Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವಂತ ರಾಶಿಗೆ ಸೂರ್ಯ ಚಲನೆ: ಈ ರಾಶಿಯವರ ಯಶಸ್ಸು ಉತ್ತುಂಗಕ್ಕೆ.!
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಯನ್ನು ಅತ್ಯಂತ ದೊಡ್ಡ ಹಾಗೂ ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗುತ್ತದೆ. ಹಾಗೆ ಗ್ರಹಗಳ ಚಲನೆಯಿಂದ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುವುದು ನೋಡಬಹುದು. ಸದ್ಯ ಈ ಆಗಸ್ಟ್ 17ರಂದು ಸೂರ್ಯನ ಸಂಚಾರ ಇಡೀ ಗ್ರಹಗತಿಗಳು, ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿವೆ. ಹಾಗೆ ಸೂರ್ಯನು ಗ್ರಹಗಳ ಕೇಂದ್ರ ಬಿಂದು ಆಗಿದ್ದು, ಎಲ್ಲಾ ಗ್ರಹಗಳ ರಾಜ ಎನ್ನಬಹುದು.
ಸೂರ್ಯನು ಒಂದು ರಾಶಿಯಲ್ಲಿ 30 ದಿನಗಳವರೆಗೆ ಚಲಿಸಲಿದ್ದಾನೆ. ಈ ಸೂರ್ಯನು ಸಿಂಹ ರಾಶಿಯ ಅಧಿಪತಿಯಾಗಿದ್ದು, ಪ್ರಸ್ತುತ ಚಂದ್ರನ ಅಧಿಪತ್ಯ ಇರುವ ಕರ್ಕ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಸೂರ್ಯನು ಆಗಸ್ಟ್ ತಿಂಗಳಲ್ಲಿ ತನ್ನದೇ ರಾಶಿಯಾದ ಸಿಂಹ ರಾಶಿಗೆ ಚಲಿಸಲಿದ್ದಾನೆ. ಆಗಸ್ಟ್ 17ರಂದು ಸೂರ್ಯನು ಸಿಂಹ ರಾಶಿಗೆ ಚಲಿಸಲಿದ್ದಾನೆ.

ಸೂರ್ಯನ ಈ ಸ್ವಂತ ರಾಶಿ ಚಲನೆಯು ಹಲವರಿಗೆ ಲಾಭದಾಯಕವಾಗುತ್ತಿದೆ. ಮೇಷ ರಾಶಿಯಿಂದ ಮೀನ ರಾಶಿಯವರೆಗೂ ಎಲ್ಲಾ ರಾಶಿಯ ಮೇಲೆಯೂ ಇದರ ಪರಿಣಾಮ ಬೀರುವುದು ನೋಡಬಹುದು. ಆದರೆ ಕೆಲವೊಂದು ರಾಶಿಗಳ ಮೇಲೆ ಇದು ಧನಾತ್ಮಕವಾಗಿ ಹಾಗೆ ಮತ್ತೆ ಕೆಲವು ರಾಶಿಗಳ ಮೇಲೆ ನಕಾರಾತ್ಮವಾಗಿ ಪರಿಣಾಮ ಬೀರಲಿವೆ.
ಸೂರ್ಯ ತನ್ನ ಸ್ವಂತ ರಾಶಿಯಲ್ಲಿ ಚಲಿಸುವುದರಿಂದ ಯಾವ ರಾಶಿಯವರಿಗಿದು ಧನಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತಿದೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಂಹ ರಾಶಿ
ಸೂರ್ಯನು ಸಿಂಹಯ ಅಧಿಪತಿ, ಸ್ವಂತ ರಾಶಿಯಲ್ಲಿ ಚಲಿಸಲಿದ್ದಾನೆ. ಸೂರ್ಯನು ಸಿಂಹ ರಾಶಿಯ ಮೊದಲ ಮನೆಯಲ್ಲಿ ಚಲಿಸುತ್ತಾನೆ. ಇದರಿಂದ ನೀವು ಯಶಸ್ಸಿನ ಉತ್ತುಂಗಕ್ಕೆ ಏರಬಹುದು. ಹಣಕಾಸಿನ ವಿಚಾರದಲ್ಲಿ ಬಹಳ ಲಾಭದಾಯಕ ಸಮಯ ಹಲವು ಕೆಲಸಗಳಿಗೆ ಅಗತ್ಯವಾಗಿದ್ದ ಹಣ ನಿಮ್ಮ ಕೈಸೇರುತ್ತವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರಿಂದಲೂ ಉತ್ತಮ ಬೆಂಬಲ ಸಿಗಲಿದೆ. ನಿಮ್ಮ ಉಳಿತಾಯ ಹಾಗೂ ಹೂಡಿಕೆಯಲ್ಲಿ ಲಾಭ ನೋಡಬಹುದು. ಬ್ಯಾಂಕಿಂಗ್ ವಿಚಾರಗಳು, ಮನೆ ನಿರ್ಮಾಣ ವಿಚಾರಗಳಲ್ಲಿ ಧನಾತ್ಮಕ ಬೆಳವಣಿಗೆ ಇರಲಿದೆ. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ದೂರಾಗಲಿವೆ. ಅವಿವಾಹಿತರಿಗೆ ವಿಶೇಷ ಲಾಭ ಪಡೆಯುವ ಸಮಯ ಎನ್ನಬಹುದು.
ಧನು ರಾಶಿ
ಸೂರ್ಯನು ಧನು ರಾಶಿಯ 9 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ನಿದೃಷ್ಟಕ್ಕೆ ಕಾರಣವಾಗಲಿದೆ. ನಿಮ್ಮ ಹಲವು ವಿಚಾರಗಳಲ್ಲಿ ಲಾಭ ತರಲಿದೆ. ಮುಖ್ಯವಾಗಿ ಆರೋಗ್ಯದಲ್ಲಿ ನಿಮಗೆ ಬಹಳ ದೊಡ್ಡ ಯಶಸ್ಸು ಸಿಗಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಕ್ಕೆ ಅಡ್ಡಿ ಉಂಟು ಮಾಡಿದ್ದ ಅನಾರೋಗ್ಯವೊಂದು ಈ ಸಮಯದಲ್ಲಿ ನಿವಾರಣೆಯಾಗಲಿದೆ. ಹೊಸ ಆದಾಯ ಮೂಲಗಳಿಗೆ ನೀವು ತೆರೆದುಕೊಳ್ಳುತ್ತೀರಿ. ವ್ಯಾಪಾರಿಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಹೊಸ ಒಪ್ಪಂದ, ವ್ಯವಹಾರದಲ್ಲಿ ಲಾಭ ನೋಡಬಹುದು.
ಕರ್ಕ ರಾಶಿ
ಸೂರ್ಯನು ಕರ್ಕ ರಾಶಿಯ 2 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದು ಈ ರಾಶಿ ಚಿಹ್ನೆಗಳಿಗೆ ಹಠಾತ್ ಆರ್ಥಿಕ ಲಾಭ ತರಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಯಾರ ಬಳಿಯಾದರು ಸಿಲುಕಿರುವ ಹಣ ಕೈಗೆ ಬರುತ್ತದೆ. ಹಲವು ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವಿವಾಹಿತರಲ್ಲಿ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿದೆ, ದಾಂಪತ್ಯ ಕಲಹಗಳು ಕೂಡ ನಿವಾರಣೆಯಾಗುವ ಸಮಯ ಇದಾಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications










