Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
100 ವರ್ಷದ ಬಳಿಕ ಒಂದೇ ರಾಶಿಯಲ್ಲಿ ಮೂರು ರಾಜಯೋಗ: ಈ ರಾಶಿಯಲ್ಲಿ ಅದೃಷ್ಟ ತಾಂಡವ!
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ಕಾಲಕಾಲಕ್ಕೆ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತವೆ. ಈ ವಿದ್ಯಮಾನವು ಎಲ್ಲಾ 12 ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ಕೂಡ ನಾವು ಗಮನಿಸಬಹುದು. ಇದಲ್ಲದೆ ಗ್ರಹಗತಿಗಳ ಬದಲಾವಣೆಯು ವ್ಯಕ್ತಿಯೊಬ್ಬರ ಜೀವನದ ದಿಕ್ಕು ಬದಲಾಯಿಸಬಹುದು. ಅಲ್ಲದೆ ಈ ಗ್ರಹಗಳ ಸ್ಥಿತಿಯಲ್ಲಿನ ಬದಲಾವಣೆಯಿಂದ ಶುಭ ಮತ್ತು ಅಶುಭ ಯೋಗಗಳು ನಡೆಯುವುದು ಸಹ ನೋಡಬಹುದು.
ಅಲ್ಲದೆ ಒಂದೇ ರಾಶಿಯಲ್ಲಿ ಹಲವು ಗ್ರಹಗಳ ಪರಿಣಾಮ ಬೀರುವುದು, ಸಂಯೋಗದ ಕಾರಣದಿಂದಾಗಿ ರಾಜಯೋಗಗಳು ರೂಪುಗೊಳ್ಳುತ್ತವೆ. ಈಗ ಜನವರಿ 2026ರಲ್ಲಿ ಮಕರ ರಾಶಿಯಲ್ಲಿ ಹಲವು ಗ್ರಹಗಳ ಸಂಯೋಗ ನೋಡಬಹುದು. ಪ್ರಮುಖವಾಗಿ ಬುಧ ಮತ್ತು ಸೂರ್ಯನ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗ, ಬುಧ ಮತ್ತು ಮಂಗಳನ ಸಂಯೋಜನೆಯಿಂದ ಲಕ್ಷ್ಮಿ ನಾರಾಯಣ ರಾಜಯೋಗ ಮತ್ತು ಮಂಗಳನ ಆಡಳಿತ ರಾಶಿಯಾಗಿರುವುದರಿಂದ ರುಚಕ ರಾಜಯೋಗ ರೂಪುಗೊಂಡಿದೆ.

ಈ ಮೂರು ಯೋಗವು ಒಂದೇ ರಾಶಿಯಲ್ಲಿ ರೂಪುಗೊಂಡಿದ್ದು, ವಿಶೇಷ ಎಂದು ಪರಿಗಣಿಸಲಾಗುತ್ತದೆ. 100 ವರ್ಷಗಳ ನಂತರ ಮಕರ ರಾಶಿಯಲ್ಲಿ ಈ ಮೂರು ಪ್ರಬಲ ರಾಜಯೋಗಗಳು ರೂಪುಗೊಳ್ಳುವುದು ನೋಡಬಹುದು. ಇದರಿಂದ ಎಲ್ಲಾ 12 ರಾಶಿಗಳ ಜೀವನದಲ್ಲೂ ಕೂಡ ಬದಲಾವಣೆಗಳ ನೋಡಬಹುದು. ಹಾಗಾದ್ರೆ ಪ್ರಮುಖವಾಗಿ ಯಾವೆಲ್ಲಾ ರಾಶಿಯವರು ಈ ಯೋಗದ ಲಾಭ ಪಡೆಯಲಿದ್ದಾರೆ. ಯಾರಿಗೆ ಲಾಭದಾಯಕ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಕರ ರಾಶಿ
ಮಕರ ರಾಶಿಯ ಮೊದಲ ಮನೆಯಲ್ಲಿ ರೂಪುಗೊಂಡ ಮೂರು ರಾಜಯೋಗಗಳಿಂದಾಗಿ ಮುಂದಿನ ಹಲವು ದಿನಗಳು ಈ ರಾಶಿ ಜನರಿಗೆ ಬಹಳಷ್ಟು ಅಚ್ಚರಿಯ ಫಲಿತಾಂಶ ತರಲಿದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಕೆಲಸದಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ಮತ್ತು ಕೆಲಸದಲ್ಲಿ ಗೌರವ, ಘನತೆ ಹೆಚ್ಚಾಗಲಿದೆ. ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವೆ. ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಶುಭಕರ ವಾತಾವರಣ ಇರಲಿದೆ. ಅವಿವಾಹಿತರಲ್ಲಿ ಸಾಲ ಸಂಬಂಧಿತ ದೊಡ್ಡ ವಿಚಾರವು ಧನಾತ್ಮಕ ಫಲಿತಾಂಶವನ್ನು ತರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಅದೃಷ್ಟದ ಮನೆಯಾದ 9 ನೇ ಮನೆಯಲ್ಲಿ ಈ ವಿಶೇಷ 3 ರಾಜಯೋಗಗಳು ರೂಪುಗೊಂಡಿರುವುದರಿಂದ, ಈ ರಾಶಿ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನಿಮ್ಮ ಪ್ರತಿಯೊಂದು ಕೆಲಸವು ನೀವು ಅಂದುಕೊಂಡ ಫಲಿತಾಂಶ ತರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ದೊಡ್ಡ ಮೊತ್ತದ ಹಣ ಕೈ ಸೇರಬಹುದು. ಹೊಸ ಉದ್ಯೋಗ, ಸ್ವಂತ ಉದ್ಯಮ ಕಟ್ಟಲು ಇದು ಸರಿಯಾದ ಸಮಯ ಆಗಿರಲಿದೆ. ಉದ್ಯಮಿಗಳು ಲಾಭ ನೋಡುವ ಸಮಯ. ದಾಂಪತ್ಯ ವಿಚಾರಗಳಲ್ಲಿ ಪರಸ್ಪರ ಬೆಂಬಲ ನೋಡಬಹುದು. ಬಹು ದಿನಗಳ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು, ಮನೆ ನಿರ್ಮಾಣ, ವಾಹನ ಖರೀದಿಯಂತಹ ಲಾಭದಾಯಕ ಸಮಯ ಇದಾಗುತ್ತದೆ.
ಮೀನ ರಾಶಿ
ಮೀನ ರಾಶಿಯ 11 ನೇ ಮನೆಯಲ್ಲಿ 3 ರಾಜಯೋಗಗಳು ರೂಪುಗೊಂಡಿರುವುದರಿಂದ, ಈ ರಾಶಿ ಜನರಿಗೆ ಅನುಕೂಲಕರ ಸಮಯ. ನಿಮ್ಮ ಆದಾಯದಲ್ಲಿ ಗಣನೀಯ ಏರಿಕೆ ನೋಡುವಿರಿ. ಹಾಗೆ ಹೊಸ ವ್ಯವಹಾರಗಳಲ್ಲಿ ಶುಭವಾಗುತ್ತದೆ. ನೀವು ಹೊಸ ಹೂಡಿಕೆಗಳನ್ನು ಮಾಡಿದರೆ, ಅದರಿಂದ ಲಾಭ ಪಡೆಯುವ ಸಮಯವೂ ಇದಾಗಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದರಿಂದ ಸುಧಾರಣೆ ಪಡೆಯಲಿದ್ದೀರಿ. ನಿಮ್ಮ ಆಪ್ತ ವಲಯದಿಂದ ನಿಮಗೆ ಬರಬೇಕಿದ್ದ ಹಣಕಾಸಿನ ಬೆಂಬಲವು ನಿಮ್ಮ ಕೈ ಸೇರಲಿದೆ. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ವಿಚಾರಗಳು ಶುಭವಾಗುತ್ತಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications