Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಕೊನೆಯ ಸೂರ್ಯಗ್ರಹಣದಲ್ಲಿದೆ ಕೆಡುಕು: ಯಾವ ರಾಶಿಯವರಲ್ಲಿ ಕಂಟಕ!
ಗ್ರಹಣವನ್ನು ವೈದಿಕ ಜ್ಯೋತಿಷ್ಯದಲ್ಲಿ ಬಹಳ ಮುಖ್ಯ ಅಂಶವೆಂದು ಪರಿಗಣಿಸಲಾಗುತ್ತದೆ. ಗ್ರಹಗಣದ ಸಮಯದಲ್ಲಿ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸುತ್ತಿದೆ. ಭಾರತದಲ್ಲಿ ಈ ಗ್ರಹಣ ಗೋಚರ ಆಗದೆ ಇದ್ದರೂ ಅದರ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಸೆಪ್ಟೆಂಬರ್ 21 ಮತ್ತು 22 ರಂದು ಸೂರ್ಯಗ್ರಹಣ ಸಂಭವಿಸುತ್ತಿದೆ.
ಸೆಪ್ಟೆಂಬರ್ 21, 2025 ರ ಭಾನುವಾರ ಅಮಾವಾಸ್ಯೆಯ ದಿನದಂದು ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಇದೇ ದಿನ ಪಿತೃ ಪಕ್ಷ ಆಚರಿಸುವ ಮಹಾಲಯ ಅಮಾವಾಸ್ಯೆ ಕೂಡ ಬಂದಿದೆ. ಹೀಗಾಗಿ ಗ್ರಹಣ ಹಾಗೂ ಅಮಾವಾಸ್ಯೆಯನ್ನು ಬಹಳ ಪ್ರಮುಖ ವಿದ್ಯಮಾನವೆಂದು ಹಾಗೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶವೆಂದು ಪರಿಗಣಿಸಲಾಗುತ್ತದೆ.

ಈ ಕೊನೆಯ ಸೂರ್ಯಗ್ರಹಣವು ಸೆಪ್ಟೆಂಬರ್ 22 ರ ಸೋಮವಾರ ಬೆಳಗ್ಗೆ 3:24 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಒಟ್ಟು 4 ಗಂಟೆ 24 ನಿಮಿಷಗಳ ಕಾಲ ಇರುತ್ತದೆ. ಹಾಗೆ ಈ ಗ್ರಹಣ ಸಮಯದಲ್ಲಿ ಹಲವು ರಾಶಿಗಳು ಅದರ ಪ್ರಭಾವಕ್ಕೆ ಒಳಗಾಗುವುದು ನೋಡಬಹುದು. ಯಾವ ರಾಶಿಗಳಿಗೆ ಅಮಾವಾಸ್ಯೆಯ ಈ ಗ್ರಹಣ ಯಾವೆಲ್ಲಾ ರೀತಿಯಲ್ಲಿ ಹಾನಿ ಉಂಟು ಮಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
2025 ರ ಕೊನೆಯ ಸೂರ್ಯಗ್ರಹಣದ ಪರಿಣಾಮ ಮಿಥುನ ರಾಶಿ ಜನರ ಮೇಲೆ ನಕಾರಾತ್ಮಕವಾಗಿರುತ್ತದೆ. ನಿಮ್ಮ ವೃತ್ತಿ ಜೀವನ ಹಾಗೆ ಆರ್ಥಿಕ ವಿಚಾರವಾಗಿ ಬಹಳ ಅನುಕೂಲಕರ ದಿನವಾಗಿರಲಿದೆ. ಹಾಗೆ ನಿಮ್ಮ ಹಲವು ಕೆಲಸಗಳಲ್ಲಿ ಅಡೆತಡೆ ನೋಡಬಹುದು. ಅವಿವಾಹಿತರಿಗೆ ವಿವಾಹ ಸಂಬಂಧವಾಗಿ ಮತ್ತೆ ಅಡ್ಡಿಗಳು ಎದುರಾಗಬಹುದು. ಯಾವುದೇ ರೀತಿಯ ವಹಿವಾಟು ಮತ್ತು ವಿವಾದವನ್ನು ತಪ್ಪಿಸಿ. ವ್ಯಾಪಾರ, ವ್ಯವಹಾರ ಸಂಬಂಧಿಸಿದಂತೆ ನೀವು ಸುಲಭವಾಗಿ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಆಸ್ತಿ, ವಾಹನ ಸಂಬಂಧವಾಗಿ ಅಡ್ಡಿಗಳಿವೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಕಠಿಣ ದಿನಗಳು ಎದುರಾಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ಗ್ರಹಣದ ಸಮಯದಲ್ಲಿ ಬಹಳಷ್ಟು ಸಂಕಷ್ಟದ ಕಾಲ ಎನ್ನಬಹುದು. ನಿಮ್ಮ ಉದ್ಯೋಗ, ವ್ಯವಹಾರ, ಆರೋಗ್ಯ, ಆರೋಗ್ಯ ಸಮಸ್ಯೆ, ಎದುರಿಸಬಹುದು. ನಿಮ್ಮ ಉಳಿತಾಯದ ಹಣವನ್ನು ನೀವು ಬೇರೆ ವಿಚಾರಗಳಿಗೆ ಬಳಸಬೇಕಾಗಿ ಬರಬಹುದು. ಸಂಬಂಧಗಳಲ್ಲಿ ನೋವು ಅಥವಾ ಮನಸ್ತಾಪ ಎದುರಿಸಬಹುದು. ಬಹಳ ಕಾಲದಿಂದ ನೀವು ಎದುರಿಸಿದ್ದ ಸಮಸ್ಯೆಗಳು ಮತ್ತಷ್ಟು ದೊಡ್ಡದಾಗಬಹುದು. ಅನಗತ್ಯ ವಿವಾದಗಳನ್ನು ತಪ್ಪಿಸುವುದು ಒಳಿತು. ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ.
ಮೀನ ರಾಶಿ
ಈ ಗ್ರಹಣವು ನಿಮಗೆ ಆರ್ಥಿಕವಾಗಿ ಹಾನಿಕಾರಕವೆಂದು ಸಾಬೀತುಪಡಿಸಬಹುದು. ಹೂಡಿಕೆಗಳಲ್ಲಿ, ವ್ಯಾಪಾರ ವಲಯದಲ್ಲಿ ನಷ್ಟವಾಗುವ ಭೀತಿ ಇದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಮಕ್ಳಳ ಭವಿಷ್ಯದ ಕುರಿತಾದ ಒತ್ತಡ ಹೆಚ್ಚಾಗಲಿದೆ. ಯಾವುದೇ ರೀತಿಯ ಪಾಲುದಾರಿಗೆ ವ್ಯವಹಾರಗಳ ಮಾಡಬೇಡಿ. ಸರ್ಕಾರಿ ದಾಖಲೆ ಪತ್ರಗಳು, ಆಸ್ತಿ ವ್ಯಾಜ್ಯ, ನ್ಯಾಯಾಲಯ ಕುರಿತ ಸಮಸ್ಯೆಗಳು ಬಗೆಹರಿಯುವುದು ತಡೆಯಾಗಬಹುದು. ನಿಮ್ಮ ಉಳಿತಾಯಗಳಲ್ಲಿ ಇಳಿಕೆ ನೋಡಬಹುದು. ಬಹಳ ಸಮಯದಿಂದ ಕಾಪಾಡಿಕೊಂಡು ಬಂದಿದ್ದ ವಸ್ತುವೊಂದು ನಿಮ್ಮ ಕೈಯಿಂದ ದೂರಾಗಬಹುದು. ಸಾಲ ಪಡೆಯುವ ಪ್ರಯತ್ನದಲ್ಲಿ ಯಶಸ್ಸು ಸಿಗದೆ ಇರಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications