Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
50 ವರ್ಷದ ಬಳಿಕ ತ್ರಿಗ್ರಹ ಯೋಗ: ಈ ರಾಶಿಯವರಲ್ಲಿ ಕೈತುಂಬಾ ಹಣ..ಕೆಲಸವೆಲ್ಲಾ ಯಶಸ್ವಿ!
ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಪಲ್ಲಟವನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗಿದೆ. ಗ್ರಹಗಳ ಬದಲಾವಣೆಯಿಂದ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಉಂಟಾಗುವುದು ನೋಡಬಹುದು. ಹಾಗೆ ಈ ರಾಶಿಗಳ ಮೇಲಿನ ಪರಿಣಾಮವು ಪ್ರತಿಯೊಬ್ಬರ ಜಾತಕದ, ಜೀವನದ ಮೇಲೆ ಪ್ರಭಾವ ಉಂಟು ಮಾಡುತ್ತವೆ. ಇದರಿಂದ ಅವರಲ್ಲಿ ಹಲವು ರೀತಿಯ ಬದಲಾವಣೆಗಳ ನೋಡಬಹುದು. ಕೆಲವೊಮ್ಮೆ ದೀರ್ಘಕಾಲದ ಬದಲಾವಣೆಯಾದರೆ ಮತ್ತೆ ಕೆಲವೊಮ್ಮೆ ತಾತ್ಕಾಲಿಕ ಬದಲಾವಣೆಗಳ ಎದುರು ನೋಡುತ್ತಾರೆ.
ಈ ಗ್ರಹಗಳ ಚಲನೆಯಿಂದಾಗಿ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಹಾಗೆ ಎರಡಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯು ಶುಭ ಹಾಗೂ ಅಶುಭ ಯೋಗಗಳಿಗೆ ಕಾರಣವಾಗುವುದು ನೋಡಬಹುದು. ಹಾಗೆ ಈಗ ಸಿಂಹ ರಾಶಿಯಲ್ಲಿ ಅಪರೂಪದ ಯೋಗವೊಂದು ರೂಪುಗಳ್ಳುತ್ತಿದೆ. ಅದ್ರಲ್ಲೂ ಮೂರು ಮೂರು ಗ್ರಹಗಳು ಸಿಂಹ ರಾಶಿಯಲ್ಲಿ ಸಂಯೋಗವಾಗುತ್ತಿವೆ.

ಸಿಂಹ ರಾಶಿಯಲ್ಲಿ ಕೇತು, ಸೂರ್ಯ ಹಾಗೂ ಶುಕ್ರ ಗ್ರಹಗಳ ಸಂಯೋಗವಾಗುತ್ತಿದೆ. ಕೇತು ಈಗಗಾಲೇ ಸಿಂಹ ರಾಶಿಯಲ್ಲಿದ್ದಾನೆ, ಸೂರ್ಯನ ಅಧಿಪತ್ಯ ಇರುವ ಗ್ರಹ ಇದು. ಹಾಗೆ ಶುಕ್ರ ನಿನ್ನೆಯಿಂದ ಸಿಂಹ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಈ ರೀತಿಯ ಮೂರು ಗ್ರಹಗಳ ಸಂಯೋಗವು ಅಪರೂಪದ ಯೋಗ ರೂಪಿಸಿದೆ. ಇದು 50 ವರ್ಷಗಳ ಬಳಿಕ ರೂಪುಗೊಂಡ ಅಪರೂಪದ ತ್ರಿಗ್ರಹ ಯೋಗವಾಗಿದೆ.
ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ ರಾಶಿ ಜನರ ಜೀವನದಲ್ಲೂ ಈ ಯೋಗದ ಪ್ರಭಾವ ಉಂಟಾಗುವುದು ನೋಡಬಹುದು. ಈ ಯೋಗ 50 ವರ್ಷಕ್ಕೊಮ್ಮೆ ರೂಪುಗೊಳ್ಳುತ್ತಿದೆ. ಇದು ನಿಮ್ಮಲ್ಲಿ ಹಠಾತ್ ಆರ್ಥಿಕ ಲಾಭ, ವ್ಯವಹಾರ ಲಾಭ, ಆಸ್ತಿ ಲಾಭದಂತಹ ಹಲವು ಪ್ರಯೋಜನಗಳ ತರಲಿದೆ. ಅದ್ರಲ್ಲೂ ಕೆಲವೊಂದು ರಾಶಿಗಳಿಗೆ ಹಿಂದೆಂದಿಗೂ ಕಂಡಿರದ ಲಾಭಗಳ ಪಡೆಯಲಿದ್ದಾರೆ. ಹಾಗಾದ್ರೆ ಈ ತ್ರಿಗ್ರಹ ಯೋಗವು ಯಾರಿಗೆಲ್ಲಾ ಲಾಭದಾಯಕ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಕರ್ಕ ರಾಶಿ
ಕರ್ಕ ರಾಶಿಯ 2ನೇ ಮನೆಯಲ್ಲಿ ಸೂರ್ಯ, ಕೇತು ಮತ್ತು ಶುಕ್ರ ಗ್ರಹಗಳ ಸಂಯೋಜನೆಯು ತ್ರಿಗ್ರಹ ಯೋಗವನ್ನು ರೂಪಿಸುತ್ತದೆ. ಇದು ಈ ರಾಶಿ ಜನರ ಮಾತಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನಿಮ್ಮ ಸಂಬಂಧಗಳು ಗಟ್ಟಿಯಾಗಲಿದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಉದ್ಯಮಿಗಳು ಉತ್ತಮ ಲಾಭವನ್ನು ತರುವ ಹೊಸ ಒಪ್ಪಂದಗಳ ಪಡೆಯುತ್ತಾರೆ. ಮಾರ್ಕೆಟಿಂಗ್, ಮಾಧ್ಯಮ, ಭಾಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿರುವವರು ಉತ್ತಮ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ
ಸೂರ್ಯ, ಕೇತು ಮತ್ತು ಶುಕ್ರ ಗ್ರಹಗಳ ಸಂಯೋಜನೆಯಿಂದಾಗಿ ವೃಶ್ಚಿಕ ರಾಶಿಯ 10 ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತದೆ. ಇದರಿಂದಾಗಿ, ಈ ರಾಶಿ ಜನರ ವೃತ್ತಿ ಸಂಬಂಧಿತ ವಿಚಾರದಲ್ಲಿ ಶುಭಕರ ದಿನಗಳಿವೆ. ಹಾಗೆ ವ್ಯವಹಾರದಲ್ಲಿ ಉತ್ತಮ ಪ್ರಗತಿ ನೋಡಲಿದ್ದಾರೆ. ಆದಾಯ ಮೂಲಗಳು ನಿಮ್ಮ ಕೈ ಹಿಡಿಯಲಿವೆ. ಕೃಷಿಕರು ಹಾಗೆ ಸಣ್ಣ ಪುಟ್ಟ ವ್ಯಾಪಾರಿಗಳು ಈ ಸಮಯದಲ್ಲಿ ಕೈತುಂಬ ಹಣ ನೋಡಬಹುದು. ಸಾಲದ ಪ್ರಮಾಣ ಇಳಿಕೆಯಾಗುವುದರಿಂದ ನಿಮ್ಮಲ್ಲಿ ಮಾನಸಿಕ ಶಾಂತಿ ಇರಲಿದೆ. ಪ್ರಯಾಣಗಳಲ್ಲಿ ಶುಭಕರ ಯೋಗವಿದೆ.
ಧನು ರಾಶಿ
ಸೂರ್ಯ, ಕೇತು ಮತ್ತು ಶುಕ್ರ ಗ್ರಹಗಳ ಸಂಯೋಜನೆಯಿಂದಾಗಿ ಧನು ರಾಶಿಯ 9 ನೇ ಮನೆಯಲ್ಲಿ ತ್ರಿಗ್ರಹ ಯೋಗವು ರೂಪುಗೊಳ್ಳುತ್ತದೆ. ಇದು ಧನು ರಾಶಿಯವರಿಗೆ ಅತ್ಯುತ್ತಮ ಫಲಿತಾಂಶ ತರಲಿದೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಆಧ್ಯಾತ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ಮನೆಯಲ್ಲಿನ ಆರ್ಥಿಕ ಸಮಸ್ಯೆಯೊಂದಕ್ಕೆ ಶಾಶ್ವತ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಪ್ರಯಾಣದಲ್ಲಿ ಲಾಭಗಲಿವೆ. ಗೃಹಿಣಿಯರು ಅದೃಷ್ಟದ ಬೆಂಬಲ ಪಡೆಯಲಿದ್ದಾರೆ. ಹಾಗೆ ಬಹಳ ವರ್ಷದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಲಿದ್ದಾರೆ. ಉದ್ಯಮಿಗಳಿಗೆ ಈ ಸಮಯದಲ್ಲಿ ಬಹಳ ಲಾಭಕರ, ನಿಮ್ಮ ವ್ಯವಹಾರದಲ್ಲಿ ಪ್ರಗತಿ ನೋಡಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ನೋಡುವ ಸಮಯವಿದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿರಲಿದೆ)



Click it and Unblock the Notifications