Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ವರ್ಷದ ಬಳಿಕ ಗುರುವಿಂದ ತ್ರಿಕೋನ ರಾಜಯೋಗ: ಈ ರಾಶಿಗೆ ಹಣದ ಹರಿವು! ಸಮಸ್ಯೆಗೆ ಬ್ರೇಕ್!
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ಒಂದು ನಿರ್ದಿಷ್ಟ ಸಮಯದ ತನ್ನ ರಾಶಿಯನ್ನು ಬದಲಾಯಿಸುವುದು ನೋಡಬಹುದು. ಹಾಗೆ ಎಲ್ಲಾ ರಾಶಿಗಳ ಜನರಲ್ಲೂ ಈ ಗ್ರಹಗಳ ಚಲನೆಯು ಹಲವು ರೀತಿಯ ಪರಿಣಾಮ ಉಂಟು ಮಾಡುವುದು ನೋಡಬಹುದು. ಇನ್ನು ಹಲವರಿಗೆ ಗ್ರಹಗಳ ಸಂಚಾರವು ಶುಭ ಹಾಗೂ ಅಶುಭ ಯೋಗಗಳ ತರಲಿದೆ.
ಈ 9 ಗ್ರಹಗಳ ಪೈಕಿ ಗುರುವನ್ನು ಶುಭವನ್ನು ತರುವ ಗ್ರಹ ಎಂದು ಪರಿಗಣಿಸಲಾಗಿದೆ. ಗುರು ಪ್ರಸ್ತುತ ಮಿಥುನ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಗುರು ಅಕ್ಟೋಬರ್ 18 ರಂದು ಚಂದ್ರನ ಅಧಿಪತ್ಯದ ರಾಶಿಯಾಗಿರುವ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಗುರು ಕರ್ಕ ರಾಶಿಗೆ 12 ವರ್ಷದ ಬಳಿಕ ಚಲಿಸಲುತ್ತಿದ್ದಾನೆ. ಇದು ಪ್ರಬಲ ಯೋಗಕ್ಕೆ ಕಾರಣವಾಗಲಿದೆ.

ವಿಶೇಷವಾಗಿ ಕೆಲವು ರಾಶಿಗೆ ಅದೃಷ್ಟದ ಸಮಯ ಆಗಿರಲಿದೆ. ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮ ಪ್ರಗತಿ ಇರುತ್ತದೆ. ಅಲ್ಲದೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಾಧಿಸಲಾಗುತ್ತದೆ. ಈಗ ಗುರು ಕರ್ಕ ರಾಶಿ ಪ್ರವೇಶಿಸುವುದರಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕರ್ಕ ರಾಶಿ
ಗುರು ಕರ್ಕ ರಾಶಿಗೆ ಚಲಿಸುವುದು ನಿಮಗೆ ಹಲವು ರೀತಿಯಲ್ಲಿ ಲಾಭ ತರಲಿದೆ. ಕರ್ಕ ರಾಶಿಯ ಮೊದಲ ಮನೆಯಲ್ಲಿ ಗುರು ಚಲಿಸಲಿದ್ದಾನೆ. ಇದರಿಂದ ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ. ಇದು ನಿಮ್ಮ ಹಣ ಗಳಿಕೆಯ ಸಾಮರ್ಥ್ಯ ಹೆಚ್ಚಿಸಲಿದೆ. ವ್ಯಕ್ತಿತ್ವದಲ್ಲಿ ಉತ್ತಮ ಪ್ರಗತಿ ಇರುತ್ತದೆ. ಕೆಲಸ ಮಾಡುವವರು ಕಚೇರಿಯಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುತ್ತಾರೆ. ಕೆಲವರಿಗೆ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿ ಸಿಹಿ ಸುದ್ದಿಯ ಸಂಭವವಿದೆ. ನ್ಯಾಯಾಲಯ ಸಂಬಂಧವಾಗಿ ನೀವು ಯಾವುದಾದರು ಪ್ರಕರಣವನ್ನು ಎದುರಿಸುತ್ತಿದ್ದರೆ ನಿಮಗೆ ಗೆಲುವು ಇದೆ. ವಿವಾಹಿತರಲ್ಲಿ ತಮ್ಮ ಜೀವನದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಲಾಭದಾಯಕವಾಗಲಿದೆ. ವ್ಯಾಪಾರ ವರ್ಗವು ಹೆಚ್ಚಿನ ಲಾಭಕ್ಕೆ ಒಳಗಾಗುವ ಸಮಯವಿದು.
ಮಿಥುನ ರಾಶಿ
ಗುರು ಗ್ರಹವು ಮಿಥುನ ರಾಶಿಯ 2 ನೇ ಮನೆಗೆ ಸ್ಥಳಾಂತರಗೊಳ್ಳಲಿದೆ. ಇದರಿಂದಾಗಿ ಈ ರಾಶಿ ಜನರು ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುವುದು ನೋಡಬಹುದು. ಅದ್ರಲ್ಲೂ ಹೊಸ ಆದಾಯ ಮೂಲಗಳು ನಿಮ್ಮದಾಗಲಿವೆ. ಗುರುವಿನ ಕೃಪೆಯಿಂದ ಹಣದ ಹರಿವು ಹೆಚ್ಚಾಗಲಿದೆ. ವಿವಾಹ ಸಂಬಂಧ ವಿಚಾರದಲ್ಲಿ ಸಂತಸ ಇರಲಿದೆ. ನಿಮ್ಮ ಬಹಳ ಸಮಯದ ಹಿಂದಿನ ಕೆಲಸವೊಂದು ಪೂರ್ಣವಾಗಲಿದೆ. ವಿವಾಹಿತರಲ್ಲಿ ಹಣಕಾಸು ಸ್ಥಿತಿ ಸುಧಾರಿಸಲಿದೆ.
ಮೀನ ರಾಶಿ
ಗುರು ಮೀನ ರಾಶಿಯ 5ನೇ ಮನೆಗೆ ಸ್ಥಳಾಂತರಗೊಂಡು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸಲಿದೆ. ಈ ಕಾರಣದಿಂದಾಗಿ ಮೀನ ರಾಶಿಯ ಜನರಿಗೆ ಅನುಕೂಲಕರ ದಿನಗಳಿವೆ. ನಿಮ್ಮ ಹತ್ತಾರು ಕೆಲಸಗಳು ಯಶಸ್ವಿಯಾಗಲಿದೆ. ಪ್ರೇಮ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಪ್ರೇಮಿಗಳ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆಗಳಿವೆ. ಮದುವೆಯಾಗದವರಿಗೆ ಉತ್ತಮ ವರ ಸಿಗುವ ಸಾಧ್ಯತೆಯಿದೆ. ಪೂರ್ವಜರ ವ್ಯಾಪಾರ, ವ್ಯವಹಾರದಲ್ಲಿ ಲಾಭಕರ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications