Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧ-ಶುಕ್ರ-ಮಂಗಳನಿಂದ ತ್ರಿಗ್ರಹಿ ಯೋಗ: ಈ ರಾಶಿಯವರಿಗೆ 2 ತಿಂಗಳು ಎಲ್ಲಿಲ್ಲದ ಕಷ್ಟ!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಅದ್ರಲ್ಲೂ ಗ್ರಹಗಳ ಸಂಚಾರವು ಹಲವು ರೀತಿಯ ಶುಭ ಹಾಗೂ ಅಶುಭ ಯೋಗಗಳಿಗೆ ಕಾರಣವಾಗುವುದು ನೋಡಬಹುದು. ಗ್ರಹಗಳ ಸಂಚಾರದ ಜೊತೆಗೆ ಗ್ರಹಗಳ ಸಂಯೋಗದಿಂದ ಉಂಟಾಗುವಂತಹ ಹೊಸ ಯೋಗಗಳ ವಿದ್ಯಮಾನವನ್ನೂ ಸಹ ಮುಖ್ಯ ಎಂದು ಕರೆಯಲಾಗಿದೆ.
ಈ ಗ್ರಹಗಳ ಸಂಯೋಗದಿಂದ ಉಂಟಾಗುವ ಯೋಗವು ಶುಭ ಹಾಗೂ ಅಶುಭ ಕಾರಣಗಳಿಂದ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶುಭ ಗ್ರಹಗಳು ಸೇರಿ ರಾಜಯೋಗವನ್ನು ರೂಪಿಸಿದರೂ, ಕೆಲವೊಮ್ಮೆ ಅದು ನಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಪರಿಣಾಮವಾಗಿ ಕೆಲವು ರಾಶಿಗಳ ಮೇಲೆ ಸಮಸ್ಯೆಗಳು, ಅಡ್ಡಿಗಳ ಉಂಟು ಮಾಡಬಹುದು.

ಈ ಅಶುಭ ಯೋಗವು ಆರ್ಥಿಕ ಹೊರೆ, ಕೌಟುಂಬಿಕ ಸಮಸ್ಯೆಗಳು ಮತ್ತು ವ್ಯವಹಾರದಲ್ಲಿ ನಷ್ಟಗಳ ಎದುರಿಸಲು ಕಾರಣವಾಗುತ್ತವೆ. ಪ್ರಸ್ತುತ ಶುಕ್ರ, ಬುಧ ಮತ್ತು ಮಂಗಳ ಮಕರ ರಾಶಿಯಲ್ಲಿ ಒಟ್ಟಿಗೆ ಚಲಿಸುತ್ತಿದ್ದಾರೆ. ಈ ಮೂರು ಗ್ರಹಗಳ ಸಂಯೋಗದ ಚಲನೆಯು ತ್ರಿಗ್ರಹ ಯೋಗಕ್ಕೆ ಕಾರಣವಾಗುತ್ತಿದೆ.
ತ್ರಿಗ್ರಹ ಯೋಗವು ಹಲವು ರಾಶಿಗಳಿಗೆ ಶುಭವಾದರೆ ಮತ್ತೆ ಕೆಲ ರಾಶಿಗಳಿಗೆ ಕೆಡುಕು ಕೂಡ ಉಂಟು ಮಾಡಬಹುದು. ಹಾಗಾದ್ರೆ ತ್ರಿಗ್ರಹ ಯೋಗದಿಂದ ಸವಾಲುಗಳನ್ನು ಎದುರಿಸುವ ರಾಶಿಗಳು ಯಾವುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ತ್ರಿಗ್ರಹ ಯೋಗವು ವಿವಿಧ ಅಡ್ಡಿಗಳನ್ನು ತರಲಿದೆ. ಈ ಯೋಗವು ಅವರ ಜೀವನದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳಿಗೆ ಆರಂಭಿಕ ಹಂತವಾಗಿರುತ್ತದೆ. ಈ ಅವಧಿಯಲ್ಲಿ ಅವರು ವ್ಯವಹಾರದಲ್ಲಿ ದೊಡ್ಡ ನಷ್ಟಗಳನ್ನು ಎದುರಿಸಬಹುದು. ಇದು ವೃತ್ತಿಪರ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ಅಶಾಂತಿಗಳು ಮೂಡಬಹುದು. ಈ ತ್ರಿಗ್ರಹ ಯೋಗದಿಂದಾಗಿ ಮುಂದಿನ 2 ತಿಂಗಳು ನಿಮ್ಮ ಆರ್ಥಿಕ ಸ್ಥಿತಿ ಸ್ವಲ್ಪ ಹದಗೆಡಬಹುದು. ಇದರಿಂದ ನಿಮ್ಮ ದೈನಂದಿನ ಕೆಲಸಗಳು, ವ್ಯವಹಾರಗಳಲ್ಲಿ ಕೊಂಚ ಮಟ್ಟಿನ ಹಿನ್ನಡೆ ನೀವು ಅನುಭವಿಸಬಹುದು.
ಸಿಂಹ ರಾಶಿ
ಶುಕ್ರ, ಬುಧ ಹಾಗೆ ಮಂಗಳನ ತ್ರಿಗ್ರಹ ಯೋಗವು ಸೂರ್ಯನ ಅಧಿಪತ್ಯ ಇರುವ ಸಿಂಹ ರಾಶಿಯವರಲ್ಲಿ ಈ ಎರಡು ತಿಂಗಳ ಕಾಲ ಸಮಸ್ಯೆಗಳ ತರಬಹುದು. ಪ್ರಮುಖವಾಗಿ ನಿಮ್ಮ ಹಣಕಾಸು ವಿಚಾರದಲ್ಲಿ ದೊಡ್ಡ ಮಟ್ಟದ ಲಾಭವಿಲ್ಲದಿದ್ದರೂ ಬಹುಕಾಲದ ಸಾಲದ ಸಮಸ್ಯೆಗಳು ಮತ್ತೆ ಎದುರಾಗಬಹುದು. ಆದ್ರೆ ನಿಯಂತ್ರಿತ ಖರ್ಚುಗಳು ಇದೆಲ್ಲದರಿಂದ ನಿಮ್ಮನ್ನು ಪಾರು ಮಾಡಲಿದೆ. ಆರೋಗ್ಯ ಸಮಸ್ಯೆಗಳು ತುಂಬಾ ಗಂಭೀರವಾಗಬಹುದು, ಇದು ಅನಗತ್ಯ ವೆಚ್ಚಗಳನ್ನು ಹೆಚ್ಚಿಸುತ್ತದೆ. ಕಚೇರಿಯಲ್ಲಿನ ವಾತಾವರಣವು ಅವರಿಗೆ ವಿರುದ್ಧವಾಗಿರುವುದರಿಂದ ಅವರು ಕಚೇರಿಯಲ್ಲಿ ತಮ್ಮ ಕೆಲಸವನ್ನು ಸರಾಗವಾಗಿ ಮಾಡಲು ತುಂಬಾ ತಾಳ್ಮೆಯಿಂದಿರಬೇಕು.
ತುಲಾ ರಾಶಿ
ತುಲಾ ರಾಶಿಯವರು ತ್ರಿಗ್ರಹ ಯೋಗದಿಂದಾಗಿ ವಿವಿಧ ಸಮಸ್ಯೆಗಳಿಗೆ ಎದುರಾಗಬಹುದು. ಈ ಅವಧಿಯಲ್ಲಿ ಅವರು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಕೆಲಸದಿಂದ ಉಂಟಾಗುವ ಕೆಲಸದ ಹೊರೆ ಮತ್ತು ಒತ್ತಡವು ದ್ವಿಗುಣಗೊಳ್ಳುತ್ತದೆ. ನಿಮ್ಮ ಉಳಿತಾಯದ ಹಣವನ್ನು ಬೇರೊಂದು ಕೆಲಸದ ಕಾರಣಕ್ಕೆ ಬಳಸಬಹುದು. ನಿಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ವೃತ್ತಿ ಸಂಬಂಧವಾಗಿ ದೊಡ್ಡ ಸವಾಲುಗಳಿವೆ.
ಮಕರ ರಾಶಿ
ತ್ರಿಗ್ರಹ ಯೋಗವು ಮಕರ ರಾಶಿಯವರಿಗೆ ದೊಡ್ಡ ಸವಾಲುಗಳ ತರಲಿದೆ. ಈ ಯೋಗದಿಂದಾಗಿ ಅವರು ವಿವಿಧ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ವೈವಾಹಿಕ ಜೀವನದಲ್ಲಿ ಅಡ್ಡಿಗಳು, ಹಾಗೆ ಮನಸ್ತಾಪಗಳ ನೋಡಬಹುದು. ಸಾಲ ತೆಗೆದುಕೊಳ್ಳುವಾಗ ಮತ್ತು ಹಣಕಾಸಿನ ವಿಷಯಗಳನ್ನು ನಿರ್ವಹಿಸುವಾಗ ಬಹಳ ಜಾಗರೂಕರಾಗಿರಿ.
(ಹಕ್ಕು ನಿರಾಕರಣೆ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications