Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ವೃಷಭ ರಾಶಿಫಲ 2026: ಈ ವರ್ಷ ವೃಷಭ ರಾಶಿಯವರಿಗೆ ಏನೆಲ್ಲಾ ಶುಭವಿದೆ?
2025ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಹಾಗೆ 2025ರಲ್ಲಿ ವೃಷಭ ರಾಶಿಯವರು ಹಲವು ರೀತಿಯ ಶುಭ ಹಾಗೂ ಅಶುಭ ಯೋಗಗಳ ಅನುಭವಿಸಿರುವುದು ನೋಡಬಹುದು. ಹಾಗೆ 2026ರಲ್ಲಿ ಈ ರಾಶಿಗಳಲ್ಲಿ ಅದ್ಭುತವಾದ ಅದೃಷ್ಟ ಸಹ ನೋಡಬಹುದು. 2026ರ ಆರಂಭದಲ್ಲಿ ನಾವಿಂದು ವೃಷಭ ರಾಶಿ ಅವರ ಆರೋಗ್ಯ, ಹಣಕಾಸು, ದಾಂಪತ್ಯ, ವ್ಯವಹಾರ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವರ ಗ್ರಹಗತಿಗಳು ಏನು ಹೇಳುತ್ತವೆ ಅನ್ನೋದನ್ನು ತಿಳಿದುಕೊಳ್ಳೋಣ.

ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ವಿಚಾರದಲ್ಲಿ ವೃಷಭ ರಾಶಿಯವರಿಗೆ 2026ನೇ ವರ್ಷವೂ ಮಿಶ್ರಫಲವನ್ನು ತರಲಿದೆ. ಈ ವರ್ಷದಲ್ಲಿ ನಿಮಗೆ ಉದರ ಸಂಬಂಧಿತ ಒಂದಿಷ್ಟು ಚಿಂತೆಗಳಿವೆ. ಅದ್ರಲ್ಲೂ ಹೃದಯ ಕಾಯಿಲೆ, ಶ್ವಾಸಕೋಶ ಸಮಸ್ಯೆ, ಉಸಿರಾಟ ಸಂಬಂಧಿತ ವಿಚಾರದಲ್ಲಿ ಅಡೆತಡೆಗಳಂತಹ ವಿಚಾರದಿಂದ ನೀವು ಬಹಳಷ್ಟು ದಣಿಯಬಹುದು. ಇದೆಲ್ಲವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.
ವೃಷಭ ರಾಶಿವರಿಗೆ 2026ರಲ್ಲಿದೆ ಸಾಮಾಜಿಕ ಯಶಸ್ಸು
2026 ರಲ್ಲಿ ವೃಷಭ ರಾಶಿಯವರಿಗೆ ಸಾಮಾಜಿಕ ಕಾರ್ಯಗಳಲ್ಲಿ ಅನುಕೂಲಕರ ವಾತಾವರಣಗಳಿವೆ. ನಿಮ್ಮ ಸಮಾಜಮುಖಿ ಕಾರ್ಯಗಳು ನಿಮಗೆ ಗೌರವ ತರಲಿದೆ. ನಿಮ್ಮಿಂದಾಗಿ ದೊಡ್ಡ ದೊಡ್ಡ ಕೆಲಸಗಳು ನಡೆಯಲಿವೆ. ಸಾಮಾಜಿಕ ವಿಚಾರದಲ್ಲಿನ ದೊಡ್ಡ ಕೆಲಸಗಳಲ್ಲಿ ನಿಮಗೆ ಯಶಸ್ಸಿದೆ.
ಆರ್ಥಿಕ ಯಶಸ್ಸು
ವೃಷಭ ರಾಶಿ ಜನರಿಗೆ ಈ ವರ್ಷ ಆರ್ಥಿಕ ಲಾಭವಿದೆ. ಹಠಾತ್ ಆರ್ಥಿಕ ಲಾಭಗಳು ಉಂಟಾಗುತ್ತವೆ. ನಿಮ್ಮ ಹಲವು ವರ್ಷದ ದೊಡ್ಡ ಕೆಲಸವೊಂದನ್ನು ಈ ವರ್ಷ ಮಾಡಿ ಮುಗಿಸುವಿರಿ. ಅದ್ರಲ್ಲೂ ಬಹಳಷ್ಟು ಕೆಲಸಗಳಿಗೆ ಅಡ್ಡಿಯಾಗಿದ್ದ ಹಣಕಾಸಿನ ವಿಚಾರಗಳು ಬಗೆಹರಿಯಲಿವೆ. ಯಾರಿಂದಾದರು ನಿಮಗೆ ಹಣ ಬರುವುದು ಬಾಕಿ ಉಳಿಸಿಕೊಂಡಿದ್ದರೆ ಅಥಾ ದೊಡ್ಡ ಮೊತ್ತವೊಂದು ಸಿಲುಕಿದ್ದರೆ ಈ ವರ್ಷ ಅದರಿಂದ ಮುಕ್ತಿ ಪಡೆಯುತ್ತೀರಿ.
ವ್ಯಾಪಾರ ವ್ಯವಹಾರ ಸಂಬಂಧವಾಗಿ ಈ ವರ್ಷ ಸಹ ನಿಮಗೆ ಅನುಕೂಲಕರವಾಗಿರಲಿದೆ. ನಿಮ್ಮ ಹೊಸ ಆದಾಯ ಮೂಲದಿಂದ ಲಾಭ ನೋಡಬಹುದು. ಅದ್ರಲ್ಲೂ ಹೊಸದಾಗಿ ಆರಂಭಿಸಿದ್ದ ವ್ಯಾಪಾರಗಳು ಶುಭವಾಗಿ ಪರಿಣಮಿಸಲಿದೆ. ಹಾಗೆ ಪಾಲುದಾರಿಕೆಯಲ್ಲಿಯೂ ಲಾಭವಿದೆ. ಆದ್ರೆ ವರ್ಷದ ಕೊನೆ ಅರ್ಧ ಭಾಗದಲ್ಲಿ ಶ್ರಮ ಹೆಚ್ಚಾಗುತ್ತದೆ. ಪ್ರಮುಖ ಕೆಲಸವೊಂದರಿಂದ ನೀವು ಹಿಂದೆ ಸರಿಯಬಹುದು.
ದಾಂಪತ್ಯ ಮತ್ತು ಕುಟುಂಬ
ವೃಷಭ ರಾಶಿಯವರಿಗೆ ಈ ವರ್ಷ ದಾಂಪತ್ಯ ವಿಚಾರವಾಗಿ ಹಾಗೆ ಕೌಟುಂಬಿಕ ವಿಚಾರದಲ್ಲಿ ಮಿಶ್ರಫಲ ನೋಡಬಹುದು. ನೀವು ವಿವಾಹಿತರಾಗಿದ್ದರೆ ದಾಂಪತ್ಯ ವಿಚಾರದಲ್ಲಿ ಶುಭವಾಗುತ್ತದೆ. ಹಾಗೆ ಕೌಟುಂಬಿಕ ಮಟ್ಟದಲ್ಲಿ ಬಹುತೇಕ ನಿಮ್ಮ ಬಯಕೆಯಂತೆ ಅಥವಾ ಅಂದುಕೊಂಡಂತಹ ಕೆಲಸಗಳನ್ನು ಮಾಡಿ ಮುಗಿಸಬಹುದು. ಇನ್ನು ಹೊಸದಾಗಿ ಮನೆ ನಿರ್ಮಾಣ ಮತ್ತು ವಾಹನ ಖರೀದಿ ಸಂಬಂಧಿತ ವಿಚಾರಗಳು ವೇಗ ಪಡೆದುಕೊಳ್ಳುತ್ತವೆ. ಸೌಕರ್ಯ ಸಂಪನ್ಮೂಲಗಳ ಮೇಲಿನ ಖರ್ಚುಗಳು ಹೆಚ್ಚಾಗುತ್ತವೆ. ಮನೆಯಿಂದ ದೂರ ಕೆಲಸ ಮಾಡಲು ನಿಮಗೆ ಅವಕಾಶವಿರುತ್ತದೆ. ಭೂಮಿ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ಒತ್ತಡದ ಸಂದರ್ಭಗಳು ಉಂಟಾಗಬಹುದು.
ಆರ್ಥಿಕ ಯೋಗಕ್ಷೇಮವು ಕಳೆದ ವರ್ಷಕ್ಕಿಂತ ಬಲವಾಗಿರುತ್ತದೆ. ವ್ಯವಹಾರದಲ್ಲಿ ಪ್ರಗತಿ ಮತ್ತು ಬದಲಾವಣೆ ಇರುತ್ತದೆ. ಉದ್ಯೋಗದಲ್ಲಿರುವವರಿಗೆ ಸ್ಥಳಾಂತರಗೊಳ್ಳುವ ಅವಕಾಶವಿರಬಹುದು. ಹಾಗೆ ನಿರುದ್ಯೋಗಿಗಳು ಸಹ ಈ ವರ್ಷ ಕಠಿಣ ಪರಿಶ್ರಮದ ಮೂಲಕ ಉತ್ತಮ ಲಾಭದಾಯಕ ಕೆಲಸ ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications