Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ನವೆಂಬರ್ 16 ದಿನ ಭವಿಷ್ಯ ಪ್ರಕಾರ ಈ ದಿನ ಈ ರಾಶಿಗಳಿಗೆ ಅದೃಷ್ಟಕರ
ಈ ದಿನದ ರಾಶಿಫಲ ಪ್ರಕಾರ ಈ ದಿನ ಯಾವೆಲ್ಲಾ ರಾಶಿಗಳಿಗೆ ಶುಭ ಎಂದು ನೋಡೋಣ...
ಮೇಷ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಈ ದಿನ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ. ವ್ಯಾಪಾರಿಗಳು ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು, ಆರೋಗ್ಯದ ಬಗ್ಗೆ ಗಮನಹರಿಸಬೇಕು. ನೀವು ಯಾವುದೇ ನಿರ್ಧಾರವಾದರೂ ಆಲೋಚಿಸಿ ತೆಗೆದುಕೊಳ್ಳಬೇಕು.

ವೃಷಭ ರಾಶಿ
ಈ ದಿನ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ಆದರೆ ನೀವು ಅನಗ್ಯತ ವಿಷಯಗಳಿಂದ ನೆಮ್ಮದಿ ಹಾಳು ಮಾಡಕೊಳ್ಳಬೇಡಿ, ಸಂಗಾತಿ ಜೊತೆ ಕೋಪದಂದ ವರ್ತಿಸಬೇಡಿ, ಅನಗ್ಯತ ವಿವಾದ ಮಾಡಬೇಡಿ. ನೀವು ಮನೆಯ ನೆಮ್ಮದಿ ಕಡೆಗೆ ಗಮನಹರಿಸಿ, ಆರೋಗ್ಯದ ಬಗ್ಗೆ ಹೇಳುವುದಾದರೆ ಮಾನಸಿಕ ಒತ್ತಡ ಹೊರ ಹಾಕಲು ಪ್ರಯತ್ನಿಸಿ.
ಮಿಥುನ ರಾಶಿ
ನೀವು ಇತ್ತೀಚೆಗೆ ನಿಮ್ಮ ವೃತ್ತಿ ಜೀವನದಲ್ಲಿ ಏನಾದರು ಬದಲಾಣೆ ಮಾಡಿದ್ದರೆ ಅದರ ಫಲ ಸರಿಯಾಗಿ ಸಿಗುತ್ತಿದೆಯೇ ಎಂದು ಗಮನಿಸುವುದು ಒಳ್ಳೆಯದು, ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಿ, ವ್ಯಾಪಾರಿಗಳು ಹೆಚ್ಚಿನ ಶ್ರಮ ಹಾಕುವುದು ಒಳ್ಳೆಯದು.
ಕರ್ಕ ರಾಶಿ
ಈ ದಿನ ನೀವು ನಿಮ್ಮ ಮನಸ್ಸಿನ ಮಾತಿನ ಕಡೆಗೆ ಹೆಚ್ಚು ಗಮಹರಿಸುತ್ತೀರಿ, ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ. ಕೆಲಸ ಹುಡುಕುತ್ತಿರುವವರು ಶೀಘ್ರದಲ್ಲಿಯೇ ಶುಭ ಸುದ್ದಿ ಪಡೆಯುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಅನಗ್ಯತ ಚಿಂತೆ ಬಿಡಿ.
ಸಿಂಹ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಕೆಲಸ ಕಾರ್ಯದಲ್ಲಿ ಪ್ರಗತಿ ಇರಲಿದೆ, ಆರ್ಥಿಕವಾಗಿಯೂ ಈ ದಿನ ಯಾವುದೇ ಸಮಸ್ಯೆ ಇರಲ್ಲ, ವೃತ್ತಿ ಬದುಕಿನಲ್ಲಿ ಮತ್ತಷ್ಟು ಒಳ್ಳೆಯ ಪ್ರಯೋಜನ ಪಡೆಯುತ್ತೀರ, ಕುಟುಂಬ ಜೀವನ ಚೆನ್ನಾಗಿರಲಿದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆವಿರಬಹುದು.
ಕನ್ಯಾ ರಾಶಿ
ನೀವು ಹಣದ ಬಗ್ಗೆ ಜಾಗ್ರತೆವಹಿಸಬೇಕು, ಯಾವುದೇ ಹೊಸ ಸಾಲ ಮಾಡಲುಹೋಗಬೇಡಿ, ಮಾಡುವುದಾದರು ಅಗ್ಯತ ಮೀರಿ ಸಾಲ ಪಡೆಯಬೇಡಿ. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು. ಕೆಲಸದ ಬಗ್ಗೆ ಹೇಳುವುದಾದರೆ ಒತ್ತಡವಿರಲಿದೆ. ಸರಿಯಾದ ಪ್ಲ್ಯಾನ್ ಜೊತೆ ದಿನ ಆರಂಭಿಸಿದರೆ ಗೊಂದಲವಿರಲಿದೆ.
ತುಲಾ ರಾಶಿ
ಈ ದಿನ ಉತ್ತಮವಾಗಿರಲಿದೆ, ಈ ದಿನ ವ್ಯಾಪಾರಿಗಳಿಗೆ ಧನ ಲಾಭವಾಗಿರಲಿದೆ. ಈ ದಿನ ಆಸ್ತಿ ವ್ಯವಹಾರ ಮಾಡಿದವರು ಉತ್ತಮ ಪ್ರಯೋಜನ ಪಡೆಯುತ್ತೀರಿ. ಕೆಲಸದಲ್ಲಿ ಚಿಂತೆ ಬಗೆಹರಿಯಲಿದೆ. ಈ ದಿನ ಆರೋಗ್ಯ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈಗಾಗಲೇ ಆರೋಗ್ಯ ಸಮಸ್ಯೆಯಿದ್ದರೆ ಹೆಚ್ಚು ಜಾಗ್ರತೆವಹಿಸಿ, ಈ ದಿನ ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ, ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ. ಈ ದಿನ ನೀವು ಪ್ರಮುಖ ವಿಷಯದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು.
ಧನು ರಾಶಿ
ಈ ದಿನ ನಿಮಗೆಧನಾತ್ಮಕವಾಗಿರಲಿದೆ. ನೀವು ನಿಮಗೆ ಇಷ್ಟವಾದದ್ದನ್ನು ಮಾಡಲು ಸಾಧ್ಯವಾಗುವುದು, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಕುಟುಂಬದ ಜೊತೆ ಸಂತೋಷದಿಂದ ಸಮಯಕಳೆಯಲು ಸಾಧ್ಯವಾಗುವುದು, ಚಿಕ್ಕ-ಪುಟ್ಟ ವಿಷಯವನ್ನು ನಗುವಿನ ಮೂಲಕ ನಿರ್ಲಕ್ಷ್ಯ ಮಾಡಿದರೆ ಈ ದಿನ ನಿಮಗೆ ಅದ್ಭುತವಾಗಿರಲಿದೆ.
ಮಕರ ರಾಶಿ
ಹಳೆಯ ವಿಷಯ ಮತ್ತೆ ಮರುಕಳಿಸಬಹುದು, ಆದರೆ ಚಿಂತೆ ಮಾಡಬೇಡಿ, ಸಮಯ ಎಲ್ಲವನ್ನೂ ಪರಿಹರಿಸುತ್ತದೆ. ನಿಮಗೆ ಏನು ಮಾಡುತ್ತೀರಿ ಎಂಬುವುದರ ಬಗ್ಗೆ ಸ್ಪಷ್ಟ ನಿರ್ಧಾರವಿರಲಿದೆ, ಯಾವುದೇ ನಿರ್ಧಾರವಾದರೂ ದೃಢವಾಗಿ ತೆಗೆದುಕೊಳ್ಳಿ, ಈ ದಿನ ಮನೆಯ ವಾತಾವರಣ ಚೆನ್ನಾಗಿರಲಿದೆ.
ಕುಂಭ ರಾಶಿ
ನಿಮ್ಮ ನಡವಳಿಕೆಯಿಂದ ಇತರರಿಗೆ ನೋವುಂಟು ಮಾಡಬೇಡಿ, ಈ ದಿನ ಆರ್ಥಿಕವಾಗಿಯೂ ಉತ್ತಮವಲ್ಲ, ಸಾಲ ಮಾಡಿದ್ದರೆ ಅದನ್ನು ಮರುಕಳಿಸುವ ಒತ್ತಡವಿರಬಹುದು, ವ್ಯಾಪಾರಿಗಳಿಗೆ ಧನ ಲಾಭದ ಸಮಸ್ಯೆ ಇರಲಿದೆ. ಕುಟುಂಬದ ಕಡೆಗೆ ಗಮನಹರಿಸಿ.
ಮೀನ ರಾಶಿ
ಈ ದಿನ ಆರ್ಥಿಕವಾಗಿ ಉತ್ತಮವಾಗಿರಲಿದೆ, ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಈ ದಿನ ದೂರ ಪ್ರಯಾಣವಿದ್ದರೆ ಮುಂದೂಡುವುದು ಒಳ್ಳೆಯದು, ಕೆಲಸ ಕಾರ್ಯದ ಕಡೆಯೂ ಹೆಚ್ಚು ಗಮನಹರಿಸಬೇಕು, ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications