Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕನ್ಯಾ ರಾಶಿಯಲ್ಲಿ ಸೂರ್ಯ, ಶುಕ್ರ, ಕೇತು 18 ವರ್ಷದ ಬಳಿಕ ಸೇರಿದೆ: ಈ 3 ರಾಶಿಗಳಿಗೆ ಹೆಚ್ಚಿನ ಗುಣ
ಜ್ಯೋತಿಷ್ಯದಲ್ಲಿ ಸೂರ್ಯ, ಕೇತು, ಶುಕ್ರನನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಕೇತು ಹಿಮ್ಮುಖ ಚಲನೆ ಮಾಡುವ ಗ್ರಹವಾಗಿದೆ, ಕೇತುವನ್ನು ನೆರಳಿನ ಗ್ರಹವೆಂದಿ ಕರೆಯಲಾಗುವುದು, ಇದು ಹಿಮ್ಮುಖ ಚಲನೆ ಮಾಡುವ ಗ್ರಹವಾಗಿದೆ. ಸೂರ್ಯನು ತಮ್ಮ ಧೈರ್ಯ, ವೃತ್ತಿ, ಸ್ವಭಾವದ ಮೇಲೆ ಪ್ರಭಾವ ಬೀರುವ ಗ್ರಹವಾಗಿದೆ.
18 ತಿಂಗಳಿಗೊಮ್ಮೆ ಕೇತು ರಾಶಿ ಬದಲಾವಣೆ ಮಾಡುತ್ತದೆ, ಇದೀಗ ಕನ್ಯಾ ರಾಶಿಯಲ್ಲಿದೆ. ಇನ್ನು ಇದೇ ರಾಶಿಗೆ ಈಗಾಗಲೇ ಸೂರ್ಯ ಮತ್ತು ಶುಕ್ರನ ಸಂಚಾರವೂ ಆಗಿದೆ. ಇಂಥದ್ದೊಂದು ಸಂಯೋಗ ಸುಮಾರು 18 ವರ್ಷಗಳ ಬಳಿಕ ಉಂಟಾಗಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಇದೀಗ ಈ ಮೂರು ಗ್ರಹಗಳ ಸಂಯೋಗವಿರುವುದರಿಂದ ಅವುಗಳ ಸ್ಥಾನಕ್ಕೆ ತಕ್ಕಂತೆ ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರುತ್ತದೆ, ಈ ರಾಶಿಯವರು ಈ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಕೆಲ ಧನಾತ್ಮಕ ಬದಲಾವಣೆಯಾಗುವುದನ್ನು ಕಾಣಬಹುದು, ಅದು ಈ ಮೂರು ಗ್ರಹಗಳ ಸಂಯೋಗದಿಂದಾಗಿ ನಿಮಗೆ ಲಭಿಸಿದೆ.
ಮೇಷ ರಾಶಿ
ಮೇಷ ರಾಶಿಯ 6ನೇ ಮನೆಯಲ್ಲಿ ಈ ಮೂರು ಗ್ರಹಗಳ ಸಂಯೋಗ ಉಂಟಾಗಿದೆ. ಇವುಗಳ ಪ್ರಭಾವ ನಿಮಗೆ ಅನುಕೂಲಕರವಾಗಿಯೇ ಇದೆ. ಈ ಅವಧಿಯಲ್ಲಿ ನೀವು ದೊಡ್ಡ ಸಮಸ್ಯೆಯನ್ನು ಎದುರಿಸುವುದಿಲ್ಲ.
ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ನಿಮಗೆ ತುಂಬಾ ಉತ್ತಮವಾಗಿರಲಿದೆ. ನಿಮ್ಮೆಲ್ಲಾ ಯೋಜನೆಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಇನ್ನು ಪ್ರಮುಖ ಕೆಲಸವಿದ್ದರೆ ಅದನ್ನು ಮಾಡಿ ಮುಗಿಸುವಲ್ಲಿ ಯಶಸ್ವಿಯಾಗುತ್ತೀರಿ.
ಆರ್ಥಿಕವಾಗಿಯೂ ಈ ಸಂಯೋಗ ನಿಮಗೆ ಒಳಿತು ಉಂಟು ಮಾಡಿದೆ. ಈ ಅವಧಿಯಲ್ಲಿ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುವುದು, ಅಲ್ಲದೆ ಹಣವನ್ನು ಉಳಿತಾಯ ಮಾಡಲು ಕೂಡ ಸಾಧ್ಯವಾಗುವುದು.
ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆ ಹರಿಯಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೂ ಈ ಸಂಯೋಗ ಉತ್ತಮ ಪ್ರಯೋಜನ ನೀಡಲಿದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳು ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಪೂರ್ಣಗೊಳ್ಳಲಿದೆ. ವ್ಯಾಪಾರಿಗಳು ಈ ಸಮಯದಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ.
ಈ ಗ್ರಹಗಳ ಸಂಯೋಗ ನಿಮ್ಮ ಆರ್ಥಿಕ ಜೀವನದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ, ಈ ಅವಧಿಯಲ್ಲಿ ಆರ್ಥಿಕ ಪ್ರಗತಿ ಕಂಡು ಬರಲಿದೆ, ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದೆ, ಆದರೆ ಹೂಡಿಕೆಯ ಮುನ್ನ ಸರಿಯಾಗಿ ವಿಚಾರಿಸಿದ ಬಳಿಕವಷ್ಟೇ ಹೂಡಿಕೆ ಮಾಡಿ.
ಆರೋಗ್ಯದ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿದೆ, ಏನಾದರೂ ಅರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ಇನ್ನು ನೀವು ವಾಹನ, ಆಸ್ತಿ ಇವುಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಈ ಅವಧಿ ನಮಗೆ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಲಗ್ನ ಮನೆಯಲ್ಲಿ ಈ ಗ್ರಹಗಳ ಸಂಯೋಗ ಉಂಟಾಗಿದೆ, ಈ ಸಂಯೋಗ ನಿಮ್ಮ ರಾಶಿಗೆ ಗುಣವನ್ನೇ ತಂದಿದೆ. ಯಾವುದಾದರೂ ಪ್ರಮುಕ ಕಾರ್ಯದಲ್ಲಿ ಮಾಡುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಗಲಿದೆ. ವೃತ್ತಿ ಬದುಕು- ವೈಯಕ್ತಿಕ ಬದುಕು ಎರಡೂ ಚೆನ್ನಾಗಿರಲಿದೆ.
ಆರ್ಥಿಕವಾಗಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ, ಆರೋಗ್ಯ ಕೂಡ ಚೆನ್ನಾಗಿರಲಿದೆ. ಈ ಗ್ರಹಗಳ ಸಂಯೋಗ ನಿಮಗೆ ಧನಾತ್ಮಕವಾಗಿರುವುದರಿಂದ ದೊಡ್ಡ ಸಮಸ್ಯೆ ಇರಲ್ಲ.
ಅಕ್ಟೋಬರ್ 13ಕ್ಕೆ ಶುಕ್ರನು ರಾಶಿಬದಲಾವಣೆ ಮಾಡಲಿದೆ
ಶುಕ್ರನು ಅಕ್ಟೋಬರ್ 13ಕ್ಕೆ ತುಲಾ ರಾಶಿಗೆ ಸಂಚರಿಸಲಿದೆ.
ಸೂರ್ಯು ಅಕ್ಟೋಬರ್ 16ಕ್ಕೆ ರಾಶಿ ಬದಲಾವಣೆ ಮಾಡಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











