Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ ಜನ್ಮ ನಕ್ಷತ್ರದಲ್ಲಿ ಜನಿಸಿದ ಮಂದಿಗೆ ಡಿಸೆಂಬರ್‌ನಲ್ಲಿ ಖುಲಾಯಿಸಲಿದೆ ಅದೃಷ್ಟ..!
ನೀವು ಯಾವ ನಕ್ಷತ್ರದಲ್ಲಿ ಜನಿಸಿದ್ದೀರಿ ಎಂಬುದರ ಮೇಲೆ ನಿಮ್ಮ ಜೀವನದ ಪ್ರಮುಖ ಘಟನಾವಳಿಗಳು ನಿರ್ಧಾರವಾಗುತ್ತದೆ. ನಿಮ್ಮ ಕುಂಡಲಿಯ ಆಗು ಹೋಗುಗಳು, ನಿಮ್ಮಲ್ಲಿ ಉಂಟಾಗುವ ಅನಿರೀಕ್ಷಿತ ಬೆಳವಣಿಗೆಗಳು ಇದಕ್ಕೆಲ್ಲಾ ನಿಮ್ಮ ಜನ್ಮ ನಕ್ಷತ್ರ ಕಾರಣವಾಗಿರಲಿದೆ. ಹೀಗಾಗಿ ನಮ್ಮ ಜನ್ಮ ನಕ್ಷತ್ರದ ಪ್ರಕಾರವಾಗಿ ಏನು ನಡೆಯಬೇಕೋ ಅದು ನಡೆಯುತ್ತದೆ.
ನಿಮ್ಮ ಜನ್ಮ ನಕ್ಷತ್ರಗಳ ಪ್ರಕಾರವಾಗಿ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಬಹುದು. ಜೀವನದಲ್ಲಿ ಬದಲಾವಣೆಗಾಗಿ ಕಾಯುತ್ತಿದ್ದವರಿಗೆ ಆ ಬದಲಾವಣೆಯ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ಕೆಲವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಮತ್ತು ತಿರುವುಗಳಾಗಲಿವೆ. ನಾವಿಂದು ಯಾವ ಜನ್ಮ ನಕ್ಷತ್ರದಲ್ಲಿ ಜನಿಸಿದವರಿಗೆ ಈ ಡಿಸೆಂಬರ್ ಉತ್ತಮ ದಿನಗಳನ್ನು ಮುಂದಿಡಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಚಿತ್ರ ನಕ್ಷತ್ರ
ನೀವು ಚಿತ್ರ ನಕ್ಷತ್ರದಲ್ಲಿ ಜನಿಸಿದವರಾಗಿದ್ದರೆ ಡಿಸೆಂಬರ್‌ನಲ್ಲಿ ನಿಮಗೆ ಸಮಾಧಾನಕರವಾದ ದಿನಗಳು ಬರಲಿವೆ. ನಿಮ್ಮ ಸಾಲ ಕಡಿಮೆಯಾಗಲಿದೆ. ಒಂದಿಷ್ಟು ಕಡೆಗಳಿಂದ ನಿಮಗೆ ಹಣ ಹರಿದು ಬರಲಿದೆ. ಅಲ್ಲದೆ ಬಹುಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಕೆಲವು ಕೆಲಸಗಳು ಪೂರ್ಣವಾಗಲಿದೆ. ನಿಮ್ಮ ಕಷ್ಟದ ದಿನಗಳಿಂದ ನೀವು ಮುಕ್ತಿ ಪಡೆಯಬಹುದು. ಯಾವುದೇ ಸವಾಲು ಎದುರಾದರೂ ಧೈರ್ಯದಿಂದ ಎದುರಿಸಿದರೆ ನಿಮ್ಮ ಯಶಸ್ಸು ಸಿಗಲಿದೆ. ಹೊಸ ಆರಂಭಕ್ಕೆ ಅವಕಾಶಗಳಿವೆ.
ಸ್ವಾತಿ ನಕ್ಷತ್ರ
ನೀವು ಸ್ವಾತಿ ನಕ್ಷತ್ರದಲ್ಲಿ ಜನಿಸಿದವರಾಗಿದ್ದರೆ ನಿಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಬಹುದು. ಅದರಲ್ಲೂ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಧನಾತ್ಮಕ ಬದಲಾವಣೆ ನೋಡಲು ಸಾಧ್ಯವಾಗುತ್ತದೆ. ನಿರುದ್ಯೋಗಿಗಳಿಗೂ ಇದು ಶುಭ ಕಾಳವಾಗಲಿದೆ. ನಿಮ್ಮ ನಡುವೆ ಇದ್ದ ದೊಡ್ಡ ಸಂಕಷ್ಟದ ಕೊಂಡಿ ಕಳಚಬಹುದು. ಅವಿವಾಹಿತರಿಗೆ ಈ ಡಿಸೆಂಬರ್‌ನಲ್ಲಿ ಶುಭ ಸುದ್ದಿ ಕೇಳುವ ಸಾಧ್ಯತೆ ಇದೆ. ವಾಹನ ಕೊಳ್ಳುವ ಆಸೆಯಿದ್ದರೆ ಆ ಕಾಲಕ್ಕೆ ಬೇಕಾದ ತಯಾರಿ ಸುಲಭವಾಗಿ ನೆರವೇರಲಿದೆ.
ವಿಶಾಖ ನಕ್ಷತ್ರ
ನೀವು ವಿಶಾಖ ನಕ್ಷತ್ರದಲ್ಇ ಜನಿಸಿದವರಾಗಿದ್ದರೆ ಈ ಡಿಸೆಂಬರ್ ನಿಮಗೆ ಈ ವರ್ಷದಲ್ಲೇ ಅತ್ಯುತ್ತಮ ತಿಂಗಳಾಗಲಿದೆ. ಏಕೆಂದರೆ ನಿಮ್ಮ ಕುಂದುಕೊರತೆಗಳು ನೀಗಲಿವೆ. ನಿಮ್ಮ ಪ್ರಾರ್ಥನೆಗಳು ಫಲಿಸಲಿವೆ. ಹೊಸದೊಂದು ಆರಂಭಕ್ಕೆ ನೀವು ಮುನ್ನುಡಿ ಬರೆಯಲಿದ್ದೀರಿ. ಆರ್ಥಿಕವಾಗಿಯೂ ಸದೃಢವಾಗುವ ದಿನಗಳಿಗೆ ನೀವು ಹೆಜ್ಜೆ ಇಡಲಿದ್ದೀರಿ. ಬಹುತೇಕ ನಿಮ್ಮ ಆಸೆಗಳಿಗೆ ಪೂರಕ ವಾತಾವರಣ ಇರಲಿದೆ. ವಿವಾಹಿತರಲ್ಲಿ ಸಂತಸದ ಸುದ್ದಿ, ದಿನಗಳು ಮುಂದಿರಲಿವೆ. ಹೂಡಿಕೆ, ವ್ಯಾಪಾರ,ಹಣಕಾಸು ಸ್ಥಿತಿ ಉತ್ತಮವಾಗಲಿದೆ.
ಅನುರಾಧ ನಕ್ಷತ್ರ
ನೀವು ಅನುರಾಧ ನಕ್ಷತ್ರದಲ್ಲಿ ಜನಿಸಿದವರಾಗಿದ್ದರೆ ನೀವು ಅಂದುಕೊಂಡಿದ್ದ ಕೆಲಸಗಳು ಸುಲಭವಾಗಿ ನೆರವೇರುವಂತಹ ಸಮಯ ಇರಲಿದೆ. ಹೀಗಾಗಿ ಬಹಳ ಜಾಗರುಕತೆಯಿಂದ ಯೋಚಿಸಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಈ ಡಿಸೆಂಬರ್‌ನಲ್ಲಿ ನಿಮ್ಮ ಹಣಕಾಸು ವ್ಯವಹಾರವನ್ನು ಆದಷ್ಟು ಮಟ್ಟಿಗೆ ಗೌಪ್ಯವಾಗಿ ಹಾಗೂ ಸಂಕುಚಿತವಾಗಿ ಮಾಡುವುದು ಒಳಿತು. ಕೆಲವು ಲಾಭದಾಯಕ ಕೆಲಸಗಳಲ್ಲಿ ನೀವು ತೊಡಗಬಹುದು. ಮನೆಗೆ ಹೊಸ ವಸ್ತು, ಅತಿಥಿ ಬರುವ ಸಾಧ್ಯತೆಗಳಿವೆ. ನೀವು ಮಾಡುವ ಎಲ್ಲದರಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ. ರಾಜನಂತೆಯೇ, ಐಷಾರಾಮಿ ಜೀವನ ಮತ್ತು ಅಧಿಕಾರವನ್ನು ಪಡೆಯುವ ಸಮಯ.
ಜ್ಯೇಷ್ಠ ನಕ್ಷತ್ರ
ಡಿಸೆಂಬರ್ ನಿಮಗೆ ಅತ್ಯುತ್ತಮ ಲಾಭದಾಯಕ ದಿನಗಳಿಂದ ಕೂಡಿರಲಿದೆ. ನಿಮ್ಮ ಮೇಲಿದ್ದ ಕಳಂಕವೊಂದು ದೂರಾಗಬಹುದು. ಆಸ್ತಿ ವಿಚಾರ, ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು, ನೀವು ಮಾಡಬೇಕಾದ ಕೆಲಸದ ಮೇಲೆ ಗಮನವಿಡಿ. ಎಲ್ಲಿಯೂ ಹಣ ನೀಡುವುದು ಇಲ್ಲವೆ ಅನಗತ್ಯ ಖರ್ಚಿಗೆ ಮುಂದಾಗಬೇಡಿ. ಡಿಸೆಂಬರ್ ಕೊನೆಯ ವಾರದಿಂದ ನಿಮಗೆ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಸ್ನೇಹ ಮತ್ತು ಇತರ ಸಂಬಂಧಗಳು ಗಟ್ಟಿಯಾಗುತ್ತವೆ. ನೀವು ಬಯಸಿದ್ದ ದಿನವನ್ನು ಎದುರು ನೋಡುತ್ತಿರಿ. ಈ ತಿಂಗಳಲ್ಲಿ ನೀವು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











