Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಮೇ ತಿಂಗಳಿನಿಂದ ಒಂದು ವರ್ಷ ಈ 3 ರಾಶಿಯವರು ಬಯಸಿದ್ದೆಲ್ಲಾ ನೆರವೇರಿದೆ, ಏಕೆಂದರೆ ಆ ರಾಶಿಗಳಿಗೆ ಗಜಕೇಸರಿ ಯೋಗವಿದೆ
ಮೇ ತಿಂಗಳು ಕೆಲ ರಾಶಿಗಳಿಗೆ ಅದೃಷ್ಟದ ತಿಂಗಳಾಗಿದೆ. ಪ್ರಯತ್ನ ಮಾತ್ರದ ಅದೃಷ್ಟದ ಬಲವೂ ಇರಬೇಕು ಎಂದು ಹೇಳಲಾಗುವುದು. ಈ ರಾಶಿಗಳಿಗೆ ಅದೃಷ್ಟದ ಬಲವಿರುವುದರಿಂದ ನಿಮ್ಮ ಶ್ರಮಕ್ಕೆ ಅತ್ಯುತ್ತಮವಾದ ಫಲಿತಾಂಶ ನೀಡಲಿದೆ.

ಮೇ ತಿಂಗಳಿನಲ್ಲಿ ಪ್ರಮುಖ ಗ್ರಹಗಳ ಸಂಯೋಗವಿದೆ
ಮೇ ತಿಂಗಳಿನಲ್ಲಿ ಕೆಲ ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಇರುವುದರಿಂದ ಗಜಕೇಸರಿ ಯೋಗ , ಶಶ ಯೋಗ ಏರ್ಪಡಲಿದೆ. ಮೇ 1ಕ್ಕೆ ಗುರು ವೃಷಭ ರಾಶಿಯನ್ನು ಪ್ರವೇಶಿಸಿದೆ. ಮೇ 8ಕ್ಕೆ ಚಂದ್ರ ಕೂಡ ಪ್ರವೇಶಿಸಲಿದೆ. ಇನ್ನು ಇದೇ ಮಾಸ ಸೂರ್ಯ ಮತ್ತು ಶುಕ್ರ ಕೂಡ ಇದೇ ರಾಶಿಯನ್ನು ಪ್ರವೇಶಿಸಲಿದೆ. ಈ ಗ್ರಹಗಳ ಸಂಯೋಗದಿಂದಾಗಿ ಗಜ ಕೇಸರಿ ಯೋಗ, ಶಶ ಯೋಗ ಉಂಟಾಗಲಿದೆ. ಈ ಎರಡು ಯೋಗ ತುಂಬಾನೇ ಉತ್ತಮ ಪ್ರಯೋಜನ ನೀಡಲಿದೆ. ಕೆಲ ರಾಶಿಯವರಿಗೆ ಈ ಅವಧಿ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಇರಲಿದೆ.
ರಾಶಿಯಲ್ಲಿ ಗಜಕೇಸರಿ ಯೋಗ ಯಾವಾಗ ಉಂಟಾಗುತ್ತದೆ?
ಗುರುವು ಕೇಂದ್ರ ಮನೆಯಲ್ಲಿ ಚಂದ್ರನಿಂದ ಮೊದಲ, ನಾಲ್ಕನೇ, ಏಳನೇ ಅಥವಾ ಹತ್ತನೇ ಮನೆಯಲ್ಲಿದ್ದರೆ ಗಜಕೇಸರಿ ಯೋಗ ಉಂಟಾಗುವುದು. ಈ ಗಜಕೇಸರಿ ಯೋಗ ತುಂಬಾ ಉತ್ತಮ ಪ್ರಭಾವ ಬೀರಲಿದೆ.
ಶಶ ರಾಜಯೋಗ ಎಂದರೇನು
ನಿಯು ಈಗ ಪೂರ್ವ ಬಾದ್ರಪದ ನಕ್ಷತ್ರದಲ್ಲಿ ಇದೆ, ಇದರಿಂದ ಶಶ ಯೋಗ ಉಂಟಾಗಿದೆ. ಕುಂಭದ ಲಗ್ನ ಮನೆಯಲ್ಲಿ ಶನಿ, ಚತುರ್ಥ, ಏಳನೇ ಅಥವಾ ಹತ್ತನೇ ಮನೆಯಲ್ಲಿ ತುಲಾ, ಮಕರ ರಾಶಿಯಲ್ಲಿ ಇದ್ದರೆ ಶಶ ಯೋಗವ ರೂಪುಗೊಳ್ಳುತ್ತದೆ. ಈ ಯೋಗ ಒಂದು ವರ್ಷ ಇರಲಿದೆ. ಅಂದರೆ ಶನಿಯು ತನ್ನ ರಾಶಿ ಬದಲಾವಣೆ ಮಾಡುವವರಿಗೆ ಈ ಯೋಗ ಇರಲಿದೆ.
ಶಶ ರಾಜಯೋಗ ಇರುವವರು ಅದೃಷ್ಟದ ಬೆಂಬಲ ಪಡೆಯುತ್ತಾರೆ. ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಸ್ಥಾನ ಹೆಚ್ಚಾಗುವುದು.ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿಯಲ್ಲಿ ತುಂಬಾ ಪ್ರಗತಿ ಕಂಡು ಬರಲಿದೆ.
ಈ ಯೋಗದಿಂದಾಗಿ ಈ ರಾಶಿಯವರಿಗೆ ಅದ್ಭುತವಾಗಿರಲಿದೆ, ನಿಮ್ಮೆಲ್ಲಾ ಕನಸು ನೆರವೇರಲಿದೆ, ಆರ್ಥಿಕವಾಗಿ ಪ್ರಗತಿಯನ್ನು ಕಾಣಬಹುದು:
ವೃಷಭ ರಾಶಿ
ವೃಷಭ ರಾಶಿಯಲ್ಲಿ ಗಜಕೇಸರಿ, ಶಶ ಯೋಗ ಉಂಟಾಗಿರುವುದರಿಂದ ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ನೀವು ವಿದೇಶದಲ್ಲಿ ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಅದು ನೆರವೇರಲಿದೆ.
ಮಕರ ಸಂಕ್ರಾಂತಿ
ಮಕರ ರಾಶಿಯಲ್ಲಿ ಶಸ ಯೋಗ ಮತ್ತು ಗಜಕೇಸರಿ ಯೋಗದಿಂದಾಗಿ ನೀವು ಉತ್ತಮ ಫಲ ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಂಡು ಬರಲಿದೆ. ಇನ್ನು ನೀವು ಮಗುವನ್ನು ಬಯಸುತ್ತಿದ್ದರೆ ಈ ವರ್ಷ ಶುಭ ಸುದ್ದಿ ಪಡೆಯುತ್ತೀರಿ. ಇನ್ನು ನಿಮ್ಮ ವ್ಯಾಪಾರ ಯೋಜನೆಗಳಲ್ಲಿ ಉತ್ತಮ ಯಶಸ್ಸು ಸಿಗಲಿದೆ. ವೈವಾಹಿಕ ಜೀವನದಲ್ಲಿ ಉತ್ತಮ ಬಾಂಧವ್ಯ ಇರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೂ ಶಶ ಯೋಗ ಬಲವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ವ್ಯವಹಾರದಲ್ಲಿ ತುಂಬಾ ಪ್ರಗತಿ ಕಂಡು ಬರಲಿದೆ. ಈ ಅವಧಿಯಲ್ಲಿ ಆಸ್ತಿ ಖರೀದಿ, ವಾಹನ ಖರೀದಿ ಅಂತ ನಿಮ್ಮ ಆಸೆ ನೆರವೇರಲಿದೆ. ಇನ್ನು ನಿಮ್ಮೆಲ್ಲಾ ಕೆಲಸದಲ್ಲಿ ಪ್ರಗತಿಯನ್ನು ಕಂಡು ಬರುವುದು. ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಬದುಕಿನಲ್ಲಿ ಹೊಂದಾಣಿಕೆ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











