Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2025ರ ವೃಷಭ ರಾಶಿಯ ಭವಿಷ್ಯ: ಬರುವ ಹೊಸ ವರ್ಷ ನಿಮ್ಮ ವೃತ್ತಿ, ಹಣಕಾಸು, ಕುಟುಂಬ ಜೀವನ ಚೆನ್ನಾಗಿರಲಿದೆ
ವೃಷಭ ರಾಶಿ 2025ರ ಭವಿಷ್ಯ ಕುರಿತು ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ, ವೃತ್ತಿ ಬದುಕು, ಹಣಕಾಸು, ಕುಟುಂಬ ಜೀವನ, ಆರೋಗ್ಯ ಹೇಗಿರಲಿದೆ ಈ ಎಲ್ಲರ ಬಗ್ಗೆ ಹೊಸ ವರ್ಷದ ಭವಿಷ್ಯ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:
ವೃತ್ತಿ ಬದುಕು
ವೃತ್ತಿ ಜೀವನದ ದೃಷ್ಟಿಯಿಂದ ನೋಡುವುದಾದರೆ ಹೊಸ ವರ್ಷವು ನಿಮಗೆ ತುಂಬಾನೇ ಚೆನ್ನಾಗಿರಲಿದೆ ಎಂದು ಹೇಳಲಾಗುವುದು. ಏಕೆಂದರೆ ಗುರುವಿನ ಸ್ಥಾನ ನಿಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿರಲಿದೆ. ಹೊಸ ವರ್ಷದಲ್ಲಿ ಉದ್ಯೋಗ ಬದಲಾವಣೆ ಮಾಡಬೇಕು ಅಥವಾ ಸ್ವಂತ ವ್ಯಾಪಾರ ಏನಾದರು ಮಾಡಬೇಕೆನ್ನುವವರಿಗೆ ತುಂಬಾನೇ ಅನುಕೂಲಕರವಾಗಿದೆ.

ಕೆಲಸದ ಜಾಗದಲ್ಲಿ ಇತರರು ನಿಮ್ಮನ್ನು ನೋಡಿ ಅಸೂಯೆ ಪಡುವಷ್ಟು ಚೆನ್ನಾಗಿ ಬೆಳೆಯುತ್ತೀರಿ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸಬೇಕೆನ್ನುವವರಿಗೆ ಈ ಅವಧಿ ತುಂಬಾ ಉತ್ತಮವಾಗಿದೆ. ಕೆಲಸದಲ್ಲಿ ಒತ್ತಡ ಎದುರಾಗಬಹುದು ಆದರೆ ಅಭದ್ರತೆ ಇರಲ್ಲ, ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ.
ಆರ್ಥಿಕ ಜೀವನ
ಹೊಸ ವರಷವು ಆರ್ಥಿಕ ದಷ್ಟಿಯಿಂದಲೂ ನಿಮಗೆ ಉತ್ತಮವಾಗಿದೆ/ ಅದರಲ್ಲಿಯೂ ಮೇವರೆಗೆ ನಿಮ್ಮ ಆರ್ಥಿಕ ಪರಿಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಮತ್ತಷ್ಟು ಬಲವಾಗುವುದು, ಮೇ ನಂತರ ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಹೂಡಿಕೆ, ಉಳಿತಾಯ ಇದಕ್ಕೆಸಂಬಂಧಿಸಿದಂತೆ ಈ ವರ್ಷ ಉತ್ತಮವಾಗಿದೆ. ಹಣದ ಕಾರಣದಿಂದ 2024ರಲ್ಲಿ ಯಾಉದಾದರು ಕೆಲಸ ಬಾಕಿಯುಳಿದಿದ್ದರೆ ಅ ದನ್ನು 2025ರಲ್ಲಿಪೂರ್ಣಗೊಳಿಸಲು ಸಾಧ್ಯವಾಗುವುದು.
ಇನ್ನು ಹೊಸ ವರ್ಷದಲ್ಲಿ ಏನಾದರೂ ಆಸ್ತಿ ಖರೀದಿ ಮಾಡಬೇಕೆಂದಿದ್ದರೆ ಈ ವರ್ಷ ಅಷ್ಟೊಂದು ಅನುಕೂಲಕರವಲ್ಲ, ಭೂಮಿ, ಫ್ಲ್ಯಾಟ್ ಇತ್ಯಾದಿಗಳನ್ನು ಖರೀದಿಸುವ ಮುನ್ನ ಅದರ ಬಗ್ಗೆ ಪರಿಶೀಲನೆ ಮಾಡಿ ಖರೀದಿಸಬೇಕು. ಅಲ್ಲದೆ ವಾಹನ ಖರೀದಿಸುವ ಯೋಚನೆಯಲ್ಲಿದ್ದರೆ ಮನೆಯಲ್ಲಿ ಬೇರೆ ಗಾಡಿ ಇದ್ದರೆ ಆ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದರೆ ಹೆಚಚಿನ ಲಾಭ ಗಳಿಸಲು ಸಾಧ್ಯವಾಗುವುದು.
ಪ್ರೀತಿ, ಕುಟುಂಬ ಜೀವನ
ಅವಾಹಿತರಾಗಿದ್ದರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಅದರಲ್ಲಿಯೂ ವರ್ಷದ ಆರಂಭದಿಂದ ಮೇ ತಿಂಗಳವರೆಗೆ ನಿಮಗೆ ಗುರುಬಲ ಉತ್ತಮವಾಗಿದೆ. ಪ್ರೀತಿಯಲ್ಲಿರುವವರು ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಲು ಸಾಧ್ಯವಾಗುವುದು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ವರ್ಷದ ಮಧ್ಯದಲ್ಲಿ ಕೇತು ಮತ್ತು ಶನಿಯ ಪ್ರಭಾವದಿಂದ ಕೆಲ ಭಿನ್ನಾಭಪ್ರಾಯ ಉಂಟಾಗಬಹುದು. ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಿ.
ಆರೋಗ್ಯ
2025ರಲ್ಲಿ ಆರೋಗ್ಯ ಚೆನ್ನಾಗಿರಲಿದೆ, ಶನಿಯು ನಿಮಗೆ ಅನುಕೂಲಕರ ಸ್ಥಾನದಲ್ಲಿರುವುದರಿಂದ ನಿಮಗೆ ಶನಿಯಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ. ಇನ್ನು ತುಂಬಾ ಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಕೂಡ ಪರಿಹಾರ ಸಿಗಲಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
