Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂರ್ಯ ಗ್ರಹಣದಲ್ಲಿ ಯಾರಿಗೆ ಆಪತ್ತು: ಯಾವ 4 ರಾಶಿಯವರು ಎಚ್ಚರಿಕೆ ವಹಿಸಬೇಕು?
ಜ್ಯೋತಿಷ್ಯದಲ್ಲಿ ಗ್ರಹಣಗಳನ್ನು ಬಹಳ ಪ್ರಮುಖ ವಿದ್ಯಮಾನವಾಗಿ ನೋಡಲಾಗುತ್ತದೆ. ಅದ್ರಲ್ಲೂ ಸೂರ್ಯ ಗ್ರಹಣವನ್ನು ಅತ್ಯಂತ ಶುಭ ಹಾಗೂ ಅಶುಭ ಕಾರಕ ಎಂದು ಕೂಡ ಪರಿಗಣಿಸಲಾಗುತ್ತದೆ. ಈ ಗ್ರಹಣದ ಸಮಯದಲ್ಲಾಗುವ ಗ್ರಹಗತಿಗಳ ಬದಲಾವಣೆಯು ಎಲ್ಲಾ ಜೀವ ರಾಶಿಗಳ ಮೇಲೆಯೂ ಪ್ರಭಾವ ಉಂಟು ಮಾಡಲಿದೆ ಎಂದು ನಂಬಲಾಗಿದೆ.
ಸೂರ್ಯನು ಒಂದು ರಾಶಿಯಲ್ಲು ಸುಮಾರು 30 ದಿನಗಳ ಕಾಳ ಪ್ರಯಾಣಿಸುತ್ತಾನೆ. ಈಗ ಸೆಪ್ಟೆಂಬರ್ 21ರಂದು ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣ ಭಾರತದಲ್ಲಿ ಗೋಚರವಾಗದೆ ಇದ್ದರೂ ಅದರಿಂದ ಉಂಟಾಗುವ ಪ್ರಭಾವವನ್ನು ನಾವೆಲ್ಲಾ ಎದುರಿಸಬಹುದು. ಸದ್ಯ ಸೂರ್ಯನು ಈಗ ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಕನ್ಯಾ ರಾಶಿಯಲ್ಲಿದ್ದಾಗಲೇ ಸೂರ್ಯ ಗ್ರಹಣ ಸಂಭವಿಸುತ್ತಿದೆ.

ಸೂರ್ಯನು ಅಕ್ಟೋಬರ್ 17ರ ವರೆಗೂ ಕನ್ಯಾ ರಾಶಿಯಲ್ಲಿರಲಿದ್ದಾನೆ. ಇನ್ನು ಈ ಗ್ರಹಣ ಸಮಯದಲ್ಲಿ ಸೂರ್ಯನ ಚಲನೆಯಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಆದ್ರೆ ಪ್ರಮುಖವಾಗಿ 4 ರಾಶಿಯವರಿಗೆ ಈ ಗ್ರಹಣ ಕಾಲವು ಅನಾನುಕೂಲತೆಗಳ ತರಲಿದೆ. ಅದ್ರಲ್ಲೂ ಹಣಕಾಸು, ಆರೋಗ್ಯ, ಕೌಟುಂಬಿ, ವೃತ್ತಿ ಜೀವನ ಸಂಬಂಧವಾಗಿ ಅಶುಭ ಇರಬಹುದು. ಹಾಗಾದ್ರೆ ಈ ಗ್ರಹಣ ಸಮಯದಲ್ಲಿ ಯಾವ ರಾಶಿಯವರಿಗೆ ಸಮಸ್ಯೆಗಳಿವೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಮಿಥುನ ರಾಶಿ
ಸೂರ್ಯ ಗ್ರಹಣದ ಸಮಯದಲ್ಲಿ ಮಿಥುನ ರಾಶಿಯ ಜನರಲ್ಲಿ ಹಲವು ರೀತಿಯ ಅನಾನುಕೂಲತೆಗಳ ನೋಡಬಹುದು. ಸೂರ್ಯನು 4ನೇ ಮನೆಯಲ್ಲಿ ಸಂಚರಿಸುತ್ತಿರುತ್ತಾನೆ. ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನದಲ್ಲಿ ಉದ್ವಿಗ್ನತೆ ಎದುರಾಗಬಹುದು. ಇದು ದಾಂಪತ್ಯ ಜೀವನದಲ್ಲೂ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ. ಹೀಗಾಗಿ ಕೌಟುಂಬಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ತಂದೆ ತಾಯಿಯ ಆರೋಗ್ಯದ ಕುರಿತಾಗಿ ಬಹಳ ಎಚ್ಚರಿಕೆ ಅಥವಾ ಕಾಳಜಿ ಇಡುವುದು ಉತ್ತಮ. ವ್ಯಾಪಾರ ಸಂಬಂಧವಾಗಿ ನೀವು ತೆಗೆದುಕೊಂಡ ಹೊಸ ನಿರ್ಧಾರಗಳು ಸಮಸ್ಯೆಗಳಾಗಿ ಕಾಡಬಹುದು.
ತುಲಾ ರಾಶಿ
ಸೂರ್ಯನು ತುಲಾ ರಾಶಿಯ 12ನೇ ಮನೆಯಲ್ಲಿ ಚಲಿಸುತ್ತಾನೆ. ಈ ಗ್ರಹಣ ಸಮಯದಲ್ಲಿ ಅಶುಭವಾಗಿ ನಿಮಗೆ ಪರಿಣಮಿಸಲಿದೆ. ಅದ್ರಲ್ಲೂ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಪ್ರೀತಿ, ದಾಂಪತ್ಯ ವಿಚಾರವಾಗಿ ನೋವು ಅನುಭವಿಸಬಹುದು. ನೀವು ಬಯಸದ ಕಾರಣಕ್ಕೆ ಹಣ ಖರ್ಚು ಮಾಡಬೇಕಾಗಿ ಬರಬಹುದು. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ. ಇದು ಮಾನಸಿಕ ಹಾನಿ ಹಾಗೂ ಮನೆಯ ವಾತಾವರಣವನ್ನು ಅಶಾಂತಿಗೆ ತಳ್ಳಲಿದೆ. ವ್ಯಾಪಾರ ವಹಿವಾಟಗಳು ನಿಧಾನವಾಗಲಿದೆ. ನಿಮ್ಮ ಸಾಲದ ಪ್ರಮಾಣ ಏರಿಕೆಯಾಗುವ ಸಂಭವೂ ಹೆಚ್ಛಾಗಲಿದೆ.
ಮಕರ ರಾಶಿ
ಸೂರ್ಯನು ಮಕರ ರಾಶಿಯ 9ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದರಿಂದ ವೃತ್ತಿ ಪರ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಅದ್ರಲ್ಲೂ ವರ್ಗಾವಣೆ, ಬಡ್ತಿ, ವೇತನ ಹೆಚ್ಚಳದಂತಹ ವಿಚಾರದಲ್ಲಿ ಹಿನ್ನಡೆ ಇದೆ. ನಿಮ್ಮ ಮೇಲೆ ಆರೋಪಗಳು, ತಪ್ಪು ಗ್ರಹಿಕೆಗಳು ಹೆಚ್ಚಾಗಬಹುದು, ಹಾಗೆ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಹೆಚ್ಚಾಗಲಿದೆ. ನಿಮ್ಮ ಹಿಂದಿನ ತಪ್ಪುಗಳಿಂದ ಮತ್ತಷ್ಟು ಹಣಕಾಸು ಸಮಸ್ಯೆಗಳು ಬರಬಹುದು. ವ್ಯಾಪಾರ ವಲಯದಲ್ಲಿ ಇದು ಹೆಚ್ಚಾಗಬಹುದು.
ಕುಂಭ ರಾಶಿ
ಸೂರ್ಯನು ಕುಂಭ ರಾಶಿಯ 8ನೇ ಮನೆಯಲ್ಲಿ ಚಲಿಸಲಿದ್ದಾನೆ. ಸೂರ್ಯ ಗ್ರಹಣದ ಸಮಯದಲ್ಲಿ ಕುಂಭ ರಾಶಿಯವರು ಪ್ರಯಾಣಗಳ ತಪ್ಪಿಸಬೇಕಾಗುತ್ತದೆ. ನಿಮ್ಮಲ್ಲಿ ಅಪಾಯಕಾರಿ ಕೆಲಸ ಮಾಡುವವರು ಕೂಡ ಎಚ್ಚರಿಕೆಯಿಂದ ಇರುವುದು ಉತ್ತಮ. ಅನಗತ್ಯ ಪ್ರಯಾಣಗಳ ಮಾಡದೆ ಇರುವುದು ಉತ್ತಮ. ಅನಾರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೆ ಇರುವುದು ಉತ್ತಮ. ಹಣಕಾಸು ಸಂಬಂಧಿ ಒತ್ತಡ ಹೆಚ್ಚಾಗಲಿದೆ. ಅದ್ರಲ್ಲೂ ಸಾಲಗಾರರಿಂದ ಮರುಪಾವತಿಗೆ ಒತ್ತಡ ಹೆಚ್ಚಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications