವರಿಗೆ ಅನೇಕ ಬದಲಾವಣೆಗಳನ್ನು ತರಲಿದೆ. ಮೇಷ ರಾಶಿಯ ಅಧಿಪತಿ ಮಂಗಳನಾಗಿರುವುದರಿಂದ ಈ ಯೋಗವು ಮೇಷ ರಾಶಿಯ 3ನೇ ಮನೆಯಲ್ಲು ರೂಪುಗೊಳ್ಳುತ್ತಿದೆ. ಇದರಿಂದ ನಿಮ್ಮ ಹಳೆಯ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ನೀಡುವ ಸಮಯ ಇದು. ಹಣಕಾಸಿನ ಸಮಸ್ಯೆ, ಅನಾರೋಗ್ಯ ಸಮಸ್ಯೆ ಸೇರಿ ಹಲವು ರೀತಿ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುತ್ತೀರಿ. ನಿಮ್ಮ ಹೂಡಿಕೆಗಳು ಫಲ ನೀಡುತ್ತದೆ. ಸ್ನೇಹಿತರ ಸಹಾಯದಿಂದ ನಿಮ್ಮ ಸಮಸ್ಯೆಯೊಂದು ಬಗೆಹರಿಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಅನೇಕ ಶುಭ ಸಮಾಚಾರಗಳು, ಸುದ್ದಿಗಳು ಕೇಳಿಬರುತ್ತವೆ.
ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ನವಪಂಚಮಿ ಯೋಗ ಅನೇಕ ರೀತಿಯಲ್ಲಿ ಧನಾತ್ಮಕ ಲಾಭಗಳಿಗೆ ಕಾರಣವಾಗುತ್ತಿದೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನೀವು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ನಿರ್ಧಾರ ಮುಂದೆ ಸರಿಯಾದ ನಿರ್ಧಾರ ಎನಿಸುತ್ತದೆ. ನೀವು ವ್ಯಾಪಾರ ಹಾಗೂ ನೌಕರರ ಕ್ಷೇತ್ರದಲ್ಲಿದ್ದರೆ ಅತ್ಯುತ್ತಮ ದಿನಗಳು ಕಾದಿವೆ. ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳು ಮುಗಿಯುತ್ತವೆ. ನೀವು ಅವಿವಾಹಿತರಾಗಿದ್ದರೆ ಶುಭ ಸುದ್ದಿಗಳು ಕಾದಿವೆ. ಹಾಗೆ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮ್ಮಲ್ಲಿ ಶುಭ ಶಕುನಗಳಿರಲಿದೆ. ನಿಮ್ಮ ಕೈಸೇರ ಬೇಕಿದ್ದ ಕೆಲಸ, ಹಣ ನಿಮ್ಮ ಬಳಿಗೆ ಬರಲಿದೆ.
ಮಕರ ರಾಶಿ
ಈ ನವಪಂಚಮಿ ರಾಜಯೋಗವು ಮಕರ ರಾಶಿಯವರಿಗೆ ಅನಿರೀಕ್ಷಿತ ಪ್ರಯೋಜನಗಳನ್ನು ತರಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಇದರಿಂದ ನಿಮ್ಮಲ್ಲಿ ದಿಢೀರ್ ಹಣಕಾಸು ಪರಿಸ್ಥಿತಿ ಸುಧಾರಣೆ, ಲಾಭದಾಯಕ ದಿನಗಳು ಮುಂದೆ ಬರಲಿದೆ. ನಿಮ್ಮ ವ್ಯವಹಾರಗಳಲ್ಲಿ ಆಗುತ್ತಿದ್ದ ಅಡ್ಡಿ ಆತಂಕ ದೂರಾಗಲಿವೆ. ನೀವು ಯಾವುದೇ ಕೆಲಸ ಮಾಡಿದರು ಅಚ್ಚರಿ ಎಂಬಂತೆ ಶುಭಕರವಾಗಿ ನಡೆಯಲಿವೆ. ಆರೋಗ್ಯದ ವಿಚಾರದಲ್ಲಿಯೂ ನಿಮಗೆ ಶುಭವಾಗಲಿದೆ. ವಾಹನ ಮಾಲಿಕರಲ್ಲಿ ಉತ್ತಮ ಲಾಭ ನೋಡುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿಯೂ ನೀವು ಸಂತಸದ ದಿನಗಳನ್ನು ನೋಡುತ್ತೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











