ಸೂರ್ಯ ಸಂಚಾರ: 30 ದಿನ ನಿಮ್ಮ ರಾಶಿಯ ಮೇಲೆ ಸೂರ್ಯನ ಪ್ರಭಾವ ಹೀಗಿರಲಿದೆ, ನಿಮಗೆ ಶುಭವೇ-ಜಾಗ್ರತೆವಹಿಸಬೇಕಾ?

ಸೂರ್ಯನು ಪ್ರತಿ ಮಾಸ ರಾಶಿ ಬದಲಾವಣೆ ಮಾಡುತ್ತಾನೆ, ಹೀಗೆ ಬದಲಾವಣೆ ಮಾಡಿದಾಗ ಅದು ನಮ್ಮ ರಾಶಿಯ ಮೇಲೆ ಬೀರುವ ಪ್ರಭಾವ ಭಿನ್ನವಾಗಿರುತ್ತದೆ. ಇದೀಗ ಸೂರ್ಯನು ತುಲಾ ರಾಶಿಗೆ ಸಂಚರಿಸಿದೆ, ಇನ್ನು 30 ದಿನಗಳು ಅದೇ ರಾಶಿಯಲ್ಲಿದ್ದು ನವೆಂಬರ್ 16ಕ್ಕೆ ವೃಶ್ಚಿಕ ರಾಶಿಗೆ ಸಂಚರಿಸಲಿದೆ, ಅದುವರೆಗೆ ಸೂರ್ಯನ ಪ್ರಭಾವ 12 ರಾಶಿಗಳ ಮೇಲೆ ಇರಲಿದ್ದು ಯಾರಲ್ಲಿ ಸೂರ್ಯನ ಸ್ಥಾನ ಪ್ರಬಲವಾಗಿದೆ, ಯಾರಲ್ಲಿ ದುರ್ಬಲವಾಗಿದೆ ಎಂದು ನೋಡೋಣ ಬನ್ನಿ:

Sun Transit In Libra

ಮೇಷ ರಾಶಿ
ಮೇಷ ತುಲಾ ರಾಶಿಗೆ ಸಂಚರಿಸಿದೆ, ಈಗ ಅದು ನಿಮ್ಮ ರಾಶಿಯ 7ನೇ ಮನೆಯಲ್ಲಿದೆ. ಈ ಅವಧಿ ನಿಮಗೆ ಶುಭವಾಗಿದೆ. ವೃತ್ತಿ ಬದುಕಿನಲ್ಲಿ ಉತ್ತಮ ಅವಕಾಶ ದೊರೆಯಲಿದೆ. ವ್ಯವಹಾರಿಗಳು ಉತ್ತಮ ಲಾಭ ಪಡೆಯುತ್ತೀರಿ.ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.

ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಸೂರ್ಯ 6ನೇ ಮನೆಯಲ್ಲಿದೆ. ಈ ಅವಧಿ ನಿಮಗೆ ಸೂರ್ಯನ ಪರಿಣಾಮ ನಿಮಗೆ ಅನುಕೂಲಕರವಾಗಿರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ, ಆರ್ಥಿಕ ಜೀವನ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಸೂರ್ಯ 5ನೇ ಮನೆಯಲ್ಲಿ ಇದೆ. ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶ ದೊರೆಯಲಿದೆ. ವ್ಯಾಪಾರಿಗಳಿಗೆ ಲಾಭ ಗಳಿಸಲು ಸಾಧ್ಯವಾಗುವುದು. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ.

ಕರ್ಕ ರಾಶಿ
ಕರ್ಕ ರಾಶಿಯಲ್ಲಿ 4ನೇ ಮನೆಯಲ್ಲಿ ಇರಬಹುದು, ಈ ಸಮಯದಲ್ಲಿ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಹಣಕಾಸು ವಿಚಾರದಲ್ಲಿ ಜಾಗ್ರತೆವಹಿಸಬೇಕು. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಸವಾಲುಗಳನ್ನು ಎದುರಿಸಬಹುದು. ವೈಯಕ್ತಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಮಾನಸಿಕ ಒತ್ತಡ ಹೆಚ್ಚಿಸಬಹುದು.

ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಸೂರ್ಯ 3ನೇ ಮನೆಯಲ್ಲಿ ಇರಲಿದೆ. ನಿಮಗೆ ಸೂರ್ಯ ಪರಿಣಾಮ ಅನುಕೂಲಕರವಾಗಿದೆ, ಆದರೆ ಕೆಲಸದಲ್ಲಿ ಒತ್ತಡ ಹೆಚ್ಚಿರಬಹುದು. ಆರ್ಥಿಕವಾಗಿ ನೋಡುವುದಾದರೆ ಹಣುಳಿಸಲು ಸಾಧ್ಯವಾಗುವುದು. ವೈವಾಹಿಕ ಬದುಕು ಕೂಡ ಉತ್ತಮವಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಚರ್ಮದ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆವಿರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ 2ನೇ ಮನೆಯಲ್ಲಿ ಇದೆ. ಸೂರ್ಯ ತುಲಾದಲ್ಲಿ ಇರುವಾಗ ನೀವು ಹಣ ಗಳಿಸಲು ಜಾಗ್ರತೆವಹಿಸಬೇಕು. ಕೆಲಸದಲ್ಲಿ ಸವಾಲುಗಳು, ಅತೃಪ್ತಿ ಇರಬಹುದು. ನೀವು ಕೆಲಸವನ್ನು ಬದಲಾಯಿಸಲು ಪ್ರಯತ್ನಿಸಬಹುದು, ಆದರೆ ಹೊಸ ಕೆಲಸವನ್ನು ಹುಡುಕುವುದಾದರೆ ಒಂದು ಕೆಲಸ ಸಿಗುವವರೆಗೆ ಇರುವ ಕೆಲಸ ಬಿಡಬೇಡಿ. ಹಣದ ಖರ್ಚು ಕೂಡ ಹೆಚ್ಚಿರಲಿದೆ, ಆರೋಗ್ಯದಲ್ಲಿ ಏರಳಿತವಿರಲಿದೆ.

ತುಲಾ ರಾಶಿ
ಅಕ್ಟೋಬರ್ 17ಕ್ಕೆ ಸೂರ್ಯ ತುಲಾ ರಾಶಿಗೆ ಸಂಚರಿಸಿದೆ. ಈ ಸಮಯದಲ್ಲಿ ನಿಮ್ಮ ದೊಡ್ಡ ಆಸೆ ಈಡೇರಲಿದೆ. ವ್ಯಾಪಾರಿಗಳು ಉತ್ತಮ ಲಾಭ ಗಳಿಸುತ್ತೀರಿ, ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ವೈವಾಹಿಕ ಬದುಕು, ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ಸೂರ್ಯ 12ನೇ ಮನೆಯಲ್ಲಿ ಇರಲಿದೆ. ವೃತ್ತಿ ಬದುಕಿನಲ್ಲಿ ಸವಾಲುಗಳು ಇರಲಿದೆ. ಆರ್ಥಿಕವಾಗಿ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ,. ಕುಟುಂಬದಲ್ಲಿ ಆಂತರಿಕ ಸಮಸ್ಯೆ ಹೆಚ್ಚಿರಬಹುದು, ಇದು ನಿಮ್ಮ ಆತ್ಮವಿಶ್ವಾಸ ತಗ್ಗಿಸಿರಬಹುದು. ಆರೋಗ್ಯ ಸಮಸ್ಯೆಗಳಿರಲಿದೆ

ಧನು ರಾಶಿ
ಧನು ರಾಶಿಯವರಲ್ಲಿ 9ನೇ ಮನೆಯಲ್ಲಿ ಇರಲಿದೆ. ಈ ಸೂರ್ಯ ಸಂಚಾರ ನಿಮಗೆ ಅನುಕೂಲಕರವಾಗಿಯೇ ಇದೆ. ಈ ಸಮಯದಲ್ಲಿ ನಿಮ್ಮ ಬಹುದೊಡ್ಡ ಆಸೆ ಈಡೇರಲಿದೆ. ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕ ಜೀವನ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯ ಕೂಡ ಉತ್ತಮವಾಗಿರಲಿದೆ.

ಮಕರ ರಾಶಿ
ಮಕರ ರಾಶಿಯಲ್ಲಿ 8ನೇ ಮನೆಯಲ್ಲಿ ಇರಲಿದೆ. ಈ ಸಮಯ ನಿಮಗೆ ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಹೊಸ ಉದ್ಯೋಗಕ್ಕೆ ಕಾಯುತ್ತಿದ್ದರೆ ಇನ್ನೂ ಸ್ವಲ್ಪ ಸಮಯ ಕಾಯಬಹುದು, ಈ ಅವಧಿಯಲ್ಲಿ ಕೆಲಸ ಬದಲಾಯಿಸುವ ಪ್ರಯತ್ನ ಮಾಡಬೇಡಿ. ವ್ಯಾಪಾರಿಗಳಿಗೂ ಸವಾಲಿನ ಸಮಯ, ಖರ್ಚು ಹೆಚ್ಚಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಬೇಕು.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ 7ನೇ ಮನೆಯಲ್ಲಿ ಇರಲಿದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ. ವ್ಯಾಪಾರಿಗಳು ಲಾಭ ಪಡೆಯುತ್ತೀರಿ. ಸೂರ್ಯ ಸಂಚಾರ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸಂತೋಷ ಇರಲಿದೆ, ಆರೋಗ್ಯ ಉತ್ತಮವಾಗಿರಲಿದೆ.

ಮೀನ ರಾಶಿ
ಮೀನ ರಾಶಿಯವರಲ್ಲಿ ಸೂರ್ಯ 6ನೇ ಮನೆಯಲ್ಲಿ ಇರಲಿದೆ, ಆರ್ಥಿಕವಾಗಿ ನಿಮಗೆ ಉತ್ತಮವಾಗಿದೆ, ಆದರೆ ನೀವು ಖರ್ಚು ನಿಯಂತ್ರಿಸಬೇಕು, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಬರಬಹುದು. ಕುಟುಂಬ ಜೀವನದ ಕಡೆಗೆ ಗಮನಹರಿಸಿ. ಆರೋಗ್ಯ ಸಮಸ್ಯೆಗಳಿರಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Surya Sanchar: Sun Transit In Libra Effects On 12 Zodiac Signs For 30 Days

Surya Sanchar:Sun Transit In Libra, how it effects on 12 zodiac signs, read on..
Story first published: Friday, October 18, 2024, 8:19 [IST]
X
Desktop Bottom Promotion