Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ರಾಶಿಯವರು 40ರ ನಂತರ ರಾಜನಂತೆ ಬಾಳುತ್ತಾರೆ, ಅಲ್ಲಿಯವರೆಗೆ ತಾಳ್ಮೆ ಇರಬೇಕಷ್ಟೇ
ನಮಗೆ ಒಳ್ಳೆಯ ಸಮಯ ಬಂದಾಗ ನಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗುವುದು ಎಂದು ಹೇಳುವುದನ್ನು ಕೇಳಿರಬಹುದು ಅಲ್ವಾ? ಜ್ಯೋತಿಷ್ಯಶಾಸ್ತ್ರವು ಕೂಡ ಇದನ್ನೇ ಹೇಳುತ್ತದೆ. ಕೆಲ ರಾಶಿಯವರು ಯಶಸ್ಸು ಕಾಣಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು. ಅವರು 40 ವರ್ಷ ದಾಟಿದ ಬಳಿಕ ತಮ್ಮ ಬದುಕಿನಲ್ಲಿ ತುಂಬಾ ಯಶಸ್ಸು ಕಾಣುತ್ತಾರೆ ಎಂದು ಹೇಳಲಾಗುವುದು.
ಹಾಗಾಗಿ ಆ ರಾಶಿಯವರು ನೀವಾಗಿದ್ದರೆ ಈಗ ಕೆಲ ಸವಾಲುಗಳಿದ್ದರೂ ನಲ್ವತ್ತರ ನಂತರ ನನಗೆ ಎಲ್ಲವೂ ಒಳಿತಾಗಲಿದೆ ಎಂದು ನಂಬಬಹುದು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ, ಒಳ್ಳೆಯದಾಗುತ್ತದೆ ಎಂಬುವುದು ಒಳ್ಳೆಯ ನಿರೀಕ್ಷೆ ತಾನೆ ಅಲ್ಲದೆ ಈಗ ಅಲ್ಲದಿದ್ದರೂ ಮುಂದೆ ನನಗೆ ಒಳಿತಾಗಲಿದೆ ಎಂಬ ನಿರೀಕ್ಷೆಯೇ ನಾವು ನಮ್ಮ ವೃತ್ತಿ ಜೀವನದ ಕಡೆಗೆ ಮತ್ತಷ್ಟು ಫೋಕಸ್ ನೀಡುವಂತೆ ಮಾಡುತ್ತದೆ ಅಲ್ವಾ?

ಏನೇ ಆಗಲಿ 40ರ ಪ್ರಾಯದ ನಂತರ ಯಾವೆಲ್ಲಾ ರಾಶಿಗಳಿಗೆ ರಾಜಯೋಗ ಪ್ರಾರಂಭವಾಗುವುದು ಎಂದು ನೋಡೋಣ ಬನ್ನಿ:
ಮಕರ ರಾಶಿ
ಮಕರ ರಾಶಿಯವರು ತುಂಬಾನೇ ಶ್ರಮ ಜೀವಿಗಳು, ಇವರು ತಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ನಲ್ವತ್ತರ ಪ್ರಾಯದ ನಂತರ ಇವರ ಸಮಯ ತುಂಬಾ ಚೆನ್ನಾಗಿ ಆಗುತ್ತದೆ ಎಂದು ವೈದಿಕ ಶಾಸ್ತ್ರವು ಹೇಳುತ್ತದೆ. ಇವರು ತುಂಬಾನೇ ಮಹತ್ವಾಕಾಂಕ್ಷಿಗಳು, ಇವರು ತಮ್ಮ ಗುರಿ ಮುಟ್ಟುವವರೆಗೆ ಪ್ರಯತ್ನ ಹಾಕುತ್ತಲೇ ಇರುತ್ತಾರೆ. ಅವರ ಈ ಗುಣವೇ ಅವರನ್ನು ಶ್ರೀಮಂತರನ್ನಾಗಿಸುತ್ತದೆ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಇವರು ಮೊದಲು ಕಷ್ಟ ಪಡುತ್ತಾರೆ, ಆದರೆ ನಂತರ ತುಂಬಾ ಒಳ್ಳೆಯ ಬದುಕು ನಡೆಸಲು ಸಾಧ್ಯವಾಗುವುದು.
ವೃಷಭ ರಾಶಿ
ವೃಷಭ ರಾಶಿಯವರು ತುಂಬಾ ಮಹತ್ವಾಕಾಂಕ್ಷಿಗಳು, ಅವರ ನಿರೀಕ್ಷೆಗಳು ತುಂಬಾ ದೊಡ್ಡದಾಗಿರುತ್ತದೆ, ಇವರು ಬರಿ ಕನಸು ಕಾಣುವುದು ಮಾತ್ರವಲ್ಲ ಕನಸು ಸಾಕಾರವಾಗಲು ಪ್ರಯತ್ನ ಕೂಡ ಪಡುತ್ತಾರೆ. ಇವರಿಗೆ ತಮ್ಮ ಗುರಿಗಳ ಬಗ್ಗೆ ಸ್ಪಷ್ಟ ಕಲ್ಪನೆ ಇರುತ್ತದೆ. ಅಲ್ಲದೆ ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಇವರಿಗೆ ಯಾವ ಯಶಸ್ಸು ಸುಲಭವಾಗಿ ಸಿಗುವುದಿಲ್ಲ, ಅದಕ್ಕೆ ನಿರಂತರ ಪ್ರಯತ್ನ ಹಾಕಬೇಕು ಎಂಬುವುದು ಗೊತ್ತಿರುತ್ತದೆ, ಹಾಗಾಗಿ ಪ್ರಾರಂಭದಲ್ಲಿ ಎಷ್ಟೇ ಸವಾಲು ಬಂದರೂ ಮುಂದೆ ಎಲ್ಲವೂ ಒಳಿತಾಗುವುದು ಎಂಬ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಾರೆ, ಅದು ಅವರಿಗೆ ಅತ್ಯಂತ ಉತ್ತಮ ಫಲಿತಾಂಶ ಕೂಡ ನೀಡುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತುಂಬಾ ಕಠಿಣ ಪರಿಶ್ರಮ ಪಡುವವರು. ಇವರು ತಮ್ಮ ಗುರಿ ಮುಟ್ಟಲು ಎಷ್ಟೇ ಕಷ್ಟವಾದರು ಅದನ್ನು ಸಹಿಸುತ್ತಾರೆ, ಅಲ್ಲದೆ ನಿರಂತರ ಪ್ರಯತ್ನ ಮಾಡುತ್ತಾರೆ. ಇವರಿಗೆ 40 ವರ್ಷದ ಬಳಿಕ ಒಳ್ಳೆಯ ಸಮಯ ಶುರುವಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾಗಿ ನೀವು ಈ ರಾಶಿಯವರಾದರೆ ಈಗ ಏನಾದರೂ ನಿಮ್ಮ ಬದುಕಿನಲ್ಲಿ ಸವಾಲುಗಳಿದ್ದರೆ ಚಿಂತೆ ಮಾಡಬೇಡಿ, ಖಂಡಿತ ನಿಮಗೆ ಒಳಿತಾಗಲಿದೆ. ಇವರು ಲೇಟ್ ಆದರೂ ಲೇಟೆಸ್ಟ್ ಆಗಿ ಪ್ರಗತಿಯನ್ನು ಹೊಂದುತ್ತಾರೆ, ಎಲ್ಲರೂ ಇವರನ್ನು ನೋಡಿ ಹೇಗಿದ್ದ ಹೇಗಾದ ಅನ್ನುವ ರೀತಿಯಲ್ಲಿ ಬದಲಾಗುತ್ತಾರೆ. ಪ್ರಯತ್ನ ಹಾಗೂ ತಾಳ್ಮೆ ತುಂಬಾನೇ ಮುಖ್ಯ.
ಮೀನ ರಾಶಿ
ಮೀನ ರಾಶಿಯವರು ಯಶಸ್ಸು ಕಾಣಲು ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಖಂಡಿತ ಯಶಸ್ಸು ಪಡೆಯುತ್ತಾರೆ. ಆರಂಭದಲ್ಲಿ ತಮ್ಮ ಬದುಕಿನಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬಹುದು, ಅಲ್ಲದೆ ಇವರು ಶಾರ್ಟ್‌ಕಟ್ ಇಷ್ಟಪಡಲ್ಲ, ನನಗೆ ಒಳಿತು ಆಗುತ್ತದೆ ಎಂಬ ಬಲವಾದ ನಂಬಿಕೆ ಇವರಲ್ಲಿ ಇರುತ್ತದೆ. ಇವರ ನಂಬಿಕೆಯಂತೆಯೇ 40 ನಂತರ ತಮ್ಮ ಬದುಕಿನಲ್ಲಿ ಹಲವು ಒಳ್ಳೆಯ ಬದಲಾವಣೆ ಕಾಣಬಹುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












