Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Surya Sanchar: ಅ.17ರಂದು ಸೂರ್ಯ-ಶುಕ್ರ ಸಂಗಮ: ದೂರಾಗಲಿದೆ ಚಿಂತೆ, ಬಲವಾಗಲಿದೆ ಸಂಪತ್ತು!
Surya Sanchar: ಗ್ರಹಗಳ ಚಲನೆಯು ಹಲವು ರೀತಿಯಲ್ಲಿ ರಾಶಿಗಳಿಗೆ ಶುಭ ಹಾಗೂ ಅಶುಭ ಯೋಗ ತರುವುದು ನೋಡಿರಬಹುದು. ಹೀಗಾಗಿಯೇ ಜ್ಯೋತಿಷ್ಯಶಾಸ್ತ್ರದಲ್ಲಿ ಈ ಗ್ರಹಗಳ ಸಂಚಾರವನ್ನು ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ವಿವರಿಸಲಾಗುತ್ತದೆ. ಅದ್ರಲ್ಲೂ ಈ ಸೌರಮಂಡಲದ ಕೇಂದ್ರ ಬಿಂದು ಎಂದು ಕರೆಯಲಾಗುವ ಸೂರ್ಯನ ಸಂಚಾರವು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಿರುತ್ತೇವೆ. ಹಾಗೆ ಸೂರ್ಯನಿಂದ ಉಂಟಾಗುವಂತಹ ರಾಜಯೋಗಗಳು ಎಲ್ಲರಿಗೂ ಶುಭ ಉಂಟು ಮಾಡುತ್ತದೆ.
ಸದ್ಯ ಸೂರ್ಯ ಸಿಂಹನ ಅಧಿಪತಿಯಾಗಿದ್ದು, ತುಲಾ ರಾಶಿಗೆ ಸಾಗುತ್ತಿದ್ದಾನೆ. ಸೂರ್ಯನ ಈ ಸಂಚಾರವು ಎಲ್ಲಾ ರಾಶಿಗಳಿಗೂ ಹೊಸ ದಿಕ್ಕು ಸೂಚಿಸಲಿದೆ. ಇದು ಕುಟುಂಬ, ಆಸ್ತಿ, ಆರ್ಥಿಕ ವಿಚಾರಗಳಲ್ಲಿ ಹೊಸ ವಿಚಾರಗಳ ಎದುರಿಸುವಂತಹ ಶಕ್ತಿ ನೀಡಲಿದೆ. ಹೊಸ ಅವಕಾಶಗಳು, ಯಶಸ್ಸು ತರಲಿದೆ.

ಸೂರ್ಯನು ಸಂಪತ್ತು, ಅಭಿವೃದ್ಧಿ, ಬಲ, ಜವಾಬ್ದಾರಿಯ ಪ್ರತೀಕ. ಸೂರ್ಯ ತುಲಾ ರಾಶಿಯಲ್ಲಿರುವಾಗ ಶುಕ್ರನು ಕೂಡ ಅದೇ ರಾಶಿಗೆ ಪ್ರವೇಶಿಸುತ್ತಾನೆ. ಅಂದರೆ ತುಲಾ ರಾಶಿಯಲ್ಲಿ ಸೂರ್ಯ ಹಾಗೂ ಶುಕ್ರನ ಸಂಯೋಗವಾಗುತ್ತಿದೆ. ಇದು ಹಲವು ರಾಶಿಗಳ ಮೇಲೆ ನೇರ ಪರಿಣಾಮ ಬೀರುವುದು ನೋಡಬಹುದು.
ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸಂಚಾರವು ವ್ಯಕ್ತಿಯ ಜೀವನದಲ್ಲಿ ಏರಿಳಿತಗಳನ್ನು ತರುತ್ತದೆ. ಸೂರ್ಯನು ಪ್ರತಿ 30 ದಿನಗಳಿಗೊಮ್ಮೆ ತನ್ನ ರಾಶಿ ಬದಲಾಯಿಸುತ್ತಾನೆ. ಈಗ ಅಕ್ಟೋಬರ್ 17ರಂದು ಮಧ್ಯಾಹ್ನ 1:42ಕ್ಕೆ ಸರಿಯಾಗಿ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಹಾಗಾದ್ರೆ ಸೂರ್ಯ ಹಾಗೂ ಶುಕ್ರನ ಸಂಯೋಗವು ಯಾರಿಗೆ ಶುಭವನ್ನು ತರಲಿದೆ, ನಾಳೆಯಿಂದ ಯಾರ ಜೀವನದಲ್ಲಿ ಬದಲಾವಣೆಗಳ ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯಲ್ಲಿ ಸೂರ್ಯನು 4ನೇ ಮನೆಯ ಅಧಿಪತಿಯಾಗಿದ್ದು. ನಿಮ್ಮ 6ನೇ ಮನೆಯಲ್ಲಿ ಸಾಗುತ್ತಿದ್ದಾನೆ. ಇದು ನಿಮ್ಮ ಕುಟುಂಬ ಜೀವನದ ಮೇಲೆ ಪರಿಣಾಮ ಬೀರುವ ಅಂಶವಾಗಿದೆ. ನಿಮ್ಮ ಕೌಟುಂಬಿಕ ವಿಚಾರದಲ್ಲಿದ್ದ ಒತ್ತಡ, ಮನಸ್ತಾಪಗಳು ಕಡಿಮೆಯಾಗಲಿದೆ. ಮಾನಸಿಕ ಕಿರಿಕಿರಿಗಳಿಗೆ ಕಾರಣವಾಗಿದ್ದಂತಹ ವಿಚಾರಗಳು ತಿಳಿಯಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಬಹುಮುಖ್ಯ ಘಟ್ಟ ತಲುಪಬಹುದು. ನ್ಯಾಯಾಲಯ, ಆಸ್ತಿ ವಿಚಾರವಾಗಿದ್ದ ಅಡ್ಡಿ ಆತಂಕಗಳಲ್ಲಿ ಯಶಸ್ಸಿ ನಿಮ್ಮದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸೂರ್ಯ 3ನೇ ಮನೆಯಲ್ಲಿ ಸಾಗುತ್ತಿದ್ದಾನೆ. ಈ ಸಮಯವು ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲಿದೆ. ಅದ್ರಲ್ಲೂ ನಿಮಗೆ ಅಗತ್ಯವಾಗಿ ಬೇಕಾಗಿರುವ ಭೌತಿಕ ವಿಚಾರಗಳಲ್ಲಿ ಶುಭವಿದೆ, ಹೊಸ ವಸ್ತುಗಳು, ಹೊಸ ವ್ಯವಹಾರಗಳು, ವ್ಯಾಪಾರಗಳಲ್ಲಿ ನಿಮಗೆ ಶುಭವಾಗುವ ಗಳಿಗೆ, ನಿಮಗೆ ಅಗತ್ಯವಾದ ಸಮಯದಲ್ಲಿ ಉಂಟಾಗುತ್ತಿದ್ದ ಹಣಕಾಸು ಸಮಸ್ಯೆ ದೂರಾಗಲಿದೆ. ಆಪ್ತರೊಬ್ಬರಿಂದ ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಸೂರ್ಯನು ಮೊದಲ ಮನೆಯಲ್ಲಿ ಸಾಗುತ್ತಾನೆ. ಇದು ಕುಟುಂಬ ಜೀವನ, ವೃತ್ತಿ ಜೀವನದಲ್ಲಿ ಸುಖ ತರಲಿದೆ. ಕೆಲಸದ ಕ್ಷೇತ್ರವು ಬಲಗೊಳ್ಳುತ್ತದೆ. ಆರ್ಥಿಕ ಚಿಂತೆಗಳು ಕಡಿಮೆಯಾಗುತ್ತವೆ ಮತ್ತು ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ. ಬಹುಕಾಲದಿಂದ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರೆ ಈ ಸಮಯದಲ್ಲಿ ಶುಭವಿದೆ. ಬೋನಸ್‌ನಂತಹ ವಿಚಾರದಿಂದಾಗಿ ನಿಮಗೆ ಸಂತಸ ಇರಲಿದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಖುಷಿ ತುಂಬಿರಲಿದೆ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ.
ಧನು ರಾಶಿ
ಧನು ರಾಶಿಯ 11ನೇ ಮನೆಯಲ್ಲಿ ಸೂರ್ಯನು ಸಾಗುತ್ತಾನೆ. ಕುಟುಂಬ ಜೀವನದಲ್ಲಿನ ಖುಷಿ ಉಂಟು ಮಾಡುವಂತಹ ಘಟನೆಗಳು ನಡೆಯಲಿವೆ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಗೆ ಮುಂದಾಗಬಹುದು. ಪ್ರೀತಿಯ ವಿಚಾರದಲ್ಲಿ ಮಧುರತೆ ಇರಲಿದೆ. ನೀವು ಆಧ್ಯಾತ್ಮಿಕ ವಿಚಾರದಲ್ಲಿ ಶುಭವಾಗಲಿದೆ. ನಿಮ್ಮ ಸ್ನೇಹಿತರು ಹಾಗೆ ಕುಟುಂಬಸ್ಥರಿಂದ ಎಲ್ಲಾ ವಿಚಾರದಲ್ಲೂ ಬೆಂಬಲ ಪಡೆಯಬಹುದು.



Click it and Unblock the Notifications



