Latest Updates
-
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು
ಈ 3 ರಾಶಿಯವರಲ್ಲಿ ಹಣಕಾಸು ವಿಚಾರವಾಗಿ ತೊಡಕು ಹೆಚ್ಚು..! ನಿಮ್ಮ ರಾಶಿಯೂ ಇದೆಯೇ.?
ವ್ಯಕ್ತಿಯೊಬ್ಬ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಅಂದರೆ ಮೊದಲು ಹಣವಿರಬೇಕು ಎಂಬುದಂತು ನಿಜ. ಆತನ ಕೈಯಲ್ಲಿ ಹಣವಿದ್ದರೆ ಏನಾದರು ಸಾಧನೆ ಮಾಡಬಹುದು. ಹಾಗೆ ಹಣ ಗಳಿಸಲು ಕೂಡ ಇಡೀ ಜೀವನ ಸವೆಸಬೇಕಾಗುತ್ತದೆ. ಕೆಲವರು ಏನೆ ಕೆಲಸ ಮಾಡಿದರು ಅವರಿಗೆ ಹಣ ಬಹಳ ಬೇಗ ಸಿಗುತ್ತದೆ. ಅದು ಯಶಸ್ಸಿನ ಮೂಲವಾಗುತ್ತದೆ. ಆದ್ರೆ ಮತ್ತೆ ಕೆಲವರು ಯಾವುದೇ ಕಲಸ ಮಾಡಿದರು ಹಣ ಕೈಯಲ್ಲಿ ನಿಲ್ಲುವುದೇ ಇಲ್ಲ. ಅವರಿಗೆ ಎಲ್ಲವೂ ನಷ್ಟದ ಮೂಲವಾಗಿ ಕಾಣಿಸುತ್ತಿರುತ್ತದೆ.
ಇನ್ನು ಕೆಲವು ರಾಶಿ ಜನರು ಈ ಹಣಕಾಸು ವಿಚಾರದಲ್ಲಿ ದುರಾದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಅವರು ಯಾವುದೇ ಕೆಲಸ ಮಾಡಿದರು ಅವರಿಗೆ ಹಣ ಸಿಗುವುದು ಕಷ್ಟವಾಗುತ್ತಾ ಸಾಗುತ್ತದೆ. ಅಂದುಕೊಂಡ ಕೆಲಸದಲ್ಲಿ ತೊಡಕಾಗುವುದು, ಹಣ ಕೈಸೇರದೆ ಸಾಲ ಹೆಚ್ಚಾಗುವುದು, ಹಣಕ್ಕೆ ಸಂಬಂಧಿಸಿದಂತೆ ನೀವು ಹಲವು ವ್ಯಾಪಾರ ವ್ಯವಹಾರ ನಡೆಸಿದರು ಅದರಿಂದ ಹಣ ಸಿಗದೆ ಇರುವುದು ಕೂಡ ನೋಡಬಹುದು.

ಕೆಲವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಎಷ್ಟೇ ವೇತನ ಬರುವ ಕೆಲಸ ಮಾಡಿದರು ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ ಹಾಗಾದ್ರೆ ಹಣಕಾಸು ವಿಚಾರದಲ್ಲಿ ಜೀವನದ ಉದ್ದಕ್ಕೂ ಸಮಸ್ಯೆಗಳ ಎದುರಿಸುವ ರಾಶಿಗಳು ಯಾವುದು? ಯಾರೆಲ್ಲಾ ಇಂತಹ ಸಮಸ್ಯೆಯನ್ನು ಪದೇ ಪದೇ ಎದುರಿಸುತ್ತಾರೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಕನ್ಯಾರಾಶಿಯ ಮಂದಿ ಈ ಹಣಕಾಸು ವಿಚಾರದಲ್ಲಿ ಬಹಳಷ್ಟು ಅಡೆತಡೆಗಳ ಎದುರಿಸುತ್ತಾರೆ. ಅವರು ಯಾವುದೇ ಕೆಲಸ ಮಾಡಿದರೂ ಹಣ ತಮ್ಮ ಕೈಯಲ್ಲಿ ನಿಲ್ಲದಾಗುತ್ತದೆ. ಹಣವಿದ್ದಾಗಲೆಲ್ಲ ಯಾವುದಾದರು ಕೆಲಸಕ್ಕೆ ವಿನಿಯೋಗ ಮಾಡಬೇಕಾದ ಅನಿವಾರ್ಯತೆ ಅವರಿಗೆ ಬರುತ್ತದೆ. ಹಾಗೆ ಹಣ ಸಂಪಾದಿಸಿದಷ್ಟು ಅವರಲ್ಲಿ ಖರ್ಚು ಕೂಡ ಹೆಚ್ಚುತ್ತಲೇ ಹೋಗುತ್ತದೆ. ಉಳಿತಾಯ ಮಾಡಿದ ಹಣವನ್ನು ಮತ್ತೊಂದು ವಿಚಾರಕ್ಕೆ ಬಳಸುವುದು, ವ್ಯಯಿಸುವುದು ನೋಡಬಹುದು. ಹಾಗೆ ಅವರಲ್ಲಿ ಐಷಾರಾಮಿ ಕನಸುಗಳು ಒಂದಿಷ್ಟು ಹಣ ಖರ್ಚಾಗುವಂತೆ ಮಾಡುತ್ತದೆ.
ಧನು ರಾಶಿ
ಧನು ರಾಶಿಯವರ ಸ್ವತಂತ್ರವಾಗಿ ಜೀವಿಸಲು ಇಷ್ಟಪಡುವ ಮಂದಿಯಾಗಿದ್ದಾರೆ. ಹೀಗಾಗಿ ಅವರು ಹಣಕ್ಕಿಂತ ಸಂಬಂಧಗಳು, ಕೆಲಸವೇ ಮುಖ್ಯ ಎಂದು ತಿಳಿದಿರುತ್ತಾರೆ. ಈ ವೇತನದಿಂದ ಅಥವಾ ಆದಾಯವು ಅವರ ಜೀವನಕ್ಕೆ ಅಥವಾ ಬದುಕು ನಡೆಸಲು ಸಾಕಾಗುತ್ತಿಲ್ಲ ಎಂಬ ಭಾವನೆ ಇದ್ದರೂ ಅವರು ಹೆಚ್ಚು ಹಣ ಸಂಪಾದನೆಯ ಕುರಿತು ವಿಶೇಷ ಆಸಕ್ತಿ ಹೊಂದಿರುವುದಿಲ್ಲ. ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಇದ್ದರೂ ಕೂಡ ಖರ್ಚುಗಳ ಕಡೆಗೆ ಹೆಚ್ಚು ಗಮನವಿಡುವುದಿಲ್ಲ ಹೀಗಾಗಿ ಅವರಲ್ಲಿ ಹಣಕಾಸು ವಿಚಾರದಲ್ಲಿ ಅಡೆತಡೆ, ತೊಡಕು ನೋಡಬಹುದು.
ಮೀನ ರಾಶಿ
ಮೀನ ರಾಶಿಯವರು ಯಾವಾಗಲೂ ಹಣದ ಹಿಂದೆ ಓಡುವುದಿಲ್ಲ, ಅವರು ಹಣದ ಹಸಿವುಳ್ಳವರಲ್ಲ. ಬದಲಾಗಿ ಸೃಜನಶೀಲರಾಗಿ ಹಣ ಸಂಪಾದನೆ ಹಾಗೂ ಹಣ ಖರ್ಚು ಮಾಡಕು ಮುಂದಾಗುತ್ತಾರೆ. ಇಂದು ಶ್ರಮ ವಹಿಸಿ ದುಡಿದರೆ ಮುಂದೆ ಕುಳಿತು ತಿನ್ನಬಹುದು ಎಂಬುದನ್ನು ನಂಬುವುದಿಲ್ಲ ಬದಲಿಗೆ ಅಂದು ದುಡಿಮೆ ಅಂದಿನ ಖರ್ಚು ಎಂದು ನಂಬಿರುತ್ತಾರೆ. ಹಾಗಾಗಿ ಹಣಕಾಸಿನ ಸಮಸ್ಯೆಯಲ್ಲೂ ಅವರು ಹೆಚ್ಚು ಒತ್ತಡಕ್ಕೆ ಒಳಗಾಗುದಿಲ್ಲ. ಹಾಗೆ ಹಣ ಸಂಗ್ರಹಿಸಿಡುವುದು, ಉಳಿತಾಯ, ಪಿಂಚಣಿ ಇಂತಹ ಯಾವುದೇ ವಿಚಾರದಲ್ಲೂ ಅವರಿಗೆ ಆಸಕ್ತಿ ಇರುವುದಿಲ್ಲ, ಆಸ್ತಿ ಮಾಡುವ ಆಸೆ ಇದ್ದರೂ ಹಲವು ಸಮಸ್ಯೆಗಳು ಅವರನ್ನು ದೂರ ಇಡುತ್ತದೆ. ಹೀಗಾಗಿ ಹಣ ಅವರ ಕೈ ಸೇರುವುದು ಕಷ್ಟವಾಗುತ್ತಿರುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











