Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ವರ್ಷದ ಆರಂಭದಲ್ಲಿಯೇ ಶತ್ರು ಗ್ರಹಗಳಾದ ಸೂರ್ಯ ಶನಿಯ ಯುತಿ: ದ್ವಾದಶ ರಾಶಿಗಳ ಈ ಅವಧಿಯಲ್ಲಿ ಹೀಗಿರಲಿದೆ ಪ್ರಭಾವ
ಸೂರ್ಯನು ಎಲ್ಲಾ ಗ್ರಹಗಳ ಅಧಿಪತಿ, ಶನಿಯು ಕರ್ಮದ ಫಲಕ ನೀಡುವ ದೇವರು, ಸೂರ್ಯನ ಮಗ ಶನಿ, ಆದರೆ ಈ ಎರಡೂ ಗ್ರಹವನ್ನು ಶತ್ರು ಗ್ರಹಗಳೆಂದು ಪರಿಗಣಿಸಲಾಗುವುದು. 2025ರ ಆರಂಭದಲ್ಲಿಯೇ ಈ ಎರಡು ಮಹಾ ಗ್ರಹಗಳ ಸಂಯೋಗವಾಗಲಿದೆ, ಫೆಬ್ರವರಿಯಲ್ಲಿ ಈ ಯುತಿ ಉಂಟಾಗಲಿದೆ.
ಈ ಯುತಿ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ., ಶತ್ರು ರಾಶಿಗಳ ಯುತಿ ಉಂಟಾದಾಗ ಯಾವ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಮೇಷ ರಾಶಿಯವರಿಗೆ ಈ ಯುತಿ ತುಂಬಾನೇ ಪ್ರಯೋಜನಕಾರಿಯಾಗಿರಲಿದೆ, ವೃತ್ತಿ ಬದುಕಿನಲ್ಲಿ ತುಂಬಾನೇ ಅವಕಾಶಗಳು ದೊರೆಯಲಿದೆ, ಆದರೆ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಸೂರ್ಯ-ಶನಿ ಯುತಿ 10ನೇ ಮನೆಯಲ್ಲಿ ಉಂಟಾಗಲಿದೆ, ಸದು ನಿಮ್ಮ ವೃತ್ತಿ ಬದುಕಿನ ಮೇಲೆ ಉತ್ತಮ ಪ್ರಭಾವ ಬೀರಲಿದೆ, ನಿಮ್ಮ ಸ್ಥಾನ ಮಾನಮಾನ ಹೆಚ್ಚಾಗಲಿದೆ, ಕೆಲಸದ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ತಲುಪಲು ಸಾಧ್ಯವಾಗುವುದು.
ಮಿಥುನ ರಾಶಿ
ಈ ಯುತಿ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲಕರವಾಗಿರಲಿದೆ. ಉನ್ನನ ಶಿಕ್ಷಣಕ್ಕೆ ಪ್ರಯತ್ನ ಮಾಡಿದರೆ ಸಾಧ್ಯವಾಗುವುದು,ಆದರೆ ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಹೊಸ ಸವಾಲುಗಳು ಬರಬಹುದು, ನೀವು ಅವುಗಳನ್ನು ಸ್ವೀಕರಿಸಿ ಮುಂದುವರೆಯುವುದು ಒಳ್ಳೆಯದು.
ಕರ್ಕ ರಾಶಿ
ಕರ್ಕ ರಾಶಿಯ 8ನೇ ಮನೆಯಲ್ಲಿ ಸೂರ್ಯ ಮತ್ತು ಶನಿಯ ಯುತಿ ಉಂಟಾಗಿದೆ. ಈ ಅವಧಿ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ ಯಾವುದೇ ಅಪಾಯಕಾರಿ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ಹಣದ ಬಗ್ಗೆ ಎಷ್ಟು ಜಾಗ್ರತೆವಹಿಸುತ್ತೀರೋ ಅಷ್ಟು ಒಳ್ಳೆಯದು.
ಸಿಂಹ ರಾಶಿ
ಸಿಂಹ ರಾಶಿಯ 7ನೇ ಮನೆಯಲ್ಲಿ ಸೂರ್ಯ ಮತ್ತು ಶನಿಯ ಯುತಿ ಉಂಟಾಗಿದೆ. ಈ ಅವಧಿಯಲ್ಲಿ ಸಂಬಂಧದಲ್ಲಿ ಒತ್ತಡವಿರಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗದಿರಲು ಮುಕ್ತ ಸಂವಹನ ಮಾಡುವುದು ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯ 6ನೇ ಮನೆಯಲ್ಲಿ ಸೂರ್ಯ ಮತ್ತು ಶನಿಯ ಯುತಿ ಉಂಟಾಗಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಒತ್ತಡ ಹೆಚ್ಚಿರಲಿದೆ. ಹೊಸ ಕೌಶಲ್ಯ ಕಲಿಯಲು ಅವಕಾಶ ಸಿಗಲಿದೆ. ಆರೋಗ್ಯದ ಕಡೆಯೂ ಗಮನಹರಿಬೇಕು, ಆರೋಗ್ಯಕರ ಜೀವನಶೈಲಿ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ತುಲಾ ರಾಶಿ
ನಿಮ್ಮ 5ನೇ ಮನೆಯಲ್ಲಿ ಸೂರ್ಯ ಮತ್ತು ಶನಿಯ ಯುತಿ ಉಂಟಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮಲ್ಲಿನ ಕೌಶಲ್ಯ ವೃದ್ಧಿಸಲು ಸಹಾಯವಾಗುವುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ 4ನೇ ಮನೆಯಲ್ಲಿ ಸೂರ್ಯ-ಯುತಿ ಉಂಟಾಗಲಿದೆ. ಈ ಯುತಿ ನಿಮ್ಮ ಕುಟುಂಬ ಜೀವನದ ಮೇಲೆ ಪ್ರಭಾವ ಬೀರುವುದು, ಮೆನೆಯಲ್ಲಿ ಒತ್ತಡದ ವಾತಾವರಣ ಇರಲಿದೆ. ನೀವು ಕುಟುಂಬದ ಸಮಸ್ಯೆ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಧನು ರಾಶಿ
ಧನು ರಾಶಿಯ 3ನೇ ಮನೆಯಲ್ಲಿ ಸೂರ್ಯ ಮತ್ತು ಶನಿ ಯುತಿ ಉಂಟಾಗಲಿದೆ. ಈ ಅವಧಿಯಲ್ಲಿ ನೀವು ಸಂವಹನದ ಕಡೆಗೆ ಗಮನಹರಿಸಿ. ಭಿನ್ನಾಭಿಪ್ರಾಯವನ್ನು ಸಂವಹನದ ಮೂಲಕ ಬಗೆಹರಿಸಲು ಪ್ರಯತ್ನಿಸಿ. ನೀವು ಪ್ರತಿಯೊಂದು ಯೋಜನೆಯನ್ನು ಎಚ್ಚರಿಕೆಯಿಂದ ಮಾಡಬೇಕು.
ಮಕರ ರಾಶಿ
ಮಕರ ರಾಶಿಯಲ್ಲಿ ಸೂರ್ಯ ಮತ್ತು ಶನಿ ಯುತಿ 2ನೇ ಮನೆಯಲ್ಲಿ ಸಂಭವಿಸಲಿದೆ. ಈ ಅವಧಿಯಲ್ಲಿ ಹಣದ ವಿಷಯದಲ್ಲಿ ನೀವು ಜಾಗ್ರತೆವಹಿಸಬೇಕು, ನೀವಾಡುವ ಮಾತಿನ ಕಡೆಗೆ ಗಮನಹರಿಸಬೇಕು, ಆರ್ಥಿಕ ಪ್ಲ್ಯಾನ್,ಶಿಸ್ತು ಮುಖ್ಯವಾಗಿದೆ.
ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿ ಯುತಿ ಉಂಟಾಗಲಿದೆ. ಈ ಅವಧಿಯಲ್ಲಿ ಸವಾಲುಗಳು ಹೆಚ್ಚಿರಲಿದೆ, ನೀವು ಈ ಅವಧಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಮಾಡುವುದು ಒಳ್ಳೆಯದು.
ಮೀನ ರಾಶಿ
ಸೂರ್ಯ ಮತ್ತು ಶನಿಯ ಯುತಿ 12ನೇ ಮನೆಯಲ್ಲಿ ಉಂಟಾಗಲಿದೆ, ಈ ಸಮಯದಲ್ಲಿ ನೀವು ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿ. ವೃತ್ತಿ ಬದುಕಿನ ಒತ್ತಡ ಕಡಿಮೆ ಮಾಡಲು ನೀವು ಧ್ಯಾನದ ಕಡೆಗೆ ಗಮನಹರಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










