Solar Eclipse 2026: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ? ರಾಶಿಯವರಿಗೆ ಅದೃಷ್ಟ, ಯಾರಿಗೆ ಕಷ್ಟ?

2026ರ ಮೊದಲ ಸೂರ್ಯಗ್ರಹಣ ಯಾವಾಗ? ಈ 4 ರಾಶಿಯವರು ತುಂಬಾನೇ ಹುಷಾರ್.. ಯಾವ ರಾಶಿಯವರಿಗೆ ಲಾಭ? ಯಾರಿಗೆ ನಷ್ಟ? ವರ್ಷದ ಮೊದಲ ಸೂರ್ಯ ಗ್ರಹಣವು (Surya Grahan 2026) ಜ್ಯೋತಿಷ್ಯ ಲೋಕದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹತ್ವದ ಪರಿಣಾಮಗಳನ್ನು ಬೀರಲಿರುವ ಈ ಗ್ರಹಣ ಯಾವಾಗ ಸಂಭವಿಸಲಿದೆ, ಇದರ ಸಮಯ ಮತ್ತು ದ್ವಾದಶ ರಾಶಿಗಳ ಮೇಲೆ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.

ಗ್ರಹಣಗಳು ಮಾನವ ಜೀವನ ಹಾಗೂ ಪ್ರಕೃತಿಯ ಮೇಲೆ ಗಣನೀಯ ಪ್ರಭಾವ ಬೀರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ. 2026ರ ಈ ಮೊದಲ ಸೂರ್ಯಗ್ರಹಣವು (Solar Eclipse 2026) ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ಭಾರತದಲ್ಲಿ (Surya Grahan 2026 In India) ಇದು ಗೋಚರಿಸದಿದ್ದರೂ, ಸೂರ್ಯನ ಸ್ಥಾನಪಲ್ಲಟದಿಂದ ಉಂಟಾಗುವ ಗ್ರಹಗತಿಗಳ ಬದಲಾವಣೆಗಳು 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರಲಿವೆ.

Solar Eclipse 2026 In India Date

ಗ್ರಹಣದ ಸಮಯದಲ್ಲಿ ಮಾಡಬೇಕಾದ ಹಾಗೂ ಮಾಡಬಾರದ ಕೆಲಸಗಳು ಮತ್ತು ದೋಷ ನಿವಾರಣೆಗೆ ಪರಿಹಾರಗಳ (Surya Grahan 2026 Effect on Zodiac Sign) ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಗ್ರಹಣದ ದಿನಾಂಕ ಮತ್ತು ಸಮಯ

ಗ್ರಹಣದ ಆರಂಭ: ಸಂಜೆ 5:26 ಗಂಟೆಗೆ
ಗ್ರಹಣದ ಮುಕ್ತಾಯ: ರಾತ್ರಿ 7:57 ಗಂಟೆಗೆ
ಅವಧಿ: ಒಟ್ಟು 2 ಗಂಟೆ 31 ನಿಮಿಷಗಳ ಕಾಲ

2026ರ ಲ್ಲಿ ಸಂಭವಿಸಲಿರುವ ಮೊದಲ ಸೂರ್ಯಗ್ರಹಣವು ಫೆಬ್ರವರಿ 12ರ ಮಂಗಳವಾರದಂದು ಗೋಚರಿಸಲಿದೆ. ಫಾಲ್ಗುಣ ಮಾಸದ ಅಮಾವಾಸ್ಯೆಯಂದು ಸಂಭವಿಸುವ ಈ ಗ್ರಹಣವು ಸಂಜೆ 5:26ಕ್ಕೆ ಆರಂಭವಾಗಿ, ರಾತ್ರಿ 7:57ಕ್ಕೆ ಮುಕ್ತಾಯಗೊಳ್ಳಲಿದೆ. ಇದು ಒಟ್ಟು 2 ಗಂಟೆ 31 ನಿಮಿಷಗಳ ಕಾಲ ಇರಲಿದೆ.

ಪ್ರಮುಖ ಅಂಶವೆಂದರೆ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, 'ಸೂತಕ ಕಾಲ'ದ ನಿಯಮಗಳು ಭಾರತದಲ್ಲಿ ಅನ್ವಯವಾಗುವುದಿಲ್ಲ. ಆದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಪಲ್ಲಟದ ಪರಿಣಾಮವು ರಾಶಿಗಳ ಮೇಲಾಗುವುದು ಖಚಿತ. ಆದ್ದರಿಂದ ಸೂಕ್ತ ಮುಂಜಾಗ್ರತೆ ವಹಿಸುವುದು ಉತ್ತಮ.

ಯಾವ ರಾಶಿಯವರು ಜಾಗರೂಕರಾಗಿರಬೇಕು?

ಈ ಸೂರ್ಯಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುವುದರಿಂದ ಕೆಲವು ರಾಶಿಗಳಿಗೆ ಸವಾಲುಗಳು ಎದುರಾಗಬಹುದು.

ಕುಂಭ

ಕುಂಭ ರಾಶಿಯವರಿಗೆ ಮಾನಸಿಕ ಒತ್ತಡ, ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಹಾಗೂ ವೃತ್ತಿಯಲ್ಲಿ ಅಡೆತಡೆಗಳು ಉಂಟಾಗಬಹುದು.

ಸಿಂಹ

ಸಿಂಹ ರಾಶಿಯ ಅಧಿಪತಿ ಸೂರ್ಯನಾಗಿದ್ದು, ಈ ರಾಶಿಯವರು ತಮ್ಮ ಆರೋಗ್ಯ ಮತ್ತು ಆತ್ಮವಿಶ್ವಾಸದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾವುದೇ ಗೌರವಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆ ಅಗತ್ಯ.

ಮೇಷ

ಮೇಷ ರಾಶಿಯವರಿಗೆ ಅನಗತ್ಯ ಓಡಾಟ ಮತ್ತು ಶ್ರಮ ಹೆಚ್ಚಾಗಬಹುದು; ತಾಳ್ಮೆಯಿಂದ ವರ್ತಿಸುವುದು ಉತ್ತಮ.

ಮೀನ

ಮೀನ ರಾಶಿಯವರು ಹಣಕಾಸು ವ್ಯವಹಾರಗಳು ಹಾಗೂ ಕೌಟುಂಬಿಕ ಕಲಹಗಳಿಂದ ದೂರವಿರಬೇಕು; ಆಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಕನ್ಯಾ ಮತ್ತು ವೃಶ್ಚಿಕ

ಕನ್ಯಾ ಮತ್ತು ವೃಶ್ಚಿಕ ರಾಶಿಗಳಿಗೂ ಈ ಸಮಯವು ಮಿಶ್ರಫಲ ನೀಡಲಿದೆ. ಆದ್ದರಿಂದ, ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ.

ಯಾವ ರಾಶಿಯವರಿಗೆ ಶುಭ ಫಲ?

ಗ್ರಹಣವೆಂದರೆ ಎಲ್ಲರಿಗೂ ಕೆಟ್ಟದ್ದನ್ನು ಅಥವಾ ನಕಾರಾತ್ಮಕ ಪರಿಣಾಮಗಳನ್ನೇ ತರುತ್ತದೆ ಎಂಬುದು ತಪ್ಪು ಕಲ್ಪನೆ. ಕೆಲವು ರಾಶಿಗಳಿಗೆ ಈ ಸೂರ್ಯಗ್ರಹಣವು ಶುಭಫಲಗಳನ್ನು ಮತ್ತು ಅದೃಷ್ಟವನ್ನೂ ತರಬಲ್ಲದು.

ಮಿಥುನ

ಮಿಥುನ ರಾಶಿಯವರಿಗೆ ಆಕಸ್ಮಿಕ ಧನಲಾಭದ ಯೋಗವಿದ್ದು, ಬಾಕಿ ಉಳಿದಿರುವ ಹಣ ಸಿಗಲಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳು ಗೋಚರಿಸಬಹುದು.

ಮಕರ

ಮಕರ ರಾಶಿಯಲ್ಲಿ ರಿಯಲ್ ಎಸ್ಟೇಟ್, ಭೂಮಿ ಅಥವಾ ಕಟ್ಟಡ ನಿರ್ಮಾಣದಂತಹ ಕ್ಷೇತ್ರಗಳಲ್ಲಿರುವವರಿಗೆ ಇದು ಲಾಭದಾಯಕ ಸಮಯ.

ವೃಷಭ ಮತ್ತು ಕರ್ಕ

ವೃಷಭ ಮತ್ತು ಕರ್ಕ ರಾಶಿಯವರಿಗೆ ಅವರ ಜಾತಕದಲ್ಲಿ ದಶಾ-ಅಂತರ್ದಶೆಗಳು ಅನುಕೂಲಕರವಾಗಿದ್ದರೆ, ವೃತ್ತಿಜೀವನದಲ್ಲಿ ಅಸಾಧಾರಣ ಯಶಸ್ಸು ಮತ್ತು ಹಣಕಾಸಿನ ಮುನ್ನಡೆ ಕಾಣಬಹುದು.

ಗ್ರಹಣದ ದೋಷ ನಿವಾರಣೆಗೆ ಪರಿಹಾರಗಳು

ಭಾರತದಲ್ಲಿ ಗ್ರಹಣ ಗೋಚರಿಸದಿದ್ದರೂ, ಅದರ ಪ್ರಭಾವದಿಂದ ಶುಭ ಫಲಗಳನ್ನು ಪಡೆಯಲು ಕೆಲವು ಪರಿಹಾರ ಕ್ರಮಗಳನ್ನು ಅನುಸರಿಸಬಹುದು.

• ಗ್ರಹಣ ಮುಗಿದ ನಂತರ ಶುದ್ಧ ಸ್ನಾನ ಮಾಡಿ ಬಡವರಿಗೆ ಅಥವಾ ಅಗತ್ಯ ಇರುವವರಿಗೆ ದಾನ ಧರ್ಮಗಳನ್ನು ಮಾಡಿ.

• ಸೂರ್ಯದೇವನ ಆಶೀರ್ವಾದಕ್ಕಾಗಿ 'ಓಂ ಆದಿತ್ಯಾಯ ನಮಃ' ಅಥವಾ ಇತರ ಸೂರ್ಯ ಮಂತ್ರಗಳನ್ನು ಜಪಿಸುವುದು ಉತ್ತಮ.

• ಗರ್ಭಿಣಿಯರು ಗ್ರಹಣ ನಡೆಯುವ ಅವಧಿಯಲ್ಲಿ ಹರಿತವಾದ ವಸ್ತುಗಳನ್ನು ಬಳಸದೆ, ಮನಸ್ಸನ್ನು ಶಾಂತವಾಗಿಟ್ಟು ದೇವರ ನಾಮಸ್ಮರಣೆ ಮಾಡುವುದು ಒಳ್ಳೆಯದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Surya Grahan 2026: Solar Eclipse 2026 In India Date, Time and Impact on Your Zodiac Sign

Surya Grahan 2026: Solar Eclipse 2026 In India Date, Time, and Impact on Your Zodiac Sign
Story first published: Friday, January 9, 2026, 19:30 [IST]
X
Desktop Bottom Promotion