Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೂರ್ಯನು ಕರ್ಕ ರಾಶಿಯಲ್ಲಿ ಇರುವ ಈ ಅವಧಿ ಈ 4 ರಾಶಿಗಳಿಗೆ ಅದ್ಭುತವಾಗಿರಲಿದೆ
ನವ ಗ್ರಹಗಳ ಅಧಿಪತಿಯಾಗಿರುವ ಸೂರ್ಯನು ಜುಲೈ 16ಕ್ಕೆ ಕರ್ಕ ರಾಶಿಗೆ ಸಂಚರಿಸಿದೆ, ಈ ಸಂಚಾರ ಕೆಲವೊಂದು ರಾಶಿಗಳಿಗೆ ಸವಾಲುಗಳನ್ನು ತಂದರೆ ಇನ್ನು ಕಲೆವು ರಾಶಿಯವರಿಗೆ ಅದ್ಭುತವಾಗಿದೆ. ಸೂರ್ಯ ಕರ್ಕ ರಾಶಿಯಲ್ಲಿದ್ದಾಗ ಈ ರಾಶಿಗಳಲ್ಲಿ ಸೂರ್ಯನ ಸ್ಥಾನವು ಅನುಕೂಲಕರ ಸ್ಥಾನದಲ್ಲಿ ಇರುವುದರಿಂದ ಈ ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಯಾವೆಲ್ಲಾ ರಾಶಿಗಳಿಗೆ ಈ ಅವಧಿ ಅದೃಷ್ಟದ ಅವಧಿ ಎಂದು ನೋಡೋಣ ಬನ್ನಿ:

ಮೇಷ ರಾಶಿ
ಸೂರ್ಯ ಜುಲೈ 16ಕ್ಕೆ ಕರ್ಕ ರಾಶಿಗೆ ಸಂಚರಿಸಿದೆ, ಈ ಸಂಚಾರ ನಿಮ್ಮ ಮೇಲೆ ತುಂಬಾನೇ ಒಳ್ಳೆಯ ಪ್ರಭಾವ ಬೀರಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುವುದರಿಂದ ಈ ಸಮಯದಲ್ಲಿ ಯಾವುದೇ ಪ್ರಮುಖ ಚಿಂತೆಯಿಲ್ಲದೆ ಆರಾಮವಾಗಿರುತ್ತೀರಿ. ಇನ್ನು ಏನಾದರೂ ಹೊಸ ಕೆಲಸಕ್ಕೆ ಪ್ರಯತ್ನ ಮಾಡಿದ್ದರೆ ಈ ಸಮಯದಲ್ಲಿ ನಿಮಗೆ ಧನಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಪ್ರಯೋಜನಕಾರಿಯಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಈ ಸಮಯದಲ್ಲಿ ಆರೋಗ್ಯ ಕೂಡ ಉತ್ತಮವಾಗಿರಲಿದೆ.
ವೃಷಭ ರಾಶಿ
ಈ ಸೂರ್ಯ ಸಂಚಾರ ವೃಷಭ ರಾಶಿಯವರಿಗೂ ತುಂಬಾನೇ ಪ್ರಯೋಜನಕಾರಿಯಾಗಿದೆ. ವೃತ್ತಿ ಬದುಕಿನ ದೃಷ್ಟಿಯಿಂದ ನೋಡುವುದಾದರೆ ಈ ಸಮಯ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಅಥವಾ ಹೊಸ ಕೆಲಸ ಮಾಡುವುದಾದರೆ ಈ ಸಮಯ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳು ಕೂಡ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಆರ್ಥಿಕವಾಗಿ ಉತ್ತಮವಾಗಿದೆ, ಈ ಸಮಯದಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡಲು ಹೋಗಲೇಬೇಡಿ.
ಮಿಥುನ ರಾಶಿ
ಸೂರ್ಯ ಕರ್ಕ ರಾಶಿಗೆ ಸಂಚರಿಸಿದಾಗ ಮಿಥುನ ರಾಶಿಗೆ ತುಂಬಾನೇ ಅನುಕೂಲಕರ ಪ್ರಯೋಜನವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ವೃತ್ತಿ ಬದುಕು ತುಂಬಾನೇ ಚೆನ್ನಾಗಿರಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದು. ಆರ್ಥಿಕವಾಗಿ ಯಾವುದೇ ದೊಡ್ಡ ಸಮಸ್ಯೆ ಇರಲ್ಲ. ಈ ಸಮಯದಲ್ಲಿ ಕುಟುಂಬ ಜೀವನ ಚೆನ್ನಾಗಿರಲಿದೆ, ಇನ್ನು ವೈವಾಹಿಕ ಬದುಕಿನಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ಈ ಸೂರ್ಯ ಸಂಚಾರ ತುಲಾ ರಾಶಿಯವರಿಗೆ ತುಂಬಾನೇ ಪ್ರಯೋಜನಕಾರಿಯಾಗಲಿದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಪಡೆಯುತ್ತೀರಿ, ಈ ಸಮಯದಲ್ಲಿ ನೀವು ನಿಮ್ಮ ಗುರಿಮುಟ್ಟಲು ಸಾಧ್ಯವಾಗುವುದು. ವೈವಾಹಿಕ ಸಂಬಂಧ ಚೆನ್ನಾಗಿರಲಿದೆ. ವ್ಯಾಪಾರಿಗಳು ಲಾಭ ಗಳಿಸುತ್ತೀರಿ, ಈ ಸಮಯವನ್ನು ಸಂತೋಷದಿಂದ ಕಳೆಯುತ್ತೀರಿ. ಈ ಸಮಯದಲ್ಲಿ ಆರೋಗ್ಯ ಕೂಡ ಚೆನ್ನಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
