ಮೇ 2: ಈ ದಿನ 12 ರಾಶಿಗಳ ರಾಶಿಫಲ ಹೇಗಿದೆ? ಯಾರಿಗೆಲ್ಲಾ ಈ ದಿನ ಶುಭ?

ವೈದಿಕ ಶಾಸ್ತ್ರದ ಪ್ರಕಾರ ಮೇ 2 ನಿಮಗೆ ಹೇಗಿರಲಿದೆ ಎಂದು ನೋಡೋಣ....

ಮೇಷ ರಾಶಿ

ನೀವು ಕೆಲಸದ ಜೊತೆಗೆ ಮನೆಯ ಕಡೆಗೂ ಹೆಚ್ಚಿನ ಗಮನಹರಿಸಬೇಕು. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ದಿನ ಹೆಚ್ಚು ಶ್ರಮ ಹಾಕಬೇಕು. ಆಯಾಸ ಹೆಚ್ಚಾಗುವುದು, ನೀವು ಆರೋಗ್ಯದ ಕಡೆಗೆ ಗಮನಹರಿಸಿ.

Dina Bhavishya

ವೃಷಭ ರಾಶಿ

ವ್ಯಾಪಾರಿಗಳಿಗೆ ಈ ದಿನ ತುಂಬಾ ಅನುಕೂಲಕರವಾಗಿದೆ. ಉದ್ಯೋಗಿಗಳು ಈ ದಿನ ಖುಷಿಯಿಂದ ಕೆಲಸ ಮಾಡುತ್ತೀರಿ, ನಿಮ್ಮೆಲ್ಲಾ ಕೆಲಸ ಸಮಯಕ್ಕೆ ಪೂರ್ಣಗೊಳ್ಳಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಈ ದಿನ ನೀವು ಉಳಿತಾಯ ಮಾಡಲು ಸಾಧ್ಯವಾಗುವುದು, ಏನಾದರೂ ಸಾಲವಿದ್ದರೆ ಶೀಘ್ರದಲ್ಲೇ ಸಾಲ ತೀರಿಸುತ್ತೀರಿ, ಆರೋಗ್ಯ ಚೆನ್ನಾಗಿರಲಿದೆ.

ಮಿಥುನ ರಾಶಿ

ಕುಟುಂಬದಲ್ಲಿ ಕೆಲ ಭಿನ್ನಾಭಿಪ್ರಾಯ ಬರಬಹುದು, ಆದರೆ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಇನ್ನು ನೀವು ಹಣದ ಕುರಿತ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ಬೇರೆಯವರು ಹೇಳಿದರು ಎಂದು ಯಾವುದೇ ಕೆಲಸ ಮಾಡಬೇಡಿ, ಇನ್ನು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.

ಕರ್ಕ ರಾಶಿ

ಹಣದ ಬಗ್ಗೆ ಈ ದಿನ ಉತ್ತಮವಾಗಿದೆ. ಅಲ್ಲದೆ ಮನೆಯಲ್ಲಿ ತುಂಬಾನೇ ಶಾಂತಿಯುತ ವಾತಾವರಣ ಇರಲಿದೆ. ಉದ್ಯೋಗಿಗಳಿಗೆ ಈ ದಿನ ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟವಾಗಬಹುದು. ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಈ ದಿನ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.

ಸಿಂಹ ರಾಶಿ

ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ. ಉದ್ಯಮಿಗಳ ಆರ್ಥಿಕ ಸ್ಥಿತಿ ಸುಧಾರಿಸುವ ಲಕ್ಷಣಗಳಿವೆ.

ಕನ್ಯಾ ರಾಶಿ

ವಿದ್ಯಾರ್ಥಿಗಳಿಗೆ ಈ ದಿನ ತುಂಬಾ ಉತ್ತಮವಾಗಿದೆ. ಕನ್ಯಾ ರಾಶಿಯವರು ಹಣಕಾಸಿನ ಸಮಸ್ಯೆ ಬಗ್ಗೆ ಜಾಗ್ರತೆವಹಿಸಬೇಕು. ಈ ದಿನ ಕೆಲಸದ ಕಡೆಗೆ ಹೆಚ್ಚಿನ ಶ್ರಮ ಪಡುತ್ತೀರಿ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ, ನಿರ್ಲಕ್ಷ್ಯ ದುಬಾರಿಯಾಗಬಹುದು.

ತುಲಾ ರಾಶಿ

ಈ ದಿನ ನಿಮಗೆ ಶುಭವಾಗಿದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಸಕಾರಾತ್ಮಕ ಫಲಿತಾಂಶ ಪಡೆಯುತ್ತೀರಿ. ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ಚೆನ್ನಾಗಿರಲಿದೆ. ಇನ್ನು ಹಣದ ಬಗ್ಗೆ ಹೆಚ್ಚು ಖರ್ಚು ಮಾಡಬೇಡಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ನಕಾರಾತ್ಮಕ ಆಲೋಚನೆಗಳಿಂದ ದೂರವಿರಲು ಸಲಹೆ ನೀಡಲಾಗುವುದು.

ವೃಶ್ಚಿಕ ರಾಶಿ

ಉದ್ಯಮಿಗಳು ಈ ದಿನ ಜಾಗ್ರತೆವಹಿಸಬೇಕು, ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಮೂಳೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಆಹಾರಕ್ರಮದ ಕಡೆಗೆ ಗಮನಹರಿಸಿ. ಮನೆಯ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ.

ಧನು ರಾಶಿ

ಉದ್ಯೋಗಿಗಳಿಗೆ ಕೆಲಸದ ಕಡೆಗೆ ಗಮನಹರಿಸಬೇಕು. ವ್ಯಾಪಾರಿಗಳಿಗೆ ಈ ದಿನ ಸರಾಸರಿಯಾಗಿರಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ.

ಮಕರ ರಾಶಿ

ಇಂದು ನೀವು ಖುಷಿ ಖುಷಿಯಿಂದ ಸಮಯ ಕಳೆಯುತ್ತೀರಿ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಕೆಲಸದ ಬಗ್ಗೆ ಅನಗ್ಯತ ಭಯ ಬಿಡಿ. ಶೀಘ್ರದಲ್ಲೇ ನಿಮಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಸಾಮಾನ್ಯ ದಿನವಾಗಿರಲಿದೆ.

ಕುಂಭ ರಾಶ

ವ್ಯಾಪಾರಿಗಳಿಗೆ ಈ ದಿನ ಅಡೆತಡೆಗಳಿಂದ ಕೂಡಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಇಂದು ನೀವು ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ನೀವು ಸಮತೋಲನವನ್ನು ಕಾಯ್ದುಕೊಂಡರೆ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ನೀವು ಶೀಘ್ರದಲ್ಲೇ ದೊಡ್ಡ ಸುಧಾರಣೆ ಕಾಣಬಹುದು. ನಿಮಗೆ ಗ್ಯಾಸ್, ಅಜೀರ್ಣ, ಹೊಟ್ಟೆ ಉರಿ ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆವಿರಬಹುದು.

ಮೀನ ರಾಶಿ

ನೀವು ವೈವಾಹಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ನಿಮ್ಮ ಕೆಲಸದಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ಹಣದ ವಿಷಯದಲ್ಲಿ ದಿನವು ದುಬಾರಿಯಾಗಲಿದೆ. ಇಂದು ಕೆಲವು ಹಠಾತ್ ದೊಡ್ಡ ಖರ್ಚು ಇರಬಹುದು. ಆರೋಗ್ಯದ ಕಡೆ ಗಮನಹರಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Today Horoscope in Kannada 2nd May 2024: Aries to Pisces Dina Bhavishya Prediction for 12 Zodiacs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
Story first published: Wednesday, May 1, 2024, 22:02 [IST]
X
Desktop Bottom Promotion