Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ನಕ್ಷತ್ರದಲ್ಲಿ ಜನಿಸಿದವರು ಬಾಳಸಂಗಾತಿಯನ್ನು ರಾಣಿಯಂತೆ ನೋಡಿಕೊಳ್ತಾರೆ..!
ಮದುವೆಯಾಗಲು ಬಯಸುವ ಎಲ್ಲಾ ಯುವತಿಯರ ಒಂದು ಆಸೆ ಅಂದರೆ ತನ್ನ ಕೈ ಹಿಡಿಯುವ ಹುಡುಗ ರಾಣಿಯಂತೆ ನೋಡಿಕೊಳ್ಳಬೇಕು. ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಬಯಕೆ ಇದ್ದೇ ಇರುತ್ತೆ. ಆದ್ರೆ ಇಂತಹ ಹುಡುಗರನ್ನು ಹುಡುಕುವುದು ಈಗ ಬಹಳ ಕಷ್ಟ ಅನ್ನೋದು ಎಲ್ಲರ ದೂರು. ಹಾಗೆ ಪ್ರತಿಯೊಬ್ಬರು ತಮ್ಮ ಕೈ ಹಿಡಿಯುವ ಹುಡುಗ ಹೇಗಿರಬೇಕು ಎಂಬ ಕನಸು ಕಂಡಿರುತ್ತಾರೆ.
ಹಾಗೆ ಅವರನ್ನು ಹುಡುಕಲು ಬಹಳಷ್ಟು ಕಷ್ಟಪಡುತ್ತಾರೆ. ಆದ್ರೆ ಅವರ ಗುಣಗಳನ್ನು ತಿಳಿದುಕೊಳ್ಳಲು ಇರುವ ಕೆಲವೇ ಕೆಲವು ದಾರಿಗಳಲ್ಲಿ ಅವರ ಜನ್ಮ ನಕ್ಷತ್ರವನ್ನು ತಿಳಿಯುವುದಾಗಿದೆ. ಏಕೆಂದರೆ ನೀವು ಯಾವ ಜನ್ಮ ನಕ್ಷತ್ರದಲ್ಲಿ ಜನಿಸಿದ್ದೀರಿ ಎಂಬುದರ ಆಧಾರ ಮೇಲೆ ನಿಮ್ಮ ಗುಣಗಳು ನಿರ್ಧಾರವಾಗುವುದು ನೋಡಬಹುದು. ಹಾಗೆ ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ.

ಹೌದು ವ್ಯಕ್ತಿಯೊಬ್ಬರ ಜಾತಕದಲ್ಲಿ ಜನ್ಮ ನಕ್ಷತ್ರಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತೆ. ಹಾಗೆ ಮದುವೆಯ ಸಂದರ್ಭದಲ್ಲಿ ಜನ್ಮ ನಕ್ಷತ್ರವನ್ನು ನೋಡುವುದು ಇದೇ ಕಾರಣಕ್ಕೆ. ಹಾಗಾದ್ರೆ ಯಾವ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಪತ್ನಿಯನ್ನು ರಾಣಿಯಂತೆ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಅನ್ನೋದನ್ನು ನಾವಿಂದು ತಿಳಿಯೋಣ.
ಕೃತಿಕ
ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿ ತನ್ನ ಬಾಳ ಸಂಗಾತಿಯ ಜೊತೆಗೆ ಅನ್ಯೋನ್ಯವಾಗಿರುತ್ತಾರೆ. ಅವರ ಬಗ್ಗೆ ಕಾಳಜಿ ತೋರಿಸುವಲ್ಲಿ ಇವರು ಮೊದಲಿಗರು. ಅವರು ತಮ್ಮ ಪತ್ನಿಯನ್ನು ಸಂತೋದಷ ಪಡಿಸಲು ಯಾವ ಕೆಲಸವನ್ನಾದರು ಮಾಡುತ್ತಾರೆ. ಹಾಗೆ ಎಂತಹ ತ್ಯಾಗಕ್ಕೂ ಸಿದ್ದರಿರುತ್ತಾರೆ. ಪತ್ನಿಯನ್ನು ಅವರು ನೋಯಿಸಲು ಇಷ್ಟಪಡುವುದಿಲ್ಲ ಹಾಗೆ ಆಕೆ ತನ್ನ ಎದುರಲ್ಲಿ ಕೆಲಸ ಕಾರ್ಯದಲ್ಲಿ ತೊಡಗುವುದನ್ನು ನೋಡುವುದು ಅವರು ಇಷ್ಟಪಡುವುದಿಲ್ಲ. ಆಕೆಯನ್ನು ಖುಷಿ ಪಡಿಸಲು ಯಾವಾಗಲು ಹೊಸದೇನಾದರು ಪ್ರಯತ್ನಿಸುತ್ತಾರೆ. ಇವರು ಸಂಬಂಧಗಳ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವವರು.
ಉತ್ತರ
ಉತ್ತರ ನಕ್ಷತ್ರದಲ್ಲಿ ಜನಿಸಿದ ಜನರು ತುಂಬಾ ಪ್ರಾಮಾಣಿಕ ಮತ್ತು ನಿಷ್ಠಾವಂತರು. ದಾಂಪತ್ಯದಲ್ಲಿ ನಂಬಿಕೆ ಇಟ್ಟು ಅದನ್ನು ಉಳಿಸಿಕೊಳ್ಳು ಪ್ರಾಮಾಣಿಕ ಪ್ರಯತ್ನದಲ್ಲಿರುವವರು. ಹಾಗೆ ಪತ್ನಿಯಿಂದ ತಮ್ಮ ವೈಯಕ್ತಿಕ ಕಷ್ಟಗಳನ್ನು, ಸಮಸ್ಯೆಗಳನ್ನು ರಹಸ್ಯವಾಗಿಟ್ಟು ಅವರಿಗೆ ತಿಳಿಯದಂತೆ ಅದನೆಲ್ಲಾ ಬಗೆಹರಿಸಲು ಮುಂದಾಗುವವರು. ಹೀಗಾಗಿ ಪತ್ನಿಯ ಕುರಿತು ಇವರಲ್ಲಿ ಬಹಳ ಕಾಳಜಿ ಇರಲಿದೆ. ಅವರು ಪತ್ನಿಯಿಂದ ಪ್ರತಿಯಾಗಿ ಏನನ್ನು ಬಯಸದೆ ಅವರ ಸಂತೋಷ ನೋಡಲು ಬಯಸುವವರು.
ವೈಶಾಖ
ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿ ತನ್ನ ಬಾಳ ಸಂಗಾತಿಯ ಖುಷಿಯಾಗಿ ಯಾವುದೇ ಕಷ್ಟಗಳ ಎದುರಿಸಲು ಸಿದ್ಧರಿರುತ್ತಾರೆ. ಸಂಗಾತಿ ಆರೋಗ್ಯದ ಮೇಲೆ ಇವರ ಕಾಳಜಿ ಎಂದಿಗೂ ಉಚ್ಛ ಸ್ಥಾನದಲ್ಲಿರಲಿದೆ. ಪತ್ನಿ ಹೇಳಿದ ಮಾತು ಮೀರುವುದು ಅಂದರೆ ಇವರಿಗೆ ಬಹಳ ನೋವು ಸಂಗತಿಯಾಗುತ್ತದೆ. ಪತ್ನಿಯನ್ನು ಹೊಗಳುವುದು, ಅವರಿಗೆ ಇಷ್ಟವಾದ ವಸ್ತು ನೀಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಹಾಗೆ ಪ್ರೀತಿಯಲ್ಲಿ ಯಾವಾಗಲು ಕಾಳಜಿ ಮುಖ್ಯ ಎಂದು ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.
ಪುಷ್ಯ
ಪುಷ್ಯ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಯಾವಾಗಲು ತಮ್ಮ ಕೈ ಹಿಡಿದ ಪತ್ನಿಯನ್ನು ಸಂತೋಷವಾಗಿ ಇಡಲು ಇಷ್ಟಪಡುತ್ತಾರೆ. ಬಹಳ ನಿಷ್ಠಾವಂತರಾಗಿರುವ ನೀವು ಯಾವಾಗಲು ಒಳ್ಳೆಯದನ್ನು ಬಯಸುತ್ತೀರಿ. ಪತ್ನಿಯ ಬಗ್ಗೆ ನಿಮ್ಮಲ್ಲಿ ಹೆಚ್ಚು ಗೌರವ ಇರಲಿದೆ. ಪತ್ನಿಯನ್ನು ಯಾವಾಗಲು ರಾಣಿಯಂತೆ ನೋಡಿಕೊಳ್ಳಬೇಕು ಅನ್ನೋದು ನಿಮ್ಮ ಕನಸಾಗಿರುತ್ತೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











