Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಭವಿಷ್ಯ 2025: ಮೇಷ ರಾಶಿಯವರಿಗೆ ಹೊಸ ಸಂವತ್ಸರ ಹೇಗಿರಲಿದೆ?
ಹಿಂದೂಗಳಿಗೆ ಹೊಸ ವರ್ಷವೆಂದರೆ ಅದು ಯುಗಾದಿ. ಮಾರ್ಚ್ 29ಕ್ಕೆ ನ ಹೊಸ ಸಂವತ್ಸರದೊಂದಿಗೆ ಹೊಸ ಯುಗ ಪ್ರಾರಂಭವಾಗಲಿದೆ. ಶಕ ಸಂವತ್ಸರ ಶುರುವಾಗಲಿದೆ, ಹೊಸ ಸಂವತ್ಸರ ಮೇಷ ರಾಶಿಯವರಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮಾರ್ಚ್ 29ರಂದು ಶನಿಯು ರಾಶಿ ಬದಲಾವಣೆ ಮಾಡಲಿದೆ, ಶನಿಯು ಮೀನ ರಾಶಿಗೆ ಸಂಚರಿಸಲಿದೆ, ಶನಿಯು ಮೀನ ರಾಶಿಗೆ ಸಂಚರಿಸುತ್ತಿದ್ದಂತೆ ಶನಿ ಸಾಡೇಸಾತಿಯ ಮೊದಲನೇ ಹಂತ ಮೇಷ ರಾಶಿಯವರಿಗೆ ಶುರುವಾಗಲಿದೆ. ಶನಿಯು ನಿಮ್ಮ 12ನೇ ಮನೆಯಲ್ಲಿ ಇರಲಿದೆ.

ಶನಿ ಸಾಡೇಸಾತಿ ಶುರುವಾಗಿದೆ ಎಂದು ಭಯ ಪಡಬೇಕಾದ ಅಗ್ಯತವಿಲ್ಲ:
ಜ್ಯೋತಿಷ್ಯಶಾಸ್ತ್ರ ಪ್ರಕಾರ ಮೀನ ರಾಶಿಯವರಿಗೆ ಶನಿ ಸಾಡೇಸಾತಿ ಶುರುವಾಗುವುದು , ಹಾಗಂತ ಭಯ ಪಡುವ ಅಗ್ಯತವಿಲ್ಲ, ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ.
ಮೇಷ ರಾಶಿಯವರಲ್ಲಿ ಗುರು 2-3ನೇ ಮನೆಗೆ ಬರಲಿದೆ. ರಾಹು 12ರಿಂದ 1ನೇ ಮನೆಗೆ ಬರಲಿದೆ, ಕೇತು 6ನೇ ಮನೆಯಿಂದ 5ನೇ ಮನೆಗೆ ಬರಲಿದೆ.
ಗುರು ನಿಮಗೆ ಉಚ್ಛ ಸ್ಥಾನದಲ್ಲಿದೆ
ಗುರು ಮೇಷ ರಾಶಿಯಲ್ಲಿ ಉಚ್ಛ ಸ್ಥಾನದಲ್ಲಿ ಇರುವುದರಿಂದ ನಿಮಗೆ ಎದುರಾಗುವ ಆರ್ಥಿಕ ತೊಂದರೆಗಳು ದೂರಾಗಲಿದೆ, ವಿಘ್ನಗಳನ್ನು ಎದುರಿಸುವ ಬಲವನ್ನು ಗುರು ತುಂಬುತ್ತಾನೆ.
ಆರೋಗ್ಯ ಬಗ್ಗೆ ನಿರ್ಲಕ್ಷ್ಯ ಬೇಡ
ಮೇಷ ರಾಶಿಯವರು ಈ ಹೊಸ ಸಂವತ್ಸರದಲ್ಲಿ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕಾಗುತ್ತದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬೇಡಿ, ವರ್ಷದ ಮಧ್ಯದಲ್ಲಿ ನೀವು ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕಾಗುತ್ತದೆ.
ಹಿತ ಶತ್ರುಗಳಿಂದ ಸಮಸ್ಯೆ ಉಂಟಾಗಬಹುದು
ಆರ್ಥಿಕವಾಗಿ ಉತ್ತಮವಾಗಿದ್ದರೂ ಕೆಲಸದ ಬದಲಾವಣೆಯ ಸಾಧ್ಯತೆ ಇದೆ. ಕೆಲವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು, ಅವರ ಬಗ್ಗೆ ಜಾಗ್ರತೆವಹಿಸಬೇಕು, ಯಾರನ್ನೂ ಕುರುಡಾಗಿ ನಂಬಲು ಹೋಗಬೇಡಿ.
ಮೇಷ ರಾಶಿಯ ರೈತರು ಕೆಲ ಅಡೆತಡೆ ಎದುರಿಸಿದರೂ ಒಳ್ಳೆಯ ಲಾಭ ಗಳಿಸುತ್ತೀರಿ. ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದೆ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ನಿಮಗೆ ವಿದೇಶದಲ್ಲಿ ಬಯಸಿದ ಕೆಲಸ ಸಿಗಲಿದೆ.
ಗೃಹ ನಿರ್ಮಾಣ ಮಾಡುವ ಯೋಗವಿದೆ:
ಮೇಷ ರಾಶಿಯವರಿಗೆ ಗೃಹ ನಿರ್ಮಾಣ ಯೋಗವಿದೆ. ಹಾಗಾಗಿ 2025ರಲ್ಲಿ ನೀವು ಮನೆ ಖರೀದಿಸಬೇಕು ಅಥವಾ ಮನೆ ಕಟ್ಟಬೇಕು ಎಂದು ಪ್ರಯತ್ನ ಹಾಕಿದರೆ ಮನೆಯ ಕನಸು ನನಸಾಗಲಿದೆ.
ಆಸ್ತಿ ವ್ಯವಹಾರಕ್ಕೆ ಈ ಅವಧಿ ಲಾಭದಾಯಕವಾಗಿರಲಿದೆ, ಭೂಮಿ ಖರೀದಿಸುವ ಆಲೋಚನೆಯಲ್ಲಿದ್ದವರಿಗೆ ಈ ವರ್ಷ ಸಾಧ್ಯವಾಗಲಿದೆ.
ಈ ವರ್ಷ ಮೇಷ ರಾಶಿಯವರು ನಿಮ್ಮ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳಬೇಕು
ಶನಿ ಸಾಡೇಸಾತಿ ಪ್ರಭಾವದಿಂದಾಗಿ ನಿಮಗೆ ಸ್ವಲ್ಪ ಗೊಂದಲಗಳು ಉಂಟಾಗಬಹುದು, ಹಾಗಾಗಿ ನೀವು ಏನೇ ನಿರ್ಧಾರ ತೆಗೆದುಕೊಳ್ಳುವುದಾದರೂ ಅನುಭವಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು.
ಆದಾಯ ಹೆಚ್ಚಿದ್ದು ಖರ್ಚು ಕಡಿಮೆ ಇರುವುದರಿಂದ ನಿಮಗೆ ಈ ವರ್ಷ ಅನುಕೂಲಕರವಾಗಿದೆ. ಆದರೆ ಹಣವನ್ನು ನೋಡಿಕೊಂಡು ಹೂಡಿಕೆ ಮಾಡಬೇಕು. ಅನಗ್ಯತ ಖರ್ಚುಗಳಿಗೆ ಕಡಿವಾಣ ಹಾಕಿ.
ಕುಟುಂಬ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ, ಪ್ರೇಮಿಗಳು ಸ್ವಲ್ಪ ಅಡೆತಡೆಗಳನ್ನು ಎದುರಿಸಬಹುದು. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications