Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಈ 5 ರಾಶಿಯವರಿಗೆ Millionaire ಸಂಗಾತಿ ಯೋಗ! ನೇರ ಲಕ್ಸುರಿ ಲೈಫ್.. ಯಾರು ನೋಡಿ
ನಿಮ್ಮ ಸಂಗಾತಿ ಮಿಲಿಯನೇರ್ ಆಗಬೇಕಾ? ಈ 5 ರಾಶಿಯವರಿಗೆ ಇದೆ ಆ ಅದೃಷ್ಟ. ಇವರಿಗೆ ಕೋಟ್ಯಾಧಿಪತಿಯೇ ನಿಮ್ಮ ಸಂಗಾತಿ ಆಗ್ತಾರೆ. ಹೌದು, ಕೆಲವು ರಾಶಿಯವರಿಗೆ ಅತ್ಯಂತ ಶ್ರೀಮಂತ ವ್ಯಕ್ತಿಯು ಸಂಗಾತಿಯಾಗಿ ದೊರಕುವ ಯೋಗ ಇರುತ್ತದೆ. ಈ ರಾಶಿಯವರಿಗೆ ದೊಡ್ಡ ಪದವಿಯಲ್ಲಿರುವ ಸಂಗಾತಿಯನ್ನು (Rich Partner) ಆಕರ್ಷಿಸುವ ಸಾಮರ್ಥ್ಯವಿರುತ್ತದೆ. ಆ ಅದೃಷ್ಟಶಾಲಿ ರಾಶಿಗಳು ಯಾವುದು? ಯಾವ ರಾಶಿಯವರಿಗೆ 2025 ರಲ್ಲಿ ಶ್ರೀಮಂತ ಸಂಗಾತಿ ಯೋಗವಿದೆ? (Millionaire Life Partner) ಎಂಬುವುದನ್ನು ತಿಳಿಯೋಣ ಬನ್ನಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರ ಅದೃಷ್ಟವು ಮದುವೆಯ ಬಳಿಕ ಸಂಪೂರ್ಣವಾಗಿ ಬದಲಾಗುತ್ತೆ. ಮದುವೆಗೆ ಮೊದಲು ಈ ರಾಶಿಯವರ ಸ್ಥಿತಿಯು ಹೇಗೇ ಇರಲಿ, ಮ್ಯಾರೇಜ್ ಬಳಿಕ ಇವರು ಮಿಲಿಯನೇರ್ (Millionaire) ಆಗುವ ಯೋಗ ಪಡೆಯುತ್ತಾರೆ. ಕಷ್ಟ ಪಡದೆ ಸುಖಮಯ ಜೀವನ ನಡೆಸುತ್ತಾರೆ. ಪ್ರತಿ ರಾಶಿಯು ತನ್ನದೇ ಆದ ಗುಣ ಮತ್ತು ದೋಷಗಳನ್ನು ಹೊಂದಿರುತ್ತದೆ. ರಾಶಿಗಳಿಗೆ ಅನುಗುಣವಾಗಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಯಾವ ರಾಶಿಯವರಿಗೆ ಸುಲಭವಾಗಿ ಮಿಲಿಯನೇರ್ ಸಂಗಾತಿ ಸಿಗುತ್ತಾರೆ ಮತ್ತು ಐಷಾರಾಮಿ ಜೀವನ ನಡೆಸುವ ಅವಕಾಶ ಸಿಗುತ್ತದೆ ಎಂದು ನೋಡೋಣ ಬನ್ನಿ.

1. ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಇದು ಸುಖ, ಸಮೃದ್ಧಿ ಕರುಣಿಸುವ ಗ್ರಹ. ಶುಕ್ರ ಗ್ರಹದ ಕಾರಣದಿಂದಾಗಿ ವೃಷಭ ರಾಶಿಯವರು ಸ್ವಾಭಾವಿಕವಾಗಿ ಆಕರ್ಷಣೆಯ ವ್ಯಕ್ತಿತ್ವ ಹೊಂದಿರುತ್ತಾರೆ. ಈ ರಾಶಿಯವರಿಗೆ ಯಾವಾಗಲೂ ಅತ್ಯುತ್ತಮವಾದ ವಸ್ತುಗಳೇ ಇಷ್ಟವಾಗುತ್ತವೆ. ಫ್ಯಾಷನ್‌ನಿಂದ ಹಿಡಿದು ಸ್ವಾದಿಷ್ಟಕರವಾದ ಭೋಜನದವರೆಗೆ ಪ್ರತಿಯೊಂದು ವಿಚಾರಗಳಲ್ಲಿ ಇವರು ಅತ್ಯುತ್ತಮವಾದದ್ದನ್ನೇ ಇಷ್ಟಪಡುತ್ತಾರೆ. ಇವರ ಈ ಗುಣದಿಂದಾಗಿ ತಮ್ಮ ಸಂಗಾತಿಯನ್ನು ಆಕರ್ಷಿಸುತ್ತಾರೆ. ಇವರ ಸ್ಟೈಲ್ ಮತ್ತು ಆತ್ಮವಿಶ್ವಾಸವು ಇತರರನ್ನು ತಮ್ಮತ್ತ ಸೆಳೆಯುತ್ತವೆ. ಇವರು ಅತ್ಯುತ್ತಮವಾದ ದಿನಚರಿ ಹೊಂದಿರುವ ಸಂಗಾತಿಯನ್ನು ಪಡೆಯುವುದು ಗ್ಯಾರಂಟಿ.
2. ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ ದೇವ. ಈ ರಾಶಿಯವರು ಸಾಕಷ್ಟು ಶಾಂತಿಯುತ ಮತ್ತು ಬುದ್ಧಿವಂತರಾಗಿರುತ್ತಾರೆ. ಈ ರಾಶಿಯವರ ಪ್ರೀತಿಯ ಗುಣವು ಇವರ ಸಂಗಾತಿಯನ್ನು ಆಕರ್ಷಿಸುತ್ತದೆ. ಇದು ಇವರನ್ನು ಹಣಕಾಸಿಗೆ ಸಂಬಂಧಿಸಿದಂತೆ ಮತ್ತು ಭಾವನಾತ್ಮಕವಾಗಿಯೂ ಸುರಕ್ಷತೆಯನ್ನು ತಮ್ಮ ಸಂಗಾತಿಯಿಂದ ಪಡೆಯುವಂತೆ ಮಾಡುತ್ತದೆ. ಪ್ರೀತಿಯನ್ನು ಹಂಚುವ ಇವರ ಈ ಗುಣವು ಇವರ ಸಂಗಾತಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡುತ್ತದೆ. ಈ ರಾಶಿಯವರು ತಮ್ಮ ಸಂಗಾತಿಯ ಅಗತ್ಯಗಳನ್ನು ಅವರು ಹೇಳದೇ ಬಹಳ ಬೇಗನೆ ತಿಳಿದುಕೊಳ್ಳುತ್ತಾರೆ. ಹೀಗಾಗಿ, ಕಟಕ ರಾಶಿಯವರು ಮಿಲಿಯನೇರ್ ಸಂಗಾತಿಯನ್ನು ಆಕರ್ಷಿಸುತ್ತಾರೆ.
3. ಸಿಂಹ ರಾಶಿ
ಸಿಂಹ ರಾಶಿ ಗ್ರಹಗಳ ರಾಜ ಸೂರ್ಯ ದೇವನ ರಾಶಿಯಾಗಿದೆ. ಸಿಂಹ ರಾಶಿಯವರು ಬಹಳ ವಿಶೇಷವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಯಾರನ್ನೇ ಪ್ರೀತಿಸಿದರು ಅವರನ್ನು ಪಡೆಯುತ್ತಾರೆ. ಯಾವುದೇ ವಸ್ತುಗಳನ್ನು ಇಷ್ಟಪಟ್ಟರು ಅದನ್ನ ಇವರು ಜೀವನದಲ್ಲಿ ಪಡೆಯುತ್ತಾರೆ. ಅದು ಐಷಾರಾಮಿ ಜೀವನವೇ ಆಗಿರಲಿ, ಯಶಸ್ವಿ ಸಂಗಾತಿಯೇ ಆಗಿರಲಿ. ಸಿಂಹ ರಾಶಿಯವರಿಗೆ ಅದು ಸಿಗುತ್ತದೆ. ಹೀಗಾಗಿ, ಸಿಂಹ ರಾಶಿಯವರು ಶಕ್ತಿಶಾಲಿಯಾದ ವ್ಯಕ್ತಿಯನ್ನು ತಮ್ಮ ಸಂಗಾತಿಯನ್ನಾಗಿ ಬಯಸಿದರೆ, ಇವರಿಗೆ ಮಿಲಿಯನೇರ್ ವ್ಯಕ್ತಿಯನ್ನು ಮದುವೆಯಾಗುವ ಯೋಗವೂ ದೊರಕುವುದು.
4. ಕನ್ಯಾ ರಾಶಿ
ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ. ಇದು ಗ್ರಹಗಳ ರಾಜಕುಮಾರ ಮತ್ತು ಬುದ್ಧಿ ಕರುಣಿಸುವ ಗ್ರಹ. ಕನ್ಯಾ ರಾಶಿಯವರು ತಮ್ಮ ಈ ಗುಣದಿಂದಾಗಿ ಮಿಲಿಯನೇರ್ ವ್ಯಕ್ತಿಯನ್ನು ಆಕರ್ಷಿಸುವಲ್ಲಿ ಯಶಸ್ಸು ಗಳಿಸುತ್ತಾರೆ. ಕನ್ಯಾ ರಾಶಿಯವರು ಸಂಬಂಧ, ಹಣಕಾಸು, ಯೋಜನೆ ಮತ್ತು ಪ್ರಕ್ರಿಯೆಗಳನ್ನು ಉತ್ತಮವಾಗಿ ಸಮತೋಲನದಿಂದ ನಿಭಾಯಿಸುತ್ತಾರೆ. ಇವರ ಮೇಲೆ ಬುಧ ಗ್ರಹದ ವಿಶೇಷ ಪ್ರಭಾವವಿದೆ. ಹೀಗಾಗಿ, ಇವರು ಶ್ರೀಮಂತ ವ್ಯಕ್ತಿಯನ್ನು ತಮ್ಮ ಸಂಗಾತಿಯನ್ನಾಗಿ ಪಡೆಯಲಿದ್ದಾರೆ. ಇವರು ತಮ್ಮ ಸೌಂದರ್ಯದೊಂದಿಗೆ ತಮ್ಮ ಬುದ್ಧಿವಂತಿಕೆಯಿಂದಲೂ ಇತರರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿರುತ್ತಾರೆ.
5. ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಮಂಗಳ ಗ್ರಹ. ಇದು ಗ್ರಹಗಳ ರಾಜಕುಮಾರ. ಹೀಗಾಗಿ, ವೃಶ್ಚಿಕ ರಾಶಿಯವರು ಸಿರಿವಂತ ಮತ್ತು ಶಕ್ತಿಶಾಲಿ ಸಂಗಾತಿಯನ್ನು ಪಡೆಯುವುದು ಖಚಿತ.ಈ ರಾಶಿಯವರು ಯಾವಾಗಲೂ ತಮ್ಮ ಸಂಗಾತಿಯ ಬಗ್ಗೆ ಆಲೋಚಿಸುತ್ತಾರೆ. ಇವರು ಪ್ರೀತಿಯ ಹಿಂದೆ ಓಡುವುದಿಲ್ಲ. ಆದರೆ, ಸಂಗಾತಿಯನ್ನೇ ತನ್ನತ್ತ ಆಕರ್ಷಿಸುತ್ತಾರೆ. ಮಿಲಿಯನೇರ್ ಸಂಗಾತಿಯನ್ನು ಇವರು ತಮ್ಮ ಆತ್ಮವಿಶ್ವಾಸದಿಂದ ಇನ್ನಷ್ಟು ಹತ್ತಿರವಾಗಿಸಿಕೊಳ್ಳುತ್ತಾರೆ.
ಒಟ್ಟಾರೆ, ಈ ಮೇಲಿನ ರಾಶಿಯವರು ತಮ್ಮ ಮಾತಿನ ಶೈಲಿಯಿಂದಾಗಿ ಬೇಗನೆ ಎಲ್ಲರನ್ನು ಆಕರ್ಷಿಸುತ್ತಾರೆ. ದೊಡ್ಡ ಪದವಿಯಲ್ಲಿರುವ ವ್ಯಕ್ತಿಗಳನ್ನು ಬಹಳ ಬೇಗನೆ ತಮ್ಮತ್ತ ಸೆಳೆದುಕೊಳ್ಳುವವರು. ಇವರಿಗೆ ಯಾವಾಗಲೂ ಶ್ರೀಮಂತ ವ್ಯಕ್ತಿಯು ಸಂಗಾತಿಯಾಗಿ ಸಿಗುತ್ತಾರೆ. ಮದುವೆಯ ಬಳಿಕ ಈ ರಾಶಿಯವರ ಅದೃಷ್ಟವೇ ಬದಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications













