Latest Updates
-
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!
ಕರ್ಕ ರಾಶಿಯಲ್ಲಿ ಸೂರ್ಯ ಉದಯ: ಯಾರಿಗೆ ಶುಭ ಯಾರಿಗಿದು ಅಶುಭ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಬಹಳ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಸೂರ್ಯ ನಮ್ಮ ಸೌರಮಂಡಲದ ಕೇಂದ್ರ ಬಿಂದು ಹಾಗೆ ಜ್ಯೋತಿಷ್ಯದಲ್ಲೂ ಸೂರ್ಯನೇ ಕೇಂದ್ರ. ಸೂರ್ಯನು ಖ್ಯಾತಿ, ಆತ್ಮ ಸಂತೋಷ, ನಾಯಕತ್ವ, ಸರ್ಕಾರಿ ಉದ್ಯೋಗ, ಗೌರವ, ಜೀವ ಶಕ್ತಿಯ ಗ್ರಹವೆಂದು ಪರಿಗಣಿಸಲಾಗಿದೆ. ಇದರಿಂದ ಸೂರ್ಯ ಎಲ್ಲಾ ರಾಶಿಗಳಿಗೂ ಬಹಳ ಮುಖ್ಯ ಗ್ರಹವಾಗಿ ನೋಡಲಾಗಿದೆ.
ಇನ್ನು ಸೂರ್ಯನ ಸಂಚಾರದಲ್ಲಿ ಬದಲಾವಣೆಗಳಾದಾಗ ಹಲವು ರಾಶಿಗಳ ಮೇಲೆ ಅದರ ಪರಿಣಾಮ ಬೀರುವುದು ನೋಡಬಹುದು. ಹಾಗೆ ಈ ಜುಲೈ 16 ರ ಸಂಜೆ 5:17ರಂದು ಕರ್ಕ ರಾಶಿಗೆ ಚಲಿಸಲಿದ್ದಾನೆ. ಕರ್ಕ ರಾಶಿ ಚಂದ್ರನಿಂದ ಆಳಲ್ಪಡುವ ರಾಶಿಯಾಗಿದೆ. ಸೂರ್ಯನ ಈ ಸ್ಥಾನಪಲ್ಲಟವೀಗ ಹಲವು ರೀತಿಯ ಲಾಭಗಳ ತರುತ್ತಿದೆ.

ಇನ್ನು ಕರ್ಕ ರಾಶಿಯು ಚಂದ್ರನ ಅಧಿಪತ್ಯದ ರಾಶಿ ಚಂದ್ರನನ್ನು ನೀರಿನ ಅಂಶಕ್ಕೆ ಹೋಲಿಸಿದರೆ ಸೂರ್ಯನನ್ನು ಅಗ್ನಿಯ ಅಂಶಕ್ಕೆ ಹೋಲಿಸಲಾಗುತ್ತದೆ. ಈಗ ಈ ಸೂರ್ಯನು ಕರ್ಕ ರಾಶಿಗೆ ಚಲಿಸುವುದು ಹಲವು ನಕಾರಾತ್ಮಕ ಅಂಶಕ್ಕೆ ಕಾರಣವಾಗಲಿದೆ. ಏಕೆಂದರೆ ನೀರು ಹಾಗೂ ಅಗ್ನಿಯು ಒಂದೇ ರಾಶಿಯಲ್ಲಿ ಚಲಿಸುವುದು ಅಶುಭಕರ ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಸೂರ್ಯನ ಈ ಚಲನೆಯು ಯಾರಿಗೆಲ್ಲ ಶುಭ ಮತ್ತು ಅಶುಭ ಕಾರಕವಾಗಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಸೂರ್ಯನು ಕರ್ಕ ರಾಶಿಯಲ್ಲಿ ಉದಯಿಸುವುದು ಮೇಷ ರಾಶಿಯ ಮಂದಿಗೆ ಬಹಳ ಅನಾನುಕೂಲಕ್ಕೆ ಕಾರಣವಾಗಬಹುದು. ಅದ್ರಲ್ಲೂ ಆಸ್ತಿ ಸಂಬಂಧಿತ ಅಥವಾ ಕೃಷಿ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ನೈಸರ್ಗಿಕ ಆಪತ್ತುಗಳ ಎದುರಿಸಬೇಕಾಗಬಹುದು. ಹಾಗೆ ತಂದೆ ತಾಯಿ ಆರೋಗ್ಯದಲ್ಲಿ ಏರುಪೇರು ಆಗುವ ಸಂಭವವಿದೆ. ಆಸ್ತಿ ಮತ್ತು ವಾಹನ ಸಂಬಂಧಿತ ವಿಷಯಗಳಲ್ಲಿ ವಿವಾದಗಳ ಎದುರಿಸಬಹುದು. ನಿಮ್ಮ ನಿರ್ಧಾರಗಳಲ್ಲಿ ಚಂಚಲಶೀಲತೆ ನೋಡಬಹುದು. ಕೆಲಸದ ಸ್ಥಳದ ಒತ್ತಡ ನಿಮ್ಮ ಅಶಾಂತಿಗೆ ಕಾರಣವಾಗಬಹುದು. ತಾಳ್ಮೆ ಕಳೆದುಕೊಳ್ಳುವಂತಹ ಹಲವು ವಿಚಾರಗಳು ನಡೆಯಲಿವೆ.
ವೃಷಭ ರಾಶಿ
ಮೂರನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಅನೇಕ ಮಿಶ್ರ ಫಲ ನೋಡಬಹುದು. ನಿಮ್ಮ ಅನೇಕ ಕೆಲಗಳಲ್ಲಿ ಅನುಕೂಲಕರ ಸಮಯವಾಗಿದ್ದರೂ ಅದರಿಂದ ಉಂಟಾಗುವ ಫಲತಾಂಶವು ಆಶುಭವಾಗಬಹುದು. ನಿಮ್ಮ ಕಠಿಣ ಪರಿಶ್ರಮವು ವ್ಯರ್ಥವಾಗುವಂತಹ ಹಲವು ಘಟನೆಗಳು ನಡೆಯಲಿದೆ. ವೃತ್ತಿ ಜೀವನದಲ್ಲಿ ಹಲವು ಅವಕಾಶಗಳ ಪಡೆಯಬಹುದು. ಹಾಗೆ ಹೊಸ ಕೌಶಲ್ಯಕ್ಕಾಗಿ ನೀವು ಹೊಸ ರೀತಿಯ ತರಬೇತಿ ಪಡೆಯಬಹುದು. ವಯಸ್ಕರಲ್ಲಿ ಈ ಸಮಯ ಬಹಳ ಶ್ರಮ ತರುವ ಸಮಯ.
ಮಿಥುನ ರಾಶಿ
ಸೂರ್ಯನು ಈಗ ನಿಮ್ಮ ಎರಡನೇ ಮನೆಯಲ್ಲಿ ಸಾಗುತ್ತಿದ್ದಾನೆ. ಇದು ಹಣ, ಕುಟುಂಬ ಸಂಬಂಧ ವಿಚಾರಗಳು, ಮಾತುಗಾರಿಕೆಯಲ್ಲಿ ನಿಮಗೆ ಹಲವು ಲಾಭವಾಗಬಹುದು. ಆದ್ರೆ ಹಣಕಾಸಿನ ವಿಚಾರವಾಗಿ ನೀವು ಸಮತೋಲನ ಕಾಪಾಡಿಕೊಳ್ಳುವುದು ಉತ್ತಮ. ಆರ್ಥಿಕ ಏರಿಳಿತಗಳು ಎದುರಾದರೂ ಕೂಡ ಅದನ್ನು ನಿಭಾಯಿಸಬಹುದು. ಹೂಡಿಕೆಗಳು ವಹಿವಾಟುಗಳಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯ ಕೂಡ ಸುಧಾರಣೆ ಆಗುವುದು ನೋಡಬಹುದು.
ಕರ್ಕ ರಾಶಿ
ಸೂರ್ಯನು ಕರ್ಕ ರಾಶಿಯಲ್ಲಿ ಉದಯಿಸುವುದರಿಂದ ನಿಮಗೆ ಶುಭಕಾರಕ ಎನ್ನಬಹುದು, ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ನಿಮಗೆ ಪರಿಹಾರ ತರಲಿದೆ. ಆದರೆ ಉದರ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ದುಂದು ವೆಚ್ಚ ಮಾಡುವುದರಿಂದ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











