Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ಕ ರಾಶಿಗೆ ಸೂರ್ಯ ಸಂಚಾರ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ!
ಜ್ಯೋತಿಷ್ಯಶಾಸ್ತ್ರದಲ್ಲಿ ಎಲ್ಲಾ ಗ್ರಹಗಳನ್ನು ಮುಖ್ಯ ಎಂದು ಪರಿಗಣಿಸಲಾಗಿದೆ. ಹಾಗೆ ಎಲ್ಲಾ ಗ್ರಹಗಳಿಗೂ ಆಯಾ ರಾಶಿಗಳ ಚಲನೆಯಿಂದ ಹಲವು ರೀತಿ ಲಾಭಗಳಾಗುವುದು ನೋಡಬಹುದು. ಹಾಗೆ ಗ್ರಹಗಳ ಸ್ಥಾನ ಪಲ್ಲಟವು ಹಲವು ರೀತಿಯ ಬದಲಾವಣೆಗಳಿಗೆ ಕಾರಣವಾಗಲಿದೆ. ಸದ್ಯ ಗ್ರಹಗಳ ರಾಜ ಸೂರ್ಯನ ಚಲನೆಯಲ್ಲಾಗುವ ಬದಲಾವಣೆಯು ಈಗ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.
ಈ ಜುಲೈ 16ರಂದು ಸೂರ್ಯನು ಕರ್ಕ ರಾಶಿಗೆ ಚಲಿಸಲಿದ್ದಾನೆ. ಇದು ಹಲವು ರಾಶಿಗಳಲ್ಲಿ ಬದಲಾವಣೆ, ಅದೃಷ್ಟ ತರಲಿದೆ. ಹಾಗೆ ಹಲವರಿಗೆ ಇದು ಅಶುಭ ಕಾರವಾಗಿಯೂ ಇರಲಿದೆ. ಸೂರ್ಯನು 9 ಗ್ರಹಗಳ ಕೇಂದ್ರ ಬಿಂದು ಹಾಗೆ ರಾಜ ಎಂದು ಪರಿಗಣಿಸಲಾಗಿದೆ. ಕೇಂದ್ರ ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದು ನೋಡಬಹುದು.

ಸೂರ್ಯನು ಪ್ರತಿ 30 ದಿನಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಚಂದ್ರನಿಂದ ಆಳಲ್ಪಡುವ ಕರ್ಕ ರಾಶಿಗೆ ಸೂರ್ಯ ಪ್ರವೇಶಿಸಿದಾಗ, ಅದು ಕೆಲವು ರಾಶಿ ಜನರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಹಾಗೆ ಅವರಲ್ಲಿ ದೊಡ್ಡ ಬದಲಾವಣೆಗಳ ನೋಡಬಹುದು. ಹಾಗಾದ್ರೆ ಯಾರಿಗೆಲ್ಲಾ ಇದು ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೇಷ ರಾಶಿ
ಕರ್ಕ ರಾಶಿಯಲ್ಲಿ ಸೂರ್ಯನ ಸಂಚಾರವು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಮೇಷ ರಾಶಿಯವರು ಸಂತೋಷವಾಗಿರುತ್ತಾರೆ. ಅವರ ಅಶಾಂತಿಗೆ ಕಾರಣವಾಗಿರುವ ಕೌಟುಂಬಿಕ ವಿಚಾರವೊಂದು ಸುಧಾರಣೆಯಾಗಲಿದೆ, ಅಥವಾ ಅದಕ್ಕೆ ಪರಿಹಾರ ಪಡೆಯುವ ಸಾಧ್ಯತೆ ಇದೆ. ಮನೆಯ ವಿಚಾರವಾಗಿ ನೀವು ಹಣ ಉಳಿತಾಯಕ್ಕೆ ಮುಂದಾಗಬಹುದು. ಆಪ್ತರಿಂದ ನೀವು ಹಣ ಮರಳಿ ಪಡೆಯಬಹುದು. ಹಾಗೆ ನೀವು ಉದ್ಯೋಗ ಬದಲಿಸು ಇದು ಸೂಕ್ತ ಸಮಯ ಹಾಗೆ ಉತ್ತಮ ಅವಕಾಶಗಳ ಪಡೆಯಬಹುದು. ದಾಂಪತ್ಯದಲ್ಲಿ ಕಾಡುತ್ತಿದ್ದ ವೈಮನಸ್ಸು ದೂರಾಗಲಿದೆ. ನಿಮ್ಮ ಮಾತುಗಳು ಬೇರೆಯವರಿಗೆ ನೋವು ತರಬಹುದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳ ನೀವು ಮುಗಿಸಬಹುದು. ಆರೋಗ್ಯದಲ್ಲಿ ನಿಮಗೆ ನೆಮ್ಮದಿ ಇರಲಿದೆ.
ಮಿಥುನ ರಾಶಿ
ಕರ್ಕ ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ ಮಿಥುನ ರಾಶಿಯವರಲ್ಲಿ ಹಲವು ಪ್ರಯೋಜನಗಳ ನೋಡಬಹುದು. ಬಹಳ ದಿನಗಳ ನಿಮ್ಮ ಆಸೆಯೊಂದು ಈಡೇರಲಿದೆ. ಹೊಸ ವ್ಯಾಪಾರ ಆರಂಭಿಸುವವರು ಈ ಸಮಯದಲ್ಲಿ ಬಹಳ ಶ್ರಮ ಹಾಕಬೇಕಾಗುತ್ತದೆ. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವ ನಿರ್ಧಾರದಲ್ಲಿ ಏರುಪೇರು ಸಂಭವಿಸಿದರೂ ಅದರಿಂದ ಬಹಳ ಲಾಭವಿದೆ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ. ಅವಿವಾಹಿತರು ಬಯಸಿದ್ದಂತೆ ಅವರ ಕೆಲಸವೊಂದು ಕೈಗೂಡಲಿದೆ.
ಸಿಂಹ ರಾಶಿ
ಕರ್ಕ ರಾಶಿಯಲ್ಲಿ ಸೂರ್ಯನ ಸಂಚಾರವು ಸಿಂಹ ರಾಶಿಯರಿಗೆ ಬಹಳ ಲಾಭದಾಯಕವಾಗಲಿದೆ. ಔದ್ಯೋಗಿಕವಾಗಿ ನಿಮಗೆ ಬಹಳ ಶುಭಕರ ಸಮಯವಾಗಲಿದೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲವಿದು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಕಾದಿವೆ. ದಾಂಪತ್ಯ, ಪ್ರೀತಿಯ ಜೀವನದಲ್ಲಿ ನಿಮಗೆ ಶುಭಕರ ದಿನಗಳಿವೆ. ಮನೆಯ ಕುರಿತಾದ ಚಿಂತೆಯೊಂದು ದೂರಾಗಲಿದೆ. ವ್ಯಾಪಾರಸ್ಥರು ದೊಡ್ಡ ಪ್ರಯತ್ನದಲ್ಲಿ ಯಶಸ್ಸು ಗಳಿಸಬಹುದು. ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ನಿಮ್ಮ ಹಣಕಾಸು ವಿಚಾರವಾಗಿದ್ದ ಸಮಸ್ಯೆಗಳು ದೂರಾಗಲಿದೆ. ಅವಿವಾಹಿತರಿಗೆ ಈ ಸಮಯ ಬಹಳ ಉತ್ತಮವಾಗುತ್ತದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications