Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಶಿವನ ಆಶೀರ್ವಾದ ಪಡೆಯುವ ಅದೃಷ್ಟದ ರಾಶಿಗಳಿವು! ಶಿವನ ಕೃಪೆಯಿಂದ ಒಲಿಯಲಿದೆ ಅದೃಷ್ಟ!
ಮಹಾಶಿವರಾತ್ರಿಯ ಪವಿತ್ರ ಹಬ್ಬವನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನದಂದು ಶಿವ ಮತ್ತು ಪಾರ್ವತಿಯ ದೈವಿಕ ವಿವಾಹ ನಡೆಯಿತು ಎಂದು ನಂಬಲಾಗಿದೆ. ಹೀಗಾಗಿ ಇಡೀ ದಿನ ಶಿವನ ಜಪ ಮಾಡುವುದು ನೋಡಬಹುದು. ಹಾಗೆ ಶಿವನ ಆಶೀರ್ವಾದ ಪಡೆಯಲು ಉಪವಾಸ, ವಿಶೇಷ ಪೂಜೆ, ನೈವೇದ್ಯಗಳು, ಭಜನೆ ಸೇರಿ ಹಲವು ರೀತಿಯ ಕೆಲಸ ಮಾಡಲಾಗುತ್ತದೆ, ಈ ದಿನವು ಶಿವನಿಗೆ ಸಮರ್ಪಿತವಾಗಿರಲಿದೆ.
ಶಿವರಾತ್ರಿಯ ಸಮಯದಲ್ಲಿ ದಂಪತಿ ಶಿವನ ಆರಾಧಿಸಿದರೆ ಸಂತೋಷ ತುಂಬಿರಲಿದೆಯಂತೆ. ಅವಿವಾಹಿತರು ಪೂಜಿಸಿದರೆ ನಿಮಗೆ ಉತ್ತಮ ವಧು ವರ ಸಿಗಲಿದ್ದಾರೆ ಎಂದು ಹೇಳಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ದಿನವನ್ನು ಕೆಲವು ರಾಶಿಗಳಿಗೆ ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಈ ರಾಶಿ ಜನರು ಶಿವನ ವಿಶೇಷ ಆಶೀರ್ವಾದ ಪಡೆಯಲಿವೆ.

ಹಾಗಾದ್ರೆ ಶಿವನ ವಿಶೇಷ ಆಶೀರ್ವಾದ ಪಡೆಯುವ ರಾಶಿಗಳು ಯಾವುದು? ಯಾವ ರಾಶಿಗಳು ಶಿವನಿಂದ ವಿಶೇಷ ಕೃಪೆ ಯಾವ ರಾಶಿಗಿವೆ ಎಂಬುದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ಮಹಾಶಿವರಾತ್ರಿಯು ವೃಷಭ ರಾಶಿಯವರಿಗೆ ಶುಭ ಚಿಹ್ನೆಗಳನ್ನು ತರಬಹುದು. ಈ ಸಮಯದಲ್ಲಿ, ಆರ್ಥಿಕ ಲಾಭದ ಸಾಧ್ಯತೆಗಳಿವೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಚಂದ್ರನು ಶಿವನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾನೆ ಮತ್ತು ವೃಷಭ ರಾಶಿಯವರಿಗೆ ಇದು ಧನಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಲಾಗಿದೆ. ವೃಷಭದಲ್ಲಿ ಜನಿಸಿದವರು ಶಿವನ ಆಶೀರ್ವಾದ ಪಡೆಯುವ ಮಂದಿ ಆಗಿರುತ್ತಾರೆ.
ಕರ್ಕಾಟಕ ರಾಶಿ
ಈ ಶಿವರಾತ್ರಿಯು ಹಬ್ಬವು ಕರ್ಕಾಟಕ ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ವೃತ್ತಿ ಪ್ರಗತಿಯ ಅವಕಾಶಗಳು ಉದ್ಭವಿಸಬಹುದು ಮತ್ತು ವ್ಯವಹಾರದಲ್ಲಿ ತೊಡಗಿರುವವರು ಉತ್ತಮ ಲಾಭವನ್ನು ನೋಡಬಹುದು. ಆದಾಯದಲ್ಲಿ ಹೆಚ್ಚಳದ ಲಕ್ಷಣಗಳಿವೆ. ನಿಮ್ಮಲ್ಲಿ ಬಹಳ ಸಮಯದ ಭಯವೊಂದನ್ನು ನಿವಾರಿಸಿಕೊಳ್ಳುವಿರಿ. ಶಿವನ ವಿಶೇಷ ಕೃಪೆಯಿಂದ ನಿಮ್ಮ ಶತ್ರುಗಳ ವಿರುದ್ಧ ನೀವು ಜಯ ಪಡೆಯಲಿದ್ದೀರಿ.
ಮಕರ ರಾಶಿ
ಮಕರ ರಾಶಿಯವರು ಮಹಾಶಿವರಾತ್ರಿಯಂದು ಆರ್ಥಿಕ ಲಾಭವನ್ನು ಪಡೆಯಬಹುದು. ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರದ ಲಕ್ಷಣಗಳಿವೆ. ಕೆಲವು ಒಳ್ಳೆಯ ಸುದ್ದಿಗಳು ಮನಸ್ಸಿಗೆ ಸಂತೋಷವನ್ನು ತರಬಹುದು. ಜ್ಯೋತಿಷ್ಯದಲ್ಲಿ ಶನಿ ದೇವನನ್ನು ಮಕರ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಧಾರ್ಮಿಕ ನಂಬಿಕೆಯ ಪ್ರಕಾರ ಶನಿ ದೇವ ಶಿವನ ಮಹಾನ್ ಭಕ್ತ. ಹೀಗಾಗಿ ನಿಮ್ಮಲ್ಲಿದ್ದ ಶನಿ ದೋಷವು ನಿಮಗೆ ಸಮಸ್ಯೆಗಳ ತರದಂತೆ ಶಿವನ ಕೃಪೆಗೆ ನೀವು ಪಾತ್ರರಾಗುತ್ತೀರಿ. ಇದು ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕವಾಗಿ ಮತ್ತಷ್ಟು ಬಲಶಾಲಿಯಾಗಲು ಕಾರಣವಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯನ ಚಲನೆ ನೋಡಬಹುದು. ಹಾಗೆ ಕುಂಭದಲ್ಲಿ ವಿಶೇಷ ಗ್ರಹಗಳ ಸಂಯೋಗಗಳು ಹತ್ತಿರದಲ್ಲಿದೆ. ಹಾಗೆ ಶಿವನಿಂದ ಉತ್ತಮ ಲಾಭಗಳ ಪಡೆಯುವ ರಾಶಿಗಳಲ್ಲಿ ಕುಂಭ ಸಹ ಒಂದು. ನಿಮ್ಮ ದೊಡ್ಡ ಪ್ರಯತ್ನಗಳಿಗೆ ಬೆಂಬಲವಾಗಿ ಶಿವನಿರುತ್ತಾರೆ. ಆತನ ವಿಶೇಷ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಮುಖ್ಯವಾಗಿ ವ್ಯಾಪಾರಿ ವಲಯಕ್ಕೆ ಲಾಭದಾಯಕ. ಹಾಗೆ ದಾಂಪತ್ಯ ವಿಚಾರದಲ್ಲಿನ ಶುಭ ಸಂಕೇತಗಳು ಕೂಡ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications
