ಸೂರ್ಯ ಗೋಚಾರ 2025: ಮೇಷ ರಾಶಿಯಲ್ಲಿ ಸೂರ್ಯ ಸಂಚಾರವು 6 ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತಿದೆ?

ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇಷ ರಾಶಿಯಲ್ಲಿ ಸೂರ್ಯನ ಸ್ಥಾನವು ಒಳ್ಳೆಯ ಮತ್ತು ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಮೇಷ ರಾಶಿಯಲ್ಲಿ ಸೂರ್ಯನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ ಸೂರ್ಯ ಸಂಚಾರದ ಪರಿಣಾಮವೇನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ತುಲಾ ರಾಶಿ

ತುಲಾ ರಾಶಿಯ ಹನ್ನೊಂದನೇ ಮನೆಯಿಂದ ಅಧಿಪತಿಯಾಗಿರುವ ಸೂರ್ಯನು ಏಳನೇ ಮನೆಗೆ ಚಲಿಸಲಿದ್ದಾನೆ. ರಾಶಿಚಕ್ರ ಚಿಹ್ನೆಯಿಂದ ಏಳನೇ ವೈವಾಹಿಕ ಮನೆಯಲ್ಲಿ ಸೂರ್ಯನ ಸಂಚಾರದ ಪರಿಣಾಮವು ತುಂಬಾ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಲವು ರೀತಿಯ ಅಡೆತಡೆಗಳು ನಿವಾರಣೆ ಆಗುತ್ತದೆ. ವಿವಾಹ ಸಂಬಂಧ ಸಮಸ್ಯೆಗಳು ನಿವಾರಣೆಯಾಗಲಿದೆ. ಹಾಗೆ ನಿಮ್ಮಲ್ಲಿ ಶಾಂತಿ ಇರಲಿದೆ. ಅನಗತ್ಯ ಖರ್ಚಗಳಿಗೆ ಕಡಿವಾಣ ಹಾಕುವುದು ಬಹಳ ಉತ್ತಮ.

Surya Gochar Surya Transit In Aries Will Effect On These 6 Zodiac Signs

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 06 ಮನೆಗೆ ಸೂರ್ಯನು ಸಾಗುತ್ತಾನೆ. ಇದರಿಂದ ಆರೋಗ್ಯದ ಬಗ್ಗೆ ಯಾವುದೇ ಅತ್ಯಂತ ಇದ್ದರೂ ನಿವಾರಣೆಯಾಗಲಿದೆ. ನಿಮ್ಮ ಅದಮ್ಯ ಧೈರ್ಯ ಮತ್ತು ಶೌರ್ಯದ ಸಹಾಯದಿಂದ, ನೀವು ಕಠಿಣ ಸಂದರ್ಭಗಳನ್ನು ಸಹ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸಿ. ಕರ್ಮ ಭಾವದ ಅಧಿಪತಿಯ ಸಂಚಾರವು ಆರನೇ ಮನೆಯಲ್ಲಿ ಅಂದರೆ ಶತ್ರು ಮನೆಯಲ್ಲಿ ಉತ್ತುಂಗದಲ್ಲಿದ್ದಾಗ ಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಶತ್ರುಗಳ ವಿರುದ್ಧ ಜಯ ಸಾದಿಸಲಿದ್ದೀರಿ.

ಧನು ರಾಶಿ

ಧನು ರಾಶಿಯ ಐದನೇ ಮನೆಯಲ್ಲಿ ಒಂದು ತಿಂಗಳ ಕಾಲ ಸೂರ್ಯ ಸಂಚಾರವಿರಲಿದೆ. ಸೃಜನಶೀಲ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ಮತ್ತು ಸ್ಪರ್ಧೆಗಳಿಗೆ ಹಾಜರಾಗುವವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಸರ್ಕಾರಿ ಕೆಲಸ ಪಡೆಯಲು ಇಚ್ಛಿಸಿದ್ದರೆ ಅಥವಾ ಅದಕ್ಕೆ ತಯಾರಿ ನಡೆಸಿದ್ದರೆ ಈ ಸಮಯದಲ್ಲಿ ಶುಭವಾಗಲಿದೆ. ಹಲವು ವರ್ಷದಿಂದ ಮಾಡಿಕೊಂಡು ಬಂದ ಕೆಲಸವು ನಿಮ್ಮ ಪ್ರಗತಿಗೆ ಕಾರಣವಾಗಬಹದು.

ಮಕರ ರಾಶಿ

ಮಕರ ರಾಶಿಯ ನಾಲ್ಕನೇ ಮನೆಗೆ ಸೂರ್ಯ ಚಲಿಸಲಿದ್ದಾನೆ. ಆದರೆ ಮಕರ ರಾಶಿಗೆ ಇದು ಶುಭ ಸಂಕೇತವಲ್ಲ. ನಿಮ್ಮ ದಾಂಪತ್ಯ ಜೀವನದಲ್ಲಿ ಒತ್ತಡ ಹೆಚ್ಚಾಗಲಿದೆ. ಹಾಗೆ ಮಕ್ಕಳಿಂದ ಸಮಸ್ಯೆಗಳ ನೋಡಬಹುದು. ಇದರಿಂದ ನಿಮ್ಮ ಮಾನಸಿಕ ಸ್ಥಿತಿ ಹದಗೆಡಬಹುದು. ಅಂದರೆ ಅಹಿತಕರ ಸುದ್ದಿಗಳ ಪಡೆಯಬಹದು. ಶುಭ ಕಾರ್ಯಗಳಲ್ಲಿ ವಿಲಂಭ, ಹೊಸ ಉದ್ಯೋಗ ಅಥವಾ ಸ್ವಂತ ಉದ್ಯೋಗದಲ್ಲಿ ಸಣ್ಣ ಅಡೆತಡೆ ಎದುರಾಗಬಹುದು. ಹೂಡಿಕೆ ಮಾಡುವುದರಿಂದ ದೂರವೇ ಉಳಿದುಯುವುದು ಉತ್ತಮ ಇಲ್ಲವೆ ಬಹಳ ಬುದ್ದಿವಂತಿಕೆ ಉಪಯೋಗಿಸುವುದು ಸಮಯೋಚಿತ.

ಕುಂಭ ರಾಶಿ

ಕುಂಭ ರಾಶಿಯ ಮೂರನೇ ಮನೆಯಲ್ಲಿ ಸೂರ್ಯ ಸಂಚಾರವಿದ್ದು, ಸಕಾರಾತ್ಮಕ ಪರಿಣಾಮಕ್ಕೆ ಕಾರಣವಾಲಿದೆ. ನೀವು ಅವಿವಾಹಿತರಾಗಿದ್ದರೆ ಒಳ್ಳೆಯ ಕಾಲವಾಗಲಿದೆ. ಕುಟುಂಬದಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ ಸಿಗಲಿದೆ. ವ್ಯವಹಾರದಲ್ಲಿ ಪ್ರಗತಿ ನೋಡಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಕ್ಕೆ ಕಾರಣವಾಗಬಹುದು. ಸ್ನೇಹಿತರಿಂದ ಹಣ ಪಡೆಯುವುದು ಅಥವಾ ನೀಡುವುದನ್ನು ಆದಷ್ಟು ತಡೆಯುವುದು ಉತ್ತಮ.

ಮೀನ ರಾಶಿ

ಮೇಷ ರಾಶಿಯ ಎರಡನೇ ಮನೆಯಲ್ಲಿ ಸೂರ್ಯನ ಸಂಚಾರವಿದ್ದು, ಇದು ಅನೇಕ ರೀತಿಯಲ್ಲಿ ಸಮಸ್ಯೆಯಾಗಿ ಕಾಡಬಹುದು. ಆರೋಗ್ಯ ಸಮಸ್ಯೆಯ ಜೊತೆಗೆ ನಿಮ್ಮ ಲಾಭದಲ್ಲಿ ಇಳಿಮುಖ ನೋಡಬಹುದು. ಹಾಗೆ ಸಂಬಂಧಿಕರ ನಡುವರ ಮನಸ್ತಾಪಗಳು ಮೂಡಬಹುದು. ಆದರೆ ಸ್ನೇಹಿತರೊಂದಿಗಿನ ಬಾಂಧವ್ಯ ವೃದ್ಧಿಗೆ ಅವಕಾಶವಿದೆ. ನಿಮ್ಮ ಬಯಕೆಯಂತೆ ವಾಹನ ಖರೀದಿಯ ಆಸೆಗಳನ್ನು ಮತ್ತೆ ಮುಂದೂಡಬೇಕಾಗಬಹುದು. ಹಾಗೆ ಎಲ್ಲಾ ಸಮಯದಲ್ಲೂ ನಿಮ್ಮ ಪರವಾಗಿದ್ದ ಜನರು ನಿಮ್ಮಿಂದ ದೂರಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Surya Gochar: Surya Transit In Aries Will Effect On These 6 Zodiac Signs?

The Sun entered Aries on April 14. The position of the Sun in Aries is considered good and powerful. The transit of the Sun in Aries affects all the 12 zodiac signs. So let us know what is the effect of the transit of the Sun here.
Story first published: Monday, April 14, 2025, 20:35 [IST]
X
Desktop Bottom Promotion