Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸೆಪ್ಟೆಂಬರ್ 29ರಂದು ಕನ್ಯಾ ರಾಶಿಯಲ್ಲಿ ಉಂಟಾಗಲಿದೆ ತ್ರಿಗ್ರಹ ಯೋಗ: ಈ 3 ರಾಶಿಗಳಿಗೆ ಒಳ್ಳೆಯದು
ಸೆಪ್ಟೆಂಬರ್ 29ಕ್ಕೆ ಚಂದ್ರನು ಕನ್ಯಾ ರಾಶಿಗೆ ಸಂಚರಿಸಲಿದೆ, ಈಗಾಗಲೇ ಬುಧ ಹಾಗೂ ಸೂರ್ಯ ಕನ್ಯಾ ರಾಶಿಯಲ್ಲಿಯೇ ಇದೆ, ಅಕ್ಟೋಬರ್ 17ರವರೆಗೆ ಸೂರ್ಯ ಕನ್ಯಾ ರಾಶಿಯಲ್ಲಿ ಇರಲಿದೆ, ಅಕ್ಟೋಬರ್ 10ರವರೆಗೆ ಬುಧನು ಕೂಡ ಕನ್ಯಾ ರಾಶಿಯಲ್ಲಿ ಇರಲಿದೆ. ಇದೀಗ ಚಂದ್ರ ಕನ್ಯಾ ರಾಶಿಗೆ ಸಂಚರಿಸಿದಾಗ ತ್ರಿಗ್ರಹ ಯೋಗ ಉಂಟಾಗುವುದು.
ಈ ತ್ರಿಗ್ರಹ ಯೋಗ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುವುದಾದರೂ ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ:

ಸಿಂಹ ರಾಶಿ:
ತ್ರಿಗ್ರಹ ಯೋಗ ಸಿಂಹ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ. ಈ ಯೋಗ ನಿಮಗೆ ಆರ್ಥಿಕ ಲಾಭ ತರಲಿದೆ. ನೀವು ನಿಮ್ಮ ಆರ್ಥಿಕ ಬದುಕಿನಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ.
ವೃತ್ತಿ ಬದುಕು: ಈ ಯೋಗ ನಿಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವುದು. ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಇನ್ನು ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿಯಲ್ಲಿ ಬಯಸಿದ ಕೆಲಸ ಸಿಗಲಿದೆ.
ವ್ಯಾಪಾರ: ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಲಾಭವನ್ನು ಗಳಿಸಬಹುದು.
ಕುಟುಂಬ ಬದುಕು: ಈ ತ್ರಿಗ್ರಹ ಯೋಗ ನಿಮ್ಮ ಕುಟುಂಬ ಬದುಕಿನ ಮೇಲೆ ಉತ್ತಮ ಪ್ರಯೋಜನ ಬೀರಲಿದೆ.
ವೃಷಭ ರಾಶಿ
ಕನ್ಯಾ ರಾಶಿಯಲ್ಲಿ ತ್ರಿಗ್ರಹ ಯೋಗ ವೃಷಭ ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿರಲಿದೆ.
ವೃತ್ತಿ ಬದುಕು: ಈ ಯೋಗದಿಂದ ಬೆಂಬಲ ನಿಮ್ಮ ವೃತ್ತಿ ಬದುಕಿನ ಮೆಲೆ ಉತ್ತಮ ಪರಿಣಾಮ ಬೀರಲಿದೆ. ಯಾವುದೊ ಕಾರಣಕ್ಕೆ ಅಪೂರ್ಣವಾಗಿದ್ದ ಕೆಲಸವನ್ನು ಈ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುವುದು.
ವ್ಯಾಪಾರ: ಉದ್ಯಮಿಗಳಿಗೆ ಹೊಸ ಅವಕಾಶ ದೊರೆಯಲಿದೆ, ಉದ್ಯಮಿಗಳಿಗೆ ಈ ಸಮಯ ಅನುಕೂಲಕರವಾಗಿರಲಿದೆ.
ಕುಟುಂಬ ಜೀವನ: ವೈವಾಹಿಕ ಬದುಕು ಚೆನ್ನಾಗಿರಲಿದೆ, ಮಗುವಿನ ನಿರೀಕ್ಷಿತ ದಂಪತಿ ಶೀಘ್ರವೇ ಸಿಹಿ ಸುದ್ದಿ ಪಡೆಯುವಿರಿ. ಮಕ್ಕಳಿದ್ದರೆ ಅವರ ಸಾಧ್ನೆ ನೋಡಿ ಹೆಮ್ಮೆ ಪಡುವಿರಿ.
ಈ ಸಮಯದಲ್ಲಿ ಆರೋಗ್ಯ ಉತ್ತಮವಾಗಿರಲಿದೆ.
ವೃಶ್ಚಿಕ ರಾಶಿ
ತ್ರಿಗ್ರಹ ಯೋಗದಿಂದ ಪ್ರಯೋಜನ ಪಡೆಯುವ ಮತ್ತೊಂದು ರಾಶಿಯೆಂದರೆ ಅದು ವೃಶ್ಚಿಕ ರಾಶಿ. ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ.
ವೃತ್ತಿ ಬದುಕು: ವೃತ್ತಿ ಬದುಕಿನಲ್ಲಿ ಅದೃಷ್ಟದ ಬೆಂಬಲ ಸಿಗುವುದರಿಂದ ನಿಮ್ಮ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ.
ಆರ್ಥಿಕ ಜೀವನ: ಆರ್ಥಿಕವಾಗಿ ಈ ಸಮಯದಲ್ಲಿ ಯಾವುದೇ ಸಮಸ್ಯೆ ಇರಲ್ಲ, ಉದ್ಯಮಿಗಳು, ವ್ಯವಹಾರಸ್ಥರು ಉತ್ತಮ ಪ್ರಯೋಜನ ಪಡೆಯುವಿರಿ.
ಕುಟುಂಬ ಜೀವನ: ಈ ಯೋಗ ನಿಮ್ಮ ಕುಟುಂಬದ ಮೇಲೆ ಕೂಡ ಧನಾತ್ಮಕ ಪ್ರಯೋಜನ ಬೀರಲಿದೆ. ಮನೆಯಲ್ಲಿ ಖುಷಿ-ನೆಮ್ಮದಿ ಇರಲಿದೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
