Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಲಾ ಸಂಕ್ರಮಣದ ಬಳಿಕ ಈ 7 ರಾಶಿಗಳಿಗೆ ಪ್ರಯೋಜನಕಾರಿಯಾಗಿದೆ
ಸೂರ್ಯ ಪ್ರತಿ ತಿಂಗಳು ರಾಶಿ ಬದಲಾವಣೆ ಮಾಡುತ್ತಾನೆ, ಪ್ರತಿ ಬಾರಿ ರಾಶಿ ಬದಲಾವಣೆ ಮಾಡಿದಾಗಲೂ ಅದರ ಪ್ರಭಾವ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವೊಂದು ರಾಶಿಗಳಿಗೆ ಸೂರ್ಯನ ಸಂಚಾರ ತುಂಬಾನೇ ವಿಶೇಷವೆಂದು ಪರಿಗಣಿಸಲಾಗುವುದು.
ಉದಾಹರಣೆಗೆ ಮಕರ ಸಂಕ್ರಮಣ ಅದರಂತೆ ತುಲಾ ಸಂಕ್ರಮಣ. ತುಲಾ ಸಂಕ್ರಮಣದ ವಿಶೇಷವೆಂದರೆ ಈ ದಿನ ಕರ್ನಾಟಕದ ಜೀವನದಿಯಾಗಿರುವ ಕಾವೇರಿ ಅವಳ ಉಗಮಸ್ಥಾನವಾಗ ಕೊಡಗಿನ ಭಾಗಮಂಡಲದಲ್ಲಿ ಉಕ್ಕಿ ಬರುತ್ತಾಳೆ.
ವಿಜ್ಞಾನದ ತರ್ಕಕ್ಕೆ ನಿಲುಕದ ದೈವ ಪವಾಡಗಳಲ್ಲಿ ಇದು ಕೂಡ ಒಂದಾಗಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವಾಗುವುದು, ಈ ತೀರ್ಥವನ್ನು ತರಲೆಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸೂರ್ಯನು ತುಲಾ ರಾಶಿಗೆ ಸಂಚರಿಸಿದಾಗ ಕೆಲ ರಾಶಿಗಳು ಸೂರ್ಯನ ಪ್ರಭಾವದಿಂದ ತುಂಬಾನೇ ಅನುಕೂಲ ಪಡೆಯುತ್ತಾರೆ. ಈ ತುಲಾ ಸಂಕ್ರಮಣ ಈ ರಾಶಿಗಳಿಗೆ ಅದೃಷ್ಟದ ಬೆಂಬಲ ನೀಡಲಿದೆ:

ಮೇಷ ರಾಶಿ:
ಈ ತುಲಾ ಸಂಕ್ರಮಣ ಮೇಷ ರಾಶಿಯವರಿಗೆ ತುಂಬಾನೇ ಅದ್ಭುತವಾಗಿದೆ, ವೃತ್ತಿ ಬದುಕಿನಲ್ಲಿ ನೀವು ಎಣಿಸಿದಂತೆಯೇ ಉತ್ತಮ ಫಲಿತಾಂಶ ಪಡೆಯಬಹುದು. ವ್ಯಾಪಾರಿಗಳು ಅತ್ಯುತ್ತಮವಾದ ಲಾಭ ಪಡೆಯಬಹುದು. ಆರ್ಥಿಕವಾಗಿ ಈ ಅವಧಿ ಪ್ರಯೋಜನಕಾರಿಯಾಗಿದೆ. ವೈಯಕ್ತಿಕ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ಆರೋಗ್ಯ ಉತ್ತಮವಾಗಿರಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ತುಲಾ ಸಂಕ್ರಮಣದ ಬಳಿಕ ಉತ್ತಮ ಪ್ರಯೋಜನ ಪಡೆಯುವಿರಿ. ವೃತ್ತಿ ಬದುಕಿನಲ್ಲಿ ಅನುಕೂಲಕರ ಫಲಿತಾಂಶ ದೊರೆಯಲಿದೆ. ವ್ಯಾಪಾರಿಗಳಿಗೂ ಈ ಸಮಯ ತುಂಬಾನೇ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಮಿಥುನ ರಾಶಿ:
ಮಿಥುನ ರಾಶಿಯವರಿಗೂ ಈ ತುಲಾ ಸಂಕ್ರಮಣ ಅದ್ಭುತ ಪ್ರಯೋಜನ ನೀಡಲಿದೆ. ವ್ಯಾಪಾರಿಗಳು ಉತ್ತಮ ಆರ್ಥಿಕ ಪ್ರಯೋಜನ ಪಡೆಯುವಿರಿ. ಈ ಸಮಯದಲ್ಲಿ ಹಣ ಉಳಿಸಲು ಸಾಧ್ಯವಾಗುವುದು. ಕುಟುಂಬ ಜೀವನ ಚೆನ್ನಾಗಿರಲಿದ, ಆರೋಗ್ಯದ ದೃಷ್ಟಿಯಿಂದ ಈ ಅವಧಿ ನಿಮಗೆ ಅನುಕೂಲಕರವಾಗಿದೆ.
ಸಿಂಹ ರಾಶಿ
ತುಲಾ ರಾಶಿಯಲ್ಲಿ ಸೂರ್ಯ ಸಂಕ್ರಮಣ ಸಿಂಹ ರಾಶಿಯವರಿಗೂ ತುಂಬಾ ಉತ್ತಮ ಪ್ರಯೋಜನ ನೀಡಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಲಾಭವನ್ನು ಕಾಣಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯಲ್ಲಿ ಸೂರ್ಯ ಸಂಕ್ರಮಣವಾದಾಗ ನಿಮ್ಮ ಲಗ್ನ ಮನೆಯಲ್ಲಿರುವ ಸೂರ್ಯನು ತುಂಬಾ ಒಳ್ಳೆಯ ಪ್ರಭಾವ ಬೀರಲಿದ್ದಾನೆ. ವ್ಯಾಪಾರಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುತ್ತಾರೆ. ಆರ್ಥಿಕ ಜೀವನದ ದೃಷ್ಟಿಯಿಂದ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಧನು ರಾಶಿ
ಈ ತುಲಾ ಸಂಕ್ರಮಣ ಬಳಿಕ ಧನು ರಾಶಿಯವರು ವೃತ್ತಿ ಬದುಕಿನಲ್ಲಿ ಅದ್ಭುತ ಪ್ರಯೋಜನ ಪಡೆಯುತ್ತೀರಿ , ವ್ಯಾಪಾರಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುವುದು. ಕುಟುಂಬ ಜೀವನದ ದೃಷ್ಟಿಯಿಂದ ನಿಮಗೆ ಅನುಕೂಲಕರವಾಗಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ವೃತ್ತಿ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುತ್ತೀರಿ. ಹಣವನ್ನು ಉಳಿಸಲು ಸಾಧ್ಯವಾಗುವುದು, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
