Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಈ 3 ರಾಶಿಯವರು ಉತ್ತಮ ಸ್ನೇಹಿತರಾಗಿರುವುದಿಲ್ಲ..! ಅವರ ಬಗ್ಗೆ ಎಚ್ಚರಿಕೆಯಿಂದಿರಿ!
ಪ್ರತಿಯೊಬ್ಬರು ಜೀವನದಲ್ಲಿ ಸ್ನೇಹಿತರ ಪಡೆದಿರುತ್ತಾರೆ. ಕೆಲವರ ಸ್ನೇಹ ಬಹಳ ವರ್ಷಗಳಿಂದಲೂ ಕೊನೆಯವರೆಗೂ ಸಾಗಲಿದೆ, ಹಾಗೆ ಮತ್ತೆ ಕೆಲವರು ಒಂದಿಷ್ಟು ವರ್ಷ, ತಿಂಗಳ ಕಾಲ ಮಾತ್ರ ಸ್ನೇಹಿತರಾಗಿ ಮುಂದುವರೆಯುತ್ತಾರೆ. ವ್ಯಕ್ತಿಯೊಬ್ಬ ಮನೆಗಿಂತಲೂ ಹೆಚ್ಚು ಸ್ನೇಹಿತರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ವ್ಯಕ್ತಿಯೊಬ್ಬರು ತಮ್ಮ ಸುತ್ತ ಉತ್ತಮ ಸ್ನೇಹಿತರ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
ಸಂಬಂಧಕ್ಕಿಂತ ಮುಖ್ಯವಾಗಿ ವ್ಯಕ್ತಿಗೆ ಒಳ್ಳೆಯ ಸ್ನೇಹಿತರು ಇರಬೇಕು ಎಂದು ಹೇಳಲಾಗುತ್ತದೆ. ವ್ಯಕ್ತಿಯೊಬ್ಬರ ಜೀವನದ ಪ್ರಮುಖ ಘಟ್ಟದಲ್ಲಿ ಅಥವಾ ಮುಖ್ಯ ತಿರುವಿಗೆ ಅವರು ಕಾರಣರಾಗಬಹುದು. ಆದ್ರೆ ಒಬ್ಬ ವ್ಯಕ್ತಿಯ ಗುಣಗಳು ಆತನ ಸ್ನೇಹಿತರ ಸಂಗದಿಂದಲೂ ನಿರ್ಧಾರವಾಗುತ್ತವೆ. ಹಾಗೆ ಸ್ನೇಹಿತರ ಗುಣಗಳನ್ನು ಕೂಡ ನಾವು ಪರಿಗಣಿಸಿ ವ್ಯಕ್ತಿಯ ವ್ಯಕ್ತಿತ್ವ ಅರಿಯಬಹುದು.

ಅದರಲ್ಲೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಯಾವೆಲ್ಲಾ ರಾಶಿಯವರು ನಿಮಗೆ ಕೆಟ್ಟ ಸ್ನೇಹಿತರಾಗಿ ಬದಲಾಗಬಹುದು. ಹಾಗಾದ್ರೆ ಯಾವ ರಾಶಿಯಲ್ಲಿ ಜನಿಸಿದವರು ನಿಮಗೆ ಸಮಸ್ಯೆ ತರುವಂತಹ ಸ್ನೇಹಿತರಾಗಬಹುದು? ಯಾರೆಲ್ಲಾ ಅಪಾಯಕಾರಿ ಸ್ನೇಹಿತರು ಎಂದು ಪರಿಗಣಿಸಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯವರು ತಮ್ಮ ಮೊಂಡುತನ ಮತ್ತು ತೀವ್ರ ಸ್ಪರ್ಧಾತ್ಮಕತೆಗೆ ಹೆಸರಾದವರು. ಹೀಗಾಗಿ ಮೇಷ ರಾಶಿಯ ಮಂದಿ ಕೆಲವರಿಗೆ ಕೆಟ್ಟ ಸ್ನೇಹಿತರಾಗೊ ಬದಲಾಗಬಹುದು. ಈ ರಾಶಿಯ ಜನರು ಒಂದೇ ನಿರ್ಧಾರಕ್ಕೆ ಯಾವಾಗಲು ಅಂಟಿಕೊಳ್ಳುವುದಿಲ್ಲ ಬದಲಾಗಿ ಆಗಾಗ ತಮ್ಮ ನಿರ್ಧಾರ ಬದಲಿಸಲಿದ್ದಾರೆ ಇದು ಸ್ನೇಹಿತರ ದೃಷ್ಟಿಯಿಂದ ಸಮಸ್ಯೆಗಳ ತರಬಹುದು. ಅವರು ಬಹುಬೇಗ ತಾಳ್ಮೆ ಕಳೆದುಕೊಳ್ಳುತ್ತಾರೆ. ಯಾವಾಗಲು ಕೋಪ, ಸಿಟ್ಟು ಹೊಂದಿರುವರಾಗುತ್ತಾರೆ. ಹೀಗಾಗಿ ಮೇಷ ರಾಶಿಯವರು ಉತ್ತಮ ಸ್ನೇಹಿತರು ಎನಿಸಿಕೊಳ್ಳಲು ಕಷ್ಟಪಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರು ಬುದ್ಧಿಮತ್ತೆಯ ಗ್ರಹವಾದ ಬುಧನಿಂದ ಆಳಲ್ಪಡುತ್ತಾರೆ, ಆದ್ದರಿಂದ ಅವರು ಸಮಸ್ಯೆಗಳಿಗೆ ಪರಿಹಾರ ನೀಡುವ ಮಂದಿಯಾಗುತ್ತಾರೆ. ಆದ್ರೆ ಇದೇ ಗುಣ ಅವರನ್ನು ಸಂಕಷ್ಟಕ್ಕೂ ತಳ್ಳಬಹುದು. ಸ್ವಾರ್ಥ ಹಾಗೂ ಆಗಾಗ ತಮ್ಮ ಮನಸ್ಸು ಬದಲಿಸುವ ಗುಣ ಹೊಂದಿರುತ್ತಾರೆ. ಹಾಗೆ ಕೆಲವು ಅಭ್ಯಾಸಗಳು ಬೇರೆಯವರ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಿಥುನ ರಾಶಿಯವರು ಸ್ನೇಹಿತರಾಗಿ ಉತ್ತಮ ಹೆಸರು ಗಳಿಸೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ನಿಷ್ಠಾವಂತರು ಆದರೆ ತೀವ್ರವಾಗಿ ಸೇಡು ತೀರಿಸಿಕೊಳ್ಳುವ ಸ್ವಭಾವದವರು. ಅವರ ಈ ವಿಭಿನ್ ಗುಣಗಳು ಅವರನ್ನು ಕೆಟ್ಟ ಸ್ನೇಹಿತರನ್ನಾಗಿ ಮಾಡಬಹುದು. ಅವರು ಸಣ್ಣ ವಿಷಯಗಳಿಗೂ ಅಸಮಾಧಾನವನ್ನು ಹೊಂದುವ ಗುಣ ಹೊಂದುತ್ತಾರೆ. ಹಾಗೆ ಎಲ್ಲಾ ವಿಚಾರದಲ್ಲಿಯೂ ಭಿನ್ನ ಅಭಿಪ್ರಾಯಗಳ ಹೊರಹಾಕುತ್ತಾರೆ. ನಿಮ್ಮ ಸ್ನೇಹವು ಇತರರಿಗೆ ಬಹಳ ಅಶಾಂತಿ ಹಾಗೂ ಅಲ್ಪ ಸಂತೋಷಕ್ಕೆ ಕಾರಣವಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











