Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಚೈತ್ರಾ ನಕ್ಷತ್ರಕ್ಕೆ ಸೂರ್ಯ ಸಂಚಾರ: 3 ರಾಶಿಯವರಲ್ಲಿ ಅದೃಷ್ಟದ ಹರಿವು..ಮುಟ್ಟಿದ್ದೆಲ್ಲಾ ಚಿನ್ನ!
ಗ್ರಹಗಳು ರಾಶಿ ಬದಲಾಯಿಸಿದಂತೆ ನಿರ್ದಿಷ್ಟ ಸಮಯದಲ್ಲಿ ತನ್ನ ನಕ್ಷತ್ರ ಕೂಡ ಬದಲಾಯಿಸುವುದು ನೋಡಬಹುದು. ಹೀಗೆ ನಕ್ಷತ್ರ ಬದಲಾವಣೆಯಿಂದಲೂ ಎಲ್ಲಾ ರಾಶಿಗಳ ಮೇಲೆ ಅದರ ಪರಿಣಾಮ ಉಂಟು ಮಾಡುವುದು ನೋಡಬಹುದು. ಅದ್ರಲ್ಲೂ ಸೂರ್ಯ ತನ್ನ ರಾಶಿ ಹಾಗೆ ನಕ್ಷತ್ರ ಬದಲಾವಣೆಯ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟು ಮಾಡುವುದನ್ನು ನಾವು ಗಮನಿಸಬಹುದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನ ಚಲನೆಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ನಾಯಕ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯನು ಒಂದು ತಿಂಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಕಾಲ ಕಾಲಕ್ಕೆ ಸೂರ್ಯನು ತನ್ನ ನಕ್ಷತ್ರವನ್ನು ಸಹ ಬದಲಾಯಿಸುತ್ತಾನೆ.

ಸೂರ್ಯನು ಸಿಂಹ ರಾಶಿಯ ಅಧಿಪತಿ. ಸೂರ್ಯನ ಸ್ಥಾನದಲ್ಲಿ ಬದಲಾವಣೆಯಾದಾಗಲೆಲ್ಲಾ, ಅದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಉಂಟಾಗುತ್ತದೆ. ಈಗ ಸೂರ್ಯನು ಕನ್ಯಾ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಆತ ಚೈತ್ರಾ ನಕ್ಷತ್ರಕ್ಕೆ ಚಲಿಸಲಿದ್ದಾನೆ. ನಿನ್ನೆಯಿಂದ ಚೈತ್ರಾ ನಕ್ಷತ್ರದಲ್ಲಿ ಚಲಿಸುತ್ತಿದ್ದು, ಇದರಿಂದ ಹಲವು ರಾಶಿಗಳ ಮೇಲೆ ಪ್ರಭಾವ ಉಂಟು ಮಾಡುತ್ತಿರುವುದು ನೋಡಬಹುದು.
ಸೂರ್ಯನ ಈ ನಕ್ಷತ್ರ ಬದಲಾವಣೆಯು ಹಲವು ರಾಶಿಗಳ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ. ಆದ್ರೆ ಈ ಮೂರು ರಾಶಿಯವರಲ್ಲಿ ಅತ್ಯಧಿಕ ಲಾಭ ನೋಡಬಹುದು. ಹಾಗಾದ್ರೆ ಸೂರ್ಯನ ಈ ನಕ್ಷತ್ರ ಬದಲಾವಣೆಯು ಯಾರಿಗೆಲ್ಲಾ ಲಾಭದಾಯಕವಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಗಳಿಗೆ ಸೂರ್ಯನ ಸಂಚಾರದಿಂದಾಗಿ ಹಲವು ರೀತಿಯ ಶುಭ ಯೋಗಗಳು ಉಂಟಾಗಲಿದೆ. ನಿಮ್ಮ ವಿದೇಶ ಪ್ರಯಾಣದಂತಹ ಐಷಾರಾಮಿ ಯೋಗವನ್ನು ನೀವು ಈಡೇರಿಸಿಕೊಳ್ಳಬಹುದು. ಕುಟುಂಬಸ್ಥರಲ್ಲಿದ್ದ ಹಣಕಾಸು ಸಂಬಂಧಿ ಸಮಸ್ಯೆಗಳು ನಿವಾರಣೆಯಾಗಲಿದೆ. ಆಪ್ತರೊಬ್ಬರಿಂದ ನಿಮಗೆ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ನೆರವು ಬರಲಿದೆ. ಹೊಸ ವ್ಯವಹಾರಗಳಲ್ಲಿ ಯಶಸ್ಸು ಇದೆ. ವಾಹನ ಖರೀದಿಯ ನಿಮ್ಮ ಆಸೆಯೊಂದು ಈಡೇರಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಈ ಸೂರ್ಯ ಸಂಚಾರದಲ್ಲಿ ಅತ್ಯಧಿಕ ಲಾಭ ನೋಡಬಹುದು. ಸೂರ್ಯನು ಸಿಂಹ ರಾಶಿಯ ಆಳುತ್ತಾನೆ. ಈ ನಡುವೆ ಸೂರ್ಯನಿಂದಾಗಿ ನಿಮ್ಮ ಅದೃಷ್ಟ ಬದಲಾಗಲಿದೆ. ಪ್ರಯಾಣಗಳಲ್ಲಿ ಶುಭವಾಗುತ್ತದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರಾಗಲಿವೆ. ಸಾಲ ಮುಕ್ತರಾಗಲು ಅವಕಾಶಗಳು ಸಿಗಲಿವೆ. ಅವಿವಾಹಿತರಲ್ಲಿ ನೀವು ಬಯಸಿದ ವಿವಾಹ ಸಂಬಂಧಗಳು ಹುಡುಕಿ ಬರಲಿವೆ. ಹೊಸ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಇದು ಶುಭ ಅವಕಾಶಗಳ ತರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಸರ್ಕಾರಿ ನೌಕರರಿಗೆ ಬಡ್ತಿಯ ಅವಕಾಶಗಳಿವೆ.
ಕನ್ಯಾ ರಾಶಿ
ಸೂರ್ಯನ ಸಂಚಾರದಿಂದಾಗಿ ಕನ್ಯಾ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಬಹಳ ಸಮಯದ ನಿಮ್ಮ ಆಸೆಯೊಂದು ಸುಲಭವಾಗಿ ಈಡೇರಲಿದೆ. ಸರ್ಕಾರಿ ಕೆಲಸದಲ್ಲಿರುವ ಮಂದಿಗೆ ಶುಭ ದಿನ. ಹಣಕಾಸು ಸಮಸ್ಯೆಯಿಂದ ಅರ್ಧಕ್ಕೆ ಬಿಟ್ಟ ಹಲವು ಕೆಲಸಗಳನ್ನು ನೀವು ಮಾಡಿ ಮುಗಿಸುತ್ತೀರಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಅವಿವಾಹಿತರಿಗೆ ಒಳ್ಳೆಯ ವರ ಸಿಗುವ ಸಾಧ್ಯತೆಯಿದೆ. ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯ ಸುಧಾರಣೆ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು)



Click it and Unblock the Notifications