ಮೇ 9: ಗುರುವಾರ ನಿಮ್ಮ ದಿನಭವಿಷ್ಯವೇನು.? ಯಾವ ರಾಶಿಗೆ ಶುಭ ನೋಡಿ

ವೈದಿಕ ಶಾಸ್ತ್ರದ ಪ್ರಕಾರ ಮೇ 9 ನಿಮಗೆ ಹೇಗಿರಲಿದೆ ಎಂದು ನೋಡೋಣ...

ಮೇಷ ರಾಶಿ

ಸಂಬಂಧಗಳ ವಿಷಯದಲ್ಲಿ ದಿನವು ನಿಮಗೆ ಉತ್ತಮವಾಗಿರುತ್ತದೆ. ನೀವು ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯುತ್ತೀರಿ. ಹಣದ ವಿಷಯದಲ್ಲಿ ದಿನವು ತುಂಬಾ ದುಬಾರಿಯಾಗಲಿದೆ. ಇಂದು ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿದರೆ ಉತ್ತಮ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಇಂದು ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆರೋಗ್ಯದ ವಿಷಯದಲ್ಲಿ ದಿನವು ಉತ್ತಮವಾಗಿರಲಿದೆ.

ವೃಷಭ ರಾಶಿ

ಈ ರಾಶಿಯ ಉದ್ಯಮಿಗಳಿಗೆ ಇಂದು ಲಾಭದಾಯಕ ದಿನವಾಗಿರುತ್ತದೆ. ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು. ಈ ನಡುವೆ ನಿಮ್ಮ ಬಹುದಿನದ ಆಸೆಯೊಂದು ಇಂದು ಇಡೇರಬಹುದು. ಮನೆಯ ವಾತಾವರಣ ಶಾಂತವಾಗಿರುತ್ತದೆ. ನಿಮ್ಮ ಹೆತ್ತವರ ಪ್ರೀತಿ ಮತ್ತು ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ದಿನವು ಅನುಕೂಲಕರವಾಗಿರುತ್ತದೆ. ದೂರ ಪ್ರಯಾಣವು ಸಂಭವಿಸಬಹುದು.

Today Horoscope In Kannada 9th May 2024

ಮಿಥುನ ರಾಶಿ

ಪೂರ್ವ ಸಿದ್ಧತೆ ಇಲ್ಲದ ಪ್ರಯಾಣ ನಿಮ್ಮದಾಗಬಹುದು. ವಾಹನ ಓಡಿಸುವವರಿಗೆ ಇಂದು ಲಾಭದ ದಿನವಾಗಿರಲಿದೆ. ಕೊಂಚ ಮಟ್ಟಿನ ಅನಾರೋಗ್ಯ ನಿಮ್ಮನ್ನು ಕಾಡುವ ಸಂಭವವಿದೆ. ಸಾಲ ನೀಡಿದ್ದರೆ ವಾಪಾಸು ತರುವ ನಿಮ್ಮ ಆಯೋಚನೆಗೆ ಇಂದು ಮತ್ತಷ್ಟು ಯಶಸ್ಸು ಸಿಗಲಿದೆ. ದೂರದ ಸಂಬಂಧಿಕರಿಂದ ಶುಭ ಸುದ್ದಿಯನ್ನು ಕೇಳುವ ಸಂಭವವಿದೆ. ವ್ಯಾಪಾರದಲ್ಲಿ ತೊಡಗಿರುವ ಜನರು ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುತ್ತದೆ ಇಲ್ಲದಿದ್ದರೆ ನಷ್ಟ ಸಂಭವಿಸಬಹುದು.

ಕರ್ಕ ರಾಶಿ

ಇಂದು ನಿಮ್ಮ ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳುತ್ತೀರಿ. ಕೆಲಸದ ಬಗ್ಗೆ ಹೆಚ್ಚು ಚಿಂತಿಸುವುದನ್ನು ತಪ್ಪಿಸಿ. ಸಕಾರಾತ್ಮಕವಾಗಿರಿ ಮತ್ತು ನಿಮ್ಮ ಕಠಿಣ ಕೆಲಸವನ್ನು ಮುಂದುವರಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ.

ಸಿಂಹ ರಾಶಿ

ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ. ಹಣಕಾಸು ವಿಚಾರದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಧನ ಲಾಭದ ಜೊತೆಗೆ ಒಂದಿಷ್ಟು ಹಣ ನಿಮ್ಮನ್ನು ಅರಸಿ ಬರಲಿದೆ. ಇಂದು ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ಮಾಡಬೇಡಿ. ಹಿರಿಯರ ಮಾತುಗಳ ಕುರಿತು ನಿರ್ಲಕ್ಷ್ಯ ಮಾಡಬೇಡಿ. ನೀವು ತಾಳ್ಮೆಯಿಂದಿರಬೇಕು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಿಮ್ಮ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಕನ್ಯಾ ರಾಶಿ

ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಈ ದಿನ ಶುಭವಾಗಿರಲಿದೆ. ಅಧ್ಯಯನದ ಬಗ್ಗೆ ಯಾವುದೇ ರೀತಿಯಲ್ಲಿ ಅಸಡ್ಡೆ ತೋರಬೇಡಿ. ಮಾನಸಿಕ ವ್ಯಾಕುಲತೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ವ್ಯಾಪಾರಸ್ಥರಿಗೆ ದಿನವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಬಜೆಟ್‌ಗೆ ಅನುಗುಣವಾಗಿ ಮಾತ್ರ ಖರ್ಚು ಮಾಡಿ. ಅನಗತ್ಯ ಚಿಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ತುಲಾ ರಾಶಿ

ಕೌಟುಂಬಿಕ ಸಮಸ್ಯೆಗಳಿಂದ ಸಂಬಂಧಿಸಿದಂತೆ ಇಂದು ಈ ಸಮಸ್ಯೆಯ ತೀವ್ರತೆ ಹೆಚ್ಚಾಗುವ ಸಂಭವವಿದೆ. ಹೀಗಾಗಿ ನೀವು ಮಾತನಾಡುವಾಗ ಒಮ್ಮೆ ಯೋಚಿಸಿ ಮಾತನಾಡಿ. ವಿವಾಹಿತರಿಗೆ ಇಂದು ಒಳ್ಳೆಯ ದಿನವಾಗಿರಲಿದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮಿಶ್ರ ದಿನವಾಗಬಹುದು. ದೇವಾಲಯ ಭೇಟಿ ಮಾಡುವ ಅವಕಾಶ ನಿಮಗೆ ಸಿಗಲಿದೆ.

ವೃಶ್ಚಿಕ ರಾಶಿ

ಉದ್ಯೋಗಸ್ಥರಿಗೆ ಅಪೇಕ್ಷಿತ ಫಲಿತಾಂಶ ಸಿಗುತ್ತದೆ. ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕಿರಿಯ ಸಹೋದರ ಅಥವಾ ಸಹೋದರಿ ವಿವಾಹವಾಗಿದ್ದರೆ ಅವರಿಗೆ ಮದುವೆಯ ಪ್ರಸ್ತಾಪ ಬರಬಹುದು. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಲಾಭವಾಗುವ ನಿರೀಕ್ಷೆ.

ಧನು ರಾಶಿ

ಉದ್ಯಮಿಗಳು ಇಂದು ಉತ್ತಮ ಯಶಸ್ಸನ್ನು ಪಡೆಯಬಹುದು. ಇಂದು ನೀವು ನಿಮ್ಮ ಮನೆಗೆ ಇಲ್ಲವೆ ಸ್ವಂತಕ್ಕೆ ಹೊಸದೇನಾದರು ಖರೀದಿಸಲು ಚಿಂತಿಸುತ್ತೀರಿ. ವಾಹನ ಲಾಭದ ನಿರೀಕ್ಷೆ ಇದೆ. ಇಂದು ನಿಮ್ಮ ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದಿದ್ದರೆ, ಇಂದು ಮುಗಿಸುವುದು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಹವ್ಯಾಸಗಳು ಮತ್ತು ಸಂತೋಷಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಬೇಕು.

ಮಕರ ರಾಶಿ

ಉದ್ಯೋಗಿಗಳ ಆದಾಯದಲ್ಲಿ ಹೆಚ್ಚಳವಾಗಬಹುದು. ಉದ್ಯಮಿಗಳು ಯಾವುದೇ ಹಳೆಯ ಸಾಲದಿಂದ ಪರಿಹಾರವನ್ನು ಪಡೆಯಬಹುದು. ನೀವು ಬಾಕಿ ಇರುವ ಹಣವನ್ನು ಮರಳಿ ಪಡೆಯಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ, ನೀವು ಬಹಳ ಬುದ್ಧಿವಂತಿಕೆಯಿಂದ ವರ್ತಿಸಲು ಸಲಹೆ ನೀಡಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರುತ್ತದೆ.

ಕುಂಭ ರಾಶಿ

ಇಂದು ಹಣದ ವಿಷಯದಲ್ಲಿ ದುಬಾರಿ ದಿನವಾಗಿರುತ್ತದೆ. ವೆಚ್ಚಗಳು ಅಗತ್ಯವಾಗಿದ್ದರೂ, ನೀವು ಬಯಸಿದರೂ ಸಹ ನೀವು ಅವುಗಳನ್ನು ತಪ್ಪಿಸಲು ಸಾಧ್ಯವಿಲ್ಲ. ನಿಮ್ಮ ಹಣಕಾಸಿನ ನಿರ್ಧಾರಗಳನ್ನು ನೀವು ಚಿಂತನಶೀಲವಾಗಿ ತೆಗೆದುಕೊಂಡರೆ ಅದು ಉತ್ತಮವಾಗಿರುತ್ತದೆ. ಕೆಲಸದ ದೃಷ್ಟಿಯಿಂದ ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಲಿದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳ ಸಹವಾಸ ದೊರೆಯಲಿದೆ.

ಮೀನ ರಾಶಿ

ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ಹೋಟೆಲ್ ಉದ್ಯಮಿಗಳು, ಚಿಲ್ಲರೆ ವ್ಯಾಪಾರಸ್ಥರಿಗೆ ಒಳ್ಳೆಯ ದಿನವಾಗಿದೆ. ಹಳೆಯ ಕೆಲವು ಕೆಲಸಗಳು ಅಥವಾ ಅರ್ಧದಲ್ಲೇ ನಿಂತಿದ್ದ ಕೆಲಸಗಳು ಇಂದು ಮತ್ತೆ ಮರುಜೀವ ಪಡೆಯಲಿವೆ. ಮೂಳೆಗೆ ಸಂಬಂಧಿಸಿದ ನೋವು ಕಾಡಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Today Horoscope In Kannada 9th May 2024 Aries To Pisces Dina Bhavishya Prediction For 12 Zodiacs

Today Horoscope In Kannada 9th May 2024 Aries To Pisces Dina Bhavishya Prediction For 12 Zodiacs
Story first published: Thursday, May 9, 2024, 4:00 [IST]
X
Desktop Bottom Promotion