Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2025ರಲ್ಲಿ ಈ 6 ರಾಶಿ ಜನರು ತಮ್ಮ ವೃತ್ತಿಜೀವನದಲ್ಲಿ ಸವಾಲು ಎದುರಿಸಬಹುದು!
2025ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ನಾವು ಹಲವು ರೀತಿಯ ಸಾವಲುಗಳ ಎದುರಿಸಬೇಕಾಗಿದೆ. ನಾವು ಮುಂದಿನ ವರ್ಷ ಯಾವ ರೀತಿಯ ಆರ್ಥಿಕ ಸ್ಥಿತಿ, ಕೌಟುಂಬಿಕ ಸ್ಥಿತಿ, ಆರೋಗ್ಯ, ವೃತ್ತಿ ಹೊಂದಿರುತ್ತೇವೆ ಎಂಬುದು ಬಹಳ ಮುಖ್ಯವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಕುರಿತಂತೆ ಹಲವು ರೀತಿಯ ಗ್ರಹಗತಿಗಳ ವಿಶೇಷಣೆ ನಾವು ಕೂಡ ತಿಳಿದಿದ್ದೇವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನದಿಂದ ಒಬ್ಬರ ಭವಿಷ್ಯವನ್ನು ಊಹಿಸಲಾಗುತ್ತದೆ. ಈ ಗ್ರಹಗಳ ಸ್ಥಾನಗಳು ಪ್ರತಿ ವರ್ಷ ಭಿನ್ನವಾಗಿರುತ್ತವೆ. ಹೀಗೆ ಪ್ರತಿಯೊಬ್ಬರ ಜೀವನವೂ ಪ್ರತಿ ವರ್ಷ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುವ ಮುಖ್ಯ ವಿಷಯವೆಂದರೆ ವೃತ್ತಿಯ ಬಗ್ಗೆ.

ಏಕೆಂದರೆ ವ್ಯಾಪಾರ, ವ್ಯವಹಾರ ಚೆನ್ನಾಗಿದ್ದರೆ ಜೀವನವೇ ಸುಖಮಯವಾಗಿರುತ್ತದೆ. ಹಾಗಾದ್ರೆ 2025ರಲ್ಲಿ ಯಾವ ರಾಶಿ ಚಕ್ರದ ಜನರ ವೃತ್ತಿಯಲ್ಲಿ ನಾವು ವೃದ್ಧಿ, ಅಭಿವೃದ್ಧಿ, ಲಾಭ ನೋಡಬಹುದು. ಯಾರಿಗೆಲ್ಲಾ ಸವಾಲುಗಳು ಎದುರಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೀನ ರಾಶಿ
ಮೀನ ರಾಶಿಯವರಿಗೆ 2025ರಲ್ಲಿ ವ್ಯವಹಾರದಲ್ಲಿ ಅಡೆತಡೆಗಳು ಹೆಚ್ಚಾಗಬಹುದು. ವೃತ್ತಿ ಬದುಕಿನಲ್ಲಿ ನೀವು ಹಲವು ರೀತಿಯ ಸಮಸ್ಯೆ ಎದುರಿಸಬೇಕಾಗಬಹುದು. ಕೆಲಸದಲ್ಲಿ ಅತೃಪ್ತಿ, ಕೆಲಸವನ್ನು ಬದಲಾಯಿಸಲು ಪ್ರಯತ್ನಿಸಬಹುದು. ಜುಲೈ 2025 ರಿಂದ ನವೆಂಬರ್ 2025 ರವರೆಗೆ ಈ ರಾಶಿಚಕ್ರ ಚಿಹ್ನೆಗಳು ಅನೇಕ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಯ ಬದಲಾವಣೆಯು ನಿಮಗೆ ನಿಮ್ಮ ಸಮಸ್ಯೆಗಳ ಹೆಚ್ಚಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು 2025ರಲ್ಲಿ ತಮ್ಮ ವೃತ್ತಿಯಲ್ಲಿ ಬಡ್ತಿಯಂತಹ ಲಾಭದಿಂದ ಹೊರಗುಳಿಯಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡ, ಆತಂಕ ಹೆಚ್ಚಾಗಲಿದೆ. ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗದಿರಬಹುದು. ಹಾಗೆ ನಿಮಗೆ ಹಲವು ರೀತಿಯ ಹೊಸ ಜವಾಬ್ದಾರಿಗಳು ಇನ್ನಿಲ್ಲದ ಸಮಸ್ಯೆ ತರಬಹುದು. ನಿಮ್ಮ ಯೋಜನೆಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗದೇ ಇರಬಹುದು.
ಕನ್ಯಾ ರಾಶಿ
ಈ ರಾಶಿಯವರು 2025ರಲ್ಲಿ ಕೆಲಸಕ್ಕೆ ಸಂಬಂಧಿಸಿದ ಅತ್ಯಂತ ಕಷ್ಟಕರ ದಿನಗಳ ನೋಡಲಿದ್ದಾರೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಇರಬಹುದು. ಇದರಿಂದ ನಿಮ್ಮ ವೃತ್ತಿ ಜೀವನ ಹಲವು ರೀತಿಯ ಏರಿಳಿತದಿಂದ ಕೂಡಿರಬಹುದು. ನೀವು ಲಾಭಗಳಿಸುವಂತಹ ವೃತ್ತಿಯಲ್ಲಿದ್ದರೆ ನಿಮ್ಮ ಆದಾಯಕ್ಕೆ ಕೊಕ್ಕೆ ಬೀಳಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು 2025 ರಲ್ಲಿ ಕೆಲಸದಲ್ಲಿ ಕಷ್ಟಪಡಬೇಕಾಗಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಈ ವರ್ಷವು ಅನುಕೂಲಕರವಾಗಿರುವುದಿಲ್ಲ. ಅಲ್ಲದೆ ನೀವು ಪಾಲುದಾರಿಕೆ ವ್ಯವಹಾರಕ್ಕೆ ಮುಂದಾಗುವ ಇಚ್ಚೇ ಇಟ್ಟುಕೊಂಡಿದ್ದರೆ ಇದು ಒಳ್ಳೆಯ ಕಾಲವಲ್ಲ. ಸರ್ಕಾರಿ ನೌಕರರಲ್ಲಿ ಇದು ಸವಾಲುಗಳ ದಿನಗಳಾಗಲಿದೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುವವರು ಹೆಚ್ಚು ಶ್ರಮ ವಹಿಸಬೇಕಾಗಬಹುದು.
ಕರ್ಕ ರಾಶಿ
2025ರಲ್ಲಿ ಕರ್ಕ ರಾಶಿಯವರು ಕೆಲಸದಲ್ಲಿ ಒತ್ತಡವನ್ನು ಅನುಭವಿಸಬಹುದು. ಈ ವರ್ಷ ಕಷ್ಟಪಟ್ಟು ಕೆಲಸ ಮಾಡುತ್ತೀರಿ. ಆದರೆ ಅದು ಮೆಚ್ಚುಗೆ ಪಡೆಯುವುದಿಲ್ಲ. ವ್ಯಾಪಾರಿಗಳು ಕಡಿಮೆ ಲಾಭಕ್ಕಾಗಿ ನೆಲೆಸಬೇಕಾಗಬಹುದು. ವೃತ್ತಿಯಲ್ಲಿ ಹಲವು ರೀತಿ ಸಮಸ್ಯೆಗಳಿಗೆ ಒಳಗಾಗಬಹುದು. ನೀವು ಹೊಸ ವೃತ್ತಿ ಹುಡುಕಬೇಕಾದ ಅನಿವಾರ್ಯತೆ ನಿಮಗೆ ಬರಬಹುದು.
ಮಿಥುನ ರಾಶಿ
ಮಿಥುನ ರಾಶಿಯವರು ತಮ್ಮ ಕೆಲಸದಲ್ಲಿ ಹೊಸ ಅವಕಾಶಗಳು ಮತ್ತು ಸವಾಲುಗಳನ್ನು ಎದುರಿಸುತ್ತಾರೆ. ಉದ್ಯೋಗಿಗಳಿಗೆ ವರ್ಗಾವಣೆಗೆ ಅವಕಾಶವಿದೆ. ನಿಮ್ಮ ಎಲ್ಲಾ ವೃತ್ತಿ ಬದುಕಿನ ಒತ್ತಡದ ಜೀವನ ಇದು ಎನ್ನಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











