ಪುನರ್ವಸು ನಕ್ಷತ್ರಕ್ಕೆ ಮಂಗಳನ ಸಂಚಾರ: 4 ರಾಶಿಯವರಲ್ಲಿ ಆರ್ಥಿಕ ಪ್ರಗತಿ

2025ರಲ್ಲಿ ಹಲವು ಗ್ರಹಗಳ ಸಂಚಾರವು ಹಲವು ರೀತಿಯ ಲಾಭಕ್ಕೆ ಕಾರಣವಾಗುತ್ತಿದೆ ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ. ಅದರಲ್ಲಿ ಮುಖ್ಯವಾಗಿ ಈಗ ಉತ್ತರಾಯಣ ಆರಂಭವಾಗುತ್ತಿರುವ ಜೊತೆಗೆ ಮಂಗಳನು ತನ್ನ ದಿಕ್ಕು ಬದಲಾಯಿಸುತ್ತದೆ. ಮಂಗಳ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ 45 ದಿನ ತೆಗೆದುಕೊಳ್ಳುತ್ತದೆ. ಹೀಗಾಗಿ ದೀರ್ಘ ಪ್ರಭಾವಕ್ಕೆ ಒಳಗಾಗುವ ಗ್ರಹಗಳಲ್ಲಿ ಮಂಗಳನು ಕೂಡ ಇದ್ದಾನೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳನ ಪ್ರಭಾವವು ಮಹತ್ವ ಪಡೆದಿದೆ. ಮಂಗಳನ ಸ್ಥಾನ ಹಾಗೂ ಚಲಿಸುವ ದಿಕ್ಕಿನ ಪ್ರಭಾವದಿಂದ 12 ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಈಗ ಮಂಗಳನು ಪುನರ್ವಸು ನಕ್ಷತ್ರಕ್ಕೆ ಚಲಿಸುತ್ತಿರುವುದು ಹಲವು ರಾಶಿಯವರಲ್ಲಿ ಲಾಭದಾಯಕ ದಿನಗಳ ನೋಡಬಹುದಾಗಿದೆ.

Transit Of Mars To Punarvasu Nakshatra Will Bring Finacial Luck For These Zodiac Sign

ಮಂಗಳನ ಈ ಸಂಕ್ರಮಣವು ಕೆಲ ರಾಶಿಗಳಲ್ಲಿ ಹಿಂದೆಂದೂ ಕಂಡಿರದ ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ. ಹಾಗಾದ್ರೆ ನಾವಿಂದು ಈ ಮಂಗಳನ ಸಂಕ್ರಮಣವು ಯಾವೆಲ್ಲಾ ರಾಶಿಯವರಿಗೆ ಫಲದಾಯಕವಾಗಿ ಬದಲಾಗಲಿದೆ. ಯಾರಿಗೆ ಲಾಭವಾಗಲಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಮಂಗಳ ಸಂಚಾರದಿಂದ ಅನೇಕ ಲಾಭಗಳಿವೆ. ವಿಶೇಷವಾಗಿ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭವಾಗಲಿದೆ. ತಮ್ಮ ದೈನಂದಿನ ಜೀವನದಲ್ಲಿ ಇದ್ದ ದೊಡ್ಡ ತೊಡಕ್ಕೊಂದು ನಿವಾರಣೆಯಾಗಲಿದೆ. ನಿಮಗೆ ಆರೋಗ್ಯದ ಸಮಸ್ಯೆ ಇದ್ದರೆ ಈ ಸಮಯದಲ್ಲಿ ದಿಢೀರ್ ಗುಣಮುಖರಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀವು ಬಹುದೊಡ್ಡ ಕಾರ್ಯಕ್ಕೆ ಕೈಹಾಕಲಿದ್ದೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಶ್ರದ್ದೆ ವಹಿಸಿದರೆ ಪ್ರತಿಫಲವು ಸಿಗುವುದು ಖಚಿತವಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಈ ಮಂಗಳನ ಸಂಯೋಗವು ಅತ್ಯಂತ ಲಾಭದಾಯಕವಾಗಿ ಬದಲಾಗುತ್ತದೆ. ನೀವು ಬಯಸಿದ್ದ ಕೆಲಸಗಳು ನಿಮ್ಮನ್ನು ಹುಡುಕಿ ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಜೊತೆಗೆ ಸಾಲ ಮುಕ್ತರಾಗುವ ಸಾಧ್ಯತೆ ಹೆಚ್ಚಾಗಿದೆ. ಅನಗತ್ಯ ಖರ್ಚುಗಳು ನಿಮ್ಮಿಂದ ದೂರಾಗುತ್ತವೆ. ಬಾಕಿ ಹಣಗಳು ಮರಳಿ ನಿಮ್ಮ ಕೈ ಸೇರಲಿದೆ. ಒಂದಿಷ್ಟು ಕೆಲದಲ್ಲಿ ಏರುಪೇರಾದರು ಮತ್ತೆ ಸುಧಾರಿಸಿಕೊಳ್ಳುತ್ತೀರಿ. ಕುಟುಂಬಸ್ಥರಲ್ಲಿ ನಿಮ್ಮ ಬಗ್ಗೆ ಹೆಮ್ಮೆ ಇರಲಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮರೆತುಬಿಡುವ ಬದಲು ಪೂರ್ಣಗೊಳಿಸುವುದು ಉತ್ತಮ. ಸದಾ ಅಮೂಲ್ಯ ವಸ್ತುಗಳ ಮೇಲೆ ಗಮನವಿಡಿ.

ಮೇಷ ರಾಶಿ

ಮಂಗಳ ಗ್ರಹದ ಸಂಚಾರದಿಂದಾಗಿ ಮೇಷ ರಾಶಿಯ ಜನರ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ನಿಮ್ಮ ಹಣಕಾಸು ವ್ಯವಹಾರದಲ್ಲಿ ಬದಲಾವಣೆಗಳ ಮಾಡಲು ಬಯಸಿದರೆ ಈ ಸಮಯ ಉತ್ತಮ. ಉದ್ಯೋಗಿಗಳಿಗೆ ಉತ್ತಮ ದಿನಗಳ ನಿರೀಕ್ಷೆ ಇದೆ. ನಿಮ್ಮ ಕುಟುಂಬದಲ್ಲಿ ಶುಭ ಸುದ್ದಿಗಳು, ಕಾರ್ಯಕ್ರಮ ನಡೆಯಬಹುದು. ಅವಿವಾಹಿತರಿಗೆ ಶುಭ ಸುದ್ದಿಗಳ ಕೇಳಬಹುದು. ರಿಯಲ್ ಎಸ್ಟೇಟ್ ವ್ಯವಹಾರ, ಹಣ ಹೂಡಿಕೆ, ಷೇರು ನಿಮಗೆ ಲಾಭದಾಯಕವಾಗಿ ಬದಲಾಗಬಹುದು.

ಕುಂಭ ರಾಶಿ

ಕುಂಭ ರಾಶಿಯವರು ಈ ನಕ್ಷತ್ರ ಸಂಚಾರದಿಂದ ತಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಹಾಗೆ ನಿಮಗೆ ವಿದೇಶ ಪ್ರವಾಸದ ಲಾಭವಿದೆ. ನೀವು ಬಯಸಿದಂತೆ ಮನೆಗೆ ಹೊಸ ವಸ್ತು ಬರಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ಆರ್ಥಿಕವಾಗಿ ನಿಮ್ಮಲ್ಲಿ ಪ್ರಗತಿ ನೋಡಬಹುದು. ಹಾಗೆ ಖರ್ಚು ಕಡಿಮೆಯಾಗಲಿದೆ. ಒಂದಿಷ್ಟು ಹಣ ಉಳಿತಾಯಕ್ಕೆ ನೀವು ಮುಂದಾಗುತ್ತೀರಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Transit Of Mars To Punarvasu Nakshatra Will Bring Finacial Luck For These Zodiac Sign

Today, we'll explore which zodiac signs are poised to benefit from Mars' transit, bringing unprecedented positive changes to their lives.
Story first published: Sunday, January 12, 2025, 16:58 [IST]
X
Desktop Bottom Promotion