Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನ ರಾಶಿಗೆ ಸೂರ್ಯ ಸಂಚಾರ: ಹಲವರಲ್ಲಿ ಆಸ್ತಿ, ಹಣ ಲಾಭ..!
ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ಗ್ರಹಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತವೆ. ಈ ಬದಲಾವಣೆಗಳು ಎಲ್ಲರ ಬದುಕಿನಲ್ಲೂ ಬದಲಾವಣೆಗೆ ಕಾರಣವಾಗುತ್ತದೆ. ಹಾಗೆ ಎಲ್ಲಾ 12 ರಾಶಿಗಳ ಮೇಲೆಯೂ ಅದರ ಪರಿಣಾಮ ನೋಡಬಹುದು. ಹಾಗೆ ಆಕಾಶಕಾಯಗಳ ಚಲನೆ, ಗ್ರಹಗಳ ಸ್ಥಾನ ಪಲ್ಲಟ, ಗ್ರಹಣ, ಯೋಗಗಳು ಎಲ್ಲದಕ್ಕೂ ಒಂದೊಂದು ಕಾರಣಗಳಿರುತ್ತವೆ, ಹಾಗೆ ಎಲ್ಲಾ ಬದಲಾವಣೆಗಳ ಜೊತೆಗೆ ಪರಿಣಾಮ, ಪ್ರಭಾವಗಳ ನಾವು ನೋಡಬಹುದು.
ಗ್ರಹಗಳ ಕೇಂದ್ರ ಬಿಂದು ಸೂರ್ಯನು ಪ್ರತಿ ತಿಂಗಳು ಕೂಡ ತನ್ನ ರಾಶಿ ಬದಲಿಸುತ್ತಾನೆ. ಸೂರ್ಯ ಸಿಂಹ ರಾಶಿಯ ಆಳುವ ಗ್ರಹ, ಆತ ತನ್ನ ರಾಶಿ ಬದಲಾಯಿಸಿದಾಗಲೆಲ್ಲ. ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ, ಪ್ರಭಾವ ನೋಡಬಹುದು. ಸೂರ್ಯ ಹಾಗೂ ಶನಿ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಮಾರ್ಚ್ 15 ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

ಈ ಮೀನರಾಶಿಯ ಅಧಿಪತಿಯಾಗಿ ಗುರು ಇದ್ದಾನೆ. ಸೂರ್ಯ ಈ ಮೀನರಾಶಿಗೆ ಸಂಚರಿಸುವುದು ಸೂರ್ಯ ಹಾಗೂ ಗುರುವಿನ ಸಂಯೋಗಕ್ಕೆ ಕಾರಣವಾಗುತ್ತದೆ. ಈ ಸಂಯೋಗವು ಹಲವು ರಾಶಿಗಳಿಗೆ ಲಾಭದಾಯಕವಾಗುತ್ತದೆ. ಅವರ ಅದೃಷ್ಟಗಳು ಬದಲಾಗುತ್ತಿದೆ. ಈಗ ಸೂರ್ಯನು ಮೀನ ರಾಶಿ ಪ್ರವೇಶಿಸುವುದು ಯಾರಿಗೆ ಲಾಭದಾಯಕವಾಗುತ್ತೆ ಎಂಬುದನ್ನು ನಾವಿಂದು ತಿಳಿಯೋಣ.
ಧನು ರಾಶಿ
ಸೂರ್ಯನು ಧನು ರಾಶಿಯ 4 ನೇ ಮನೆಗೆ ಪ್ರವೇಶಿಸುತ್ತಾನೆ. ಹೀಗಾಗಿ ಈ ರಾಶಿಯವರಲ್ಲಿ ಇದು ಲಾಭದಾಯಕವಾಗಲಿದೆ. ಸೂರ್ಯನ ಚಲನೆಯು ಈ ರಾಶಿಯವರಲ್ಲಿ ನಿರೀಕ್ಷೆಗೂ ಮೀರಿದ ಲಾಭ ತರಲಿದೆ. ನಿಮ್ಮ ಹಣದ ಮೂಲವು ಹೆಚ್ಚಾಗುತ್ತದೆ ಇದರಿಂದ ನಿಮ್ಮ ಮನೆಗೆ ಹೊಸ ವಸ್ತು ಖರೀದಿ ಮಾಡುವ ಸಂದರ್ಭ ಬರಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ನಿಮಗೆ ಅತ್ಯಧಿಕ ಲಾಭ ತರಲಿದೆ. ನಿಮ್ಮ ನಾಯಕತ್ವದ ಗುಣ ಹೊರಹಾಕುವ ಹಾಗೆ ಅದನ್ನು ಸರಿಯಾದ ಸಮಯಕ್ಕೆ ಬಳಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ ಆಗಿರಲಿದೆ. ಹಲವು ಕೆಲಸದಲ್ಲಿ ನಿಮ್ಮ ಅಡೆತಡೆಗಳು ನಿವಾರಣೆಯಾಗಲಿದೆ. ನಿಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದ ಬಹುದೊಡ್ಡ ನಿರ್ಧಾರ ನೀವು ತೆಗೆದುಕೊಳ್ಳುತ್ತೀರಿ ಅದು ನಿಮ್ಮಲ್ಲಿ ಹೊಸ ಗೆಲುವಿಗೆ ಕಾರಣವಾಗಲಿದೆ.
ಮೀನ ರಾಶಿ
ಸೂರ್ಯನು ಮೀನ ರಾಶಿಯ ಮೊದಲ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ಈ ರಾಶಿ ಜನರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಅವಿವಾಹಿತರಿಗೆ ಶುಭಕರ ಸುದ್ದಿ ಕಾದಿದೆ. ನಿಮ್ಮ ಕುಟುಂಬ ಜೀವನದಲ್ಲಿ ನೀವು ಅಂದುಕೊಂಡಿದ್ದ ಕೆಲಸಗಳು ನೆರವೇರಲಿದೆ. ಕಚೇರಿಯಲ್ಲಿ ನಿಮ್ಮ ಶ್ರಮವನ್ನು ಗುರುತಿಸಲಿದ್ದಾರೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ನಿಮ್ಮ ಉದ್ಯೋಗ ಬದಲಿಸುವ ಆಲೋಚನೆಯಲ್ಲಿ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರಿಗಳು ಹೊಸ ರೀತಿಯ ಆದಾಯ ನೋಡಲಿದ್ದಾರೆ.
ಮಿಥುನ ರಾಶಿ
ಸೂರ್ಯನು ಮಿಥುನ ರಾಶಿಯ 10 ನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ಈ ರಾಶಿ ಜನರ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಗೆ ಕಾರಣವಾಗುತ್ತದೆ. ನಿಮಗೆ ವಿದೇಶ ಪ್ರಯಾಣ ಲಾಭ ಇರಲಿದೆ. ಹೊಸ ಆದಾಯಗಳಿಗೆ ನೀವು ಕಾರಣರಾಗಲಿದ್ದೀರಿ. ಪಿತ್ರಾರ್ಜಿತ ಆಸ್ತಿ, ಹೂಡಿಕೆ, ರಿಯಲ್ ಎಸ್ಟೇಟ್‌ನಂತಹ ಕೆಲಸದಲ್ಲಿ ನಿಮಗೆ ಲಾಭವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications