Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ನಕ್ಷತ್ರಗಳಲ್ಲಿ ಹುಟ್ಟಿದವರಿಗೆ 40 ವರ್ಷದ ಬಳಿಕ ರಾಜಯೋಗ..! ನಿಮ್ಮ ಜನ್ಮ ನಕ್ಷತ್ರ ಯಾವುದು?
ನೀವು ಹುಟ್ಟಿದ ತಕ್ಷಣ ಆ ಸಮಯ, ಗಳಿಗೆಯನ್ನು ಬರೆದಿಡುತ್ತಾರೆ, ಮುಂದೆ ಇದೇ ನಿಮ್ಮ ರಾಶಿ, ನಕ್ಷತ್ರ, ಜಾತಕದ ಹಿಂದಿನ ರುವಾರಿಯಾಗುತ್ತದೆ. ಹಾಗೆ ನೀವು ಯಾವ ನಕ್ಷೆತ್ರದಲ್ಲಿ ಜನಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಜೀವನದ ಪ್ರಮುಖ ಘಟನಾವಳಿಗಳು ನಡೆಯುತ್ತವೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಗುಣ, ನಡತೆ ಆಗು ಹೋಗುಗಳ ಹಿಂದೆ ಈ ಜನ್ಮ ನಕ್ಷತ್ರ ಕಾರಣವಾಗಿರುತ್ತದೆ. ಹೀಗಾಗಿ ನಮ್ಮ ಜನ್ಮ ನಕ್ಷತ್ರದ ಪ್ರಕಾರಬವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ ಎಂದು ಹೇಳುತ್ತಿರುತ್ತಾರೆ.
ನಿಮ್ಮ ಜನ್ಮ ನಕ್ಷತ್ರಗಳ ಪ್ರಕಾರವಾಗಿ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಸಂತೋಷ ಮತ್ತು ದುಃಖಗಳು ಬದಲಾಗುತ್ತವೆ. ಬಹುಶಃ ನೀವು ಇಲ್ಲಿಯವರೆಗೆ ಜೀವನದಲ್ಲಿ ಕೇವಲ ನೋವು, ಕಷ್ಟ ಅನುಭವಿಸಿದ್ದರೆ ಅದಕ್ಕೆ ನಿಮ್ಮ ಜನ್ಮ ನಕ್ಷತ್ರವೂ ಕಾರಣವಾಗಿರಬಹುದು. ಆದ್ರೆ ಇದು ಶಾಶ್ವತವಲ್ಲ ಎಲ್ಲಾ ನಕ್ಷತ್ರಗಳಲ್ಲೂ ಯೋಗ ಸಮಯ ಎಂಬುದಿರುತ್ತದೆ.

ವಿಶೇಷವಾಗಿ ಕೆಲವು ರಾಶಿಗಳ ಮಂದಿ ಈ ಜನ್ಮ ನಕ್ಷತ್ರದಲ್ಲಿ ಜನಿಸಿದವರ ಅದೃಷ್ಟ ಬದಲಾಗುತ್ತದೆ. ರಾಜಯೋಗಕ್ಕೆ ಕಾರಣವಾಗುತ್ತದೆ. ಆದ್ರೆ ಈ ಯೋಗ ಬರಲು ಸಮಯ ಹಿಡಿಯುತ್ತದೆ. ಹಾಗಾದ್ರೆ ನಾವಿಂದು 40 ವರ್ಷ ಮೇಲ್ಪಟ್ಟ ಯಾರಿಗೆಲ್ಲಾ ರಾಜಯೋಗ ಪಾಪ್ತಿಯಾಗಲಿದೆ, ಯಾವ ಜನ್ಮ ನಕ್ಷತ್ರದವರಿಗೆ ಲಾಭದಾಯಕ ದಿನಗಳು ಮುಂದೆ ಕಾದಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ನಕ್ಷತ್ರ
ನಿಮ್ಮ ಜನ್ಮ ನಕ್ಷತ್ರ ಉತ್ತರವಾಗಿದ್ದರೆ ನಿಮ್ಮ ದಿನಗಳು ಉತ್ತಮವಾಗಿರಲಿದೆ. 40 ವರ್ಷದ ಬಳಿಕ ನಿಮಗೆ ರಾಜಯೋಗ ಆರಂಭವಾಗುತ್ತದೆ. ಉತ್ತರ ನಕ್ಷತ್ರವನ್ನು ಸೂರ್ಯನ ನಕ್ಷತ್ರ ಎನ್ನಲಾಗುತ್ತದೆ. 40 ವರ್ಷ ನಂತರ, ಈ ನಕ್ಷತ್ರಗಳಿಗೆ ಅನೇಕ ಆರ್ಥಿಕ ಲಾಭಗಳು ಕಾದಿವೆ. ಕೆಲಸದಲ್ಲಿ ಉತ್ತಮ ಉನ್ನತ ಸ್ಥಾನ, ಅದೃಷ್ಟ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸ ತರುವಂತಹ ದಿನಗಳು ಮುಂದೆ ಬರಲಿವೆ. ಹಾಗೆ ಆದಾಯದಲ್ಲಿ ಸ್ಥಿರತೆ, ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆಯಾಗಲಿದೆ. ಇನ್ನು ನೀವು ಬಹುಬೇಗ ಈ ವಯಸ್ಸಿನಲ್ಲಿ ಕೋಪಗೊಳ್ಳುವುದು, ಆತಂಕಕ್ಕೆ ಒಳಗಾಗುವುದು ಉಂಟಾಗುತ್ತಿರುತ್ತದೆ.
ಜ್ಯೇಷ್ಠ ನಕ್ಷತ್ರ
ಜ್ಯೇಷ್ಠ ನಕ್ಷತ್ರದ ಮಂದಿ 40 ವರ್ಷದ ಬಳಿಕ ಎಲ್ಲಿಲ್ಲದ ಏಳಿಗೆ ಸಾಧಿಸಲಿದ್ದಾರೆ. ರಾಜಯೋಗ ಆರಂಭದಲ್ಲೇ ಅವರಿಗೆ ಲಾಭದಾಯಕವಾಗಲಿದೆ. ಡಿಸೆಂಬರ್ 2, 2024 ರಂದು ಸೂರ್ಯ ರಾತ್ರಿ 7:18ಕ್ಕೆ ಜ್ಯೇಷ್ಠ ನಕ್ಷತ್ರದಲ್ಲಿ ಸಾಗುತ್ತಾನೆ. ಹೀಗಾಗಿ ಜ್ಯೇಷ್ಠ ನಕ್ಷತ್ರದಲ್ಲಿ ಜನಿಸಿದವರಿಗೆ ಸಂತಸದ ದಿನಗಳು ಮುಂದೆ ಕಾಯುತ್ತಿವೆ. ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಿದ್ದರೆ 40 ವರ್ಷದ ಬಳಿಕ ಎಲ್ಲವೂ ನಿವಾರಣೆಯಾಗಲಿದೆ. ಹೊಸ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಬಹುದು. ಅವರು ಸಂತೋಷದ ವೈವಾಹಿಕ ಜೀವನವನ್ನು ನಡೆಸುವ ಸಾಧ್ಯತೆಯಿದೆ. ವಿಶೇಷವಾಗಿ ನಿಮ್ಮ
ಪುನರ್ವಸು
ಪುನರ್ವಸು ನಕ್ಷತ್ರದಲ್ಲಿ ಜನಿಸಿದ ಮಂದಿಗೂ 40 ವರ್ಷ ದಾಟಿದ ಮೇಲೆ ಅದೃಷ್ಟ ಒಲಿಯಲಿದೆ. ನೀವು ಜೀವನದಲ್ಲಿ ಬಹಳ ಕಾಲದಿಂದ ಅನುಭವಿಸಲು ಆಗದೆ ಇರುವ ಕೆಲಸಗಳು ನೆರವೇರುತ್ತವೆ. ವಾಹನ ಲಾಭ, ಮನೆ, ಆಸ್ತಿ ಲಾಭದಂತಹ ನಿರೀಕ್ಷೆ ಇಟ್ಟುಕೊಳ್ಳಬಹುದು. ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ ಎಂದು ಕರೆಯಲಾಗಿದೆ. ಹೀಗಾಗಿ ಈ ನಕ್ಷತ್ರದ ಮಂದಿ ಯಾವಾಗಲು ಸಂತದದಿಂದ ಇರುತ್ತಾರೆ. 40 ವರ್ಷದ ಬಳಿಕ ಇವರಲ್ಲಿ ಊಹಿಸದ ಆರ್ಥಿಕ ಸ್ಥಿರತೆ ನಾವು ನೋಡಬಹುದು.
ಉತ್ತರಾಷಾಢ
ನಿಮ್ಮ ಅಭಿವೃದ್ಧಿಯಲ್ಲಿ ವೇಗ ಪಡೆಯುವುದು ನೋಡಬಹುದು. ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಾಗಿ ಒತ್ತಡದಿಂದ ಹೊರಬರುತ್ತಾರೆ. ಜವಾಬ್ದಾರಿಗಳಿಂದ ನೀವು ಮುಕ್ತರಾಗುತ್ತೀರಿ. ಖರ್ಚು ನಿಭಾಯಿಸುವ ಎಲ್ಲಾ ಶಕ್ತ ಮೂಲಗಳು ನಿಮಗೆ ಒಲಿಯಲಿದೆ. ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿರುತ್ತವೆ. ನಿಮ್ಮ ಜೀವನದ ಬಗ್ಗೆ ನಿಮಗೆ ಹೆಮ್ಮೆ ಬರುವಂತಹ ಸಮಯ ಇದಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications