Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವೃಷಭ ರಾಶಿಯಲ್ಲಿರುವ ಸೂರ್ಯ: ಜೂನ್ 14ರವರೆಗೆ ಈ 4 ರಾಶಿಯವರು ಜಾಗ್ರತೆ
ಮೇ 14ಕ್ಕೆ ಸೂರ್ಯ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಗೆ ಸಂಚರಿಸಿದೆ. ಈ ಸಂಚಾರ 12 ರಾಶಿಗಳ ಮೇಲೆ ಅದರ ಸ್ಥಾನಕ್ಕೆ ತಕ್ಕಂತೆ ಪ್ರಭಾವ ಬೀರಿದೆ. ಕೆಲ ರಾಶಿಗಳಿಗೆ ಈ ಅವಧಿ ತುಂಬಾ ಒಳ್ಳೆಯದಿದ್ದರೆ ಇನ್ನು ಕೆಲ ರಾಶಿಗಳು ಇನ್ನೂ ಸ್ವಲ್ಪ ಕಾಯಬೇಕು, ಮಿಥುನ ಸಂಕ್ರಾಂತಿಯವರೆಗೆ ತಾಳ್ಮೆಯಿಂದಿರಬೇಕು.
ಈ ಸೂರ್ಯ ಸಂಚಾರ ಈ ರಾಶಿಗಳಿಗೆ ಹೆಚ್ಚು ಅನುಕೂಲಕರವಲ್ಲ, ಆದ್ದರಿಂದ ಈ ರಾಶಿಯವರು ವೃತ್ತಿ, ಆರ್ಥಿಕ ಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಸ್ವಲ್ಪ ಜಾಗ್ರತೆವಹಿಸಿದರೆ ಒಳ್ಳೆಯದು.

ಮಿಥುನ ರಾಶಿ
ಸೂರ್ಯ ವೃಷಭ ರಾಶಿಯಲ್ಲಿ ಸೂರ್ಯ ಸಂಚಾರ ಮಾಡಿದಾಗ ನಿಮ್ಮ ರಾಶಿಯಲ್ಲಿ 12ನೇ ಮನೆಯಲ್ಲಿ ಇರಲಿದೆ. 12ನೇ ಮನೆಯಲ್ಲಿ ಸುರ್ಯನ ಸ್ಥಾನ ನಿಮಗೆ ಅಷ್ಟೊಂದು ಅನುಕೂಲಕರವಲ್ಲ. ಈ ಅವಧಿಯಲ್ಲಿ ನೀವು ಅನಗ್ಯತ ವಿಷಯಗಳಿಂದ ದೂರವಿರಿ. ಈ ಅವಧಿಯಲ್ಲಿ ಬೆಲೆ ಬಳುವ ವಸ್ತು ನಷ್ಟವಾಗುವ ಸಾಧ್ಯತೆ ಆದ್ದರಿಂದ ಜಾಗ್ರತೆವಹಿಸಿ. ಇನ್ನು ಈ ಅವಧಿಯಲ್ಲಿ ಕೆಲಸದಲ್ಲಿ ಅತೃಪ್ತಿ ಉಂಟಾಗುವುದು. ಒಂದು ಕೆಲಸ ಸಿಕ್ಕ ಮೇಲೆ ಕೆಲಸ ಬದಲಾಯಿಸಿ, ಆತುರದಿಂದ ಕೆಲಸ ಬಿಡಬೇಡಿ. ಇನ್ನು ಆರ್ಥಿಕವಾಗಿಯೂ ಈ ಅವಧಿ ಚೆನ್ನಾಗಿಲ್ಲ, ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಅಹಂನಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸಿ. ಅನಾರೋಗ್ಯ ಸಮಸ್ಯೆಯೂ ಇರಬಹುದು.
ಕನ್ಯಾ ರಾಶಿ
ಸೂರ್ಯ ವೃಷಭ ರಾಶಿಯಲ್ಲಿ ಇರುವಾಗ ನಿಮಗೆ ಮಿಶ್ರಫಲಿತಾಂಶ. ಈ ತಿಂಗಳಿನಲ್ಲಿ ಹಾಗೂ ಮುಂದಿನ ತಿಂಗಳು ಅರ್ಧವರೆಗೆ ನೀವು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಖಬೇಡಿ. ಏಕೆಂದರೆ ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ನೀವು ಬಡ್ತಿಗೆ ಕಾಯುತ್ತಿದ್ದರೆ ಇನ್ನೂ ಕಾಯಬೇಕು. ಅಲ್ಲದೆ
ಸೂರ್ಯ 9ನೇ ಮನೆಯಲ್ಲಿ ಇರುವ ಈ ಸಮಯದಲ್ಲಿ ನೀವು ಆರೋಗ್ಯದ ಕಡೆಗೂ ತುಂಬಾ ಗಮನಹರಿಸಬೇಕು. ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದರಿಂದ ಸಾಲ ತೆಗೆದುಕೊಳ್ಳಬಹುದು, ಇನ್ನು ಈ ಸಮಯದಲ್ಲಿ ಕೆಲಸ ಕಾರ್ಯದಲ್ಲಿ ಆಸಕ್ತಿ ಕಡಿಮೆ ಇರಲಿದೆ.
ತುಲಾ ರಾಶಿ
ಈ ಸೂರ್ಯ ಸಂಚಾರ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಈ ಅವಧಿಯಲ್ಲಿ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ವೃತ್ತಿ ಜೀವನದಲ್ಲಿ ಆಗಲಿ, ವೈಯಕ್ತಿಕ ಬದುಕಿನಲ್ಲಿ ಆಗಲಿ ನೀವು ಏರಿಳಿತಗಳನ್ನು ಕಾಣಬಹುದು, ಲಾಭ- ನಷ್ಟ ಎರಡೂ ಸರಿದೂಗಿಸಿಕೊಂಡು ಹೋಗಬೇಕು. ಕುಟುಂಬ ಜೀವನದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಲು ಪ್ರಯತ್ನಿಸಬೇಕು. ಇನ್ನು ಆರ್ಥಿಕ ಜೀವನದ ಬಗ್ಗೆ ಹೇಳುವುದಾದರೆ ನೀವು ನಿಮ್ಮ ಅಜಾಗರೂಕತೆಯಿಂದ ಹಣದ ನಷ್ಟವನ್ನು ಅನುಭವಿಸಬಹುದು. ವೈವಾಹಿಕ ಜೀವನದಲ್ಲಿಯೂ ಕೆಲ ಭಿನ್ನಾಭಿಪ್ರಾಯವಿರಬಹುದು. ಈ ಅವಧಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ತಿಂಗಳಿನಲ್ಲಿ ನೀವು ತುಂಬಾನೇ ಜಾಗ್ರತೆವಹಿಸಿ. ವಿವಾಹಿತರು ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದೆ ಅದನ್ನು ದೊಡ್ಡದಾಗಲು ಬಿಡಬೇಡಿ. . ಹಣದ ಬಗ್ಗೆ ಜಾಗ್ರತೆವಹಿಸಿ, ಯಾವುದೇ ಬಗೆಯ ಹೂಡಿಕೆ ನಿಮಗೆ ಒಳ್ಳೆಯದಲ್ಲ. ವೃತ್ತಿ ಬದುಕಿನಲ್ಲಿ ಧನಾತ್ಮಕ ಪ್ರಯೋಜನ ಪಡೆಯಲ ಇನ್ನೂ ಸ್ವಲ್ಪ ಕಾಯಬೇಕಾಗುವುದು, ಆದರೆ ನಿರಾಸೆ ಬೇಡ, ಶೀಘ್ರವೇ ಎಲ್ಲಾ ಸರಿಯಾಗಲಿದೆ. ಆರೋಗ್ಯ ಸರಾಸರಿಯಾಗಿರಲಿದೆ.
ಸೂರ್ಯನ ಸ್ಥಾನ ಬಲಪಡಿಸಲು ಈ ಮಂತ್ರ ಪಠಿಸಿ
ಸೂರ್ಯ ಬೀಜ ಮಂತ್ರ :
ಓಂ ಹರಂ ಹ್ರೀ ಹ್ರೌಂ ಸಃ ಸೂರ್ಯಾಯ ನಮಃ
ಸೂರ್ಯ ಗಾಯತ್ರಿ ಮಂತ್ರ :
ಓಂ ಭಾಸ್ಕರಾಯ ವಿದ್ಮಹೇ ಮಹಾದುತ್ಯಾತಿಕರಾಯ ಧೀಮಹಿ ತಾನಃ ಸೂರ್ಯ ಪ್ರಚೋದಯಾತ್ ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡೇ ಧೀಮಹಿ ತನಃ ಸೂರ್ಯ ಪ್ರಚೋದಯಾತ್ ಓಂ ಸಪ್ತ ತುರಂಗಾಯ ವಿದ್ಮಹೇ ಸಹಸ್ರ ಕೀರ್ಣಯ ಧೀಮಹಿ ತನ್ನೋ ರವಿ ಪ್ರಚೋದಯಾತ್
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
