Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ವರ್ಷದ ಬಳಿಕ ಕುಂಭ ರಾಶಿಗೆ ಸೂರ್ಯ ಸಂಚಾರ.! ಯಾರಿಗೆಲ್ಲಾ ಲಾಭ?
ಸೂರ್ಯನನ್ನು ಜ್ಯೋತಿಷ್ಯಶಾಸ್ತ್ರದಲ್ಲಿ ಕೇಂದ್ರ ಬಿಂದು ಎಂದು ಪರಿಗಣಿಸಿ ಅಧಿಪತಿ ಎಂದು ಕರೆಯಲಾಗಿದೆ. ಸೂರ್ಯನ ಚಲನೆ ಅನೇಕ ಬಾರಿ ಲಾಭಗಳಿಗೆ ಕಾರಣವಾಗುತ್ತಿರುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ಚಲನೆಯ ದಿಕ್ಕು ಹಾಗೂ ರಾಶಿ ಬದಲಿಸುತ್ತಾನೆ. ಹೀಗೆ ಸೂರ್ಯನ ಸಂಚಾರದಲ್ಲಿ ಬದಲಾವಣೆ ಆದಾಗಲೆಲ್ಲ. ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ನೋಡಬಹುದು.
ಅದರಲ್ಲೂ ನಾವಿಂದು ಸೂರ್ಯ ಫೆಬ್ರವರು 12ರಂದು ಕುಂಭ ರಾಶಿಗೆ ಚಲಿಸುತ್ತಿರುವುದನ್ನು ಗಮನಿಸಬೇಕಿದೆ. ಆದರೆ ಕುಂಭ ರಾಶಿಯಲ್ಲಿ ಸೂರ್ಯ ಶನಿ ಜೊತೆ ಸಂಯೋಗವಾಗುತ್ತಾನೆ, ಇದು ಎಲ್ಲಾ 12 ರಾಶಿಗಳ ಮೇಲಿನ ಪರಿಣಾಮಕ್ಕೆ ಕಾರಣವಾಗುತ್ತಿದೆ. ಹಾಗಾದ್ರೆ ಸೂರ್ಯ ಹಾಗೂ ಶನಿಯ ಸಂಯೋಗವು ಯಾವೆಲ್ಲಾ ರಾಶಿಗಳಿಗೆ ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.

ಸೂರ್ಯ ಹಾಗೂ ಶನಿಯನ್ನು ತಂದೆ ಹಾಗೂ ಪುತ್ರ ಎಂದು ಪರಿಗಣಿಸಲಾಗಿದೆ. ಆದ್ರೆ ಈ ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಯವರಲ್ಲಿ ಶುಭಕ್ಕೆ ಕಾರಣವಾದರೆ ಮತ್ತೆ ಕೆಲವು ರಾಶಿಗಳಲ್ಲಿ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ. ಹಾಗಾದ್ರೆ ನಾವಿಂದು ಈ ಸೂರ್ಯನ ಕುಂಭ ರಾಶಿಯ ಚಲನೆಯಿಂದಾಗಿ ಯಾವೆಲ್ಲಾ ರಾಶಿಗಳಿಗೆ ಶುಭ ತರಲಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಮೇಷ ರಾಶಿ
ಕುಂಭ ರಾಶಿಯಲ್ಲಿ ಸೂರ್ಯ ಸಂಚರಿಸುವುದು ಮೇಷ ರಾಶಿಯವರಲ್ಲಿ ಪರಿಪೂರ್ಣ ಲಾಭಕ್ಕೆ ಕಾರಣವಾಗಬಹುದು. ನೀವು ವೃತ್ತಿಪರವಾದ ಲಾಭಕ್ಕೆ ಕಾರಣರಾಗುತ್ತೀರಿ. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸುವ ಜೊತೆಗೆ ಒಳ್ಳೆಯ ಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ. ಫೆಬ್ರವರಿ ಕಳೆದು ಮಾರ್ಚ್ ಮೊದಲ ವಾರದ ವರೆಗೂ ನಿಮಗೆ ಆರಾಮದಾಯಕ ದಿನಗಳು ಬರಬಹುದು. ವ್ಯಾಪಾರಗಳು ನೀವು ಅಂದುಕೊಂಡಂತೆ ನಡೆಯಲಿದೆ.
ಮಿಥುನ ರಾಶಿ
ಕುಂಭ ರಾಶಿಗೆ ಸೂರ್ಯ ಸಂಚಾರವು ಶನಿಯ ಜೊತೆಗಿನ ಸಂಯೋಗದಿಂದಾಗಿ ಮಿಥುನ ರಾಶಿಯವರಲ್ಲಿ ಕೌಟುಂಬಿಕ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗುತ್ತಿದೆ. ನಿಮ್ಮ ದಾಂಪತ್ಯದಲ್ಲಿದ್ದ ಬಿರುಕು, ಅಶಾಂತಿಯಂತಹ ಸಮಸ್ಯೆ ಬಗೆಹರಿಯಲಿದೆ. ನೀವು ಬಯಸಿದ್ದ ಕೆಲಸ ನಿಮ್ಮನ್ನು ಹುಡುಕಿ ಬರಬಹುದು. ಆದಾಯದ ಮೂಲಗಳು ಹೆಚ್ಚಾಗುವ ಸಂಭವವಿದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಈ ಸೂರ್ಯ ಸಂಚಾರವು ಮಿಶ್ರ ಫಲಕ್ಕೆ ಕಾರಣವಾಗುತ್ತದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹೂಡಿಕೆ ಮತ್ತು ಉಳಿತಾಯದಂತಹ ಕೆಲಸಕ್ಕೆ ನೀವು ಮುಂದಾಗಬಹುದು. ಶುಕ್ರವಾರ ಸಾಲ ನೀಡುವುದು ಮಾಡಬೇಡಿ. ಬಾಕಿ ಉಳಿದ ಕೆಲಸವನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿ. ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಅವಿವಾಹಿತರಲ್ಲಿ ಹೊಸ ಸಂಬಂಧಗಳ ವೃದ್ಧಿಗೆ ಹೊಸ ಹೆಜ್ಜೆ ಇಡುತ್ತಾರೆ. ಹೊಸದಾಗಿ ಮಾಡುತ್ತಿರುವ ಕೆಲಸ ಕಾರ್ಯಗಳ ಮೇಲೆ ಹೆಚ್ಚು ಎಚ್ಚರಿಕೆ ಇರಲಿ.
ತುಲಾ ರಾಶಿ
ಸೂರ್ಯ ಕುಂಭ ರಾಶಿಗೆ ಚಲಿಸುವುದು ತುಲಾ ರಾಶಿಯವರಲ್ಲಿ ಲಾಭದಾಯಕ ಬೆಳವಣಿಗೆಗೆ ಕಾರಣವಾಗುತ್ತಿದೆ. ಅವರ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಮುಗಿಯಲಿದೆ. ಅದರಲ್ಲೂ ಪ್ರತಿಫಲ ನಿಮ್ಮ ಪರವಾಗಿ ಇರಲಿದೆ. ಹೆಚ್ಚು ಲಾಭದಾಯಕ ವಿಚಾರಗಳು ಈ ಸಮಯದಲ್ಲಿ ನಡೆಯಲಿದೆ. ದೂರ ಪ್ರಯಾಣದಂತಹ ಕಾರ್ಯದಲ್ಲಿ ನೀವು ತೊಡಗಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಲ್ಲಿ ತೆಗೆದುಕೊಂಡ ನಿರ್ಧಾರವು ನಿಮಗೆ ಫಲ ನೀಡಲಿದೆ. ಅನಗತ್ಯ ಖರ್ಚು, ಮಾತುಗಾರಿಕೆಯಿಂದ ದೂರವೇ ಇರಿ.
ಧನು ರಾಶಿ
ಸೂರ್ಯನು ಕುಂಭ ರಾಶಿಯಲ್ಲಿ ಸಾಗಿದಾಗ ಧನು ರಾಶಿಯವಲ್ಲಿ ಅತ್ಯಧಿಕ ಲಾಭಗಳ ನೋಡಬಹುದು. ನಿಮ್ಮ ಕುಟುಂಬದಲ್ಲಿನ ಹೊಂದಾಣಿಕೆ ಹೆಚ್ಚಾಗಲಿದೆ. ಕಷ್ಟದ ದಿನಗಳ ಕಳೆಯಲು ನಿಮ್ಮ ಪ್ರಯತ್ನಗಳು ಫಲ ನೀಡಲಿವೆ. ಹಲವು ಹೊಸ ಕೆಲಸಗಳ ನೀವು ಮಾಡಬೇಕಾಗುತ್ತದೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ನಿಮ್ಮ ಕಡೆಗಿನ ಒಲವು ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications