Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವೆಂಬರ್‌ನಲ್ಲಿ ತ್ರಿಗ್ರಹಿ ಯೋಗ: ಆರ್ಥಿಕ ಬಲ, ವೃತ್ತಿ ಜೀವನದಲ್ಲಿ ಯಾರಿಗೆಲ್ಲಾ ಯಶಸ್ಸು!?
ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸಂಚಾರ ಹಾಗೂ ಗ್ರಹಗಳ ಸ್ಥಾನ ಪಲ್ಲಟವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗ್ರಹಗಳ ಚಲನೆಯು ಹಲವು ರೀತಿಯಲ್ಲಿ ಶುಭ ಹಾಗೂ ಅಶುಭಗಳ ತರಲಿದೆ ಎಂದು ಸಹ ಹೇಳಲಾಗಿದೆ. ಹಾಗೆ ನವೆಂಬರ್‌ನಲ್ಲಿ ಹಲವು ಗ್ರಹಗಳ ಸಂಚಾರ ನೋಡಬಹುದಾಗಿದೆ.
ಪ್ರತಿ ಗ್ರಹಗಳ ಚಲನೆಯ ನಡುವೆ ಅವುಗಳು ಒಂದು ರಾಶಿಯಲ್ಲಿ ಸಂಯೋಗವಾಗುವುದು ಸಹ ನೋಡಬಹುದು. ನವೆಂಬರ್‌ನಲ್ಲಿ ಹಲವು ರೀತಿಯ ಗ್ರಹಗಳ ಚಲನೆಯಿಂದಾಗಿ ವಿವಿಧ ಯೋಗಗಳು ರೂಪುಗೊಳ್ಳುತ್ತಿವೆ. ಈ ನವೆಂಬರ್‌ನಲ್ಲಿ 100 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಯೋಗ ಕೂಡ ಸೃಷ್ಟಿಯಾಗುತ್ತಿದೆ.

ನವೆಂಬರ್ ತಿಂಗಳಲ್ಲಿ ಸೂರ್ಯ, ಶುಕ್ರ ಹಾಗೂ ಮಂಗಳನ ಸಂಯೋಗವಾಗಿದೆ. ಇದು ಅಪರೂಪದ ಸಂಯೋಗವಾಗಿದೆ. ಹಲವರಿಗೆ ಈ ತ್ರಿಗ್ರಹಿ ಯೋಗವು ಹಲವು ರೀತಿಯ ಲಾಭಗಳಿಗೆ ಕಾರಣವಾಗಲಿದೆ. ವೃತ್ತಿ, ಆರ್ಥಿಕ, ಆರೋಗ್ಯ, ಸಂಪತ್ತಿನ ವಿಚಾರದಲ್ಲಿ ಶುಭವಾಗುವುದು ನೋಡಬಹುದು. ವೃಶ್ಚಿಕ ರಾಶಿಯಲ್ಲಿ ಮಂಗಳ, ಶುಕ್ರ ಮತ್ತು ಸೂರ್ಯನ ಸಂಯೋಜನೆಯು ಪ್ರಬಲ ತ್ರಿಗ್ರಹಿ ಯೋಗವನ್ನು ಸೃಷ್ಟಿಸುತ್ತಿದೆ. ಹಲವರಿಗೆ ಕೆಲಸದಲ್ಲಿ ಬಡ್ತಿ, ಹೊಸ ಉದ್ಯೋಗ ಅಥವಾ ವ್ಯವಹಾರದಲ್ಲಿ ಲಾಭದ ಅವಕಾಶವಿರುತ್ತದೆ. ಹಾಗಾದ್ರೆ ಈ ತ್ರಿಗ್ರಹಿ ಯೋಗದಿಂದ ಯಾರಿಗೆಲ್ಲಾ ಶುಭವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ.
ವೃಶ್ಚಿಕ ರಾಶಿ
ನವೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ವಿಶೇಷ ಪ್ರಯೋಜನಗಳ ತರಲಿದೆ. ತ್ರಿಗ್ರಹಿ ಯೋಗವು ಸ್ವಂತ ರಾಶಿಯಾದ ಲಗ್ನ ಮನೆಯಲ್ಲಿ ರೂಪುಗೊಳ್ಳುತ್ತದೆ. ಲಗ್ನ ಮನೆಯು ವ್ಯಕ್ತಿಯ ಆತ್ಮವಿಶ್ವಾಸ, ವ್ಯಕ್ತಿತ್ವ, ಚಿಂತನೆ ಮತ್ತು ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ವೃಶ್ಚಿಕ ರಾಶಿಯ ಜನರಿಗೆ ಈ ನವಂಬರ್ ಆತ್ಮವಿಶ್ವಾಸ ಹೆಚ್ಚಿಸುವ ಅಂಶವಾಗುತ್ತಿದೆ. ಈ ನವೆಂಬರ್ ನಿಮ್ಮ ಆರ್ಥಿಕ ವಿಚಾರವಾಗಿಯೂ ಶುಭ ತರಲಿದೆ. ನೀವು ಕೆಲಸದ ವಿಚಾರದಲ್ಲಿ ಬಡ್ತಿ, ವೇತನ ಹೆಚ್ಚಳದಂತಹ ವಿಶೇಷ ಅನುಕೂಲಗಳ ಅನುಭವಿಸುವಿರಿ. ದೀರ್ಘಕಾಲದ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದೀರಿ. ಅವಿವಾಹಿತರಲ್ಲಿ ವಿವಾಹ ಸಂಬಂಧವಾಗಿ ವಿಶೇಷ ದಿನಗಳಿವೆ.
ಮಕರ ರಾಶಿ
ತ್ರಿಗ್ರಹಿ ಯೋಗವು ಮಕರ ರಾಶಿಯ ಹನ್ನೊಂದನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಈ ಮನೆಯನ್ನು ಲಾಭದ ಮನೆ ಎಂದು ಪರಿಗಣಿಸಲಾಗುತ್ತದೆ. ಇದುರಿಂದ ನಿಮ್ಮಲ್ಲಿ ವಾಹನ, ಆಸ್ತಿ, ಮನೆ, ವಸ್ತು ಸಂಬಂಧಿತ ಲಾಭಗಳ ನೋಡಬಹುದು. ಯೋಗದ ಪ್ರಭಾವವು ಹೊಸ ಆದಾಯದ ಮೂಲಗಳನ್ನು ತೆರೆಯಬಹುದು. ಹೊಸ ವ್ಯಾಪಾರ, ವ್ಯವಹಾರ ಆರಂಭಿಸುವ ಆಲೋಚನೆಯಲ್ಲಿದ್ದವರಿಗೆ ಸೂಕ್ತ ಮಾರ್ಗಗಳು ಸಿಗುವ ಅವಕಾಶಗಳು ಬರಲಿವೆ. ದೊಡ್ಡ ಮೊತ್ತದ ಸಾಲ ಪಡೆಯುವ ನಿಮ್ಮ ಬಯಕೆ ಈಡೇರಬಹುದು. ನಿಮ್ಮ ಉಳಿತಾಯಗಳು ನಿಮಗೆ ಶುಭ ಸಮಯದಲ್ಲಿ ಬಳಕೆಗೆ ಸಿಗಬಹುದು. ಆರ್ಥಿಕ ದೃಢತೆ ನೋಡಬಹುದು.
ಮೀನ ರಾಶಿ
ಈ ನವೆಂಬರ್ ತಿಂಗಳು ಮೀನ ರಾಶಿಯವರಿಗೆ ಬಹಳ ಶುಭವೆಂದು ಪರಿಗಣಿಸಲಾಗಿದೆ. ಮೀನ ರಾಶಿಯ 9ನೇ ಮನೆಯಲ್ಲಿ ಈ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತದೆ. ಈ ಮನೆಯನ್ನು ಅದೃಷ್ಟದ ಮನೆ ಎನ್ನಲಾಗಿದೆ. ಹೀಗಾಗಿ ಮೀನ ರಾಶಿಯವರು ಮಾಡುವ ಪ್ರತಿಯೊಂದು ಕೆಲಸಗಳಲ್ಲು ಅದೃಷ್ಟ ಕೈ ಹಿಡಿಯಲಿದೆ. ನಿಮ್ಮ ಅದೃಷ್ಟದ ಕಾರಣ ನಿಮಗೆ ಬಹಳ ಸಮಯದಿಂದ ಬರಬೇಕಿದ್ದ ಹಣಕಾಸು ಕೈ ಸೇರಲಿವೆ. ಕುಟುಂಬ ವಿಚಾರದಲ್ಲಿ ಸುಖ ನೋಡಬಹುದು. ಸದಸ್ಯರಲ್ಲಿದ್ದ ಅನಾರೋಗ್ಯ ಸಮಸ್ಯೆಯೊಂದು ದೂರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಂಡುಬರುವ ಸಾಧ್ಯತೆಯಿದೆ ಮತ್ತು ಉನ್ನತ ಶಿಕ್ಷಣಕ್ಕೆ ಹೊಸ ಅವಕಾಶಗಳು ಸಿಗಲಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications